ಪನಾಮಾ | ಉತ್ಖನನದ ವೇಳೆ 32 ಅಸ್ತಿ ಪಂಜರದ ಜೊತೆಗೆ ಬೃಹತ್ ಚಿನ್ನದ ಖಜಾನೆ ಪತ್ತೆ!

Date:

ಪುರಾತನ ಕಾಲದ ಕೋಟೆ, ದೇವಸ್ಥಾನಗಳಲ್ಲಿ ನಿಧಿ ಇರುತ್ತದೆ ಎಂಬ ವಿಚಾರವನ್ನು ನಂಬುವಂತಹಾ ವಿಚಿತ್ರ ಘಟನೆಯೊಂದು ಅಮೇರಿಕದ ಪನಾಮಾದಲ್ಲಿ ನಡೆದಿದೆ.

ಕೇಂದ್ರ ಅಮೆರಿಕದ ಪನಾಮಾದಲ್ಲಿ 1200 ವರ್ಷಗಳಷ್ಟು ಹಳೆಯದಾದ ಗೋರಿಯೊಂದನ್ನು ಉತ್ಖನನ ಮಾಡುತ್ತಿದ್ದ ವೇಳೆ ಪುರಾತತ್ವ ಶಾಸ್ತ್ರಜ್ಞರು ಒಳಗೆ ಕಂಡ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ. ಬೃಹತ್ ಗೋರಿಯ ಒಳಗೆ ಚಿನ್ನದ ಖಜಾನೆ ಜತೆಗೆ, 32 ಮಂದಿಯ ಅಸ್ತಿ ಪಂಜರಗಳ ರಾಶಿಯೇ ದೊರಕಿದೆ. ಈ ಶವಗಳೆಲ್ಲವೂ ನರಬಲಿಯ ಪರಿಣಾಮ ಇರಬಹುದು ಎಂದು ಇತಿಹಾಸ ತಜ್ಞರು ಅಂದಾಜಿಸಿದ್ದಾರೆ.

ರಾಜಧಾನಿ ಪನಾಮಾ ಸಿಟಿಯಿಂದ ಸುಮಾರು 110 ಮೈಲು ದೂರದಲ್ಲಿರುವ ಎಲ್ ಕ್ಯಾನೊ ಆರ್ಕಿಯಲಾಜಿಕಲ್ ಪಾರ್ಕ್‌ನಲ್ಲಿ ಅಪಾರ ಪ್ರಮಾಣದ ನಿಧಿ ಹುದುಗಿರುವ ಸಮಾಧಿ ಪತ್ತೆಯಾಗಿದೆ. ಇದರಲ್ಲಿ ಚಿನ್ನದ ಶಾಲು, ಒಡ್ಯಾಣಗಳು, ಆಭರಣಗಳು ಮತ್ತು ತಿಮಿಂಗಿಲದ ಹಲ್ಲಿಗೆ ಅಲಂಕರಿಸಿದ ಕಿವಿಯೋಲೆಗಳು ಸೇರಿದಂತೆ ಬಹು ಅಮೂಲ್ಯವಾದ ವಸ್ತುಗಳು ದೊರಕಿವೆ. ಕೋಕಲ್ ಸಂಸ್ಕೃತಿಯ ಅತ್ಯುನ್ನತ ದರ್ಜೆಯ ಮುಖ್ಯಸ್ಥನ ಪಾರ್ಥಿವ ಶರೀರದೊಂದಿಗೆ ಈ ವಸ್ತುಗಳನ್ನು ಸಮಾಧಿಯಲ್ಲಿ ಹೂತುಹಾಕಿರಬಹುದು ಎಂದು ದಿ ಮೆಟ್ರೋ ಸುದ್ದಿ ಮಾಧ್ಯಮ ವರದಿ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಗೋರಿಯ ಒಳಗೆ 32 ವ್ಯಕ್ತಿಗಳ ಶವಗಳು ದೊರಕಿವೆ. ಕೋಕಲ್ ಸಂಸ್ಕೃತಿಯ ಮುಖ್ಯಸ್ಥನ ಸಾವಿನ ನಂತರದ ಜೀವನಕ್ಕೆ ಜತೆಗೂಡುವ ಸಲುವಾಗಿ ಇವರನ್ನು ಬಲಿ ನೀಡಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಡಲಾಗಿದೆ. ಆದರೆ ನಿಜಕ್ಕೂ ಎಷ್ಟು ಜನರನ್ನು ಹೀಗೆ ಬಲಿ ಕೊಟ್ಟಿರಬಹುದು ಎಂಬುದನ್ನು ಪತ್ತೆ ಮಾಡಲು ಇನ್ನೂ ತನಿಖೆ ನಡೆಸಲಾಗುತ್ತಿದೆ.

