ಜಾಗತ್ತಿನ ದೈತ್ಯ ‘ಸ್ಟ್ರ್ಯಾಟೆಜಿ ಮತ್ತು ಕನ್ಸಲ್ಟಿಂಗ್’ ಕಂಪನಿಯಾದ ‘ಆಕ್ಸೆಂಚರ್’ ಕಳೆದ ಮೂರು ತಿಂಗಳಲ್ಲಿ ತನ್ನ 11,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ. ಮಾತ್ರವಲ್ಲದೆ, ಇನ್ನೂ ಹಲವರನ್ನು ಕಂಪನಿಯಿಂದ ಹೊರಹಾಕುವುದಾಗಿ ಕಂಪನಿಯ ಸಿಇಒ ಜೂಲಿ ಸ್ವೀಟಿ ಎಚ್ಚರಿಕೆ ನೀಡಿದ್ದಾರೆ.
ಜಗತ್ತಿನಾದ್ಯಂತ ತನ್ನ 11,000 ಉದ್ಯೋಗಿಗಳನ್ನು ವಜಾಗೊಳಿಸಿರುವ ಕಂಪನಿ, ‘ಎಐನ ತ್ವರಿತ ಅಳವಡಿಕೆ ಮತ್ತು ಕಾರ್ಪೋರೇಟ್ ಬೇಡಿಕೆಗಳ ಪೂರೈಕೆಯಲ್ಲಿ ವಿಳಂಬ ಮತ್ತು ನಿಧಾನವಾಗುತ್ತಿರುವುದೇ ವಜಾಗೊಳಿಸಲು ಮುಖ್ಯ ಕಾರಣ’ವೆಂದು ಹೇಳಿಕೊಂಡಿದೆ.
ಆಕ್ಸೆಂಚರ್ ತನ್ನ 85.6 ಕೋಟಿ ಡಾಲರ್ ವೆಚ್ಚದ ಮರುಸುಧಾರಣೆಗಳ ಭಾಗವಾಗಿ ತನ್ನ ಉದ್ಯೋಗಿಗಳನ್ನು ಹೊರಹಾಕಲಾಗುತ್ತಿದೆ ಎಂದು ಹೇಳಿಕೊಂಡಿದೆ. ಮಾತ್ರವಲ್ಲದೆ, ಮುಂದಿನ ತಿಂಗಳುಗಳಲ್ಲಿ ಇನ್ನೂ ಹೆಚ್ಚು ಉದ್ಯೋಗಳು ಹೊರಹಹೋಸುವ ಸಾಧ್ಯತೆಗಳಿವೆ ಎಂದು ಹೇಳಿದೆ.
ಕಂಪನಿ ಸಿಇಒ ಜೂಲಿ ಸ್ವೀಟ್, “ನಮಗೆ ಅಗತ್ಯವಿರುವ ಕೌಶಲ್ಯಗಳನ್ನು ಮರುಹೊಂದಿಸಿಕೊಳ್ಳುವ, ಹೊಸ ರೀತಿಯ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಮತ್ತು ಅಳವಡಿಸಿಕೊಳ್ಳಲು ಉದ್ಯೋಗಿಗಳಿಗೆ ಸೂಚಿಸಲಾಗಿದೆ. ಹೊಸ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುವಿಲ್ಲ ಸಂಕುಚಿತತೆ ಹೊಂದಿರುವವರನ್ನು ಹೊರಹಾಕಲಾಗುತ್ತಿದೆ” ಎಂದು ಹೇಳಿದ್ದಾರೆ.
“AI ಆಧಾರಿತ ಸಲಹೆಗಳಿಗಾಗಿ ಗ್ರಾಹಕ ಕಂಪನಿಗಳು ಬೇಡಿಕೆ ಇಡುತ್ತಿವೆ. ಅದರಕ್ಕೆ ತಕ್ಕಂತೆ ತ್ವರಿತವಾಗಿ ನಾವು ‘ಅಪ್‌ಡೇಟ್’ ಆಗಬೇಕಿದೆ. ಈ ಅಪ್‌ಡೇಟ್ ಕಾರ್ಯಾಚರಣೆಯಲ್ಲಿ ತ್ವರಿತವಾಗಿ ಕಾರ್ಯೋನ್ಮುಖರಾಗದ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಉದ್ಯೋಗಿಗಳು ತ್ವರಿತವಾಗಿ ‘ಅಪ್‌ಡೇಟ್’ ಆಗಬೇಕು ಅಥವಾ ಹೊರಹೋಗಬೇಕು” ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಲೇಖನ ಓದಿದ್ದೀರಾ?: ಧರ್ಮಸ್ಥಳ ಪ್ರಕರಣ; ಎಸ್ ಐಟಿ ತನಿಖೆ ಮತ್ತು ರಾಜಕೀಯ ಲೆಕ್ಕಾಚಾರ…!
ಆಕ್ಸೆಂಚರ್‌ನ ಜಾಗತಿಕ ಸಿಬ್ಬಂದಿಗಳ ಸಂಖ್ಯೆ ಏಪ್ರಿಲ್ ಅಂತ್ಯದಲ್ಲಿ ಉದ್ಯೋಗಿಗಳ ಸಂಖ್ಯೆ 7,91,000 ಇತ್ತು. ಆಗಸ್ಟ್ ಅಂತ್ಯದ ವೇಳೆಗೆ 7,79,000ಕ್ಕೆ ಇಳಿಕೆಯಾಗಿದೆ. ಕೆಲಸದಿಂದ ಉದ್ಯೋಗಿಗಳನ್ನು ವಜಾಗೊಳಿಸುವ ಕಾರ್ಯಾಚರಣೆಯು ನವೆಂಬರ್ ಅಂತ್ಯದವರೆಗೆ ಮುಂದುವರೆಯಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಉದ್ಯೋಗಿಗಳ ಹೊರಹಾಕುವಿಕೆಯು ಕಂಪನಿಗೆ ವಾರ್ಷಿಕ 100 ಕೋಟಿ ಡಾಲರ್ ಹೆಚ್ಚುವರಿ ಉಳಿತಾಯ ಮಾಡುತ್ತದೆ ಎಂದು ವರದಿಯಾಗಿದೆ.
ಆಕ್ಸೆಂಚರ್ ತನ್ನ ಉದ್ಯೋಗಿಗಳಿಗೆ ‘ಕೃತಕ ಬುದ್ಧಿಮತ್ತೆ’ (ಎಐ) ತರಬೇತಿ ನೀಡಲು ಪ್ರಾರಂಭಿಸಿದೆ. ಪ್ರಪಂಚದಾದ್ಯಂತದ ವ್ಯವಹಾರಗಳು AI ಜೊತೆ ಬೆಸೆದುಕೊಂಡಿದ್ದು, ಗ್ರಾಹಕ ಕಂಪನಿಗಳ ನಿರೀಕ್ಷೆಯನ್ನು ತ್ವರಿತವಾಗಿ ಪೂರೈಸಲು ಉದ್ಯೋಗಿಗಳು ‘ಎಐ’ ಬಳಕೆಯನ್ನು ಹೆಚ್ಚಿಸಿಕೊಳ್ಳುವುದು ಮುಖ್ಯವೆಂದು ಜೂಲಿ ಸ್ವೀಟಿ ಹೇಳಿದ್ದಾರೆ.




