ಇರಾನ್-ಅಮೆರಿಕ-ಇಸ್ರೇಲ್ ಯುದ್ಧ ಗೆದ್ದವರಾರು? ಲಾಭ ಪಡೆದವರಾರು?

Date:

ರಷ್ಯಾ ಸದ್ಯಕ್ಕೆ ಅನಿರೀಕ್ಷಿತ ಲಾಭವನ್ನು ಪಡೆಯುತ್ತಿದೆ. ಅದನ್ನು ದೀರ್ಘಕಾಲದ ಭೌಗೋಳಿಕ ರಾಜಕೀಯ ಯಶಸ್ಸನ್ನಾಗಿ ಪರಿವರ್ತಿಸಿಕೊಳ್ಳಲು ರಷ್ಯಾಗೆ ಸಾಧ್ಯವೇ ಎಂಬ ಪ್ರಶ್ನೆಯೂ ಇದೆ.

ಇರಾನ್‌ ಮತ್ತು ಅಮೆರಿಕ-ಇಸ್ರೇಲ್‌ ನಡುವಿನ ಯುದ್ಧವು 14ನೇ ದಿನವೂ ಮುಂದುವರೆದಿದೆ. ಸದ್ಯ, ಶುಕ್ರವಾರ ಯಾವುದೇ ದಾಳಿ-ಪ್ರತಿದಾಳಿಗಳು ನಡೆದಿರುವುದು ವರದಿಯಾಗಿಲ್ಲ. ಆದರೂ, ಮಧ್ಯಪ್ರಾಚ್ಯ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಉಳಿದಿದೆ. ಇರಾನ್‌ನ ಪ್ರತಿಕಾರದ ದಾಳಿಗಳು ಮತ್ತು ಹಾರ್ಮುಜ್‌ ಜಲಸಂಧಿಯ ನಿರ್ಬಂಧವು ಜಾಗತಿಕ ತೈಲ ಮಾರುಕಟ್ಟೆಯನ್ನೂ ಅಲುಗಾಡಿಸಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಯುದ್ಧ ನಿಲ್ಲಿಸುವ ಕುರಿತು ಮಾತನಾಡುತ್ತಿದ್ದಾರೆ. ಯುದ್ಧದಿಂದಾಗಿ ಇಸ್ರೇಲ್‌ ತತ್ತರಿಸಿದ್ದರೂ, ಯುದ್ಧ ಮುಗಿಸಲು ಸಿದ್ದವಿಲ್ಲ. ಜಗತ್ತಿನಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿ, ಹಲವು ರಾಷ್ಟ್ರಗಳ ಯುದ್ಧ ನಿಲ್ಲಿಸುತ್ತವೆ. ಅಲ್ಲಿಯವರೆಗೂ ನಾವು ಅಮೆರಿಕದೊಂದಿಗೆ ಯುದ್ಧ ನಡೆಸಲು ಸಿದ್ದರಿದ್ದೇವೆ ಎಂದು ಇರಾನ್ ಸ್ಪಷ್ಟವಾಗಿ ಹೇಳಿದೆ. ಇದೇ ಸಮಯದಲ್ಲಿ, ಇತರ ಪ್ರಮುಖ ಶಕ್ತಿಗಳು ತಮ್ಮ ಸ್ಥಾನಗಳನ್ನು ಮರುಸಂಘಟಿಸಿಕೊಳ್ಳಲು ನೋಡುತ್ತಿವೆ.

ಮಧ್ಯಪ್ರಾಚ್ಯದ ಯುದ್ಧವು ಅಮೆರಿಕಗೆ ಹೆಚ್ಚು ಆರ್ಥಿಕ ಹೊರೆಯನ್ನು, ಇಸ್ರೇಲ್‌ಗೆ ನಾಗರಿಕ ಮೂಲಸೌಕರ್ಯಗಳ ಹಾನಿಯನ್ನು ಸೃಷ್ಟಿಸಿದೆ. ಆದರೆ, ಯುದ್ಧದಿಂದ ಸಂಪೂರ್ಣ ಹೊರಗಿದ್ದ ರಷ್ಯಾ, ಈ ಯುದ್ಧದಿಂದ ಲಾಭ ಪಡೆದುಕೊಂಡಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಈ ಸಂಘರ್ಷವು ಒಂದು ಕುತೂಹಲಕಾರಿ ಕಾರ್ಯತಂತ್ರವಾಗಿ ಎದುರಾಗಿದೆ. ಇರಾನ್‌ ಮೇಲಿನ ದಾಳಿಯನ್ನು ರಷ್ಯಾ ಕಾನೂನುಬಾಹಿರ ಆಕ್ರಮಣ ಎಂದು ಖಂಡಿಸಿದೆ. ‘ಇರಾನ್‌ ಜೊತೆ ಗುಪ್ತಚರ ಮಾಹಿತಿಯನ್ನು ಹಂಚಿಕೊಂಡಿದೆ’ ಎಂದು ವರದಿಯಾಗಿದ್ದರೂ, ನೇರವಾಗಿ ಯುದ್ಧದಲ್ಲಿ ಭಾಗಿಯಾಗದಂತೆ ಅದು ಎಚ್ಚರಿಕೆ ವಹಿಸಿತು.

