ಇರಾಕ್: ಅಮೆರಿಕದ ಸೇನಾ ವಿಮಾನ ಪತನ, ನಾಲ್ವರ ಸಾವು – ಹೊಣೆ ಹೊತ್ತ ಇರಾನ್ ಬೆಂಬಲಿತ ಸಂಘಟನೆ

Date:

ಇರಾಕ್‌ನಲ್ಲಿ ಅಮೆರಿಕದ ಸೇನಾ ವಿಮಾನವೊಂದು ಪತನಗೊಂಡಿದ್ದು, ವಿಮಾನದಲ್ಲಿದ್ದ ಆರು ಜನರ ಪೈಕಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಅಮೆರಿಕದ ‘ಸೆಂಟ್ರಲ್ ಕಮಾಂಡ್’ ಶುಕ್ರವಾರ ಖಚಿತಪಡಿಸಿದೆ.

ಪತನಗೊಂಡ ವಿಮಾನವು ‘ಕೆಸಿ-135’ ಏರಿಯಲ್ ಟ್ಯಾಂಕರ್ ಆಗಿದ್ದು, ದೂರಗಾಮಿ ಕಾರ್ಯಾಚರಣೆಗಳ ಸಮಯದಲ್ಲಿ ಯುದ್ಧ ವಿಮಾನಗಳು ಮತ್ತು ಇತರ ವಿಮಾನಗಳಿಗೆ ಆಗಸದಲ್ಲೇ ಇಂಧನ ತುಂಬಲು ಅಮೆರಿಕದ ಸೇನೆ ಬಳಸುವ ಪ್ರಮುಖ ವಿಮಾನವಾಗಿದೆ. ಮಾರ್ಚ್ 12 ರಂದು ಪಶ್ಚಿಮ ಇರಾಕ್‌ನಲ್ಲಿ ಈ ವಿಮಾನ ಪತನಗೊಂಡಿದೆ. ಶತ್ರುಗಳ ದಾಳಿ ಅಥವಾ ಮಿತ್ರಪಡೆಗಳ ಆಕಸ್ಮಿಕ ದಾಳಿಯಿಂದ ಈ ಘಟನೆ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿರುವ ಸೆಂಟ್ರಲ್ ಕಮಾಂಡ್, ಘಟನೆಗೆ ನಿಖರ ಕಾರಣಗಳ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದೆ.

ರಾಯಿಟರ್ಸ್ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಇರಾನ್ ಬೆಂಬಲಿತ ‘ಇಸ್ಲಾಮಿಕ್ ರೆಸಿಸ್ಟೆನ್ಸ್ ಇನ್ ಇರಾಕ್’ ಎಂಬ ಸಶಸ್ತ್ರ ಬಣಗಳ ಒಕ್ಕೂಟವು ಈ ‘ಕೆಸಿ-135’ ವಿಮಾನವನ್ನು ನಾವೇ ಹೊಡೆದುರುಳಿಸಿದ್ದೇವೆ ಎಂದು ಹೇಳಿಕೊಂಡಿದೆ. “ನಮ್ಮ ದೇಶದ ಸಾರ್ವಭೌಮತ್ವ ಮತ್ತು ವಾಯುಪ್ರದೇಶದ ರಕ್ಷಣೆಗಾಗಿ” ಈ ಕೃತ್ಯ ಎಸಗಲಾಗಿದೆ ಎಂದು ಸಂಘಟನೆ ತಿಳಿಸಿದೆ. ಆದರೆ, ವಿಮಾನ ಪತನಕ್ಕೆ ಶತ್ರುಗಳ ದಾಳಿ ಕಾರಣವಲ್ಲ ಎಂದು ಅಮೆರಿಕದ ಸೇನೆ ತಳ್ಳಿಹಾಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಮೆರಿಕದ ಸೆಂಟ್ರಲ್ ಕಮಾಂಡ್ ನೀಡಿದ ಹೇಳಿಕೆಯ ಪ್ರಕಾರ, ಈ ಘಟನೆಯ ಸಮಯದಲ್ಲಿ ಎರಡು ವಿಮಾನಗಳು ಕಾರ್ಯಾಚರಣೆಯಲ್ಲಿದ್ದವು. ಒಂದು ವಿಮಾನ ಸುರಕ್ಷಿತವಾಗಿ ಇಳಿದಿದ್ದರೆ, ಮತ್ತೊಂದು ಪಶ್ಚಿಮ ಇರಾಕ್‌ನಲ್ಲಿ ಪತನಗೊಂಡಿದೆ. “ಇರಾನ್ ಗುರಿಯಾಗಿಸಿಕೊಂಡು ನಡೆಯುತ್ತಿರುವ ‘ಆಪರೇಷನ್ ಎಪಿಕ್ ಫ್ಯೂರಿ’ ಕಾರ್ಯಾಚರಣೆ ವೇಳೆ, ನಮ್ಮದೇ ಹಿಡಿತದಲ್ಲಿರುವ ವಾಯುಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ” ಎಂದು ಕಮಾಂಡ್ ತಿಳಿಸಿದೆ.

