ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀ ಖುಲಾಸೆ: ‘ತೀರ್ಪು ನೋವುಂಟು ಮಾಡಿದೆ’ ಎಂದ ಮಹಿಳಾ ಹೋರಾಟಗಾರರು

Date:

ಚಿತ್ರದುರ್ಗದ ಮುರುಘಾ ಶ್ರೀ ವಿರುದ್ಧ ದಾಖಲಾಗಿದ್ದ ಮೊದಲ ಪೋಕ್ಸೋ ಪ್ರಕರಣವನ್ನು ಚಿತ್ರದುರ್ಗದ ಎರಡನೇ ಜಿಲ್ಲಾ ಅಪರ ಮತ್ತು ಸತ್ರ ಕೋರ್ಟ್‌ ಖುಲಾಸೆಗೊಳಿಸಿದೆ. ಮೂರು ವರ್ಷಗಳ ಕಾಲ ನಡೆದ ವಾದ-ವಿವಾದಗಳನ್ನು ಆಲಿಸಿದ ಬಹುತೇಕ ಮಹಿಳಾಪರ ಹೋರಾಟಗಾರರು ಲೈಂಗಿಕ ಕಿರುಕುಳಕ್ಕೆ ಒಳಗಾದ ಬಾಲಕಿಯರಿಗೆ ನ್ಯಾಯ ದೊರಕುವ ಭರವಸೆಯನ್ನು ಹೊಂದಿದ್ದರು. ಆದರೆ ಪ್ರಕರಣ ಖುಲಾಸೆಗೊಳ್ಳುತ್ತಿದ್ದಂತೆ ಮಹಿಳಾ ಹೋರಾಟಗಾರರು ನ್ಯಾಯ ವ್ಯವಸ್ಥೆಯ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ.

ಮುರುಘಾ ಶ್ರೀ ವಿರುದ್ಧ ಒಟ್ಟು ಎರಡು ಪೋಕ್ಸೋ ಪ್ರಕರಣಗಳು ದಾಖಲಾಗಿದೆ. ಈ ಪೈಕಿ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ದಾಖಲಾದ ಮೊದಲ ಪ್ರಕರಣವು ಖುಲಾಸೆಯಾಗಿದೆ. ಎರಡನೇ ಪ್ರಕರಣದ ವಿಚಾರಣೆ ಮುಂದುವರೆದಿದೆ. ಆದರೆ ಸದ್ಯ ಹೊರಬಂದಿರುವ ತೀರ್ಪು “ನೋವುಂಟು ಮಾಡಿದೆ” ಎಂದು ಮಹಿಳಾಪರ ಹೋರಾಟಗಾರರು ಹೇಳಿಕೊಂಡಿದ್ದಾರೆ.

ಇದನ್ನು ಓದಿದ್ದೀರಾ? BREAKING NEWS | ಪೋಕ್ಸೊ ಪ್ರಕರಣ: ಮುರುಘಾ ಶ್ರೀ ಖುಲಾಸೆಗೊಳಿಸಿದ ಕೋರ್ಟ್‌

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಬಗ್ಗೆ ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿರುವ ಕವಯಿತ್ರಿ, ಲೇಖಕಿ ರೂಪ ಹಾಸನ, “ಸದ್ಯ ಯಾವ ಆಧಾರದಲ್ಲಿ ಕೋರ್ಟ್ ಮುರುಘಾ ಶ್ರೀ ಅವರನ್ನು ಖುಲಾಸೆಗೊಳಿಸಿದೆ ಎಂಬುದು ತಿಳಿದುಬಂದಿಲ್ಲ. ಆದರೆ ತೀರ್ಪು ಹೊರಬರುತ್ತಿದ್ದಂತೆ ತಕ್ಷಣ ಅನಿಸಿದ್ದು ಇದು ದುರದೃಷ್ಟಕರವೆಂದು. ಮಕ್ಕಳ ಮೇಲೆ ನಡೆದಿರುವ ದೌರ್ಜನ್ಯ ಯಾವ ಆಧಾರದಲ್ಲಿ ಖುಲಾಸೆಯಾಗಿದೆ? ಹೇಗೆ ಸಾಬೀತಾಗಿಲ್ಲ ಎಂಬುದು ಆಶ್ಚರ್ಯಕರ” ಎಂದು ಹೇಳಿದ್ದಾರೆ.

