ಶರಣಾಗತ ಅಮೆರಿಕ-ಇಸ್ರೇಲ್‌ಗೆ 3 ಷರತ್ತು ವಿಧಿಸಿದ ಇರಾನ್‌

Date:

ಇರಾನ್‌ ವಿರುದ್ಧ ಯುದ್ಧ ಆರಂಭಿಸಿದ ಅಮೆರಿಕ ಮತ್ತು ಇಸ್ರೇಲ್ ಬಸವಳಿದಿವೆ. ಯುದ್ಧವನ್ನು ನಿಲ್ಲಿಸಲು ಹೆಣಗಾಡುತ್ತಿವೆ. ಶರಣಾಗತಿಯ ಹಂತಕ್ಕೆ ಬಂದು ನಿಂತಿವೆ. ಈ ಎರಡೂ ರಾಷ್ಟ್ರಗಳ ವಿರುದ್ಧ ಏಕಾಂಗಿ ಸಂಘರ್ಷ ನಡೆಸಿರುವ ಇರಾನ್‌, ಯುದ್ಧವನ್ನು ಕೊನೆಗೊಳಿಸಲು ಸಮ್ಮತಿಸಿದೆ. ಜೊತೆಗೆ, ಅಮೆರಿಕ-ಇಸ್ರೇಲ್‌ಗೆ ಮೂರು ಪ್ರಮುಖ ಷರತ್ತುಗಳನ್ನು ವಿಧಿಸಿದೆ.

ಈ ಕುರಿತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ. ಇರಾನ್‌ ಷರತ್ತುಗಳು ಹೀಗಿವೆ;

  1. ಯುದ್ಧದ ಸಮಯದಲ್ಲಿ ಸಂಭವಿಸಿದ ಹಾನಿಗೆ ಜಿಯೋನಿಸ್ಟ್ ಆಡಳಿತ ಇಸ್ರೇಲ್ ಮತ್ತು ಅಮೆರಿಕ ಪರಿಹಾರ ನೀಡಬೇಕು.
  2. ಇರಾನ್‌ನ ಕಾನೂನುಬದ್ಧ ಹಕ್ಕುಗಳನ್ನು ಗುರುತಿಸಿ, ಇರಾನ್‌ನ ಸಾರ್ವಭೌಮತ್ವ, ಸ್ವಾಯತ್ತತೆ ಹಾಗೂ ಅದರ ಹಕ್ಕುಗಳನ್ನು ಅಂಗೀಕರಿಸಬೇಕು.
  3. ಭವಿಷ್ಯದಲ್ಲಿ ದೇಶವು ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಅಂತರಾಷ್ಟ್ರೀಯ ಭರವಸೆಯನ್ನು ಅಮೆರಿಕ-ಇಸ್ರೇಲ್‌ ನೀಡಬೇಕು.

ಯುದ್ಧದ ಕುರಿತು ಮಾತನಾಡಿರುವ ಇರಾನ್‌ ಸಶಸ್ತ್ರ ಪಡೆಗಳ ವಕ್ತಾರ ಅಬೋಲ್ಫಾಜ್ಲ್ ಶೆಕರ್ಚಿ ಸರ್ಕಾರಿ, “ಅಮೆರಿಕವು ಇರಾನ್‌ನ ಬಂದರು ಸೌಲಭ್ಯಗಳ ಮೇಲೆ ದಾಳಿ ಮಾಡುವುದಕ್ಕಿಂತ ಮೊದಲು, ಪರ್ಷಿಯನ್ ಕೊಲ್ಲಿಯ ಯಾವುದೇ ಬಂದರು, ಆರ್ಥಿಕ ಕೇಂದ್ರ ಅಥವಾ ಯಾವುದೇ ಸ್ಥಳಗಳು ಇರಾನ್‌ ದಾಳಿಯ ವ್ಯಾಪ್ತಿಯಿಂದ ಹೊರಗಿರುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು. ನಮ್ಮ ಬಂದರುಗಳು ಮತ್ತು ಹಡಗುಕಟ್ಟೆಗಳಿಗೆ ಬೆದರಿಕೆ ಉಂಟಾದರೆ, ಈ ಪ್ರದೇಶದ ಎಲ್ಲ ಬಂದರುಗಳ ಮೇಲೆ ನಾವು ಇಲ್ಲಿಯವರೆಗೆ ಮಾಡಿದ್ದಕ್ಕಿಂತ ತೀವ್ರವಾಗಿ ಕಾರ್ಯಾಚರಣೆ ನಡೆಸುತ್ತೇವೆ” ಎಂದು ಹೇಳಿದ್ದಾರೆ. ಜೊತೆಗೆ, “ಅಮೆರಿಕನ್ನರನ್ನು ತಮ್ಮ ಭೂಮಿಯಿಂದ ಹೊರಹಾಕುವಂತೆ ನಾ ಕೊಲ್ಲಿ ರಾಷ್ಟ್ರಗಳಿಗೆ ಕರೆ ನೀಡುತ್ತೇವೆ” ಎಂದು ಎಂದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....