ಸೋಷಿಯಲ್ ಮೀಡಿಯಾ ‘ಚಾಲೆಂಜ್’ಗೆ 3 ಮಕ್ಕಳು ಬಲಿ; ‘ಟಿಕ್‌ಟಾಕ್‌’ಗೆ 85 ಕೋಟಿ ರೂ. ದಂಡ

Date:

ಸಾಮಾಜಿಕ ಜಾಲತಾಣದಲ್ಲಿ ನೀಡಲಾಗುವ ಚಾಲೆಂಜ್‌ಅನ್ನು ಪೂರೈಸಲು ಹೋಗಿ ಮೂವರು ಮಕ್ಕಳು ಪ್ರಾಣ ಕಳೆದುಕೊಂಡಿದ್ದು, ಆ ಪ್ರಕರಣದಲ್ಲಿ ಸೋಷಿಯಲ್ ಮೀಡಿಯಾ ವೇದಿಕೆ ‘ಟಿಕ್‌ಟಾಕ್‌’ಗೆ ವೆನೆಜುವೆಲಾ ಸುಪ್ರೀಂ ಕೋರ್ಟ್‌ $10 ಮಿಲಿಯನ್ (85,78,68,500 ರೂ.) ದಂಡ ವಿಧಿಸಿದೆ.

‘ಟಿಕ್‌ಟಾಕ್‌’ ಚೀನಾ ಮೂಲಕ ಟೆಕ್ ಕಂಪನಿಯ ಬೈಟ್‌ಡ್ಯಾನ್ಸ್ ಒಡೆತನದಲ್ಲಿದೆ. ಭಾರತದ ಭೂಪ್ರದೇಶವನ್ನು ಅತಿಕ್ರಮಿಸಿಕೊಂಡಿದ್ದ ಚೀನಾದ ವಿರುದ್ಧದ ಕ್ರಮದ ಭಾಗವಾಗಿ 2020ರಲ್ಲಿ ಭಾರತದಲ್ಲಿ ಮೋದಿ ಸರ್ಕಾರ ನಿಷೇಧಿಸಿದ 52 ಚೀನೀ ಆ್ಯಪ್‌ಗಳಲ್ಲಿ ‘ಟಿಕ್‌ಟಾಕ್‌’ ಕೂಡ ಒಂದು. ಈ ‘ಟಿಕ್‌ಟಾಕ್‌’ ಭಾರತದಲ್ಲಿಯೂ ಹೆಚ್ಚು ಜನಪ್ರಿಯತೆ ಪಡೆದಿತ್ತು. ಆದರೆ, ಇದು ನಿಷೇಧವಾದ ಬಳಿಕ, ಯುವಜನರು ಇನ್ಸ್‌ಟಾಗ್ರಾಮ್‌ ಮೇಲೆ ಅವಲಂಬಿತರಾಗಿದ್ದಾರೆ.

ಭಾರತ ಹೊರತುಪಡಿಸಿ ಹಲವಾರು ದೇಶಗಳಲ್ಲಿ ಟಿಕ್‌ಟಾಕ್‌ ಹೆಚ್ಚಾಗಿ ಬಳಕೆಯಾಗುತ್ತಿದೆ. ವೆನೆಜುವೆಲಾದಲ್ಲಿ ಇತ್ತೀಚೆಗೆ ಟಿಕ್‌ಟಾಕ್‌ನಲ್ಲಿ ಪ್ರಸಾರವಾಗಿದ್ದ ‘ಚಾಲೆಂಜ್‌’ವೊಂದರ ಭಾಗವಾಗಿ ಅಪಾಯಕಾರಿ ಮಾತ್ರೆಗಳನ್ನು ಸೇವಿಸಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಈ ಸಾವುಗಳಿಗೆ ಟಿಕ್‌ಟಾಕ್ ಕಂಪನಿಯ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಲಾಗಿದೆ. ಕಂಪನಿಗೆ ದಂಡ ವಿಧಿಸಲಾಗಿದ್ದು, ಮೇಲ್ವಿಚಾರಣೆಯನ್ನು ನಡೆಸಲು ವೆನೆಜುವೆಲಾದಲ್ಲಿ ಕಚೇರಿಯನ್ನು ತೆರೆಯುವಂತೆ ಟಿಕ್‌ಟಾಕ್‌ ಕಂಪನಿಗೆ ಅಲ್ಲಿನ ಸುಪ್ರೀಂ ಕೋರ್ಟ್‌ ಅದೇಶಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ತಾನಿಯಾ ಡಿ’ಅಮೆಲಿಯೊ, “ಹಾನಿಕಾರಕ ವಿಷಯಗಳ ಪ್ರಸಾರವನ್ನು ತಡೆಯಲು ಅಗತ್ಯ ಮತ್ತು ಸಮರ್ಪಕ ಕ್ರಮಗಳನ್ನು ಜಾರಿಗೊಳಿಸುವಲ್ಲಿ ಟಿಕ್‌ಟಾಕ್ ವಿಫಲವಾಗಿದೆ” ಎಂದು ಹೇಳಿದ್ದಾರೆ.

“ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಬೇಕು. ಅದಕ್ಕಾಗಿ, ಪರಿಹಾರದೊಂದಿಗೆ ಪೂರ್ಣ ದಂಡವನ್ನು ಎಂಟು ದಿನಗಳಲ್ಲಿ ಪಾವತಿಸಬೇಕು” ಎಂದು ಟಿಕ್‌ಟಾಕ್‌ಗೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಆದರೆ, ತೀರ್ಪಿನ ಬಗ್ಗೆ ಟಿಕ್‌ಟಾಕ್ ಇನ್ನೂ ಪ್ರತಿಕ್ರಿಯಿಸಿಲ್ಲ.

ಟಿಕ್‌ಟಾಕ್‌ನ ಜಾಗತಿಕ ಸಮುದಾಯ ಮಾರ್ಗಸೂಚಿಗಳಲ್ಲಿ ತಾನು ಸ್ವಯಂ-ಹಾನಿ ಅಥವಾ ಅಪಾಯಕಾರಿ ಚಟುವಟಿಕೆಗಳನ್ನು ಉತ್ತೇಜಿಸುವ ವಿಷಯವನ್ನು ನಿಷೇಧಿಸುವುದಾಗಿ ಹೇಳಿಕೊಂಡಿದೆ. ಆದರೂ, ತನ್ನದೇ ನಿಯಮಗಳನ್ನು ಟಿಕ್‌ಟಾಕ್ ಸಮರ್ಪಕವಾಗಿ ಜಾರಿಗೊಳಿಸುತ್ತಿಲ್ಲ ಎಂದು ವೆನೆಜುವೆಲಾ ಅಧಿಕಾರಿಗಳು ಆರೋಪಿಸಿದ್ದಾರೆ.

ಗಮನಾರ್ಹವಾಗಿ, ವೆನೆಜುವೆಲಾದಲ್ಲಿ ಸರ್ಕಾರವು ಹಲವಾರು ಸಾಮಾಜಿಕ ಜಾಲತಾಣ ವೇದಿಕೆಗಳ ಮೇಲೆ ನಿರ್ಬಂಧಗಳು ಹೇರಿದೆ. ಇತ್ತೀಚಿನ ವರೆಗೂ, ಹಿಂದಿನ ಟ್ವಿಟರ್ – ಈಗಿನ ‘ಎಕ್ಸ್‌’ಗೆ ವೆನೆಜುವೆಲಾದಲ್ಲಿ ಅವಕಾಶ ನೀಡಿರಲಿಲ್ಲ. ‘ಎಕ್ಸ್‌’ನ ಮಾಲೀಕ ಎಲೋನ್ ಮಸ್ಕ್ ಅವರು ವೆನೆಜುವೆಲಾ ಸರ್ಕಾರದ ವಿರುದ್ಧದ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಸರ್ಕಾರ ಆರೋಪಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...