ಹಾಗೆಯೇ ಈದಿನ ಡಾಟ್‌ ಕಾಮ್‌ ವರದಿಗಾರರೊಂದಿಗೆ ಮಾತನಾಡಿದ ಲಿಂಗತ್ವ ಅಲ್ಪಸಂಖ್ಯಾತ ಪರ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, “ನ್ಯಾಯಾಲಯದಿಂದ ಬಂದ ತೀರ್ಪು ತುಂಬಾ ನೋವು, ದುಃಖವನ್ನುಂಟು ಮಾಡಿದೆ. ಶೋಷಿತ ಹೆಣ್ಣು ಮಕ್ಕಳ ಮೇಲೆ, ಧ್ವನಿ ಇಲ್ಲದ ಹೆಣ್ಣು ಮಕ್ಕಳ ಮೇಲೆ ಉಂಟಾದ ಅನ್ಯಾಯಕ್ಕೆ ಸಂಬಂಧಿಸಿ ಇಂದು ಬಂದಿರುವ ತೀರ್ಪು ನಮ್ಮಂತಹ ಹೆಣ್ಣು ಮಕ್ಕಳಿಗೆ ಮಾಡಿದ ಅಪಮಾನ ಎಂದು ನನಗನಿಸುತ್ತದೆ” ಎಂದಿದ್ದಾರೆ.

akkai
ಲಿಂಗತ್ವ ಅಲ್ಪಸಂಖ್ಯಾತ ಪರ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ

“ಇಂತಹ ಒಂದು ದೌರ್ಜನ್ಯಕ್ಕೆ ಒಳಗಾದ ಮಹಿಳೆಯಾದ ನಾನು ಹತ್ತಿರದಿಂದ ನೋವನ್ನು ಅರ್ಥಮಾಡಿಕೊಳ್ಳಬಲ್ಲೆ. ಸಂತ್ರಸ್ತೆಯಾಗಿ, ನೊಂದ ವ್ಯಕ್ತಿಯಾಗಿ ಈ ಪ್ರಕರಣವನ್ನು ನೋಡಿದಾಗ ಈ ವ್ಯವಸ್ಥೆ ಇನ್ನೂ ತುಂಬಾ ಬದಲಾವಣೆಯಾಗಬೇಕು ಎಂದನಿಸುತ್ತದೆ. ನನಗೆ ಅತ್ಯಾಚಾರವಾಗಿದೆ, ಲೈಂಗಿಕ ಕಿರುಕುಳವಾಗಿದೆ ಎಂದು ಯಾರೂ ಕೂಡಾ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಅಪ್ರಾಪ್ತ ಹೆಣ್ಣು ಮಕ್ಕಳ ಮೇಲಾದ ಘಟನೆಯು ಇಡೀ ಸಮಾಜ ತಲೆತಗ್ಗಿಸಬೇಕಾಗಿದ್ದು. ನ್ಯಾಯ ದಾನದ ವ್ಯವಸ್ಥೆಯನ್ನ ಮರುಪರಿಶೀಲನೆ ಮಾಡಬೇಕಾಗುತ್ತದೆ. ಇದು ನಿಜವಾಗಿಯೂ ಭೀಭಿತ್ಸ ಮತ್ತು ದುರ್ದೈವ್ಯವಾದ ತೀರ್ಮಾನ ಎಂದು ನನಗನಿಸುತ್ತದೆ. ಹೆಣ್ಣು ಮಕ್ಕಳಿಗೆ ನ್ಯಾಯ ಸಿಕ್ಕಿಲ್ಲ ಎಂದನಿಸುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಈದಿನ ಡಾಟ್ ಕಾಮ್ ಜತೆ ಮಾತನಾಡಿದ ಜನವಾದಿ ಮಹಿಳಾ ಸಂಘಟನೆ(ಜೆಎಂಎಸ್‌) ರಾಜ್ಯ ಕಾರ್ಯದರ್ಶಿ ದೇವಿ, “ಹೆಣ್ಣು ಮಕ್ಕಳು ತಾವಾಗಿಯೇ ತಮಗಾದ ಲೈಂಗಿಕ ಕಿರುಕುಳದ ವಿರುದ್ಧ ಮುಂದೆ ಬಂದು ಮಾತನಾಡಿದ್ದಾರೆ. ಆದರೂ ಈ ಪ್ರಕರಣ ಖುಲಾಸೆಗೊಂಡಿದೆ ಎಂದರೆ ಈ ಕಾನೂನು ವ್ಯವಸ್ಥೆ ಸಡಿಲಗೊಂಡಿರುವುದು ನಮ್ಮ ಕಣ್ಣಿಗೆ ರಾಚುವಂತಿದೆ” ಎಂದು ಹೇಳಿದ್ದಾರೆ.

