ಇರಾನ್ ಯುದ್ಧ | ಜಗತ್ತು ತೈಲ ಬಿಕ್ಕಟ್ಟು ಎದುರಿಸುತ್ತಿದ್ದರೆ, ಚೀನಾ ನೆಮ್ಮದಿಯಾಗಿದೆ; ಕಾರಣವೇನು?

Date:

ಫೆಬ್ರವರಿ 28ರಂದು, ಇರಾನ್‌ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿದಾಗ ಆರಂಭವಾದ ಯುದ್ಧವೂ 11ನೇ ದಿನಕ್ಕೆ ಕಾಲಿಟ್ಟಿದೆ. ಈ ಯುದ್ಧ ಇರಾನ್-ಅಮೆರಿಕ-ಇಸ್ರೇಲ್ ನಡುವಿನ ಯುದ್ಧವಾಗಿ ಒಂದು ದಿನವೂ ಉಳಿಯಲಿಲ್ಲ. ದಾಳಿಗೆ ಪ್ರತಿದಾಳಿಯಾಗಿ ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಡ್ರೋನ್ ದಾಳಿ ನಡೆಸಿತು. ಇಡೀ ಮಧ್ಯಪ್ರಾಚ್ಯ ಮತ್ತು ಕೊಲ್ಲಿ ರಾಷ್ಟ್ರಗಳು ಯುದ್ಧಭೂಮಿಯಾಗಿ ಮಾರ್ಪಟ್ಟಿವೆ. ಈಗ ಯುದ್ಧವು ಇಡೀ ಜಗತ್ತನ್ನೇ ಬಾಧಿಸುತ್ತಿದೆ. ಇರಾನ್ ತನ್ನ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ್ದು, ಜಾಗತಿಕ ತೈಲ ಬಿಕ್ಕಟ್ಟನ್ನು ಸೃಷ್ಟಿಸಿದೆ. ಜೊತೆಗೆ, ಮೂರು ಖಂಡಗಳ ಷೇರು ಮಾರುಕಟ್ಟೆಗಳೂ ತತ್ತರಿಸಿವೆ. ಆದರೆ, ಜನಸಂಖ್ಯೆಯಲ್ಲೂ, ವಿಸ್ತೀರ್ಣದಲ್ಲೂ ಬೃಹತ್‌ ರಾಷ್ಟ್ರವಾದ ಚೀನಾ ನೆಮ್ಮದಿಯಿಂದಿದೆ.

ತೈಲ ಬಿಕ್ಕಟ್ಟಿನ ಬಿಸಿ ಚೀನಾಕ್ಕಿಲ್ಲ. ಯಾಕೆಂದರೆ, ದಶಕಗಳಿಂದ ಇರಾನ್‌ನ ತೈಲಕ್ಕೆ ಪಾಶ್ಚಿಮಾತ್ಯ ದೇಶಗಳು ನಿರ್ಬಂಧ ವಿಧಿಸಿದ್ದರೂ, ಚೀನಾ ಇರಾನ್‌ನ ಕಚ್ಚಾ ತೈಲವನ್ನು ಯಾವುದೇ ಹಿಂಜರಿಕೆಯಿಲ್ಲದೆ ಖರೀದಿಸುತ್ತಿದೆ. ಇರಾನ್ ರಫ್ತು ಮಾಡುವ ಒಟ್ಟು ತೈಲದ ಪೈಕಿ ಸುಮಾರು 80% ಮತ್ತು ಚೀನಾ ಬಳಸುವ ತೈಲದಲ್ಲಿ ಸುಮಾರು 13% ತೈಲವು ಇರಾನ್‌ನದ್ದೇ ಆಗಿದೆ. ನಿರ್ಬಂಧ ಸಂಬಂಧಿಸಿತ ತನಿಖೆಯಿಂದ ತಪ್ಪಿಸಿಕೊಳ್ಳಲು ಇರಾನಿನ ತೈಲಕ್ಕೆ ಚೀನಾ ‘ಮೆಲೇಷ್ಯಾ ಮಿಶ್ರಿತ ತೈಲ’ವೆಂಬ ಲೇಬಲ್ ಹಂಚಿಸಿ ಬಳಕೆ ಮಾಡುತ್ತಿದೆ.

