ಅತೀ ಹೆಚ್ಚು ತೈಲ ನಿಕ್ಷೇಪಗಳನ್ನು ಹೊಂದಿರುವ ವೆನೆಜುವೆಲಾ ಮೇಲೆ ಅಮೆರಿಕ ಆಕ್ರಮಣ ನಡೆಸಿದೆ. ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಕುಟುಂಬವನ್ನು ಬಂಧಿಸಿದೆ. ಮಡುರೊ ಬಂಧನದ ಬಳಿಕ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ವೆನೆಜುವೆಲಾ ಅಮೆರಿಕದ ಅಡಿಯಲ್ಲೇ ಇರಲಿದೆ. ಅದನ್ನು ಯಾರ ಸುಪರ್ದಿಗೂ ನೀಡುವುದಿಲ್ಲ. ಅಲ್ಲಿ ಅಮೆರಿಕ ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ಹೊರ ತೆಗೆದು, ಮಾರಾಟ ಮಾಡಲಿದೆ’ ಎಂದು ಹೇಳಿಕೊಂಡಿದ್ದಾರೆ.
“ವೆನೆಜುವೆಲಾದಲ್ಲಿ ಎಲ್ಲವೂ ಸರಿದಾರಿಗೆ ಬರುವವರಡಗೂ ಅಮೆರಿಕವೇ ವೆನೆಜುವೆಲಾವನ್ನು ನಡೆಸಲಿದೆ. ಅಲ್ಲಿನ ಬೃಹತ್ ತೈಲ ನಿಕ್ಷೇಪಗಳನ್ನು ಬಳಸಿಕೊಳ್ಳಲಿದೆ. ಅದಕ್ಕಾಗಿ ನಾವು ನಮ್ಮ ಜನರನ್ನು ನೇಮಿಸುತ್ತಿದ್ದೇವೆ” ಎಂದಿದ್ದಾರೆ.
“ನಮ್ಮ ಅತಿದೊಡ್ಡ ತೈಲ ಕಂಪನಿಗಳು ವೆನೆಜಿವೆಲಾದಲ್ಲಿ ಕಾರ್ಯಾಚರಣೆ ನಡೆಸಲಿವೆ. ದಾಳಿಯಿಂದ ಹಾನಿಯಾಗಿರುವ ತೈಲ ಮೂಲಸೌಕರ್ಯಗಳನ್ನು ಸರಿಪಡಿಸಲು ಶತಕೋಟಿ ಡಾಲರ್ ಖರ್ಚು ಮಾಡಲಿವೆ. ತೈಲವನ್ನು ಹೊರತೆಗೆದು, ಮಾರಾಟ ಮಾಡಲಿವೆ. ಅಮೆರಿಕಕ್ಕಾಗಿ ಹಣ ಸಂಪಾದನೆ ಮಾಡುತ್ತೇವೆ” ಎಂದು ಹೇಳಿಕೊಂಡಿದ್ದಾರೆ.




