ಕೆನಡಾಕ್ಕೆ ಶೇ100 ಸುಂಕ ಎಚ್ಚರಿಕೆ: ಮುಂದುವರೆದ ಟ್ರಂಪ್‌ ಸರ್ವಾಧಿಕಾರಿ ನಡೆ

Date:

ಇತ್ತೀಚಿನ ದಿನಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ʼಜಗತ್ತಿನ ಸರ್ವಾಧಿಕಾರಿʼ ಎಂಬಂತೆ ವರ್ತಿಸುತ್ತಿದ್ದಾರೆ. ಅಮೆರಿಕದ ನಡೆಗೆ ಯಾವ ದೇಶ ಖಂಡಿಸುತ್ತದೆಯೋ ಅದರ ವಿರುದ್ಧ ಕಿಡಿಕಾರುತ್ತ ಬಂದಿದ್ದಾರೆ. ಇದರ ಜೊತೆಗೆ ಉಳಿದ ದೇಶಗಳಿಗೂ ಬೆದರಿಕೆಯನ್ನು ಹಾಕುತ್ತ, ಮಾತು ಕೇಳದಿದ್ದರೆ ಸುಂಕ ನೀತಿಯಿಂದ ಎಚ್ಚರಿಕೆ ಸಂದೇಶವನ್ನು ಕೊಡುತ್ತಿದ್ದಾರೆ. ಈಗಾಗಲೇ ಟ್ರಂಪ್‌ ಅವರ ಸುಂಕ ನೀತಿಯಿಂದ ಭಾರತವು ಸೇರಿದಂತೆ ಅನೇಕ ದೇಶಗಳು ನಲುಗಿ ಹೋಗಿವೆ.

ಅಮೆರಿಕ ಮತ್ತು ಚೀನಾ ಮೊದಲಿನಿಂದಲೂ ವೈರಿ ರಾಷ್ಟ್ರಗಳು. ಆ ಕಾರಣಕ್ಕಾಗಿ, ಚೀನಾ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಂಡರೆ ಕೆನಡಾ ಸರಕುಗಳ ಮೇಲೆ ಶೇ100ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಎಚ್ಚರಿಕೆ ಕೊಟ್ಟಿದ್ದಾರೆ. ಕೆನಡಾ ಪ್ರಧಾನಿ ಮಾರ್ಕ್‌ ಕಾರ್ನಿಗೆ ʼನಿಮ್ಮ ದೇಶವು ಅಪಾಯವನ್ನು ಎದುರಿಸುತ್ತದೆʼ ಎಂದು ಬೆದರಿಕೆ ಹಾಕುತ್ತಿದ್ದಾರೆ.

ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂಥ್‌ ಸೋಷಿಯಲ್‌ ನಲ್ಲಿ “ಕೆನಡಾ ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡರೆ, ಅಮೆರಿಕಕ್ಕೆ ಬರುವ ಎಲ್ಲಾ ಕೆನಡಾದ ಸರಕುಗಳು ಮತ್ತು ಉತ್ಪನ್ನಗಳ ಮೇಲೆ ತಕ್ಷಣವೇ ಶೇ.100 ರಷ್ಟು ಸುಂಕ ವಿಧಿಸಲಾಗುವುದು” ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿ : ರಷ್ಯಾದ ತೈಲ ಆಮದು ಕಡಿತಗೊಳಿಸಿದ ಭಾರತ; ಟ್ರಂಪ್‌ಗೆ ಮಣಿದರಾ ಮೋದಿ?