ಇರಾನ್-ಅಮೆರಿಕ-ಇಸ್ರೇಲ್‌ ಯುದ್ಧದಿಂದ ರಷ್ಯಾ ಸ್ಪಷ್ಟವಾಗಿ ದೂರ ಉಳಿಸಿದಿದ್ದರೂ, ಈ ಯುದ್ಧದಿಂದಾಗಿ ತಕ್ಷಣಕ್ಕೆ ರಷ್ಯಾಗೆ ಆರ್ಥಿಕ ಲಾಭಗಳು ದೊರೆಯುತ್ತಿವೆ. ಯುದ್ಧದ ಭೀತಿಯು ಜಾಗತಿಕ ಇಂಧನ ಬೆಲೆಗಳಲ್ಲಿ ತೀವ್ರ ಏರಿಕೆಗೆ ಕಾರಣವಾಗಿದೆ. ಬ್ರೆಂಟ್ ಕಚ್ಚಾ ತೈಲ ಬೆಲೆ ಇತ್ತೀಚಿನ ದಿನಗಳಲ್ಲಿ ಪ್ರತಿ ಬ್ಯಾರೆಲ್‌ಗೆ ಸುಮಾರು 84 ಡಾಲರ್‌ಗೆ ಏರಿಕೆಯಾಗಿದೆ. ರಷ್ಯಾದ ಯುರಲ್ಸ್ ಬ್ಲೆಂಡ್ ತೈಲ ಬೆಲೆಯು ರಷ್ಯಾ ತನ್ನ 2026ರ ಬಜೆಟ್‌ನಲ್ಲಿ ಅಂದಾಜಿಸಿದ್ದಕ್ಕಿಂತ ಸಾಕಷ್ಟು ಹೆಚ್ಚಾಗಿದೆ. ಹಾರ್ಮುಜ್ ಜಲಸಂಧಿಯ ಸುತ್ತಲಿನ ಅಡಚಣೆಗಳಿಂದಾಗಿ ಏಷ್ಯಾದ ಖರೀದಿದಾರರು ಪರ್ಯಾಯ ಪೂರೈಕೆದಾರರನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಇರಾನ್ ಮತ್ತು ಗಲ್ಫ್ ರಫ್ತುಗಳು ನಿಂತಿರುವುದರಿಂದ ಉಂಟಾಗಿರುವ ತೈಲ ಮಾರುಕಟ್ಟೆಯ ಅಭಾವವನ್ನು ನೀಗಿಸಲು ರಷ್ಯಾ ಅನುಕೂಲಕರ ಪರ್ಯಾಯವಾಗಿ ಹೊರಹೊಮ್ಮಿದೆ. ರಾಷ್ಯಾ ಮೇಲಿನ ಹಲವು ನಿರ್ಬಂಧಗಳು ತಾತ್ಕಾಲಿಕವಾಗಿ ತೆರವುಗೊಂಡಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದು ಸಣ್ಣ ವಿಷಯವೇನಲ್ಲ. ಹೈಡ್ರೋಕಾರ್ಬನ್ ಆದಾಯವು ರಷ್ಯಾದ ಫೆಡರಲ್ ಬಜೆಟ್‌ನ ಸರಿಸುಮಾರು 30-45% ರಷ್ಟಿದೆ. ನಿರ್ಬಂಧಗಳು ಮತ್ತು ಬೆಲೆ ಮಿತಿಯ ಒತ್ತಡದಿಂದ 2025ರಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿದ್ದ ರಷ್ಯಾ ಆದಾಯವು, ಪ್ರಸ್ತುತ ಬೆಲೆ ಏರಿಕೆಯಿಂದಾಗಿ ಶತಕೋಟಿ ಡಾಲರ್‌ಗಳಷ್ಟು ಹೆಚ್ಚುವರಿ ಆದಾಯವನ್ನು ತಂದುಕೊಡುವ ಭರವಸೆ ನೀಡಿದೆ. ಈ ಹಣವು ಉಕ್ರೇನ್‌ ಜೊತೆಗಿನ ಯುದ್ಧದಲ್ಲಿ ರಷ್ಯಾ ಕಳೆದುಕೊಂಡ ಆರ್ಥಿಕತೆಯನ್ನು ಬಲಪಡಿಸುತ್ತದೆ.