“ಇದು ಹೆಣ್ಣಿನ ಘನತೆಯ ಬದುಕಿಗೆ ಕುಂದು ತರುವಂತಹ ವ್ಯಕ್ತಿಯನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಿರುವುದು ನಮಗೆ ಎಲ್ಲೋ ಒಂದು ಕಡೆ ನೋವುಂಟು ಮಾಡಿದೆ. ಇದು ಹೆಣ್ಣು ಕುಲಕ್ಕೆ ಎಸೆದಿರುವ ಸವಾಲಾಗಿದೆ. ಹೆಣ್ಣು ಮಕ್ಕಳು ಸಂಪೂರ್ಣ ಸಾಕ್ಷಿ, ಪುರಾವೆಗಳನ್ನು ಒದಗಿಸಿಕೊಟ್ಟಿದ್ದರೂ ಯಾವ ಆಧಾರದಲ್ಲಿ ಪ್ರಕರಣ ಖುಲಾಸೆಗೊಳಿಸಲಾಗಿದೆ ಎಂಬ ಅನುಮಾನ ಉಂಟಾಗಿದೆ” ಎಂದು ತಿಳಿಸಿದರು.

ಏನಿದು ಮುರುಘಾ ಶ್ರೀ ವಿರುದ್ಧದ ಪೋಕ್ಸೋ ಪ್ರಕರಣ?

ಮುರುಘಾಶ್ರೀ ವಿರುದ್ಧ 2022ರ ಆ.26 ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪೋಕ್ಸೋ ಮುರುಘಾ ಮಠದ ಹಾಸ್ಟೆಲ್‌ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ದೂರು ನೀಡಿದ್ದರು. ಈ ಪ್ರಕರಣದಲ್ಲಿ ಎ1 ಮುರುಘಾ ಶ್ರೀ, ಎ2 ಮಹಿಳಾ ವಾರ್ಡನ್ ರಶ್ಮಿ, ಎ3 ಬಸವಾದಿತ್ಯ, ಎ4 ಮ್ಯಾನೇಜರ್ ಪರಮಶಿವಯ್ಯ, ಎ5 ವಕೀಲ ಗಂಗಾಧರಯ್ಯ ವಿರುದ್ಧ ಕೇಸ್ ದಾಖಲಾಗಿತ್ತು.

ಅದೇ ವರ್ಷ ಆ.27ರಂದು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಈ ಪ್ರಕರಣ ವರ್ಗಾವಣೆಯಾಗಿದ್ದು, 2022ರ ಸೆ.01ರಂದು ಎ1 ಮುರುಘಾಶ್ರೀ, ಎ2 ವಾರ್ಡನ್ ರಶ್ಮಿ ಬಂಧನಕ್ಕೊಳಗಾಗಿದ್ದರು. ಬಳಿಕ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಮುರುಘಾಶ್ರೀ ವಿರುದ್ಧ 2022ರ ಅ.13ರಂದು ಮಠದ ಅಡುಗೆ ಸಹಾಯಕಿಯಿಂದ ಮತ್ತೊಂದು ದೂರು ದಾಖಲಾಗಿತ್ತು. ಆ ಕೇಸಲ್ಲಿ ತನ್ನಿಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆಯೂ ಲೈಂಗಿಕ ಕಿರುಕುಳ ನೀಡಿರುವುದಾಗಿಯೂ ಎಂದು ಕೂಡ ಉಲ್ಲೇಖಿಸಿದ್ದರು.

ಇದನ್ನು ಓದಿದ್ದೀರಾ? ಮುರುಘಾಶ್ರೀ ಪ್ರಕರಣ | ಆರೋಪಿ ಶಿವಮೂರ್ತಿ ಶರಣರ ಮೇಲೆ ದೋಷಾರೋಪ ನಿಗದಿ

ಈ ವೇಳೆ ಎ1 ಮುರುಘಾ ಶ್ರೀ, ಎ2 ವಾರ್ಡನ್ ರಶ್ಮಿ, ಎ3 ಬಸವಾದಿತ್ಯ, ಎ4 ಪರಮಶಿವಯ್ಯ, ಎ5 ವಕೀಲ ಗಂಗಾಧರಯ್ಯ, ಎ6 ಮುರುಘಾಶ್ರೀ ಸಹಾಯಕ ಮಹಾಲಿಂಗ, ಎ7 ಅಡುಗೆಭಟ್ಟ ಕರಿಬಸಪ್ಪ ವಿರುದ್ದ ಕೇಸ್ ದಾಖಲಾಗಿದ್ದು, ಸಂಪೂರ್ಣ ತನಿಖೆ ನಡೆಸಿದ್ದ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಹಾಗೂ ಚಿತ್ರದುರ್ಗ ಡಿವೈಎಸ್ಪಿ ಅನಿಲ್ ಕುಮಾರ್ ನೇತೃತ್ವದ ತಂಡವು 2022ರ ಅ.27 ರಂದು 694 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿತ್ತು. ಅದರಲ್ಲಿ 347 ಪುಟಗಳ ಎ ಮತ್ತು ಬಿ ಎಂದು ಎರಡು ಸೆಟ್ ಚಾರ್ಜ್ ಶೀಟ್ ಸಲ್ಲಿಸಿದ್ದರು.

