ಕೊಂದವರು ಯಾರು? | ಒಂಟಿ ಮಹಿಳೆ ಹೋರಾಡಿದರೆ ಕಥೆ, ಮಹಿಳೆಯರೆಲ್ಲ ಕೂಡಿ ಹೋರಾಡಿದರೆ ಕ್ರಾಂತಿ: ಡಾ. ನಾಗಲಕ್ಷ್ಮೀ ಚೌಧರಿ

Date:

“ಒಬ್ಬ ಮಹಿಳೆ ಹೋರಾಡಿದರೆ ಅದು ಕಥೆಯಾಗುತ್ತದೆ. ಮಹಿಳೆಯರೆಲ್ಲರೂ ಹೋರಾಡಿದರೆ ಅದು ಕ್ರಾಂತಿಯಾಗುತ್ತದೆ. 20 ಸಾವಿರ ಸಹಿ ಸಂಗ್ರಹ ಸಾಲದು. ಪ್ರತಿಯೊಂದು ಕಾಲೇಜು, ವಿಶ್ವವಿದ್ಯಾಲಯ, ಮೊಹಲ್ಲಾ, ಗಲ್ಲಿಯಲ್ಲಿ ಕ್ರಾಂತಿ ಪ್ರಾರಂಭವಾಗಲಿ. ಇದು ಬರೀ ಮಹಿಳೆಯರ ಹೋರಾಟವಲ್ಲ, ಇದು ಮಾನವೀಯತೆಯ ಹೋರಾಟ” ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು.

ಕೊಂದವರು ಯಾರು? (Who Killed Women In Dharmasthala?) ತಂಡವು ಇಂದು (ಡಿಸೆಂಬರ್ 10) ಬೆಂಗಳೂರು ನಗರದ ಗಾಂಧಿ ಭವನದಲ್ಲಿ ಸಾಂಸ್ಕೃತಿಕ ಅಭಿವ್ಯಕ್ತಿ, ತಮಟೆ ವಾದನ, ಹಾಡು, ಕಿರುಪುಸ್ತಕ ಬಿಡುಗಡೆ, ಸಹಿಸಂಗ್ರಹ ಸಲ್ಲಿಕೆ ಕಾರ್ಯಕ್ರಮವನ್ನು ನಡೆಸಿತು.

ಇದನ್ನು ಓದಿದ್ದೀರಾ? ಧರ್ಮಸ್ಥಳದಲ್ಲಿ ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯ ಸಿಗಲಿ; ‘ನ್ಯಾಯಕ್ಕಾಗಿ ಹಣತೆ ಹಚ್ಚೋಣ’ಅಭಿಯಾನಕ್ಕೆ ರಾಜ್ಯಾದ್ಯಂತ ಅಭೂತಪೂರ್ವ ಸ್ಪಂದನೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಕಾರ್ಯಕ್ರಮದಲ್ಲಿ ಮಾತನಾಡಿದ ನಾಗಲಕ್ಷ್ಮೀ, “ಈ ಹಿಂದೆ ವೈದ್ಯೆಯಾಗಿದ್ದೆ, ಬಳಿಕ ಶಿಕ್ಷಕಿಯಾದೆ, ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದೆ. ಆದರೆ ಹಲವು ವಿಚಾರಗಳಿಂದ ಅವಮಾನವಾದ ಬಳಿಕ ರಾಜೀನಾಮೆ ನೀಡಿ ಕಲಬುರಗಿಯಿಂದ ಬೆಂಗಳೂರಿಗೆ ಬಂದೆ. ಅದಾದ ಬಳಿಕ ರಾಜಕಾರಣ, ಬಳಿಕ ಮಹಿಳಾ ಆಯೋಗದ ಅಧ್ಯಕ್ಷೆಯಾದೆ. ನಮಗೆ ಈ ಕಥೆ ಚಿಕ್ಕದನಿಸುತ್ತದೆ. ಆದರೆ ಎಲ್ಲವೂ ಅವಮಾನದಿಂದಲೇ ಪ್ರಾರಂಭವಾಗುತ್ತದೆ” ಎಂದು ಹೇಳಿದರು.