ಯುರೋಪಿಯನ್ ಅಧಿಕಾರಿಗಳು ಈ ಬೆಳವಣಿಗೆಯ ಬಗ್ಗೆ ನೇರವಾಗಿ ಮಾತನಾಡಿದ್ದಾರೆ. ಯುರೋಪಿಯನ್ ಒಕ್ಕೂಟದ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಅವರು ರಷ್ಯಾವನ್ನು ಈ ಬಿಕ್ಕಟ್ಟಿನ ‘ಏಕೈಕ ವಿಜಯಿ’ ಎಂದು ಬಣ್ಣಿಸಿದ್ದಾರೆ. “ಇಂಧನ ಬೆಲೆಗಳ ಏರಿಕೆಯು ಮಾಸ್ಕೋದ ಖಜಾನೆಯನ್ನು ತುಂಬಿಸುತ್ತಿದೆ. ಅದೇ ಸಮಯದಲ್ಲಿ ಪಾಶ್ಚಿಮಾತ್ಯರ ಸಂಪನ್ಮೂಲಗಳು ವಿವಿಧ ರಂಗಗಳಲ್ಲಿ ಹಂಚಿಹೋಗಿವೆ” ಎಂದು ಅವರು ಹೇಳಿದ್ದಾರೆ.

“ಅಮೆರಿಕ ಮತ್ತು ಇಸ್ರೇಲ್ ಕಾರ್ಯಾಚರಣೆಗಳು ಉಕ್ರೇನ್ ರಕ್ಷಣೆಗೆ ಬಳಕೆಯಾಗಬೇಕಿದ್ದ ನಿಖರ-ನಿರ್ದೇಶಿತ ಯುದ್ಧಸಾಮಗ್ರಿಗಳನ್ನು ಮತ್ತು ಪೇಟ್ರಿಯಾಟ್ ಪ್ರತಿಬಂಧಕಗಳನ್ನು ಬಳಸಿಕೊಳ್ಳುತ್ತಿವೆ. ಇಂತಹ ವ್ಯವಸ್ಥೆಗಳ ತಾತ್ಕಾಲಿಕ ಕೊರತೆಯು ಉಕ್ರೇನ್‌ನ ವಾಯು ರಕ್ಷಣಾ ಜಾಲವನ್ನು ದುರ್ಬಲಗೊಳಿಸಬಹುದು” ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಭೌಗೋಳಿಕ ರಾಜಕೀಯ ಮಟ್ಟದಲ್ಲಿ, ಈ ಬಿಕ್ಕಟ್ಟು ರಷ್ಯಾ-ಇರಾನ್ ಕಾರ್ಯತಂತ್ರದ ಮೈತ್ರಿಯನ್ನು ಬಲಪಡಿಸುತ್ತದೆ. 2025ರ ಕಾರ್ಯತಂತ್ರದ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿದಾಗಿನಿಂದ, ಮಿಲಿಟರಿ ಮತ್ತು ಗುಪ್ತಚರ ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವಿನ ಸಹಕಾರ ಪ್ರಬಲವಾಗಿದೆ. ಉಕ್ರೇನ್‌ ಮೇಲಿನ ದಾಳಿಗೆ ಇರಾನ್‌ನ ಡ್ರೋನ್ ಮತ್ತು ಕ್ಷಿಪಣಿಗಳನ್ನು ರಷ್ಯಾ ಬಳಸಿದೆ. ಈ ಬಳಕೆಯನ್ನು ಮುಂದುವರಿಸಲು ರಷ್ಯಾ ಇರಾನ್‌ಗೆ ಗುಪ್ತಚರ ಮಾಹಿತಿ ಮತ್ತು ಆಯ್ದ ಮಿಲಿಟರಿ ನೆರವು ನೀಡಲು ಸಿದ್ಧವಾಗಿದೆ. ದುರ್ಬಲಗೊಂಡರೂ ಚೇತರಿಸಿಕೊಳ್ಳುವ ಇರಾನ್ ಆಡಳಿತವು ರಷ್ಯಾದ ರಾಜತಾಂತ್ರಿಕ ಬೆಂಬಲದ ಮೇಲೆ ಇನ್ನಷ್ಟು ಅವಲಂಬಿತವಾಗಬಹುದು, ಇದರಿಂದ ಮಧ್ಯಪ್ರಾಚ್ಯದಲ್ಲಿ ಮಾಸ್ಕೋದ ಪ್ರಭಾವ ಮರಳಿ ಹೆಚ್ಚಾಗಲಿದೆ.

ಈ ಲೇಖನ ಓದಿದ್ದೀರಾ?: ಮೋದಿ ಇಸ್ರೇಲ್ ದೋಸ್ತಿ; ಎಫೆಕ್ಟ್‌ ಮಾತ್ರ ಭಾರತಕ್ಕೆ!

