ಅಮೇರಿಕ | 2.6 ಕಿ.ಮೀ ಉದ್ದದ ಬಾಲ್ಟಿಮೋರ್ ಸೇತುವೆಗೆ ಹಡಗು ಡಿಕ್ಕಿ: 7 ಮಂದಿ ನಾಪತ್ತೆ; ವಿಡಿಯೋ ವೈರಲ್

Date:

ಸಿಂಗಾಪುರಕ್ಕೆ ಸೇರಿದ ಸರಕು ಸಾಗಣೆ ಮಾಡುತ್ತಿದ್ದ ಹಡಗು ಡಿಕ್ಕಿ ಹೊಡೆದ ಪರಿಣಾಮ ಅಮೆರಿಕದ ಬಾಲ್ಟಿಮೋರ್‌ನಲ್ಲಿರುವ 2.6 ಕಿಮೀ ಉದ್ದದ ಪ್ರಮುಖ ಸೇತುವೆಯೊಂದು ಮಂಗಳವಾರ ಕುಸಿದುಬಿದ್ದಿದೆ.

ಸೇತುವೆ ನೀರಿಗೆ ಉರುಳಿದ್ದು, ಕೆಲವು ವಾಹನಗಳು ಸಹ ನೀರುಪಾಲಾಗಿವೆ. ಈವರೆಗೆ ದೊರಕಿರುವ ಮಾಹಿತಿಯ ಪ್ರಕಾರ ಸುಮಾರು ಏಳು ಮಂದಿ ನಾಪತ್ತೆಯಾಗಿರುವುದಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಡಿಕ್ಕಿ ಹೊಡೆದ ಘಟನೆಯ ದೃಶ್ಯವು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸಿನಿಮೀಯ ರೀತಿಯ ಘಟನೆಯಂತೆ ಕಾಣುತ್ತಿದೆ. ಕಂಟೇನರ್ ಹಡಗು ಸೇತುವೆಯ ಸಮೀಪ ಬರುತ್ತಿದಂತೆಯೇ ಹಡಗಿನ ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ ಸ್ತಂಭಗಳಿಗೆ ಡಿಕ್ಕಿ ಹೊಡೆದ ಬಳಿಕ ಈ ದುರಂತ ಸಂಭವಿಸಿದೆ. ಸೇತುವೆಯ ಹಲವು ಭಾಗಗಳು ಪಾಟಾಪ್‌ಸ್ಕೋ ನದಿಗೆ ಉರುಳಿದೆ. ಬೃಹತ್ ಸೇತುವೆಯ ಪ್ರಮುಖ ಭಾಗ ನದಿಯಲ್ಲಿ ಮುಳುಗಿದೆ. ಘಟನೆಯಿಂದಾಗಿ ಹಡಗಿಗೂ ಕೂಡ ಅಪಾರ ಪ್ರಮಾಣ ಹಾನಿಯಾಗಿದೆ.

ಘಟನೆಯ ಸಂದರ್ಭದಲ್ಲಿ ಎಷ್ಟು ಮಂದಿ ಸೇತುವೆಯಲ್ಲಿ ಚಲಿಸುತ್ತಿದ್ದರೆಂದು ಇನ್ನೂ ಅಧಿಕೃತವಾಗಿ ವರದಿಯಾಗಿಲ್ಲ. ಈವರೆಗೆ ದೊರಕಿರುವ ಮಾಹಿತಿಯ ಪ್ರಕಾರ ಸುಮಾರು ಏಳು ಮಂದಿ ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ವೇಳೆ ನದಿಯ ಉಷ್ಣಾಂಶವು

ಅಮೆರಿಕದ ಸ್ಥಳೀಯ ಕಾಲಮಾನ ರಾತ್ರಿ 1.30 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಕನಿಷ್ಠ 20 ಮಂದಿ ನೀರಿಗೆ ಬಿದ್ದಿರುವ ಶಂಕೆಯೊಂದಿಗೆ ರಕ್ಷಣಾ ತಂಡಗಳು ಶೋಧ ಕಾರ್ಯ ನಡೆಸಿವೆ. ಸುಮಾರು 3 ಕಿಮೀ ಉದ್ದದ ಬೃಹತ್ ಸೇತುವೆ ಕುಸಿತದ ಘಟನೆಯ ವಿಡಿಯೋ ವೈರಲ್ ಆಗಿದೆ.

300 ಮೀಟರ್ ಉದ್ದದ ಹಡಗು, ಉಕ್ಕಿನ ಸೇತುವೆಯನ್ನು ನೀರುಪಾಲು ಮಾಡಿದೆ. ಕ್ಷಣಮಾತ್ರದಲ್ಲಿ ಸೇತುವೆ ಕುಸಿದಿದ್ದು, ಈ ವೇಳೆ ಸಣ್ಣ ಪ್ರಮಾಣದ ಹಲವು ಸ್ಫೋಟಗಳು ಕೂಡ ಸಂಭವಿಸಿದೆ.

