ರಷ್ಯಾ-ಭಾರತ ಸಂಬಂಧ ಮುರಿಯುವುದೇ ಅಮೆರಿಕದ ಆಸೆ ಮತ್ತು ಆದ್ಯತೆ: ಗೆಲ್ಲುವವರು ಯಾರು?

Date:

ಕ್ವಾಡ್‌ (ಅಮೆರಿಕ, ಭಾರತ, ಜಪಾನ್ ಹಾಗೂ ಆಸ್ಟ್ರೇಲಿಯಾ) ಸಭೆಯ ವೇಳೆಗೆ ಭಾರತದ ಮೇಲೆ ಪೂರ್ಣಪ್ರಮಾಣದಲ್ಲಿ ಒತ್ತಡ ಹೇರಿ, ರಷ್ಯಾ ಜೊತೆಗಿನ ಸಂಬಂಧವನ್ನು ಕಡಿತಗೊಳಿಸಲು ಟ್ರಂಪ್ ಆಡಳಿತ ಹವಣಿಸುತ್ತಿದೆ. ಆದರೆ, ಅಮೆರಿಕದ ಈ ತಂತ್ರಗಳಿಗೆ ಭಾರತವು ಹೇಗೆ ಪ್ರತಿಕ್ರಿಯಿಸಲಿದೆ...

ತೈಲ ಖರೀದಿಯಲ್ಲಿ ರಷ್ಯಾ-ಭಾರತದ ಸಂಬಂಧಗಳು ಉಕ್ರೇನ್‌ನಲ್ಲಿ ಯುದ್ಧವನ್ನು ಹೆಚ್ಚಿಸುತ್ತಿದೆ ಎಂದು ಅಮೆರಿಕ ಆರೋಪಿಸಿದೆ. ಇದೇ ಆರೋಪವನ್ನು ಮುಂದಿಟ್ಟುಕೊಂಡು ಭಾರತದ ಮೇಲೆ 50% ತೆರಿಗೆಯ ಹೊರೆಯನ್ನೂ ಹೇರಿದೆ. ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ನಿಲ್ಲಿಸುವಂತೆ ಭಾರತದ ಮೇಲೆ ಒತ್ತಡ ಹೇರುವುದು, ಮನವೊಲಿಸುವುದೇ ಅಮೆರಿಕ ಆಡಳಿತದ ‘ಪ್ರಮುಖ ಆದ್ಯತೆ’ಯಾಗಿದೆ ಎಂದು ಭಾರತಕ್ಕೆ ನಿಯೋಜನೆಗೊಂಡಿರುವ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಹೇಳಿದ್ದಾರೆ. ಇದು, ರಷ್ಯಾ-ಭಾರತ-ಅಮೆರಿಕ ತ್ರಿಕೋನ ಸಂಬಂಧ/ಸಂಘರ್ಷದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

ಕಳೆದ ತಿಂಗಳು, ಟ್ರಂಪ್ ಅವರು ಭಾರತ ಮತ್ತು ದಕ್ಷಿಣ ಹಾಗೂ ಮಧ್ಯ ಏಷ್ಯಾದ ವಿಶೇಷ ರಾಯಭಾರಿಯಾಗಿ ಸೆರ್ಗಿಯೊ ಗೋರ್ ಅವರನ್ನು ನೇಮಿಸುವುದಾಗಿ ಘೋಷಿಸಿದ್ದರು. ಇದೀಗ, ಅವರ ನೇಮಕಾತಿ ನಡೆದಿದೆ. ಭಾರತೀಯ ಆಮದುಗಳ ಮೇಲೆ 50% ಸುಂಕಗಳನ್ನು ವಿಧಿಸಿದ ನಂತರ ಉಭಯ ರಾಷ್ಟ್ರಗಳ ಸಂಬಂಧವು ಬಿಗಡಾಯಿಸಿದ್ದು, ಪರಿಸ್ಥಿತಿಯನ್ನು ತಿಳಿಗೊಳಿಸಲು ಅಮೆರಿಕ ಯತ್ನಿಸುತ್ತಿರುವುದಾಗಿ ಹೇಳಿಕೊಂಡಿದೆ. ಎರಡು ದಿನಗಳ ಹಿಂದೆಯಷ್ಟೇ, ‘ಭಾರತ-ಅಮೆರಿಕ ಜೊತೆಯಾಗಿವೆ’ ಎಂದು ಟ್ರಂಪ್ ಹೇಳಿಕೊಂಡಿದ್ದರು. ಆದರೆ, ಮರುದಿನವೇ ಭಾರತದ ಮೇಲೆ 100% ತೆರಿಗೆ ವಿಧಿಸುವಂತೆ ಯುರೋಪ್ ರಾಷ್ಟ್ರಗಳಿಗೆ ಸೂಚಿಸಿದರು. ಟ್ರಂಪ್ ಅವರ ಈ ಎಡಬಿಡಂಗಿ ನಿರ್ಧಾರಗಳು ಭಾರತ-ಅಮೆರಿಕ ಸಂಬಂಧದ ಕುರಿತು ಗೊಂದಲವನ್ನು, ಭವಿಷ್ಯದ ಬಗೆಗಿನ ಆತಂಕವನ್ನು ಹುಟ್ಟಿಸುತ್ತವೆ.