“ಹೆಣ್ಣು ಮಕ್ಕಳು ಎಂತಹ ಕಷ್ಟ ಪಟ್ಟರೂ, ಅವಮಾನ ಅನುಭವಿಸಿದರೂ, ಸವಾಲು ಎದುರಾದರೂ, ಅಪಹಾಸ್ಯಕ್ಕೆ ಒಳಗಾದರೂ ಎದೆಗುಂದಬಾರದು. ಯಾವುದೇ ಹೋರಾಟಕ್ಕೆ ನೀಡುವ ಘೋಷಣೆ ಬಹಳ ದೊಡ್ಡ ಪಾತ್ರವನ್ನು ವಹಿಸುತ್ತದೆ. ಕೊಂದವರು ಯಾರು? ಎಂಬ ಎರಡು ಪದಗಳಲ್ಲಿ ಕಾಣೆಯಾದವರ ನ್ಯಾಯಕ್ಕೆ ಕೂಗುತ್ತಿರುವ ಅಷ್ಟೂ ಜೀವಗಳು ಹೇಳುತ್ತಿರುವ ಭಾಸ ಅಡಗಿದೆ” ಎಂದು ತಿಳಿಸಿದರು.

“ನಮಗೆ ಎಸ್‌ಐಟಿ ತನಿಖೆ ದಾರಿ ತಪ್ಪಿದಾಗ ಮತ್ತೆ ಸರ್ಕಾರಕ್ಕೆ ಪತ್ರ ಬರೆಯಬೇಕಾಯಿತು. ಸರ್ಕಾರಕ್ಕೆ ಮತ್ತೆ ಬುರುಡೆ ಚಿನ್ನಯ್ಯನ ವಿಚಾರದ ತನಿಖೆಗಾಗಿ ಪತ್ರ ಬರೆದಿದ್ದು ಅಲ್ಲ. ನಾವು 20 ವರ್ಷ ನೂರಾರು ಮಕ್ಕಳು ಕಾಣೆಯಾದರಲ್ಲ ಅದರ ತನಿಖೆಗೆ ಎಸ್‌ಐಟಿ ಕೋರಿದ್ದು. ನಾಪತ್ತೆಯಾದ ಹೆಣ್ಣು ಮಕ್ಕಳ ಬಗ್ಗೆ ನಿಜವಾಗಿ ತನಿಖೆ ನಡೆಯಬೇಕಾಗಿದೆ. ನಾನು ಪತ್ರ ಬರೆದಾಗ ನನ್ನ ಎಡಪಂಥೀಯಳು ಎಂದು ಕರೆದರು. ಈ ಮೂಲಕ ಜನರ ನಡುವೆ ವಿಷ ಬೀಜ ಬಿತ್ತಲಾಗುತ್ತಿದೆ” ಎಂದು ದೂರಿದರು.

“ಕೊಲೆಯಾಗಿರುವ, ಕಾಣೆಯಾಗಿರುವ, ಅತ್ಯಾಚಾರಕ್ಕೆ ಒಳಗಾಗಿದ್ದು ಹಿಂದೂ ಹೆಣ್ಣು ಮಕ್ಕಳು ಅಲ್ಲವೇ? ಹೆಣ್ಣು ಮಕ್ಕಳಿಗೆ ಯಾವುದೇ ಜಾತಿ, ಧರ್ಮ, ಮತವಿಲ್ಲ. ಹೆಣ್ಣೇ ಜಾತಿ, ಧರ್ಮ, ಮತ, ಹೆಣ್ಣೇ ಎಲ್ಲ. ಯಾವ ಧರ್ಮದಲ್ಲಿ ಹೆಣ್ಣಿನ ಮೇಲೆ ದೌರ್ಜನ್ಯವಾಗುವುದಿಲ್ಲ? ನಿಮ್ಮ ಧರ್ಮದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ, ವರದಕ್ಷಿಣೆ ಕಿರುಕುಳ ನಡೆಯುತ್ತಿಲ್ಲವೇ” ಎಂದು ಪ್ರಶ್ನಿಸಿದರು.

ಇದನ್ನು ಓದಿದ್ದೀರಾ? ಕೊಂದವರು ಯಾರು ಆಂದೋಲನದ ನಿಯೋಗದಿಂದ ಮುಖ್ಯಮಂತ್ರಿಗಳ ಭೇಟಿ, ಹಕ್ಕೊತ್ತಾಯ ಪತ್ರ ಸಲ್ಲಿಕೆ