ಈ ಖಜಾನೆಯು ಲೆಕ್ಕಕ್ಕೆ ಸಿಗದಷ್ಟು ಅಮೂಲ್ಯ ಸಂಪತ್ತು ಹೊಂದಿದೆ ಎಂದು ಪನಾಮಾದ ಸಂಸ್ಕೃತಿ ಸಚಿವಾಲಯದ ಲಿನೆಟ್‌ ಮಾಂಟೆನೆಗ್ರೊ ತಿಳಿಸಿದ್ದಾರೆ.

ಈ ಗೋರಿಯನ್ನು 750 ಎಡಿ ವರ್ಷದಲ್ಲಿ ಅತ್ಯುನ್ನತ ಶ್ರೇಣಿಯ ಪುರುಷ ನಾಯಕನ ಸಾವಿನ ಬಳಿಕ ನಿರ್ಮಿಸಲಾಗಿದೆ ಎಂದು ತಜ್ಞರು ಊಹಿಸಿದ್ದಾರೆ. ಆ ಕಾಲದಲ್ಲಿ ಗಣ್ಯರನ್ನು ಅವರ ಮಹಿಳಾ ಸಂಗಾತಿಯ ಮೇಲ್ಭಾಗದಲ್ಲಿ ಮುಖ ಕೆಳಗೆ ಮಾಡಿ ಹೂಳುವ ಸಂಸ್ಕೃತಿ ಇತ್ತು. ಇಲ್ಲಿ ಕೂಡ ಆ ಸಂಪ್ರದಾಯವನ್ನು ಪಾಲಿಸಲಾಗಿದೆ.

“ಅತ್ಯುನ್ನತ ಶ್ರೇಣಿಯ ಜನರ ಜತೆಗೆ ವಿವಿಧ ಸಂಖ್ಯೆಯ ಜನರ ಹೆಣ ದಫನು ಮಾಡುವುದು ಏಕಕಾಲದಲ್ಲಿ ನಡೆಯುತ್ತದೆ. ಮುಖ್ಯಸ್ಥನ ಸಾವಿನ ನಂತರದ ಜೀವನಕ್ಕಾಗಿ ಆತನ ಜತೆಗಾರರಾಗಿ ಸಾಗಲು ಈ ಜನರನ್ನು ನರಬಲಿ ನೀಡಲಾಗಿರುತ್ತದೆ” ಎಂದು ಉತ್ಖನನ ವಿಭಾಗದ ನಿರ್ದೇಶಕಿ ಜೂಲಿಯಾ ಮಾಯೋ ತಿಳಿಸಿದ್ದಾರೆ

ಗೋರಿಯಲ್ಲಿ ಪ್ರಾಣಿಗಳ ಮೂಳೆಯ ವಸ್ತುಗಳು ಕೂಡ ಪತ್ತೆ

ಗೋರಿಯ ಒಳಗೆ ಬ್ರೇಸ್‌ಲೆಟ್‌ಗಳು, ಮಾನವ ಆಕೃತಿಯ ಕಿವಿಯೋಲೆ, ಮೊಸಳೆ ಕಿವಿಯೋಲೆ, ಗಂಟೆಗಳು, ನಾಯಿಯ ಹಲ್ಲುಗಳಿಂದ ಮಾಡಿದ ಸ್ಕರ್ಟ್, ಮೂಳೆಯ ಕೊಳಲುಗಳು ಮತ್ತು ಸೆರಾಮಿಕ್ ವಸ್ತುಗಳು ಕೂಡ ಕಂಡುಬಂದಿರುವುದಾಗಿ ಉತ್ಖನನದ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಎಲ್ ಕಾನೋದಲ್ಲಿ 2008ರಿಂದಲೂ ಉತ್ಖನನಗಳು ನಡೆಯುತ್ತಿವೆ. ಇಲ್ಲಿನ ಗೋರಿಗಳು ಐತಿಹಾಸಿಕ ಪ್ರಾಮುಖ್ಯದ ಹಾಗೂ ಸಾಂಸ್ಕೃತಿಕ ಅನ್ವೇಷಣೆಗಳು ಎಂದು ಪರಿಗಣಿಸಲಾಗುತ್ತದೆ. ಅಮೆರಿಕಕ್ಕೆ ಯುರೋಪಿಯನ್ನರ ಆಗಮನಕ್ಕೂ ಮುಂದೆ ಇದ್ದ ಸ್ಥಳೀಯ ಬುಡಕಟ್ಟುಗಳ ಜೀವನದ ಬಗ್ಗೆ ಇವು ಬೆಳಕು ಚೆಲ್ಲುತ್ತವೆ. ನೆಕ್ರೋಪೋಲಿಸ್ ಅಥವಾ ಸಿಟಿ ಆಫ್ ಡೆಡ್ ಎಂದು ಕರೆಯಲಾಗುವ ಈ ಸ್ಮಶಾನವನ್ನು 700 ಎಡಿ ಸುಮಾರಿಗೆ ನಿರ್ಮಿಸಲಾಗಿದ್ದು, 1000 ಅಡಿ ಬಳಿಕ ಅವು ಅನಾಥವಾಗಿದ್ದವು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...