ಇನ್ನು 2023ರ ಜ.10ಕ್ಕೆ ದಾಖಲಾದ 2ನೇ ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು 761 ಪುಟಗಳ ಚಾರ್ಜ್‌ಶೀಟ್‌ ಅನ್ನು ಸಲ್ಲಿಸಿದ್ದರು. ಇಷ್ಟೆಲ್ಲಾ ಸಾಕ್ಷ್ಯಾಧಾರ ಹಾಗೂ ಚಾರ್ಜ್‌ಶೀಟ್‌ ಆಧಾರದಲ್ಲಿ ಚಿತ್ರದುರ್ಗ ನ್ಯಾಯಾಲಯ ವಿಚಾರಣೆ ನಡೆಸಿತ್ತು. ವಿಚಾರಣೆ ನಡೆಯುವಾಗಲೇ 2023ರ ನ.8 ರಂದು ಹೈಕೋರ್ಟ್‌ನಿಂದ ಮುರುಘಾಶ್ರೀಗೆ ಷರತ್ತುಬದ್ಧ ಜಾಮೀನು ಮಂಜೂರಾಗಿತ್ತು. ನ.16ರಂದು ಜಿಲ್ಲಾ ಕಾರಾಗೃಹದಿಂದ ಮುರುಘಾ ಶ್ರೀ ಬಿಡುಗಡೆಯಾಗಿದ್ದರು.

2ನೇ ಪೋಕ್ಸೋ ಕೇಸಿನಲ್ಲಿ ಜಾಮೀನು ಪಡೆಯದ ಹಿನ್ನೆಲೆಯಲ್ಲಿ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹಿನ್ನೆಲೆ ಪುನಃ ನ.20ರಂದು ಮುರುಘಾಶ್ರೀ ಬಂಧನಕ್ಕೊಳಗಾಗಿದ್ದರು. ಬಳಿಕ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಆಗ ಸಂತ್ರಸ್ತೆಯರು ಮುರುಘಾ ಶ್ರೀ ಗಳ ಜಾಮೀನು ರದ್ದತಿ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋದ ಹಿನ್ನೆಲೆಯಲ್ಲಿ ಮುಖ್ಯ ಸಾಕ್ಷ ವಿಚಾರಣೆ ಪೂರ್ಣ ಆಗುವವರೆಗೆ ಮುರುಘಾ ಶ್ರೀ ಬಂಧನದಲ್ಲಿಡುವಂತೆ ಸುಪ್ರಿಂ ಕೋರ್ಟ್ ಆದೇಶ ಮಾಡಿತ್ತು. ಹೀಗಾಗಿ 2024ರ ಮೇ.27 ರಂದು ಕೋರ್ಟ್ ಎದುರು ಶರಣಾದ ಮುರುಘಾಶ್ರೀಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶಿಸಿತ್ತು.

ಬಳಿಕ ಸಂತ್ರಸ್ತೆಯರಿಬ್ಬರು ಸೇರಿದಂತೆ 13 ಜನರ ಸಾಕ್ಷ ವಿಚಾರಣೆ ಅಂತ್ಯವಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಮುರುಘಾ ಶ್ರೀ ಅವರಿಗೆ ಬಿಡುಗಡೆ ಭಾಗ್ಯ ಸಿಕ್ಕಿತ್ತು. ತರಾತುರಿಯಲ್ಲಿ ಕೋರ್ಟಿನ ಮಧ್ಯಸ್ಥಿಕೆಯಲ್ಲಿಯೇ ಮಠದ ಅಧಿಕಾರವನ್ನೂ ಶಿವಮೂರ್ತಿಗೆ ಹಸ್ತಾಂತರಿಸುವ ಪ್ರಕ್ರಿಯೆಯೂ ನಡೆದಿತ್ತು. ಹೈಕೋರ್ಟ್‌ ನಿರ್ದೇಶನದ ಮೇರೆಗೆ ಮುರುಘಾ ಮಠದ ತಾತ್ಕಾಲಿಕ ಆಡಳಿತಾಧಿಕಾರಿಯಾಗಿದ್ದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಕೆ.ಬಿ.ಗೀತಾ ಅವರು ಪೀಠಾಧಿಪತಿ ಸ್ಥಾನದ ಅಧಿಕಾರವನ್ನು ಅತ್ಯಾಚಾರ ಆರೋಪಿ ಮುರುಘಾ ಶ್ರೀಗೆ ಹಸ್ತಾಂತರಿಸಿದ್ದರು.