ಕಳೆದ ವಾರ ಕೆನಡಾದ ಪ್ರಧಾನಿ ಮಾರ್ಕ್‌ ಕಾರ್ನಿ ಚೀನಾಕ್ಕೆ ಭೇಟಿ ನೀಡದಾಗ ವಿಶ್ವಾಸರ್ಹ ಪಾಲುದಾರ ದೇಶ ಎಂದು ಹೊಗಳಿದ್ದರು. ಜೊತೆಗೆ ದಾವೋಸ್‌ನಲ್ಲಿ ನಡೆದ ವಿ‍ಶ್ವ ಆರ್ಥಿಕ ವೇದಿಕೆ ಸಮ್ಮೇಳನದಲ್ಲಿ ʼವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ಚೀನಾದಿಂದ ಹೂಡಿಕೆ ಆಕರ್ಷಿಸುವಂತೆʼ ಕೆನಡಾ ನಾಯಕರು ಒತ್ತಾಯಿಸಿದ್ದಾರೆ. ಈ ನಡೆ ಟ್ರಂಪ್‌ ಅವರ ಕೆಂಗಣ್ಣಿಗೆ ಗುರಿಯಾಗಿತ್ತು.

ಅಮೆರಿಕದ ಸುಂಕಗಳನ್ನು ತಪ್ಪಿಸಿಕೊಳ್ಳಲು ಚೀನಾವು ಕೆನಡಾವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಟ್ರಂಪ್‌ ಆರೋಪ ಮಾಡಿದ್ದಾರೆ. ಅಮೆರಿಕಕ್ಕೆ ವಾಮಮಾರ್ಗದ ಮೂಲಕ ಚೀನಾದ ಸರಕುಗಳು ಮತ್ತು ಉತ್ಪನ್ನಗಳನ್ನು ಕಳುಹಿಸಲು ಕೆನಡಾ ʼಡ್ರಾಫ್‌ ಆಫ್‌ ಪೋರ್ಟ್‌ʼ ಆಗಲಿದೆ ಎಂದು ಪ್ರಧಾನಿ ಕಾರ್ನಿ ತಪ್ಪಾಗಿ ಭಾವಿಸಿದ್ದಾರೆ ಎಂದು ಟ್ರಂಪ್‌ ಹೇಳಿದ್ದಾರೆ.

ಮುಂದವರೆದು ʼಚೀನಾವು ಕೆನಡಾವನ್ನು ಜೀವಂತವಾಗಿ ನುಂಗುತ್ತದೆ. ಅದರ ಸಂಪೂರ್ಣ ವ್ಯವಹಾರಗಳು, ಸಾಮಾಜಿಕ ರಚನೆ ಮತ್ತು ಸಾಮಾನ್ಯ ಜೀವನ ವಿಧಾನವನ್ನು ಸೇರಿದಂತೆ ಸಂಪೂರ್ಣ ಕೆನಡಾವನ್ನು ಸರ್ವನಾಶಪಡಿಸುತ್ತದೆʼ ಎಂದು ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

ಈ ನಡುವೆ, ಜಾಗತಿಕ ಸಂಘರ್ಷಗಳನ್ನು ಪರಿಹರಿಸುವ ಉದ್ದೇಶದಿಂದ ಸ್ಥಾಪಿಸಿದ ʼಶಾಂತಿ ಮಂಡಳಿʼಗೆ ಸೇರಲು ಕೆನಡಾಕ್ಕೆ ನೀಡದ್ದ ಆಹ್ವಾನವನ್ನು ಟ್ರಂಪ್‌ ಗುರುವಾರ ಹಿಂತೆಗೆದುಕೊಂಡಿದ್ದಾರೆ. ದಾವೋಸ್‌ನ ಆರ್ಥಿಕ ಸಮ್ಮೇಳನದಲ್ಲಿ ಕೆನಡಾ ಪ್ರಧಾನಿ ಮಾರ್ಕ್‌ ಕಾರ್ನಿ ಮಾಡಿದ ಭಾಷಣದ ನಂತರ ಟ್ರಂಪ್‌ ಈ ತೀರ್ಮಾನವನ್ನು ಕೈಗೊಂಡಿದ್ದಾರೆ.