ಹಾಗೆಯೇ, “ಈ ಹೋರಾಟದಿಂದ ನಾನು ಕಲಿಯುವುದು ಬಹಳಷ್ಟಿದೆ. ನೀವು ಎಡ-ಬಲ ಎಂದು ಕರೆದರೂ ನಾನು ನೊಂದ ಅಸಹಾಯಕ ಹೆಣ್ಣು ಮಕ್ಕಳ ಪರವಾಗಿ ಧ್ವನಿ ಎತ್ತುತ್ತೇನೆ. ಮಹಿಳೆ ಬಲವಾದಾಗ ರಾಷ್ಟ್ರ ಬಲವಾಗುತ್ತದೆ. ಭಾರತವನ್ನು ಭಾರತಾಂಬೆ ಎನುತ್ತೀರಿ, ಕರ್ನಾಟಕವನ್ನು ಭುವನೇಶ್ವರಿ ಎನ್ನುತ್ತೀರಿ. ಹಾಗಿರುವಾಗ ಮಹಿಳೆಯರು ಅಳುವುದನ್ನು ನೋಡಲಾಗದು. ಗೌರಿ ಸೇರಿದಂತೆ ನೊಂದ, ದೌರ್ಜನ್ಯದಿಂದ ಮೃತರದ ಎಲ್ಲರ ಆತ್ಮಕ್ಕೆ ಶಾಂತಿ ಸಿಗಲಿ” ಎಂದರು.

ಇನ್ನು ಪ್ರಾಸ್ತವಿಕವಾಗಿ ಮಾತನಾಡಿದ ‘ನಾವೆದ್ದು ನಿಲ್ಲದಿದ್ದರೆ’ ಸಂಘಟನೆಯ ಮಮತಾ ಯಜಮಾನ್ ಅವರು, “ಮಹಿಳಾ ಹಕ್ಕುಗಳು ಕೂಡಾ ಮಾನವ ಹಕ್ಕುಗಳೇ. ನನ್ನ ಸಹಿ ನನ್ನ ದನಿಯಾಗಿದೆ. ಒಂದೊಂದು ಸಹಿಗೂ ಬೆಲೆಯಿದೆ. ಎಸ್‌ಐಟಿಯ ಸಮಗ್ರ ತನಿಖೆಯಾಗಬೇಕು ಎಂಬುದು ನಮ್ಮೆಲ್ಲರ ಆಗ್ರಹ. ಕಳೆದ 20 ವರ್ಷಗಳಿಂದ ಹೆಣ್ಣು ಮಕ್ಕಳ ಮೇಲೆ ಆಗಿರುವ ದೌರ್ಜನ್ಯಕ್ಕೆ ನ್ಯಾಯಕ್ಕಾಗಿ ಎಸ್‌ಐಟಿ ಸಮಗ್ರ ತನಿಖೆ ನಡೆಸಲು ಸರ್ಕಾರ ಆದೇಶಿಸಬೇಕು” ಎಂದು ಆಗ್ರಹಿಸಿದರು.