ಈ ನಡುವೆ, ನೂತನ ರಾಯಭಾರಿಯ ನೇಮಕವಾಗಿದ್ದು, ಅವರು “ರಷ್ಯಾದ ತೈಲ ಖರೀದಿಯನ್ನು ಭಾರತ ನಿಲ್ಲಿಸುವಂತೆ ಮಾಡುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಈ ಬಗ್ಗೆ ಟ್ರಂಪ್ ಸ್ಪಷ್ಟವಾಗಿ ಹೇಳಿದ್ದಾರೆ. ಭಾರತವು ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಬೇಕು. ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವ ನಮ್ಮ ಪ್ರಯತ್ನಕ್ಕೆ ಪ್ರಪಂಚದಾದ್ಯಂತ ಎಲ್ಲ ಪಾಲುದಾರರು ಪ್ರೋತ್ಸಾಹ ನೀಡುತ್ತಿದ್ದಾರೆ. ಆದರೆ, ಭಾರತವು ರಷ್ಯಾದಿಂದ ತೈಲ ಖರೀದಿಸಿ, ಇತರರಿಗೆ ಮಾರಾಟ ಮಾಡುತ್ತಿದೆ. ಅದನ್ನು ತಡೆಯುವುದು ನಮ್ಮ ಉದ್ದೇಶವಾಗಿದೆ” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

”ಭಾರತವು ರಷ್ಯಾದ ತೈಲವನ್ನು ಖರೀದಿಸುತ್ತದೆ, ಅದನ್ನು ಸಂಸ್ಕರಿಸುತ್ತದೆ ಹಾಗೂ ಪೆಟ್ರೋಲಿಯಂ ಉತ್ಪನ್ನಗಳನ್ನು ಯುರೋಪ್ ರಾಷ್ಟ್ರಗಳಿಗೆ ಮರಳಿ ಮಾರಾಟ ಮಾಡುತ್ತದೆ. ಯುರೋಪಿಯನ್ನರು ಅಮೆರಿಕದ ಇಂಧನವನ್ನು ಖರೀದಿಸುವುದು ನಮಗೆ ಅಗತ್ಯ. ರಷ್ಯಾಕ್ಕೆ ಹಣದ ಹರಿವನ್ನು ನಿಲ್ಲಿಸುವುದು ಮತ್ತು ರಷ್ಯಾ-ಉಕ್ರೇನ್ ಸಂಘರ್ಷವನ್ನು ಕೊನೆಗೊಳಿಸುವುದು ನಮ್ಮ ಇರಾದೆಯಾಗಿದೆ. ನಮ್ಮ ಈ ಹಾದಿಯಲ್ಲಿ ಭಾರತವು ತಮ್ಮ ಕ್ರಮಗಳನ್ನು ಬದಲಿಸಿಕೊಳ್ಳಬೇಕು” ಎಂದು ರಿಪಬ್ಲಿಕನ್ ಸೆನೆಟರ್ ಬಿಲ್ ಹ್ಯಾಗೆರ್ಟಿ ಹೇಳಿದ್ದಾರೆ.