ಟ್ರಂಪ್‌ ತಮ್ಮ ಭಾಷಣಗಳಲ್ಲಿ ʼಕೆನಡಾ ಜೀವಂತವಾಗಿರುವುದು ಅಮೆರಿಕ ಸಂಯುಕ್ತ ಸಂಸ್ಥಾನದಿಂದಾಗಿʼ ಎಂದು ಹೇಳಿಕೊಂಡಿದ್ದಾರೆ. ಅದಾಗ್ಯೂ, ಟ್ರಂಪ್‌ ಮಾತಿಗೆ ಕೆನಡಾದ ಸಚಿವ ಡೊಮಿನಿಕ್‌ ಲೆಬ್ಲಾಂಕ್‌  ʼಕೆನಡಾದ ಆರ್ಥಿಕತೆಯನ್ನು ಬಲಪಡಿಸುವಲ್ಲಿ ವ್ಯಾಪಾರ ಮತ್ತು ಹೂಡಿಕೆಯನ್ನು ವಿಶ್ವದಾದ್ಯಂತ ಆಕರ್ಷಿಸಲು ಪ್ರಯತ್ನಿಸುತ್ತಿದೆʼ ಎಂದು ಹೇಳಿದ್ದಾರೆ.

ಟ್ರಂಪ್‌ ವಿವಿಧ ದೇಶಗಳಿಗೆ ಸುಂಕ ಹೇರಿಕೆ ಮಾಡುವುದು ಮಾತ್ರವಲ್ಲ, ಪ್ರಜಾಪ್ರಭುತ್ವ ದೇಶದ ಅಧ್ಯಕ್ಷನನ್ನೇ ಅಪಹರಿಸಿದ್ದರು. ಟ್ರಂಪ್‌ ಮತ್ತು ಅಮೆರಿಕ ದೇಶದ ನೀತಿಯಲ್ಲಿಯೇ ಆಕ್ರಮಣಕಾರಿ ಸ್ವಾಭಾವವಿದೆ. ಈ ನೀತಿಯಿಂದಲೇ ಭಾರತ ಸೇರಿದಂತೆ ಅನೇಕ ದೇಶದ ನಾಯಕರಿಗೆ ಅವಮಾನ ಮಾಡುತ್ತಿದ್ದಾರೆ.

ಕೆನಡಾ – ಅಮೆರಿಕ ಸಂಬಂಧದಲ್ಲಿ ಬಿರಕು?

ಜಗತ್ತಿನ ಅತ್ಯಂತ ಶ್ರೀಮಂತ ದೇಶಗಳ ಪೈಕಿ ಕೆನಡಾ ಕೂಡ ಒಂದು. ತನ್ನಲ್ಲಿರುವ ಉತ್ತಮ ನೈಸರ್ಗಿಕ ಸಂಪನ್ಮೂಲದಿಂದ ಕೆನಡಾವು ಜಗತ್ತಿನ ಗಮನಸೆಳೆದಿದೆ. ಇದರಿಂದ ಪ್ರತಿವರ್ಷ ಲಕ್ಷಾಂತರ ಕೋಟಿ ರೂಪಾಯಿ ವ್ಯಾಪಾರ ಮತ್ತು ವಹಿವಾಟನ್ನು ಅಮೆರಿಕ ಜೊತೆ ನಡೆಸುತ್ತದೆ. ಹೀಗಿರುವಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೆನಡಾ ವಿರುದ್ಧ ಶೇ100 ಸುಂಕ ವಿಧಿಸುವ ಎಚ್ಚರಿಕೆ ಕೊಟ್ಟಿರುವುದು ಆತಂಕ ಸೃಷ್ಟಿಸಿದೆ.

ಅಲ್ಲದೆ ಭವಿಷ್ಯದಲ್ಲಿ ನ್ಯಾಟೋ ಒಕ್ಕೂಟದ ಒಗ್ಗಟ್ಟಿನ ವಿಚಾರದಲ್ಲೂ ಡೋಲಾಯಮಾನ ಸ್ಥಿತಿಗೆ ಈ ಬೆಳವಣಿಗೆಯು ಕಾರಣವಾಗಲಿದೆ. ಅಮೆರಿಕದ ಜೊತೆ ಕೆನಡಾ ಕೂಡ ನ್ಯಾಟೋ ಒಕ್ಕೂಟದ ರಾಷ್ಟ್ರವಾಗಿದೆ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ. ಹೀಗಿರುವಾಗ, ದೊಡ್ಡ ಪ್ರಮಾಣದ ತೆರಿಗೆ ಹೇರಿಕೆ ಭವಿಷ್ಯದಲ್ಲಿ ನ್ಯಾಟೋ ಒಗ್ಗಟ್ಟಿನ ಮೇಲೆ ಕೂಡ ಪರಿಣಾಮ ಬೀರುವ ಸಾಧತ್ಯೆಯಿದೆ.