ಆಗ ಮೂಡಿರುವ ಕಾನೂನಾತ್ಮಕ ಪ್ರಶ್ನೆ ಏನೆಂದರೆ, ಪೋಕ್ಸೋ ಪ್ರಕರಣದ ಆರೋಪಿ ತನ್ನ ಊರನ್ನು ಮಾತ್ರ ಪ್ರವೇಶಿಸದೇ ಸಂತ್ರಸ್ತ ಮಕ್ಕಳು ಇರುವ ಊರಿಗಳಲ್ಲಿ ಓಡಾಡಬಹುದೇ? ಅನ್ನುವುದು. ಚಿತ್ರದುರ್ಗದಲ್ಲಿ ಪ್ರಕರಣ ನಡೆದಿರುವ ಕಾರಣ, ಆರೋಪಿಗೆ ಆ ಜಿಲ್ಲೆಗೆ ಮಾತ್ರ ಪ್ರವೇಶಿಸದಂತೆ ಕೋರ್ಟ್‌ ನಿರ್ದೇಶನ ನೀಡಿತ್ತು. ಜಾಮೀನಿನ ಮೇಲೆ ಬಿಡುಗಡೆಗೊಂಡ ಸ್ವಾಮಿ ದಾವಣಗೆರೆಯ ವಿರಕ್ತ ಮಠಕ್ಕೆ ತೆರಳಿದ್ದರು.

ಬೆಂಗಳೂರು, ಮೈಸೂರು ಸಹಿತ ಹಲವೆಡೆ ಮುರುಘಾ ಮಠದ ಶಾಖೆ, ಶಿಕ್ಷಣ ಸಂಸ್ಥೆ, ಹಾಸ್ಟೆಲ್‌, ವಾಣಿಜ್ಯ ಕಟ್ಟಡಗಳು ಇವೆ. ಅಲ್ಲೆಲ್ಲ ಓಡಾಡಲು ಆರೋಪಿಗೆ ಯಾವುದೇ ನಿರ್ಬಂಧವಿಧಿಸಿರಲಿಲ್ಲ. ಇದು ಸಾಕ್ಷಿಗಳ ಮೇಲೆ ಒತ್ತಡ, ಪ್ರಭಾವ ಬೀರಲು ಅವಕಾಶ ಕೊಟ್ಟಂತಾಗುತ್ತದೆ ಎಂಬ ಆರೋಪ ಕೇಳಿ ಬಂದಿತ್ತು. ಆರೋಪಿ ಮುರುಘಾ ಶ್ರೀ ಪೋಕ್ಸೋ ಪ್ರಕರಣದಡಿ ಬಂಧನವಾದ ನಂತರ ಸರ್ಕಾರವೇ ಮಧ್ಯಪ್ರವೇಶ ಮಾಡಿ ಮುರುಘಾ ಮಠದ ವಿದ್ಯಾರ್ಥಿನಿಲಯದಲ್ಲಿ ಆಶ್ರಯ ಪಡೆದಿದ್ದ ಎಲ್ಲ ವಿದ್ಯಾರ್ಥಿನಿಯರನ್ನು ರಾಜ್ಯದ ವಿವಿಧ ಜಿಲ್ಲೆಗಳ ವಸತಿ ಶಾಲೆಗಳಿಗೆ ದಾಖಲಿಸಲಾಗಿತ್ತು. ಬಲವಾದ ದಾಖಲೆಗಳಿದೆ ಎಂಬ ಕಾರಣಕ್ಕೆ ಮುರುಘಾ ಶ್ರೀ ಅವರಿಗೆ ಶಿಕ್ಷೆಯಾಗುವ ಸಾಧ್ಯತೆ ಬಗ್ಗೆ ಚರ್ಚೆಗಳೂ ನಡೆದಿತ್ತು.

ಪೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ ಖುಲಾಸೆ ಸರಿಯೇ?
WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...