ಈ ಕಾರ್ಯಕ್ರಮದಲ್ಲೇ ಮಹಿಳಾ ಆಯೋಗದ ಅಧ್ಯಕ್ಷರು ಪುಸ್ತಕ ಬಿಡುಗಡೆ ಮಾಡಿದರು. ಕಾದಂಬರಿಗಾರ್ತಿಯಾದ ಚಂಪಾವತಿ ಎಚ್.ಎಸ್ ಕಿರುಹೊತ್ತಿಗೆಯ ಪರಿಚಯ ನೀಡಿದ್ದು, “ಈ ಕಿರುಪುಸ್ತಕ ಸ್ತ್ರೀವಾದಿ ನೆಲೆಗಟ್ಟಿನಲ್ಲಿ ಕಟ್ಟಲಾಗಿದೆ. ಮೊದಲ ಅಧ್ಯಾಯದಲ್ಲಿ ದೌರ್ಜನ್ಯಗಳ ಇತಿಹಾಸ, ಮೈಕ್ರೋಫೈನಾನ್ಸ್ ಧಾರ್ಮಿಕ-ರಾಜಕೀಯ ಅಧ್ಯಾಯ ಈ ಪುಸ್ತಕದಲ್ಲಿದೆ. ಎಸ್‌ಐಟಿ ರಚನೆ, ಮಾಧ್ಯಮಗಳ ಬಗ್ಗೆ, ಕೊಂದವರು ಯಾರು? ಆಂದೋಲನ ಹುಟ್ಟಿಕೊಂಡ ಬಗ್ಗೆ ವಿವರಗಳಿವೆ” ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕವಿತಾ ಲಂಕೇಶ್, “ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 78 ವರ್ಷಗಳಾಗಿವೆ. ಆದರೆ ನಾವು ಇಂದಿಗೂ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆಯೇ ಮಾತನಾಡುವಂತಹ ಸ್ಥಿತಿಯಿದೆ. ಚಲನಚಿತ್ರ ನಟಿ ಶೃತಿ ಹರಿಹರನ್ ಲೈಂಗಿಕ ದೌರ್ಜನ್ಯದ ವಿರುದ್ಧ ದೂರು ನೀಡಿದಾಗ ಅದಕ್ಕೆ ಮೋದಿ ವಿರೋಧಿ, ಎಡಪಂಥೀಯರ ಹುನ್ನಾರ ಎಂಬ ಕಲ್ಪನೆ ಕಟ್ಟಲಾಯಿತು. ಗೌರಿ ಲಂಕೇಶ್ ಮೇಲೆಯೂ ಇದೇ ರೀತಿ ಅನ್ಯಾಯವಾಯಿತು, ಕೊಲೆಯಾಯಿತು. ಇತ್ತೀಚೆಗೆ ನಟಿ ರಮ್ಯಾ ಟ್ರೋಲ್ ಮಾಡಲಾಯಿತು. ನಟಿ ದೂರು ನೀಡಿದರು. ಮಹಿಳೆಯರ ನ್ಯಾಯಕ್ಕಾಗಿ ನಾಗಲಕ್ಷ್ಮೀ ನೀಡಿದ ಕೊಡುಗೆ ಮುಖ್ಯವಾದುದ್ದು. ಇವೆಲ್ಲವೂ ಮಹಿಳೆಯರು ಧ್ವನಿ ಎತ್ತಲು ಸ್ಫೂರ್ತಿಯಾಗುತ್ತದೆ. ಸೌಜನ್ಯ, ಆಸೀಫಾ, ಫಾತಿಮಾ- ಹೀಗೆ ಜಾತಿ ಧರ್ಮ ಇಲ್ಲದೆ ಮಹಿಳೆಯರ ಹೋರಾಟಕ್ಕೆ ನಿಲ್ಲೋಣ ನಿಮ್ಮ ಜತೆ ನಾನು ಎಂದಿಗೂ ಇರುತ್ತೇನೆ” ಎಂದು ಭರವಸೆ ನೀಡಿದರು.

ಇನ್ನು ಸಹಿ ಸಂಗ್ರಹದ ಬಗ್ಗೆ ಮಾತನಾಡಿದ ಮಹಿಳಾಪರ ಹೋರಾಟಗಾರ್ತಿ ಗೌರಮ್ಮ, “ಕೊಲೆಯಾದಾಗ ಕೊಂದವರು ಯಾರು ಎಂಬ ಉತ್ತರ ಸಿಗಬೇಕು. ಆದರೆ ಧರ್ಮಸ್ಥಳದಲ್ಲಿ ಹತ್ತಾರು ವರ್ಷವಾದರೂ ಉತ್ತರ ಸಿಗಲಿಲ್ಲ. ಕನ್ನಡ ನಾಡಿನಲ್ಲಿ ನ್ಯಾಯ ಉಳಿದಿದೆ ಎಂಬ ಭರವಸೆಯಿಂದ ಕರ್ನಾಟಕ ರಾಜ್ಯೋತ್ಸವ ದಿನದಿಂದ ಸಹಿ ಸಂಗ್ರಹ ಆರಂಭಿಸಿದೆವು. ಸರ್ಕಾರಕ್ಕೆ ನಮ್ಮ ಧ್ವನಿ ಮುಟ್ಟಿಸಲು ಈ ಹೋರಾಟ. ಎಸ್‌ಐಟಿ ತನಿಖೆಗಾಗಿ ಒತ್ತಾಯಿಸಿದ ಫಲವಾಗಿ ಎಸ್‌ಐಟಿ ರಚನೆಯಾಗಿದೆ. ನೋವಿನಲ್ಲಿರುವವರಿಗೆ ದನಿಯಾಗಲು ಸಹಿ ಸಂಗ್ರಹ ನಡೆಸಿದ್ದೇವೆ” ಎಂದು ತಿಳಿಸಿದರು.