ಇತ್ತೀಚೆಗೆ ನಡೆದ ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯಲ್ಲಿ ಮೋದಿ ಅವರು ಪುಟಿನ್ ಹಾಗೂ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ನಿಂತಿದ್ದನ್ನು ನೋಡಿದಾಗ ನಮಗೆ ತುಂಬಾ ಕಳವಳ ಉಂಟಾಯಿತು. ಇದು ಅಮೆರಿಕ ಹಿತಾಸಕ್ತಿಗೆ ಗಂಭೀರ ಹಿನ್ನಡೆ ಉಂಟುಮಾಡಿದೆ. ಭಾರತದೊಂದಿಗೆ ವಿಶ್ವಾಸವನ್ನು ಗೋರ್ ಯಾವ ರೀತಿ ಪುನರ್‌ರಚಿಸುತ್ತಾರೆ ಎಂದು ಅಮೆರಿಕದ ಸೆನೆಟರ್‌ಗಳು ಎದುರು ನೋಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಅಂದಹಾಗೆ, ಕಳೆದ ಐದು ವರ್ಷಗಳಿಂದ ಚೀನಾ ಮತ್ತು ಭಾರತ ನಡುವಿನ ಸಂಬಂಧ ಮತ್ತಷ್ಟು ಬಿಗಡಾಯಿಸಿದೆ. 2020ರಲ್ಲಿ ನಡೆದ ಗಲ್ವಾನ್ ಸಂಘರ್ಷವು ಭಾರತ-ಚೀನಾ ಘರ್ಷಣೆಯನ್ನು ಹೆಚ್ಚಿಸಿದೆ. ಇದನ್ನೇ ಅಮೆರಿಕ ತನ್ನ ಬಂಡವಾಳವಾಗಿ ಬಳಸಿಕೊಂಡು, ಭಾರತವನ್ನು ತನ್ನ ತೆಕ್ಕೆಯಲ್ಲಿ ಉಳಿಸಿಕೊಳ್ಳಲು ತಂತ್ರ ಹೆಣೆಯುತ್ತಿದೆ. “ಭಾರತ-ಚೀನಾ ಗುಂಡುಗಳನ್ನು ಬಳಸಲಿಲ್ಲ. ಆದರೆ, ಚೀನಾ ಭಾರತೀಯ ಸೈನಿಕರನ್ನು ಕೊಲ್ಲಲು ಎಲೆಕ್ಟ್ರೋಮ್ಯಾಗ್ನೆಟಿಕ್ ಆಯುಧಗಳನ್ನು ಬಳಸಿತು” ಎಂದು ಗೋರ್ ಹೇಳಿದ್ದಾರೆ. ಆದರೆ, ಭಾರತದ ಸೈನಿಕರನ್ನು ಕೊಲ್ಲಲು ಚೀನಾ ಯಾವ ಆಯುಧಗಳನ್ನು ಬಳಸಿದೆ ಎಂಬುದನ್ನು ಭಾರತ ಸರ್ಕಾರವು ಈವರೆಗೆ ಸಾರ್ವಜನಿಕವಾಗಿ ಹೇಳಿಲ್ಲ.

ಭಾರತ ಮಾತ್ರವಲ್ಲದೆ, ಚೀನಾ, ಬ್ರೆಜಿಲ್ ಕೂಡ ರಷ್ಯಾದಿಂದ ತೈಲ ಖರೀದಿ ಮಾಡುತ್ತಿವೆ. ಆದರೆ, ಚೀನಾ-ಬ್ರೆಜಿಲ್ ಮೇಲೆ ಇಲ್ಲದ ಒತ್ತಡವನ್ನು ಭಾರತದ ಮೇಲೆ ಅಮೆರಿಕ ಹೇರುತ್ತಿದೆ. ತಮ್ಮ ಈ ಧೋರಣೆಯನ್ನು ಸಮರ್ಥಿಸಿಕೊಳ್ಳುವ ಗೋರ್, ”ಇತರ ರಾಷ್ಟ್ರಗಳಿಗಿಂತ ನಾವು ಭಾರತದಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತೇವೆ. ನಾವು ನಮ್ಮ ಸ್ನೇಹಿತರನ್ನು ವಿಭಿನ್ನ ಮಾನದಂಡಗಳಿಗೆ ಹಿಡಿದಿಟ್ಟುಕೊಳ್ಳುತ್ತೇವೆ. ಮುಂದಿನ ಕೆಲವು ವಾರಗಳಲ್ಲಿ ಭಾರತದ ಜೊತೆಗಿನ ಸಮಸ್ಯೆಗಳು ಬಗೆಹರಿಯಲಿವೆ. ಅದಕ್ಕಾಗಿ, ಭಾರತದ ವಿದೇಶಾಂಗ ಸಚಿವರನ್ನು ಆಹ್ವಾನಿಸಿದ್ದೇವೆ” ಎಂದಿದ್ದಾರೆ.

