17 ವರ್ಷಗಳ ‘ವನವಾಸ’ದಿಂದ ಬಾಂಗ್ಲಾಗೆ ಮರಳಿದ ತಾರಿಖ್ ರಹಮಾನ್ ಭಾವೀ ಪ್ರಧಾನಿಯೇ?

Date:

ಬಾಂಗ್ಲಾದೇಶ್ ನ್ಯಾಶನಲಿಸ್ಟ್ ಪಾರ್ಟಿಯ (ಬಿಎನ್‌ಪಿ) ಹಂಗಾಮಿ ಅಧ್ಯಕ್ಷ ಮತ್ತು ಮಾಜಿ ಅಧ್ಯಕ್ಷ ತಾರಿಖ್ ರಹಮಾನ್ 17 ವರ್ಷಗಳ ಗಡೀಪಾರಿನ ನಂತರ ಗುರುವಾರ ಬಾಂಗ್ಲಾದೇಶಕ್ಕೆ ಹಿಂತಿರುಗಿದರು.

ತಮ್ಮ ತಾಯಿಯೂ ಆಗಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಾಲೆದಾ ಜಿಯಾ ಅವರ ಆರೋಗ್ಯ ಕೆಟ್ಟಿರುವ ಹಿನ್ನೆಲೆ ಈ ವಾಪಸಾತಿಯ ಅಧಿಕೃತ ಕಾರಣ. ಆದರೆ ವ್ಯಾಪಕ ಅಶಾಂತಿ ಮತ್ತು ರಾಜಕೀಯ ಅಸ್ಥಿರತೆಯ ನಡುವೆ ಖಾಲೆದಾ ಅವರ ರಾಜಕೀಯ ಎದುರಾಳಿ ಶೇಖ್ ಹಸೀನಾ ಪಲಾಯನ ಮತ್ತು 2026ರ ಫೆಬ್ರವರಿ 12ರಂದು ನಡೆಯಬೇಕಿರುವ ಸಾರ್ವತ್ರಿಕ ಚುನಾವಣೆಗಳೇ ತಾರಿಖ್ ವಾಪಸಾತಿಯ ಹಿಂದಿನ ನಿಜ ಕಾರಣ.

ಪತ್ನಿ ಝೈಮಾ ಮತ್ತು ಮಗಳು ಝುಬೇದಾ ಜೊತೆಗೂಡಿ ಲಂಡನ್ ನಿಂದ ಬಂದಿಳಿದ ರಹಮಾನ್ ಅವರಿಗೆ ಢಾಕಾ ವಿಮಾನ ನಿಲ್ದಾಣದಲ್ಲಿ ಬಿ.ಎನ್.ಪಿ. ಭವ್ಯ ಸ್ವಾಗತ ನೀಡಿತು. ಬಿ.ಎನ್.ಪಿ ಬೆಂಬಲಿಗರ ಮೆರವಣಿಗೆ ವಿಮಾನ ನಿಲ್ದಾಣದಿಂದ ಎರಡು ಕಿ.ಮೀ.ಗಳಷ್ಟು ಉದ್ದವಿತ್ತು. ಮುಹಮ್ಮದ್ ಯೂನುಸ್ ನೇತೃತ್ವದ ಹಾಲಿ ಹಂಗಾಮಿ ಸರ್ಕಾರದಡಿ ಎಲ್ಲ ಜನತಾಂತ್ರಿಕ ಹಕ್ಕುಗಳನ್ನು ತುಳಿಯಲಾಗಿದೆಯೆಂದು ಮಾನವ ಹಕ್ಕು ಸಂಸ್ಥೆಗಳು ಆಪಾದಿಸಿವೆ. ಯೂನುಸ್ ಮತ್ತು ರಹಮಾನ್ ನಡುವಣ ಸಂಬಂಧ ಆರಂಭದಲ್ಲಿ ಚೆನ್ನಾಗಿದ್ದರೂ, ತರುವಾಯ ಹದಗೆಟ್ಟಿವೆ ಎನ್ನಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವ ಪೊರೆದ ಅಮೆರಿಕ; ಪುಡಿಗಟ್ಟುತ್ತಿರುವ ಭಾರತ