ಟ್ರಂಪ್‌ ಬೆದರಿಕೆಗಳು

ಡೊನಾಲ್ಡ್‌ ಟ್ರಂಪ್‌ ಎರಡನೇ ಅವಧಿಯಲ್ಲಿ ಅಧಿಕಾರಕ್ಕೆ ಬಂದ ಮೇಲೆ ಅಮೆರಿಕದ ವ್ಯಾಪಾರ ನೀತಿಯ ಭಾಗವಾಗಿ ಅನೇಕ ದೇಶಗಳ ಮೇಲೆ ಸುಂಕ ವಿಧಿಸಿದ್ದಾರೆ. ಅಮೆರಿಕಕ್ಕೆ ಭಾರತ ಸೇರಿದಂತೆ ಅನೇಕ ದೇಶಗಳು ಕಳುಹಿಸುವ ಸರಕುಗಳ ಮೇಲೆ ಸುಂಕ ವಿಧಿಸುವುದು, ವ್ಯಾಪಾರ ನೀತಿಗಿಂತ, ಅಮೆರಿಕದ ವಿರುದ್ಧ ನಿಂತ ದೇಶಗಳು ಮತ್ತು ಆ ದೇಶಗಳ ಜೊತೆ ಭಾರತ, ಚೀನಾದಂತಹ ದೇಶಗಳು ವ್ಯಾಪಾರ ಸಂಬಂಧ ಹೊಂದಿರುವ ಕಾರಣಕ್ಕೆ ಬೆದರಿಕೆ ಹಾಕುವುದೇ ಉದ್ದೇಶವಾಗಿದೆ.

ಕಳೆದ ವರ್ಷ ಭಾರತವು ವೆನೆಜುವೆಲಾ ತೈಲ ಖರೀದಿಸುತ್ತಿದೆ ಎಂದು ಕಾರಣಕೊಟ್ಟು ಶೇ25ರಷ್ಟು ಸುಂಕವನ್ನು ವಿಧಿಸಲಾಗಿತ್ತು. ನಂತರ ರಷ್ಯಾ ಜೊತೆಗೆ ತೈಲ ಖರೀದಿಯನ್ನು ಮಾಡುತ್ತಿರುವುದರಿಂದ ಶೇ50 ರಷ್ಟು ಸುಂಕ ವಿಧಿಸಲಾಗಿತ್ತು. ಅದೇ ರೀತಿಯಲ್ಲಿ ಇರಾನ್‌ನಲ್ಲಿ ಆಂತರಿಕ ಪ್ರತಿಭಟನೆಗಳು ನಡೆಯುವ ಸಂದರ್ಭದಲ್ಲಿ, ಇರಾನ್‌ ದೇಶಕ್ಕೆ ಭಾರತವು ಬಾಸ್ಮತಿ ಅಕ್ಕಿ ಕಳುಹಿಸಿಕೊಡುವುದನ್ನು ನಿಲ್ಲಿಸದೆ ಹೋದರೆ ಶೇ 25ರಷ್ಟು ಸುಂಕ ವಿಧಿಸಿಸುವುದಾಗಿ ಹೇಳಿತ್ತು.