ಇರಾನ್‌ ಸ್ಥಗಿತಗೊಳಿಸಿರುವ ಹಾರ್ಮುಜ್ ಜಲಸಂಧಿಯು ಜಾಗತ್ತಿನ ತೈಲ ರವಾನೆಯಲ್ಲಿ ಮುಖ್ಯ ಸಮುದ್ರ ಮಾರ್ಗವಾಗಿದೆ. ಜಾಗತಿಕ ಕಚ್ಚಾ ತೈಲದ ಸುಮಾರು 20%, ಯುರೋಪಿನ ವಿಮಾನ ಇಂಧನದ 30% ಹಾಗೂ ಜಾಗತಿಕ ಎಲ್‌ಎನ್‌ಜಿ (LNG) ಪೂರೈಕೆಯ 20% ಈ ಮಾರ್ಗದ ಮೂಲಕವೇ ಸಾಗುತ್ತಿತ್ತು. ಆದರೆ, ಈಗ ಜಲಸಂಧಿ ಸ್ಥಗಿತಗೊಂಡ ಪರಿಣಾಮ, ಇರಾಕ್, ಯುಎಇ ಹಾಗೂ ಕುವೈತ್ ಉತ್ಪಾದನೆಯನ್ನು ಕಡಿತಗೊಳಿಸಿವೆ. ಟ್ಯಾಂಕರ್‌ಗಳು ಸರಕು ಹೊತ್ತು ಎಲ್ಲಿಗೆ ಹೋಗಬೇಕೆಂದು ತಿಳಿಯದೆ ಜಲಸಂಧಿಯ ಉಭಯ ಭಾಗಗಳಲ್ಲಿ ನಿಂತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪರಿಣಾಮ, ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಎಂಟು ದಿನಗಳಲ್ಲಿ ಸುಮಾರು 50% ಏರಿಕೆಯಾಗಿದೆ. ಸೋಮವಾರ, ಒಂದು ಬ್ಯಾರೆಲ್‌ಗೆ 119.50 ಡಾಲರ್‌ಗೆ ತಲುಪಿದೆ. ಇದು ಕಳೆದ ನಾಲ್ಕು ವರ್ಷಗಳಲ್ಲೇ ಅತ್ಯಂತ ಗರಿಷ್ಠ ಬೆಲೆಯಾಗಿದೆ. ಅಮೆರಿಕದಲ್ಲಿಯೂ ಒಂದು ಗ್ಯಾಲನ್‌ (3.7 ಲೀ) ಪೆಟ್ರೋಲ್‌ ಬೆಲೆ ಒಂದೇ ವಾರದಲ್ಲಿ $2.98 ರಿಂದ $3.45ಕ್ಕೆ (253 ರೂ.ನಿಂದ 293 ರೂ.) ಏರಿಕೆಯಾಗಿದೆ.

ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ಪ್ರಕಾರ, ತೈಲ ಬೆಲೆಯಲ್ಲಿ ಪ್ರತಿ 10% ಹೆಚ್ಚಳವಾದರೆ ಜಾಗತಿಕ ಹಣದುಬ್ಬರ 0.4% ಏರಿಕೆಯಾಗುತ್ತದೆ. ಜಾಗತಿಕ ಆರ್ಥಿಕ ಬೆಳವಣಿಗೆ 0.15% ಕುಸಿಯುತ್ತದೆ. ಈಗ ತೈಲ ಬೆಲೆ 50% ಏರಿಕೆಯಾಗಿದೆ. ಜಪಾನ್‌ನ ನಿಕ್ಕಿ 7%, ದಕ್ಷಿಣ ಕೊರಿಯಾದ ಕೊಸ್ಪಿ 8% ಕುಸಿದಿದೆ. ಕತಾರ್ ಇಂಧನ ಸಚಿವರು, “ಈ ಯುದ್ಧವು ವಿಶ್ವದ ಆರ್ಥಿಕತೆಯನ್ನು ಕುಸಿಯುವಂತೆ ಮಾಡಬಹುದು” ಎಂದು ಎಚ್ಚರಿಸಿದ್ದಾರೆ. ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿ ಮುಂದುವರಿದರೆ ತೈಲ ಬೆಲೆ ಬ್ಯಾರೆಲ್‌ಗೆ 200 ಡಾಲರ್‌ ತಲುಪಲಿದೆ ಎಂದು ಇರಾನ್‌ನ ರೆವಲ್ಯೂಷನರಿ ಗಾರ್ಡ್ ಬೆದರಿಕೆ ಹಾಕಿದೆ.

