- ಪೆರು ದೇಶದ ಎಸ್ಪೆರಾಂಜಾ ಚಿನ್ನದ ಗಣಿಯಲ್ಲಿ ಬೆಂಕಿ ಅನಾಹುತ
- 2000ದಿಂದೀಚೆಗೆ ಅತ್ಯಂತ ಭೀಕರ ಗಣಿ ದುರಂತ ಎಂದು ವರದಿ
ಪೆರು ದೇಶದ ದಕ್ಷಿಣ ಭಾಗದ ಚಿನ್ನದ ಗಣಿಯಲ್ಲಿ ಭಾನುವಾರ (ಮೇ 7) ಭಾರೀ ಅಗ್ನಿ ದುರಂತ ಸಂಭವಿಸಿದೆ. ಪರಿಣಾಮ 27 ಕಾರ್ಮಿಕರು ಮೃತಪಟ್ಟಿದ್ದಾರೆ
ಯಾನಾಕ್ವಿಹುವಾ ಜಿಲ್ಲೆಯ ಕಾಂಡೆಸುಯೋಸ್ ಪ್ರಾಂತ್ಯದ ಚಿನ್ನದ ಗಣಿಯಲ್ಲಿ ಸ್ಫೋಟದ ನಂತರ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ಈ ಘಟನೆಯು ದಕ್ಷಿಣ ಅಮೆರಿಕ ದೇಶದಲ್ಲಿ 2000 ಇಸವಿಯ ನಂತರ ನಡೆದ ಅತ್ಯಂತ ಭೀಕರ ಗಣಿ ಅಪಘಾತ ಎಂದು ಪೆರು ದೇಶದ ಇಂಧನ ಮತ್ತು ಗಣಿ ಸಚಿವಾಲಯದ ಅಂಕಿ ಅಂಶಗಳು ಹೇಳಿವೆ.
ಅರೆಕ್ವಿಪಾ ಪ್ರದೇಶದ ಲಾ ಎಸ್ಪೆರಾಂಜಾ ಗಣಿಯಲ್ಲಿರುವ ಸುರಂಗದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ.
ಯಾಂಕ್ವಿಹುವಾ ಕಂಪನಿ ಈ ಚಿನ್ನದ ಗಣಿ ನಿರ್ವಹಿಸುತ್ತಿದೆ. ಸದ್ಯ ಈ ಘಟನೆಗೆ ಸಂಬಂಧಿಸಿ ಕಂಪನಿಯು ಯಾವುದೇ ಹೇಳಿಕೆ ನೀಡಿಲ್ಲ ಎಂದು ಸ್ಥಳೀಯ ಪ್ರಾಸಿಕ್ಯೂಟರ್ ಜಿಯೋವಾನಿ ಮ್ಯಾಟೋಸ್ ಸ್ಥಳೀಯ ಸುದ್ದಿವಾಹಿನಿಗೆ ಮಾಹಿತಿ ನೀಡಿದ್ದಾರೆ.
ಸಂತ್ರಸ್ತರ ಶವಗಳನ್ನು ಹೊರತೆಗೆಯುವ ಮೊದಲು ರಕ್ಷಣಾ ತಂಡಗಳು ಗಣಿ ಭದ್ರತೆಗೆ ಪ್ರಯತ್ನಿಸುತ್ತಿವೆ. ಘಟನೆಯಲ್ಲಿ ಮೃತಪಟ್ಟವರನ್ನು ಗುರುತಿಸುವ ಪ್ರಯತ್ನ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ದುರಂತದಲ್ಲಿ ಬದುಕುಳಿದವರ ಬಗ್ಗೆ ಮಾಹಿತಿ ಇನ್ನೂ ದೊರೆತಿಲ್ಲ. ಗಣಿಯಲ್ಲಿ ಬೆಂಕಿ ದುರಂತ ಸಂಭವಿಸಿದಾಗ ಎಷ್ಟು ಮಂದಿ ಕಾರ್ಮಿಕರಿದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೆಚ್ಚಿನ ಗಣಿ ಕಾರ್ಮಿಕರು ಉಸಿರುಗಟ್ಟುವಿಕೆ ಮತ್ತು ಸುಟ್ಟಗಾಯಗಳಿಂದ ಮೃತಪಟ್ಟಿದ್ದಾರೆ ಎಂದು ಯಾನಾಕ್ವಿಹುವಾ ಮೇಯರ್ ಜೇಮ್ಸ್ ಕ್ಯಾಸ್ಕ್ವಿನೊ ಆಂಡಿನಾ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಅಬುಧಾಬಿ | ಗಂಟೆಗೆ 120 ಕಿಲೋಮೀಟರ್ ಕಡಿಮೆ ವೇಗದಲ್ಲಿ ಸಂಚರಿಸಿದರೆ ಭಾರಿ ದಂಡ!
ಪೆರು ವಿಶ್ವದ ಅಗ್ರ ಹಾಗೂ ಎರಡನೇ ಅತಿದೊಡ್ಡ ತಾಮ್ರ ಉತ್ಪಾದಿಸುವ ದೇಶ, ಪ್ರಕಾರ, ಇಲ್ಲಿ ಗಣಿಗಾರಿಕೆಗೆ ಸಂಬಂಧಿಸಿದ ಅಪಘಾತಗಳು ನಡೆಯುತ್ತಲೇ ಇರುತ್ತವೆ.
ಕಳೆದ ವರ್ಷ ದೇಶಾದ್ಯಂತ ಸುಮಾರು 38 ಮಂದಿ ಸಾವನ್ನಪ್ಪಿದ್ದರು. 2002ರಲ್ಲಿ, ಪೆರುವಿನಲ್ಲಿ ವಿವಿಧ ಗಣಿಗಾರಿಕೆ ಅಪಘಾತಗಳಲ್ಲಿ ಸುಮಾರು 73 ಜನರು ಸಾವನ್ನಪ್ಪಿದ್ದರು.





