‘ಎಐ’ನಿಂದ ವಿಶ್ವದಲ್ಲಿ ಶೇ. 40 ಉದ್ಯೋಗ ಕಡಿತ ಸಂಭವ: ಐಎಂಎಫ್ ಮುಖ್ಯಸ್ಥರ ಎಚ್ಚರಿಕೆ

Date:

ಕೃತಕ ಬುದ್ಧಿಮತ್ತೆ(ಎಐ) ವಿಶ್ವದಾದ್ಯಂತ ಉದ್ಯೋಗ ಭದ್ರತೆಯ ಮೇಲೆ ಭಾರೀ ಪರಿಣಾಮ ತಂದೊಡ್ಡಲಿದೆ ಎಂದು ಐಎಂಎಫ್‌ ಮುಖ್ಯಸ್ಥರಾದ ಕ್ರಿಸ್ಟಲೀನಾ ಜಾರ್ಜೋವಿಯಾ ಅವರು ಎಚ್ಚರಿಕೆ ನೀಡಿದ್ದಾರೆ.

ಸ್ವಿಟ್ಜರ್‌ಲ್ಯಾಂಡಿನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಮಾವೇಶದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಐ’ ಜಾಗತಿಕ ಉದ್ಯೋಗಗಳಲ್ಲಿ ಶೇ. 40 ರಷ್ಟು ಹೊಡೆತ ನೀಡಿದರೆ, ಮುಂದುವರೆದ ಅರ್ಥಶಾಸ್ತ್ರ ಕ್ಷೇತ್ರದ ಮೇಲೆ ಶೇ. 60 ರಷ್ಟು ಪರಿಣಾಮ ಬೀರುತ್ತದೆ. ಆದಾಗ್ಯೂ ಕೃತಕ ಬುದ್ಧಿಮತ್ತೆ ಉತ್ಪಾದಕತೆಯ ಮಟ್ಟವನ್ನು ಹೆಚ್ಚಿಸಲು ಮತ್ತು ಜಾಗತಿಕ ಬೆಳವಣಿಗೆಯನ್ನು ಉತ್ತೇಜಿಸಲು ‘ಪ್ರಚಂಡ ಅವಕಾಶ’ ನೀಡುತ್ತದೆ ಎಂದು ಹೇಳಿದರು.

”ಮುಂದುವರೆಯುತ್ತಿರುವ ರಾಷ್ಟ್ರಗಳಲ್ಲಿ ಉದ್ಯೋಗ ಭದ್ರತೆಯ ಮೇಲೆ ‘ಎಐ’ ಪರಿಣಾಮ ಸರಿಸುಮಾರು ಶೇ. 40 ರಷ್ಟು ಪರಿಣಾಮ ಬೀರುವ ಸಂಭವವಿದೆ. ಹೆಚ್ಚಾಗಿ ಉನ್ನತ ಕೌಶಲ್ಯ ಉದ್ಯೋಗಗಳು ಹೆಚ್ಚಿನ ಪರಿಣಾಮ ಬೀರಲಿದೆ” ಎಂದು ಕ್ರಿಸ್ಟಲೀನಾ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

”ಒಟ್ಟಾರೆಯಾಗಿ ನಿಮ್ಮ ಉದ್ಯೋಗ ಕಣ್ಮರೆಯಾಗಬಹುದು ಅಥವಾ ಕೃತಿಕ ಬುದ್ಧಿಮತ್ತೆ ನಿಮ್ಮ ಉದ್ಯೋಗವನ್ನು ವೃದ್ಧಿಸಬಹುದು. ಹಾಗಾಗಿ ನೀವು ವಿಸ್ತಾರವಾಗಿ ಉತ್ಪಾದಕತೆಯನ್ನು ಹೆಚ್ಚಿಸಬಹುದು ಹಾಗೂ ನಿಮ್ಮ ಆದಾಯ ಮಟ್ಟ ಕೂಡ ಏರಿಕೆಯಾಗಬಹುದು ಎಂದು” ಐಎಂಎಫ್ ಮುಖ್ಯಸ್ಥರು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅನಂತಕುಮಾರ್ ಎಂಬ ಬೆಂಕಿ ಬಾಲಕನೂ, ಜನಿವಾರದಾಟವೂ

”ಪ್ರಸ್ತುತ ನಿರ್ದಿಷ್ಟವಾಗಿ ಕಡಿಮೆ ಆದಾಯ ಇರುವ ರಾಷ್ಟ್ರಗಳಿಗೆ ಕೃತಕ ಬುದ್ಧಿಮತ್ತೆ ಪ್ರಸ್ತುತಪಡಿಸುವ ಅವಕಾಶಗಳನ್ನು ವೇಗವಾಗಿ ಪಡೆದುಕೊಳ್ಳುವ ಬಗ್ಗೆ ಸಹಾಯ ಮಾಡುವತ್ತ ನಾವು ಗಮನಹರಿಸಬೇಕಿದೆ. ‘ಎಐ’ ಒಂಚೂರು ಗಾಬರಿ ಹುಟ್ಟಿಸಿದರೂ ಪ್ರತಿಯೊಬ್ಬರಿಗೂ ಅದ್ಭುತ ಅವಕಾಶವನ್ನು ನೀಡುತ್ತದೆ” ಎಂದು ಕ್ರಿಸ್ಟಲೀನಾ ಹೇಳಿದ್ದಾರೆ.

“ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಲ್ಲಿನ ಕಾರ್ಮಿಕ ಮಾರುಕಟ್ಟೆಗಳಿಗೆ ‘ಎಐ’ನಿಂದ ಸಣ್ಣ ಆರಂಭಿಕ ಪರಿಣಾಮ ಬೀರುತ್ತದೆ. ವಿಶ್ವದಾದ್ಯಂತ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ನಿರ್ಮಾಣವಾಗಿರುವ ಸಾಲದ ಹೊರೆಗಳನ್ನು ನಿಭಾಯಿಸಲು ಹಾಗೂ ತಗ್ಗಿರುವ ಆರ್ಥಿಕತೆಗಳನ್ನು ಮರುನಿರ್ಮಾಣಗೊಳಿಸಲು ದೇಶಗಳು ಮುನ್ನೋಟ ವಹಿಸುತ್ತಿರುವ ಕಾರಣ 2024ರ ವರ್ಷವು ವಿಶ್ವದ ಆರ್ಥಿಕ ನೀತಿಗೆ ಖಂಡಿತವಾಗಿಯು ಕಠಿಣವಾದ ವರ್ಷ” ಎಂದು ಕ್ರಿಸ್ಟಲೀನಾ ತಿಳಿಸಿದರು.

”ಈ ವರ್ಷ 80 ದೇಶಗಳ ಕೋಟ್ಯಂತರ ಮಂದಿ ಮತ ಚಲಾಯಿಸಲಿದ್ದಾರೆ. ಈ ಕಾರಣಗಳಿಂದ ಸರ್ಕಾರಗಳಿಗೆ ಹೆಚ್ಚುವರಿ ಒತ್ತಡವಿರುವ ಕಾರಣ ಚುನಾವಣೆ ಗೆಲ್ಲಲು ಹೆಚ್ಚು ಹಣ ವೆಚ್ಚ ಮಾಡಬಹುದು ಅಥವಾ  ತೆರಿಗೆಗಳನ್ನು ಕಡಿತಗೊಳಿಸಬಹುದು. ಇದು ಕೂಡ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ” ಎಂದು ಕ್ರಿಸ್ಟಲೀನಾ ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...