1 ಡಾಲರ್ = 86.16 ರೂ.: ಡಾಲರ್ ಎದುರು ಮತ್ತೆ ಕುಸಿದ ರೂಪಾಯಿ

Date:

ಜಾಗತಿಕ ಮಾರುಕಟ್ಟೆಯಲ್ಲಿ ಭಾರತವು ತನ್ನ ವಹಿವಾಟುಗಳನ್ನು ಶುಕ್ರವಾರ ದುರ್ಬಲವಾಗಿ ಮುಗಿಸಿದೆ. ಅಮೆರಿಕದ ಡಾಲರ್‌ ಎದುರು ಮತ್ತೆ ಕುಸಿತ ಕಂಡಿರುವ ರೂಪಾಯಿ ಮೌಲ್ಯವು, ಒಂದು ಡಾಲರ್‌ಗೆ 86.16 ರೂ.ಗೆ ಕುಸಿದುನಿಂತಿದೆ. ಗುರುವಾರ 86.08 ರೂ. ಇದ್ದ ರೂಪಾಯಿ ಇಂದು 8 ಪೈಸೆಯಷ್ಟು ಕುಸಿತ ಕಂಡಿದೆ.

ಶುಕ್ರವಾರ ಬೆಳಗ್ಗೆ ಜಾಗತಿಕ ಕಚ್ಚಾ ತೈಲು ಬೆಲೆಗಳ ಕುಸಿತದಿಂದಾಗಿ ರೂಪಾಯಿ ಮೌಲ್ಯವು ಏರಿಕೆ ಕಂಡು, 86.06 ರೂ.ಗೆ ಏರಿಕೆಯಾಗಿತ್ತು. ಅಲ್ಲದೆ, ಅಂತರ್‌ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯವು 85.99 ರೂ. ಇತ್ತು. ಆರಂಭಿಕ ಆಶಾವಾದವನ್ನು ಹುಟ್ಟುಹಾಕಿತ್ತು. ಆದರೆ, ದಿನದ ಅಂತ್ಯದ ವೇಳೆಗೆ ರೂಪಾಯಿ ಕುಸಿತಗೊಂಡಿದೆ.

ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದಲ್ಲಿ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಭಾರತ ಮತ್ತು ಅಮೆರಿಕ ಸಕ್ರಿಯವಾಗಿ ಕೆಲಸ ಮಾಡುತ್ತಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಸ್ರೇಲ್‌ ಮೇಲೆ ಇರಾನ್ ದಾಳಿ; 50ಕ್ಕೂ ಹೆಚ್ಚು ಸಾವು, ಇಂಟರ್‌ಸೆಪ್ಟರ್ ನಾಶ

ಇಸ್ರೇಲ್‌ನ ಪರಮಾಣು ಚಟುವಟಿಕೆಗಳ ಪ್ರಮುಖ ಕೇಂದ್ರವೆಂದೇ ಗುರುತಿಸಲ್ಪಟ್ಟಿರುವ ದಕ್ಷಿಣದ ಡಿಮೋನಾ ನಗರದ...

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...