ಭಾರತದೊಂದಿಗಿನ ವ್ಯಾಪಾರ ಬಿಕ್ಕಟ್ಟು ತಿಳಿಯಾಗುತ್ತಿದೆ. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 500 ಶತಕೋಟಿ ಡಾಲರ್‌ಗೆ ದ್ವಿಗುಣಗೊಳಿಸುವ ‘ಮಿಷನ್ 500’ ಅನ್ನು ಅಮೆರಿಕ ರೂಪಿಸಿಕೊಂಡಿದೆ. ವ್ಯಾಪಾರದ ಹೊರತಾಗಿ, ರಕ್ಷಣಾ ಸಹಕಾರವನ್ನು ಬಲಪಡಿಸುವುದೂ ಮುಂದುವರೆಯಲಿದೆ ಎಂದು ಅಮೆರಿಕ ಹೇಳಿಕೊಂಡಿದೆ.

ಇಂಡೋ-ಪೆಸಿಫಿಕ್‌ ಭಾಗದಲ್ಲಿ ಚೀನಾದ ಪ್ರಭಾವವನ್ನು ಎದುರಿಸಲು ಭಾರತವನ್ನು ಅಮೆರಿಕವು ದಾಳವಾಗಿ ಬಳಸಿಕೊಳ್ಳುತ್ತಿದೆ. ಅದಕ್ಕಾಗಿ, ಭಾರತವನ್ನು ತನ್ನ ಹಿಡಿತದಲ್ಲಿಯೇ ಹಿಡಿದಿಟ್ಟುಕೊಳ್ಳಲು ಶತಪ್ರಯತ್ನ ಮಾಡುತ್ತಿದೆ.

ಈ ನಡುವೆ, ಅಮೆರಿಕದ ನೀತಿಯು ಪಾಕಿಸ್ತಾನ ಪರವಾದ ಒಲವನ್ನೂ ಎತ್ತಿ ತೋರಿಸಿವೆ. ಅಮೆರಿಕ-ಪಾಕಿಸ್ತಾನ ಸಂಬಂಧವನ್ನು ಭಾರತ ಹಿಂದಿನಿಂದಲೂ ವಿರೋಧಿಸುತ್ತಿದ್ದರೂ, ಆ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಮುಂದುವರೆದಿದೆ. ಮಾತ್ರವಲ್ಲ, ಗಟ್ಟಿಗೊಳ್ಳುತ್ತಿದೆ.

ಈ ಲೇಖನ ಓದಿದ್ದೀರಾ?: ನೆರೆಯ ರಾಷ್ಟ್ರಗಳ ಅರಾಜಕತೆಯಿಂದ ಪಾಠ ಕಲಿತು, ಸರಿ ದಾರಿಗೆ ಬರುವುದೇ ಭಾರತ?