ರಹಮಾನ್ 2008ರಲ್ಲಿ ವೈದ್ಯಕೀಯ ಚಿಕಿತ್ಸೆಗೆಂದು ಲಂಡನ್‌ಗೆ ಹಾರಿದ್ದರು. ಫೆ.12ರ ಚುನಾವಣೆಗಳಲ್ಲಿ ಬಾಂಗ್ಲಾದೇಶದ ನಾಯಕನಾಗಿ ಹೊರಹೊಮ್ಮುವ ದಟ್ಟ ನಿರೀಕ್ಷೆಯಿದೆ. 2024ರ ಜುಲೈ ತಿಂಗಳಲ್ಲಿ ಅಂದಿನ ಪ್ರಧಾನಿ ಶೇಖ್ ಹಸೀನಾ ವಿರುದ್ಧ ವಿದ್ಯಾರ್ಥಿ ಶಕ್ತಿಯ ಆಕ್ರೋಶ ಸಿಡಿದಿತ್ತು. ಪಲಾಯನ ಮಾಡಿದ್ದ ಆಕೆ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಹಸೀನಾ ಅವರ ಅವಾಮಿ ಲೀಗ್ ಪಕ್ಷ ಸದ್ಯ ತೀವ್ರ ಜನಾಕ್ರೋಶಕ್ಕೆ ತುತ್ತಾಗಿದೆ. ಶೇಖ್ ಹಸೀನಾ ಆಡಳಿತವಾಧಿಯಲ್ಲಿ ಅಕ್ರಮ ನಗದು ಪರಿವರ್ತನೆ ಮತ್ತು ಹಸೀನಾ ಅವರ ಹತ್ಯೆಯ ಸಂಚು ನಡೆಸಿದ್ದರೆಂದು ರಹಮಾನ್ ಅನುಪಸ್ಥಿತಿಯಲ್ಲೇ ಅವರಿಗೆ ಶಿಕ್ಷೆ ವಿಧಿಸಲಾಗಿತ್ತು. ಆದರೆ ಕಳೆದ ವರ್ಷ ಹಸೀನಾ ಪಲಾಯನದ ನಂತರ ರಹಮಾನ್ ವಿರುದ್ಧದ ಈ ತೀರ್ಪುಗಳನ್ನು ರದ್ದು ಮಾಡಲಾಗಿದೆ.

ಹಸೀನಾ ಪಲಾಯನದ ನಂತರ ಬಿ.ಎನ್.ಪಿ. ಜನಪ್ರಿಯತೆ ಏರುಮುಖದಲ್ಲಿದೆ. ರಹಮಾನ್ ಅವರೇ ಈ ಪಕ್ಷದ ಪ್ರಶ್ನಾತೀತ ನಾಯಕರಾಗಿದ್ದಾರೆ. ಲಂಡನ್‌ನಿಂದ ಆನ್‌ಲೈನ್ ಸಭೆಗಳನ್ನು ನಡೆಸುತ್ತಿದ್ದರು, ರ್ಯಾಲಿಗಳನ್ನೂ ಉದ್ದೇಶಿಸಿ ಭಾಷಣ ಮಾಡಿದ್ದರು. ಅಮೆರಿಕೆಯ ಇಂಟರ್‌ನ್ಯಾಶನಲ್ ರಿಪಬ್ಲಿಕನ್ ಇನ್ಸ್ಟಿಟ್ಯೂಟ್ ಸಮೀಕ್ಷೆಯೊಂದರ ಪ್ರಕಾರ ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಬಿ.ಎನ್.ಪಿ.ಗೆ ಭಾರೀ ಗೆಲುವಾಗಲಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...