ಅದಾನಿ ವಂಚನೆ ಪ್ರಕರಣ: ಭಾರತೀಯ ಅಧಿಕಾರಿಗಳ ವಿರುದ್ಧ ಅಮೆರಿಕ‌ ಅಸಮಾಧಾನ

Date:

ವಂಚನೆ ಮತ್ತು ಸುಮಾರು 265 ಮಿಲಿಯನ್ ಡಾಲರ್ ಲಂಚ ಪ್ರಕರಣದಲ್ಲಿ ಅದಾನಿ ಗ್ರೂಪ್ ಸಂಸ್ಥೆಯ ವಿರುದ್ಧ ಯಾವುದೇ ಕ್ರಮಕೈಗೊಳ್ಳದ ಭಾರತೀಯ ಅಧಿಕಾರಿಗಳ ವಿರುದ್ಧ ಅಮೆರಿಕ ಅಸಮಾಧಾನ ವ್ಯಕ್ತಪಡಿಸಿದೆ. ಅದಾನಿ ಸಂಸ್ಥೆಗೆ ನೋಟಿಸ್‌ಗಳು ನೀಡುವ ವಿಚಾರದಲ್ಲಿ ಭಾರತೀಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಯುಎಸ್ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ಶುಕ್ರವಾರ ಅಕ್ಟೋಬರ್ 10ರಂದು ಫೆಡರಲ್ ನ್ಯಾಯಾಲಯಕ್ಕೆ ತಿಳಿಸಿದೆ.

ಅದಾನಿ ಸಂಸ್ಥೆ ವಿರುದ್ಧ ಈಗಾಗಲೇ ಹಲವು ವಂಚನೆ ಆರೋಪಗಳು ಕೇಳಿಬಂದಿದೆ. ದೇಶದ ಅತ್ಯಧಿಕ ಬಂಡವಾಳ ಹೊಂದಿರುವ ಸಂಸ್ಥೆಗಳಲ್ಲಿ ಒಂದಾದ ಅದಾನಿ ಸಂಸ್ಥೆಯ ವಂಚನೆಗಳು ಬಹಿರಂಗವಾಗುತ್ತಿದ್ದಂತೆ ಷೇರು ಮಾರುಕಟ್ಟೆಯೇ ತಲ್ಲಣಿಸಿತ್ತು. ಭಾರತ ಮಾತ್ರವಲ್ಲದೆ ಅಮೆರಿಕದಲ್ಲಿಯೂ ಅದಾನಿ ಸಂಸ್ಥೆಯ ವಿರುದ್ಧ ವಂಚನೆ ಪ್ರಕರಣಗಳಿವೆ. ಆದರೆ ಭಾರತ ಸರ್ಕಾರ ಮಾತ್ರ ನಿರಂತರವಾಗಿ ಗೌತಮ್ ಅದಾನಿ ರಕ್ಷಣೆಗೆ ನಿಂತಿದೆ. ಹಿಂಡನ್‌ಬರ್ಗ್ ಮಾಡಿದ ಆರೋಪವನ್ನೆಲ್ಲ ಬದಿಗೊತ್ತಿ ಸೆಬಿ ಅದಾನಿ ವಿರುದ್ಧದ ಪ್ರಕರಣವನ್ನೇ ಮುಚ್ಚಿಹಾಕಿದೆ.

ಇದನ್ನು ಓದಿದ್ದೀರಾ? ಅಮೆರಿಕದಲ್ಲಿ ‘ವಿದೇಶಿ ಲಂಚ ಕಾನೂನು’ ರದ್ದು; ಗೌತಮ್ ಅದಾನಿ ಪಾರು?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅದಾನಿ ವಂಚನೆ ಪ್ರಕರಣದಲ್ಲಿ ಭಾರತೀಯ ಅಧಿಕಾರಿಗಳ ಸಹಕಾರಕ್ಕಾಗಿ ಅಮೆರಿಕ ವಿನಂತಿಸಿದೆ. ಆದರೆ ಭಾರತ ಮಾತ್ರ ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ಕೈಚೆಲ್ಲಿದೆ. ಅದಾನಿ ಗ್ರೂಪ್ ಸಂಸ್ಥಾಪಕ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿಗೆ ಕಾನೂನು ದಾಖಲೆಗಳನ್ನು ಸಲ್ಲಿಸಲು ಭಾರತದ ಕಾನೂನು ಸಚಿವಾಲಯವನ್ನು ಪದೇ ಪದೇ ಸಂಪರ್ಕಿಸಲಾಗಿದೆ ಎಂದು ಎಸ್‌ಇಸಿ ನ್ಯೂಯಾರ್ಕ್ ಫೆಡರಲ್ ನ್ಯಾಯಾಲಯಕ್ಕೆ ತಿಳಿಸಿದೆ.