ಈಗ, ಭಾರತ ಮತ್ತು ಪಾಕಿಸ್ತಾನ ಒಳಗೊಂಡಂತೆ ಮಧ್ಯ ಮತ್ತು ದಕ್ಷಿಣ ಏಷ್ಯಾದ 12 ರಾಷ್ಟ್ರಗಳಿಗೆ ಗೋರ್ ರಾಯಭಾರಿಯಾಗಿದ್ದಾರೆ. ಅವರು ರಷ್ಯಾ ಜೊತೆಗಿನ ಭಾರತದ ಸಂಬಂಧವನ್ನು ಕೊನೆಗಾಣಿಸುವುದು ಮಾತ್ರವಲ್ಲದೆ, ಅಮೆರಿಕದ ತೈಲವನ್ನು ಭಾರತವು ಖರೀದಿಸುವಂತೆ ಮಾಡುವುದು, ಚೀನಾವನ್ನು ಎದುರಿಸಲು ಕೃತಕ ಬುದ್ಧಿಮತ್ತೆ (ಎಐ) ಹಾಗೂ ಇತರ ನಿರ್ಣಾಯಕ ತಂತ್ರಜ್ಞಾನಗಳಲ್ಲಿ ಭಾರತವು ತಮ್ಮೊಂದಿಗೆ ಹೆಚ್ಚು ಸಂಬಂಧ (ನಿಯಂತ್ರಣ) ಹೊಂದಿರುವಂತೆ ಮಾಡುವುದು ಅವರ ಗುರಿಯಾಗಿದೆ. ಜೊತೆಗೆ, ಪಾಕಿಸ್ತಾನವೂ ಸೇರಿದಂತೆ ಇತರ ರಾಷ್ಟ್ರಗಳ ಜೊತೆಗಿನ ವ್ಯಾಪಾರ ಸಂಬಂಧವನ್ನೂ ವಿಸ್ತರಿಸುವ ಗುರಿ ಹೊಂದಿದ್ದಾರೆ.

ಭಾರತವು ಭಾಗವಾಗಿರುವ ಬ್ರಿಕ್ಸ್‌ ವಿರುದ್ಧ ಕೂಡ ಟ್ರಂಪ್ ಕಠಿಣ ನಿಲುವು ಹೊಂದಿದ್ದಾರೆ. ಬ್ರಿಕ್ಸ್‌ ಅಮೆರಿಕನ್ ವಿರೋಧಿ ನೀತಿಗಳನ್ನು ಹೊಂದಿದೆ ಎಂದು ಅವರು ಭಾವಿಸಿದ್ದಾರೆ. ಹಾಗಾಗಿಯೇ, ಬ್ರಿಕ್ಸ್‌ ಭಾಗವಾಗಿರುವ ಮತ್ತು ಅಮೆರಿಕನ್ ನೀತಿಗಳ ವಿರುದ್ಧವಿರುವ ಯಾವುದೇ ರಾಷ್ಟ್ರಗಳ ಮೇಲೆ 10% ಹೆಚ್ಚುವರಿ ಸುಂಕ ವಿಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ. 2025ರ ಡಿಸೆಂಬರ್‌ನಲ್ಲಿ ನಡೆಯಲಿರುವ ಬ್ರಿಕ್ಸ್‌ ಶೃಂಗಸಭೆಯ ಅಧ್ಯಕ್ಷ ಸ್ಥಾನವನ್ನೂ ಭಾರತ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಇದೆಲ್ಲದರ ನಡುವೆ, ಇದೇ ಸಮಯದಲ್ಲಿ ಕ್ವಾಡ್‌ (ಅಮೆರಿಕ, ಭಾರತ, ಜಪಾನ್ ಹಾಗೂ ಆಸ್ಟ್ರೇಲಿಯಾ) ಸಭೆ ಕೂಡ ಭಾರತದಲ್ಲಿಯೇ ನಡೆಯಲಿದೆ. ಆ ಸಭೆಯ ವೇಳೆಗೆ ಭಾರತದ ಮೇಲೆ ಪೂರ್ಣಪ್ರಮಾಣದಲ್ಲಿ ಒತ್ತಡ ಹೇರಿ, ರಷ್ಯಾ ಜೊತೆಗಿನ ಸಂಬಂಧವನ್ನು ಕಡಿತಗೊಳಿಸಲು ಟ್ರಂಪ್ ಆಡಳಿತ ಹವಣಿಸುತ್ತಿದೆ. ಆದರೆ, ಅಮೆರಿಕದ ಈ ತಂತ್ರಗಳಿಗೆ ಭಾರತವು ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....