ಹಾಗೆಯೇ ಹತ್ತು ದಿನಗಳಲ್ಲಿ 20 ಸಾವಿರ ಸಹಿ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಹಿ ಸಂಗ್ರಹ ಪ್ರತಿ ಸಲ್ಲಿಸಲಾಗಿದೆ. ಮಹಿಳೆಯರಿಗಿಂತ ಹೆಚ್ಚು ಪುರುಷರು ಸಹಿ ಮಾಡಿದ್ದಾರೆ. ಸರ್ಕಾರಿ ನೌಕರರು, ಪೊಲೀಸರೂ ಸಹಿ ಹಾಕಿದ್ದಾರೆ. ಸಂವಿಧಾನದ ಮೇಲೆ ನಂಬಿಕೆಯಿದೆ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ” ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲೇ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಮೂಲಕ ಸರ್ಕಾರಕ್ಕೆ ಸಹಿ ಸಂಗ್ರಹವನ್ನು ಸಲ್ಲಿಸಲಾಯಿತು. ಜತೆಗೆ ನಾಗಲಕ್ಷ್ಮೀ ಅವರ ಮುಖಾಂತರವೇ ಸರ್ಕಾರಕ್ಕೆ ಹಕ್ಕೋತ್ತಾಯಗಳನ್ನೂ ಸಲ್ಲಿಸಲಾಯಿತು. ಅಧ್ಯಕ್ಷತೆಯನ್ನು ವಹಿಸಿ ಲೇಖಕಿ ವಿ ಗಾಯತ್ರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಲೇಖಕಿ, ನಾಟಕಗಾರ್ತಿ ದು. ಸರಸ್ವತಿ ಅವರ ನಾಟಕ ಪ್ರದರ್ಶನ ನಡೆಯಿತು. ಬೆಂಗಳೂರಿನ ಮೀನಾಕ್ಷಿ, ಬಸಮ್ಮ, ಉಮಾ, ಮೈಸೂರಿನ ಮಹಾದೇವಮ್ಮ, ಕೋಲಾರದ ಲಕ್ಷ್ಮೀ, ಮಂಡ್ಯ ಪೂರ್ಣಿಮಾ, ದಾವಣಗೆರೆಯ ಜಬೀನಾ ಸಹಿ ಸಂಗ್ರಹ ಮಾಡಿದ ವೇಳೆಯಲ್ಲಿ ಜನರ ಅಭಿಪ್ರಾಯ ಹೇಗಿತ್ತು ಎಂಬ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಖ್ಯಾತ ಸ್ತ್ರೀವಾದಿ ಚಿಂತಕರೂ, ಬರಹಗಾರರೂ ಮತ್ತು ಕಲಾವಿದೆಯಾದ ಡಾ. ದು ಸರಸ್ವತಿ ಅವರ ಕಿರುನಾಟಕ ಪ್ರದರ್ಶನವೂ ಇತ್ತು. ಧರ್ಮಸ್ಥಳದ ಸುತ್ತಮುತ್ತ ನಡೆದ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನಾಧರಿಸಿ ಹೆಣೆದ ಈ ಕಿರುನಾಟಕ ನೆರೆದಿದ್ದವರ ಮನಸ್ಸನ್ನು ತಟ್ಟಿ, ಕಣ್ಣಾಲಿಗಳನ್ನು ಒದ್ದೆಯಾಗಿಸಿತು.

WhatsApp Image 2025 12 10 at 7.46.56 PM

ಇನ್ನು ಈ ಆಂದೋಲನದ ಭಾಗವಾಗಿ ನಿರ್ಭಯ ಪ್ರಕರಣ ನಡೆದ ದಿನವಾದ ಡಿಸೆಂಬರ್ 16ರಂದು ಕರ್ನಾಟಕದಲ್ಲೂ ಮಹಿಳೆಯರ ಮೇಲಿನ ಹಿಂಸಾಚಾರ ಕೊನೆಗೊಂಡು, ಎಲ್ಲ ಶೋಷಿತ, ದಮನಿತ ಮಹಿಳೆಯರಿಗೂ ನ್ಯಾಯ ಮತ್ತು ಘನತೆಯ ಬದುಕು ಖಾತ್ರಿಗೊಳ್ಳಬೇಕೆಂದು ಒತ್ತಾಯಿಸಿ ಧರ್ಮಸ್ಥಳದ ಬೆಳ್ತಂಗಡಿಯಲ್ಲಿ ‘ಮಹಿಳೆಯರ ಮೌನ ಮೆರವಣಿಗೆ ಹಾಗೂ ಮಹಿಳಾ ನ್ಯಾಯ ಸಮಾವೇಶ’ಗಳು ನಡೆಯಲಿವೆ ಎಂದು ಸಂಘಟಕರು ಮಾಹಿತಿ ನೀಡಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...