ಇದನ್ನು ಓದಿದ್ದೀರಾ? ಹಾರ್ಮುಜ್ ಜಲಸಂಧಿ ತಡೆ ಮುಂದುವರಿಕೆ: ಇರಾನ್‌ ನೂತನ ನಾಯಕ ಮೊಜ್ತಬಾ ಮೊದಲ ಸಂದೇಶ

ಘಟನೆಯಲ್ಲಿ ಭಾಗಿಯಾದ ಎರಡನೇ ವಿಮಾನವೂ ಕೆಸಿ-135 ಟ್ಯಾಂಕರ್ ಆಗಿತ್ತು ಎಂದು ಹೆಸರು ಹೇಳಲಿಚ್ಛಿಸದ ಅಮೆರಿಕದ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಪರಿಸ್ಥಿತಿಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾದಂತೆ ಒದಗಿಸಲಾಗುವುದು. ಯೋಧರ ಕುಟುಂಬಗಳಿಗೆ ಸ್ಪಷ್ಟ ಮಾಹಿತಿ ನೀಡಲು ಮತ್ತು ಹೆಚ್ಚಿನ ವಿವರಗಳನ್ನು ಕಲೆಹಾಕಲು ನಾವು ಪ್ರಯತ್ನಿಸುತ್ತಿದ್ದು, ಅಲ್ಲಿಯವರೆಗೆ ತಾಳ್ಮೆಯಿಂದಿರಲು ಕೋರುತ್ತೇವೆ” ಎಂದು ಸೇನಾಪಡೆ ಮನವಿ ಮಾಡಿದೆ.

1950 ಮತ್ತು 1960ರ ದಶಕದ ಆರಂಭದಲ್ಲಿ ‘ಬೋಯಿಂಗ್’ ಕಂಪನಿಯು ನಿರ್ಮಿಸಿರುವ ಈ ಕೆಸಿ-135 ವಿಮಾನ, ದೀರ್ಘಕಾಲದಿಂದ ಅಮೆರಿಕ ಸೇನೆಯ ವಾಯು ಇಂಧನ ತುಂಬುವ ಪಡೆಯ ಪ್ರಮುಖ ಭಾಗವಾಗಿದೆ. ಇಂಧನಕ್ಕಾಗಿ ವಿಮಾನಗಳು ಕೆಳಗಿಳಿಯದೆ ಕಾರ್ಯಾಚರಣೆಯನ್ನು ವಿಸ್ತರಿಸಲು ಇದು ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ.

‘ಅಸೋಸಿಯೇಟೆಡ್ ಪ್ರೆಸ್’ ವರದಿಯ ಪ್ರಕಾರ, ಇರಾನ್ ವಿರುದ್ಧದ ಅಮೆರಿಕದ ಸೇನಾ ಕಾರ್ಯಾಚರಣೆಗಳ ಸಮಯದಲ್ಲಿ ಪತನಗೊಂಡ ನಾಲ್ಕನೇ ವಿಮಾನ ಇದಾಗಿದೆ. ಕಳೆದ ವಾರ, ಕುವೈತ್ ಪಡೆಗಳ ಆಕಸ್ಮಿಕ ಗುಂಡಿನ ದಾಳಿಗೆ ಅಮೆರಿಕದ ಮೂರು ಯುದ್ಧ ವಿಮಾನಗಳು ಪತನಗೊಂಡಿದ್ದವು ಎಂದು ಅಮೆರಿಕದ ಸೇನೆ ಖಚಿತಪಡಿಸಿತ್ತು. ಆ ವಿಮಾನಗಳಲ್ಲಿದ್ದ ಎಲ್ಲಾ ಆರು ಸಿಬ್ಬಂದಿ ಪ್ಯಾರಾಚೂಟ್ ಮೂಲಕ ಸುರಕ್ಷಿತವಾಗಿ ಪಾರಾಗಿ, ರಕ್ಷಣೆಯ ನಂತರ ಸ್ಥಿರವಾಗಿದ್ದರು.

ಇದುವರೆಗೆ 7 ಯೋಧರ ಸಾವು, 140 ಮಂದಿಗೆ ಗಾಯ

ಇರಾನ್ ಜೊತೆಗಿನ ಯುದ್ಧ ಪ್ರಾರಂಭವಾದಾಗಿನಿಂದ ಇದುವರೆಗೆ ಏಳು ಅಮೆರಿಕದ ಯೋಧರು ಯುದ್ಧದಲ್ಲಿ ಮೃತಪಟ್ಟಿದ್ದಾರೆ. ಕುವೈತ್‌ನ ನಾಗರಿಕ ಬಂದರಿನಲ್ಲಿರುವ ಕಾರ್ಯಾಚರಣಾ ಕೇಂದ್ರದ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದಾಗ ಆರು ಯೋಧರು ಮೃತಪಟ್ಟಿದ್ದರು. ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆಯ ಮೇಲೆ ನಡೆದ ದಾಳಿಯಲ್ಲಿ ಗಾಯಗೊಂಡಿದ್ದ ಏಳನೇ ಯೋಧ ಬಳಿಕ ಮೃತಪಟ್ಟಿದ್ದರು. ಈ ಸಂಘರ್ಷದಲ್ಲಿ ಎಂಟು ಗಂಭೀರವಾಗಿ ಗಾಯಗೊಂಡವರು ಸೇರಿದಂತೆ ಒಟ್ಟು ಸುಮಾರು 140 ಅಮೆರಿಕದ ಯೋಧರು ಗಾಯಗೊಂಡಿದ್ದಾರೆ ಎಂದು ಪೆಂಟಗನ್ ಈ ವಾರದ ಆರಂಭದಲ್ಲಿ ತಿಳಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....