ಸೆಪ್ಟೆಂಬರ್ 14ರಂದು ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗಿದೆ. ಆದರೆ ಈವರೆಗೂ ಕ್ರಮ ಜಾರಿಯಾಗಿಲ್ಲ ಎಂದು ಸಂಸ್ಥೆ ನ್ಯಾಯಾಲಯಕ್ಕೆ ಹೇಳಿದೆ. ಹಾಗೆಯೇ “ಎಸ್‌ಇಸಿ ಭಾರತದ ಕಾನೂನು ಮತ್ತು ನ್ಯಾಯ ನಿರ್ವಹಣೆ ಮಾಡುವ ಸಚಿವಾಲಯದೊಂದಿಗೆ ಮಾತುಕತೆ ಮುಂದುವರಿಸುತ್ತದೆ” ಎಂದು ಫೈಲಿಂಗ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.

ಇದನ್ನು ಓದಿದ್ದೀರಾ? ಅಮೆರಿಕದಲ್ಲಿ ಅದಾನಿ ಗ್ರೂಪ್ ವಿರುದ್ಧ ದೋಷಾರೋಪಣೆ ಮಾಡಿದ್ದ ಅಟಾರ್ನಿ ರಾಜೀನಾಮೆ

ಅದಾನಿ ಗ್ರೂಪ್ ತನ್ನ ಅಂಗಸಂಸ್ಥೆಯಾದ ಅದಾನಿ ಗ್ರೀನ್ ಎನರ್ಜಿಯು ಸೋಲಾರ್ ಎನರ್ಜಿಯನ್ನು ಗುತ್ತಿಗೆ ಪಡೆಯಲು ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂದು 2024ರಲ್ಲಿ ಬ್ರೂಕ್ಲಿನ್ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ. ಲಂಚ ಪಡೆದ ಅಧಿಕಾರಿಗಳು ಅದಾನಿ ಸಂಸ್ಥೆಯು ಮಾಡಿದ ಭ್ರಷ್ಟಾಚಾರದಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುವ ಭರವಸೆಯನ್ನು ನೀಡಿದ್ದಾರೆ ಎಂದು ಎಸ್‌ಇಸಿ ಆರೋಪಿಸಿದೆ. ಆದರೆ ಪ್ರತಿ ಬಾರಿಯಂತೆ ಅದಾನಿ ಗ್ರೂಪ್ ಈ ಆರೋಪವನ್ನು ಆಧಾರರಹಿತ, ಸುಳ್ಳು ಎಂದು ಹೇಳಿ ತಳ್ಳಿಹಾಕಿದೆ. ಹಾಗೆಯೇ ಎಲ್ಲಾ ಕಾನೂನು ಅನುಸರಿಸುವುದಾಗಿ ಹೇಳಿದೆ. ಆದರೆ ಅದಾನಿ ಸಂಸ್ಥೆಗೆ ನೋಟಿಸ್ ನೀಡಲು ಭಾರತೀಯ ಅಧಿಕಾರಿಗಳು ಮೀನಾಮೇಷ ಎನಿಸುತ್ತಿದ್ದಾರೆ.

2024ರ ನವೆಂಬರ್‌ನಲ್ಲಿ ಯುಎಸ್‌ ಪ್ರಾಸಿಕ್ಯೂಟರ್‌ಗಳು ಅದಾನಿ ಗ್ರೂಪ್ ಸ್ಥಾಪಕ ಮತ್ತು ಅಧ್ಯಕ್ಷ ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಮತ್ತು ಇತರರ ಮೇಲೆ ಲಂಚ, ವಂಚನೆ, ಸಂಬಂಧಿತ ಪಿತೂರಿಗಳ ಆರೋಪ ಹೊರಿಸಿದ್ದಾರೆ. ಅದಾನಿ ಗ್ರೂಪ್‌ಗೆ ನೋಟಿಸ್ ನೀಡಲು ಕಳೆದ ಫೆಬ್ರವರಿಯಿಂದ ಎಸ್‌ಇಸಿ ಭಾರತದ ಸಂಪರ್ಕದಲ್ಲಿದೆ. ವರದಿ ಪ್ರಕಾರ ಕಾನೂನು ಸಚಿವಾಲಯವು ಸಮನ್ಸ್ ಅನ್ನು ಅದಾನಿಯ ಸ್ಥಳೀಯ ವಿಳಾಸಕ್ಕೆ ತಲುಪಿಸುವ ಕಾರ್ಯವನ್ನು ವಹಿಸಿರುವ ಅಹಮದಾಬಾದ್‌ನಲ್ಲಿರುವ ನ್ಯಾಯಾಲಯಕ್ಕೆ ದಾಖಲೆಗಳನ್ನು ರವಾನಿಸಿದೆ. ಆದರೆ ಆರು ತಿಂಗಳಾದರೂ ಇನ್ನೂ ಸಮನ್ಸ್ ಮಾತ್ರ ತಲುಪಿಲ್ಲ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...