ತೈಲ ಬಿಕ್ಕಟ್ಟನ್ನು ನಿಭಾಯಿಸಲು ಜಿ7 ಹಣಕಾಸು ಸಚಿವರು ಮೀಸಲು ತೈಲ ಬಿಡುಗಡೆಯ ಬಗ್ಗೆ ತುರ್ತು ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ, ಅಂತರಾಷ್ಟ್ರೀಯ ಇಂಧನ ಸಂಸ್ಥೆಯಲ್ಲಿರುವ (IEA) ತೈಲವನ್ನು ಬಿಡುಗಡೆ ಮಾಡುವ ಕುರಿತು ಪ್ರಸ್ತಾಪಗಳು ನಡೆದಿವೆ. ಐಇಎ ಒಟ್ಟು 1.24 ಬಿಲಿಯನ್ ಬ್ಯಾರೆಲ್ ಸಾರ್ವಜನಿಕ ತೈಲ ದಾಸ್ತಾನು ಮತ್ತು 60 ಕೋಟಿ ಬ್ಯಾರೆಲ್ ಕೈಗಾರಿಕಾ ತೈಲ ಮೀಸಲನ್ನು ಹೊಂದಿವೆ. ಸೋಮವಾರ ಜಿ7 ಸಚಿವರು 30ರಿಂದ 40 ಕೋಟಿ ಬ್ಯಾರೆಲ್ ತೈಲವನ್ನು ಬಿಡುಗಡೆ ಮಾಡುವ ಬಗ್ಗೆ ಚರ್ಚಿಸಿದ್ದಾರೆ.

ಆದಾಗ್ಯೂ, 1974ರ ಇಂಧನ ಬಿಕ್ಕಟ್ಟಿನ ಸಮಯದ ಸ್ಥಾಪನೆಯಾದ ಐಇಎ ಮೀಸಲು ವ್ಯವಸ್ಥೆಯು ಇಂದಿನ ಪರಿಸ್ಥಿತಿಗೆ ಸಜ್ಜಾಗಿಲ್ಲ. ಏಕೆಂದರೆ, ಇಂದಿನ ಅತಿದೊಡ್ಡ ತೈಲ ಗ್ರಾಹಕರಲ್ಲಿ ಒಬ್ಬರಾದ ಚೀನಾ ಈ ವ್ಯವಸ್ಥೆಯ ಸದಸ್ಯ ರಾಷ್ಟ್ರವಲ್ಲ. ಚೀನಾ ತನ್ನದೇ ಆದ ಬೃಹತ್ ಮೀಸಲು ದಾಸ್ತಾನನ್ನು ಹೊಂದಿದೆ.

ಈ ಲೇಖನ ಓದಿದ್ದೀರಾ?: ಇಸ್ರೇಲ್‌ಗೆ ತೈಲ, ಇರಾನ್‌ಗೆ ನೀರಿನ ಅಭಾವ, ಅಮೆರಿಕ್ಕೆ ಅನಗತ್ಯ ವೆಚ್ಚ: ಯುದ್ಧದ ಭೀಕರ ಪರಿಣಾಮಗಳು