ಆದಾಗ್ಯೂ, ಈ ಸಂದರ್ಭೋಚಿತ ಲಾಭವನ್ನು ಕಾರ್ಯತಂತ್ರದ ಶಕ್ತಿ ಎಂದು ಭಾವಿಸಲಾಗದು ಎಂಬ ಅಭಿಪ್ರಾಯಗಳೂ ಇವೆ. ರಷ್ಯಾ ಪಾಲುದಾರಿಕೆಯ ಮಾತುಗಳ ಹೊರತಾಗಿಯೂ, ಇಸ್ರೇಲ್-ಅಮೆರಿಕ ದಾಳಿಗಳನ್ನು ತಡೆಯಲು ಅಥವಾ ತನ್ನ ಪಾಲುದಾರ ಇರಾನ್ ಅನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಇದು ಇಬ್ಬರ ನಡುವಿನ ಸಂಬಂಧದಲ್ಲಿನ ಅಸಮಾನತೆಯನ್ನು ಎತ್ತಿ ತೋರಿಸುತ್ತದೆ.

ಇದಲ್ಲದೆ, ಈ ಹಿಂದೆ, ಬಶರ್ ಅಲ್-ಅಸ್ಸಾದ್ ಪತನದ ನಂತರ ಸಿರಿಯಾದಲ್ಲಿ ರಷ್ಯಾ ತನ್ನ ಸ್ಥಾನವನ್ನು ಕಳೆದುಕೊಂಡಿತು. ಅದೇ ರೀತಿ, ಇರಾನ್ ಆಡಳಿತವು ಪತನಗೊಂಡರೆ ಅಥವಾ ಅಮೆರಿಕದೊಂದಿಗೆ ಒಪ್ಪಂದಕ್ಕೆ ಮುಂದಾದರೆ, ಮಧ್ಯಪ್ರಾಚ್ಯದಲ್ಲಿ ರಷ್ಯಾ ತನ್ನ ಪ್ರಮುಖ ಪಾಲುದಾರನನ್ನು ಕಳೆದುಕೊಳ್ಳುತ್ತದೆ. ದಾಳಿಗಳಲ್ಲಿ ಹಾನಿಗೊಳಗಾದ ಇರಾನ್‌ನ ಡ್ರೋನ್ ಉತ್ಪಾದನಾ ಕೇಂದ್ರಗಳು ರಷ್ಯಾದ ಯುದ್ಧಕ್ಕೆ ಅಗತ್ಯವಾದ ಪೂರೈಕೆಯನ್ನು ಒದಗಿಸಲು ಸಾಧ್ಯವಾಗದೆಯೂ ಇರಬಹುದು ಎಂಬ ಅಭಿಪ್ರಾಯಗಳೂ ಇವೆ.

ವಾಸ್ತವದಲ್ಲಿ, ಮಾಸ್ಕೋ ಸುರಕ್ಷಿತ ಹಾದಿಯನ್ನು ಅನುಸರಿಸುತ್ತಿದೆ. ಹೆಚ್ಚಿದ ತೈಲ ಬೆಲೆಗಳು ಅದರ ಯುದ್ಧ ಆರ್ಥಿಕತೆಯನ್ನು ಸ್ಥಿರಗೊಳಿಸುತ್ತಿವೆ. ಆದರೂ, ಸಮಕಾಲೀನ ರಾಜಕೀಯದಲ್ಲಿನ ಒಂದು ಅಂಶವನ್ನು ಗಮನಿಸಬೇಕು. ಅದು: ಸಣ್ಣಪುಟ್ಟ ಸಂಘರ್ಷಗಳು ದೊಡ್ಡ ಶಕ್ತಿಗಳಿಗೆ ತಾತ್ಕಾಲಿಕ ಅವಕಾಶಗಳನ್ನು ನೀಡಬಹುದು. ಆದರೆ ಆ ಅವಕಾಶಗಳು ಯಾವಾಗಲೂ ಶಾಶ್ವತ ಕಾರ್ಯತಂತ್ರದ ಲಾಭವಾಗಿ ಬದಲಾಗುವುದಿಲ್ಲ. ರಷ್ಯಾ ಸದ್ಯಕ್ಕೆ ಅನಿರೀಕ್ಷಿತ ಲಾಭವನ್ನು ಪಡೆಯುತ್ತಿದೆ. ಅದನ್ನು ದೀರ್ಘಕಾಲದ ಭೌಗೋಳಿಕ ರಾಜಕೀಯ ಯಶಸ್ಸನ್ನಾಗಿ ಪರಿವರ್ತಿಸಿಕೊಳ್ಳಲು ರಷ್ಯಾಗೆ ಸಾಧ್ಯವೇ ಎಂಬ ಪ್ರಶ್ನೆಯೂ ಇದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...