2025ರ ಆರಂಭದಲ್ಲಿ ಚೀನಾ ದೇಶವು ರಷ್ಯಾ ತೈಲವನ್ನು ಖರೀದಿ ಮಾಡುತ್ತಿದೆ ಎಂದು ಆರೋಪಿಸಿ, ಅಮೆರಿಕಕ್ಕೆ ತಲುಪುವ ಚೀನಾದ ಸರಕುಗಳ ಮೇಲೆ ಶೇ100 ರಷ್ಟು ಸುಂಕ ವಿಧಿಸಿತ್ತು. ಅದೇ ರೀತಿಯಲ್ಲಿ ನವೆಂಬರ್‌ 2025ರಲ್ಲಿ ವೆನೆಜುವೆಲಾ ತೈಲ ಖರೀದಿಸುತ್ತಿರುವುದಕ್ಕೆ ಶೇ 25ರಷ್ಟು ಸುಂಕ ವಿಧಿಸಲಾಗಿತ್ತು.

ಇವೆಲ್ಲಕ್ಕಿಂತ ಮುಖ್ಯವಾಗಿ ಜಗತ್ತಿನಲ್ಲಿ ಅತಿ ಹೆಚ್ಚು ತೈಲವಿರುವ ವೆನೆಜುವೆಲಾ ದೇಶದ ಅಧ್ಯಕ್ಷ ನಿಕೋಲಸ್‌ ಮಡೂರೊ ಮತ್ತು ಅವರ ಪತ್ನಿಯನ್ನು ಅಪಹರಿಸಿ ನೇರವಾಗಿ ಬೆದರಿಕೆ ಹಾಕಲಾಗಿತ್ತು. ವೆನೆಜುವೆಲಾ ದೇಶದ ತೈಲವನ್ನು ಕದಿಯುವ ಪೀತೂರಿಯು ನಡೆಸಲಾಯಿತು. ಈಗ ಅತೀ ಹೆಚ್ಚು ನೈಸರ್ಗಿಕ ನಿಕ್ಷೇಪಗಳಿರುವ ಗ್ರೀನ್‌ಲ್ಯಾಂಡ್‌ ದೇಶ ಅಮೆರಿಕವು ತನ್ನ ವಶಕ್ಕೆ ಬೇಕು ಎಂದು ಬೆದರಿಸಲಾಗುತ್ತಿದೆ. ಅದಕ್ಕೆ ವಿರೋಧ ವ್ಯಕ್ತಿಪಡಿಸಿದ ಎಂಟು ದೇಶಗಳಿಗೆ ಶೇ10ರಷ್ಟು ಸುಂಕ ಹೇರಲಾಗಿದೆ. ಈ ಸುಂಕ ಮುಂದೆ ಶೇ25ಕ್ಕೆ ಹೇರಿಕೆಯಾಗಲಿದ್ದು, ಜೂನ್‌ 1ರ ಒಳಗೆ ಗ್ರೀನ್‌ಲ್ಯಾಂಡ್‌ ಸಂಪೂರ್ಣವಾಗಿ ವಶಕ್ಕೆ ಬರಲಿದ ಎಂದು ಎಚ್ಚರಿಕೆಯನ್ನು ಕೊಡಲಾಗಿದೆ.

ಮೇಲಿನ ಎಲ್ಲಾ ವಿಷಯಗಳು ಟ್ರಂಪ್‌ ಅವರ ಸರ್ವಾಧಿಕಾರಿ ನಡೆಗೆ ಉದಾಹರಣೆಯಾಗಿದೆ. ಈ ನಡೆಗೆ ಈಗಾಗಲೇ ಅನೇಕ ದೇಶಗಳು ಆಕ್ರೋಶ ವ್ಯಕ್ತಪಡಿಸಿವೆ. ಆದರೆ ಭಾರತದಂತಹ ದೇಶಗಳು ಟ್ರಂಪ್‌ ನೀತಿಯನ್ನು ಮೌನವಹಿಸಿ ಒಪ್ಪಿಕೊಂಡಿವೆ. ಈಗ ಕೆನಡಾ ದೇಶಕ್ಕೆ ಹಾಕಿರುವ ಬೆದರಿಕೆ ಹೊಸದೆನೂ ಅನ್ನಿಸುವುದಿಲ್ಲ. ಆದರೆ ಟ್ರಂಪ್‌ ನಡೆಯನ್ನು ಕೆನಡಾ ವಿರೋಧಿಸುವ ಸಂಭಾವ್ಯ ಇದೆ.

Manoj
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...