“ಡಿಕ್ಕಿ ಹೊಡೆದ ರಭಸಕ್ಕೆ ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಬಹುಭಾಗ ನೀರಿನಲ್ಲಿ ಮುಳುಗಿದೆ. ಸಿಂಗಾಪುರ ಧ್ವಜವುಳ್ಳ ಕಂಟೇನರ್ ಹಡಗು ‘ಡಾಲಿ’, ಮೇರಿಲ್ಯಾಂಡ್‌ನ ಬಾಲ್ಟಿಮೋರ್‌ನಲ್ಲಿನ ಫ್ರಾನ್ಸಿಸ್ ಸ್ಕಾಟ್ ಕೀ ಬ್ರಿಡ್ಜ್‌ನ ಪಿಲ್ಲರ್‌ಗೆ ಡಿಕ್ಕಿ ಹೊಡೆದಿದೆ. ಇದು ಶ್ರೀಲಂಕಾದ ಕೊಲೊಂಬೋಗೆ ಸರಕು ತುಂಬಿಕೊಂಡು ಹೋಗುತ್ತಿತ್ತು” ಎಂದು ಸಿನರ್ಜಿ ಮೆರೈನ್ ಗ್ರೂಪ್‌ ಮಾಲೀಕ ಗ್ರೇಸ್ ಓಷನ್ ಪ್ರೈ ಲಿ ತಿಳಿಸಿದೆ.

“ಹಡಗಿನಲ್ಲಿದ್ದ ಇಬ್ಬರು ಪೈಲಟ್‌ಗಳು ಸೇರಿದಂತೆ ಎಲ್ಲಾ ಸಿಬ್ಬಂದಿಯನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡಲಾಗಿದೆ. ವಿಶಾಲವಾದ ಪಿಲ್ಲರ್‌ಗಳ ನಡುವೆ ಸಾಕಷ್ಟು ಅಂತರವಿದ್ದರೂ, ಈ ಹಡಗು ಪಿಲ್ಲರ್‌ಗೆ ಡಿಕ್ಕಿ ಹೊಡೆದಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ” ಎಂದು ಸಂಸ್ಥೆ ಮಾಹಿತಿ ನೀಡಿದೆ.

“ಐ- 695 ಕೀ ಬ್ರಿಡ್ಜ್‌ನ ಎರಡೂ ಮಾರ್ಗಗಳ ಎಲ್ಲಾ ಲೇನ್‌ಗಳನ್ನು ಬಂದ್ ಮಾಡಲಾಗಿದೆ. ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ” ಎಂದು ಮೇರಿಲ್ಯಾಂಡ್ ಸಾರಿಗೆ ಪ್ರಾಧಿಕಾರ ತಿಳಿಸಿದೆ. ಘಟನೆ ನಡೆದ ಸಂದರ್ಭದಲ್ಲಿ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯಲ್ಲಿ 20 ನಿರ್ಮಾಣ ಕಾರ್ಮಿಕರು ಇದ್ದರು ಎನ್ನಲಾಗಿದೆ. ಎಷ್ಟು ವಾಹನಗಳು ನದಿ ನೀರಿಗೆ ಬಿದ್ದಿವೆ, ಹಾಗೂ ಅವುಗಳಲ್ಲಿ ಎಷ್ಟು ಜನರಿದ್ದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ದೊರಕಿಲ್ಲ. ಮುಳುಗು ತಜ್ಞರು, ರಕ್ಷಣಾ ತಂಡಗಳು ನೀರಿನಲ್ಲಿ ಇರಬಹುದಾದ ಜನರಿಗಾಗಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಿವೆ.

1.6 ಮೈಲು (2.6 ಕಿಮೀ) ಉದ್ದದ ನಾಲ್ಕು ಲೇನ್ ಸೇತುವೆಯನ್ನು 1977ರಲ್ಲಿ ಉದ್ಘಾಟಿಸಲಾಗಿತ್ತು. ಪ್ರತಿ ವರ್ಷ ಕೋಟ್ಯಂತರ ವಾಹನಗಳ ಇದರ ಮೇಲೆ ಓಡಾಡುತ್ತವೆ. ಅಮೆರಿಕ ರಾಜಧಾನಿ ವಾಷಿಂಗ್ಟನ್ ಡಿಸಿ ಪಕ್ಕದಲ್ಲಿನ ಪೂರ್ವ ಕರಾವಳಿಯ ಕೈಗಾರಿಕಾ ನಗರವಾದ ಬಾಲ್ಟಿಮೋರ್ ಸುತ್ತಮುತ್ತಲಿನ ರಸ್ತೆ ಸಂಪರ್ಕಗಳಿಗೆ ಈ ಸೇತುವೆ ಪ್ರಮುಖ ಕೊಂಡಿಯಾಗಿತ್ತು.

ಅಮೆರಿಕದ ರಾಷ್ಟ್ರಗೀತೆಯಾದ ‘ದಿ ಸ್ಟಾರ್- ಸ್ಪಾಂಗಲ್ಡ್ ಬ್ಯಾನರ್’ ಅನ್ನು ರಚಿಸಿದ ಅಮೆರಿಕದ ವಕೀಲ, ಕವಿ ಫ್ರಾನ್ಸಿಸ್ ಸ್ಕಾಟ್ ಕೀ ಅವರ ಸ್ಮರಣಾರ್ಥ ಬಾಲ್ಟಿಮೋರ್ ಸೇತುವೆಗೆ ಅವರ ಹೆಸರು ಇರಿಸಲಾಗಿತ್ತು.

ಅಮೇರಿಕದ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ದುರಂತ ಎಂದು ಬಣ್ಣಿಸಲಾಗಿದ್ದು, ಸಾವು-ನೋವಿನ ಬಗ್ಗೆ ಇನ್ನಷ್ಟೇ ಅಧಿಕಾರಿಗಳು ಮಾಹಿತಿ ನೀಡಬೇಕಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲು ಈಗಾಗಲೇ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಸೇತುವೆ ಕುಸಿಯುತ್ತಿರುವ ದೃಶ್ಯವು ಎಂಥವರ ಹೃದಯವನ್ನೂ ಬೆಚ್ಚಿಬೀಳಿಸುವಂತಿದೆ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...