ಚೀನಾ ವಸ್ತುನಿಷ್ಠವಾಗಿ ತೊಂದರೆಗೆ ಸಿಲುಕಿದರೂ ಹೆಚ್ಚು ‘ಫ್ಲೆಕ್ಸಿಬಲ್’ ಸ್ಥಿತಿಯಲ್ಲಿದೆ. ಚೀನಾ ಅಂದಾಜು 1.1 ರಿಂದ 1.4 ಶತಕೋಟಿ ಬ್ಯಾರೆಲ್ ತೈಲವನ್ನು ಮೀಸಲು ದಾಸ್ತಾನಾಗಿ ಇಟ್ಟುಕೊಂಡಿದೆ. ಅಮೆರಿಕದ ಇಂಧನ ಮಾಹಿತಿ ಆಡಳಿತದ ಪ್ರಕಾರ, 2025ರಲ್ಲಿ ಚೀನಾ ಪ್ರತಿದಿನ ಸುಮಾರು 10 ಲಕ್ಷ ಬ್ಯಾರೆಲ್ ತೈಲವನ್ನು ಸಂಗ್ರಹಿಸಿದೆ. ನೊಮುರಾದ ಮುಖ್ಯ ಚೀನಾ ಅರ್ಥಶಾಸ್ತ್ರಜ್ಞರು ಹೇಳುವಂತೆ; “ಹಾರ್ಮುಜ್ ಮೂಲಕ ಬರುವ ತೈಲವು ಚೀನಾದ ಒಟ್ಟು ಇಂಧನ ಬಳಕೆಯ ಕೇವಲ 13% ಮಾತ್ರ. ಚೀನಾದ ಇವಿ (EV) ಕ್ರಾಂತಿಯು ದಿನಕ್ಕೆ 10 ಲಕ್ಷ ಬ್ಯಾರೆಲ್ ತೈಲದ ಬೇಡಿಕೆಯನ್ನು ಕಡಿಮೆ ಮಾಡಿದೆ. ನವೀಕರಿಸಬಹುದಾದ ಇಂಧನವು ಚೀನಾದ ಹೊಸ ವಿದ್ಯುತ್ ಬೇಡಿಕೆಯ 80%ಅನ್ನು ಪೂರೈಸುತ್ತಿದೆ.”

ಇದೆಲ್ಲದರ ನಡುವೆ, ಚೀನಾದ ಹಡಗುಗಳಿಗೆ ಮಾತ್ರ ಹಾರ್ಮುಜ್ ಜಲಸಂಧಿ ಮೂಲಕ ಸಂಚಾರ ನಡೆಸಲು ಇರಾನ್‌ ಅನುಮತಿ ನೀಡಿದೆ. ಆದ್ದರಿಂದ, ಚೀನಾದ ತೈಲ ವಹಿವಾಟು ಸೇರಿದಂತೆ ಎಲ್ಲ ರೀತಿಯ ವಹಿವಾಟುಗಳು ಗಮನಾರ್ಹವಾಗಿ ಸಾಧಾರಣಾ ರೀತಿಯಲ್ಲಿಯೇ ನಡೆಯುತ್ತಿವೆ.

ಈ ಯುದ್ಧದಿಂದ ಚೀನಾ ವಿಚಾರದಲ್ಲಿ ಆಗುವ ದೀರ್ಘಕಾಲೀನ ಪರಿಣಾಮವೆಂದರೆ, ಚೀನಾ ರಷ್ಯಾದತ್ತ ಇನ್ನಷ್ಟು ವಾಲಿಕೊಳ್ಳಬಹುದು. ರಷ್ಯಾ ಈಗಾಗಲೇ ಚೀನಾಗೆ 20% ಕಚ್ಚಾ ತೈಲವನ್ನು ಪೂರೈಸುತ್ತಿದೆ. ಈ ಸಂದರ್ಭದಲ್ಲಿ ತೈಲ ಪೂರೈಕೆ ಮತ್ತಷ್ಟು ಹೆಚ್ಚಬಹುದು. ಜೊತೆಗೆ, ರಷ್ಯಾ ತನ್ನ ತೈಲ ಮತ್ತು ಅನಿಲಕ್ಕೆ ಚೀನಾದಿಂದ ಹೆಚ್ಚಿನ ಬೆಲೆ ಪಡೆಯಬಹುದು. ಮಾತ್ರವಲ್ಲದೆ, ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾ ಮತ್ತು ರಷ್ಯಾದ ಸಾಮಿಪ್ಯ ಮತ್ತಷ್ಟು ಹೆಚ್ಚಬಹುದು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...