ಟಿ-20 ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ಅರ್ಧ ಶತಕಗಳನ್ನು ಗಳಿಸಿದ್ದ ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ದಾಖಲೆನನ್ನು ಪಾಕ್ ತಂಡದ ಆಟಗಾರ ಬಾಬರ್ ಆಝಂ ಮುರಿದಿದ್ದಾರೆ. ಕೊಹ್ಲಿ ದಾಖಲೆಯನ್ನು ಸರಿಗಟ್ಟುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆದ 3 ಅಟಗಾರ ಟಿ-20 ಸರಣಿಯ ಅಂತಿಮ ಪಂದ್ಯದಲ್ಲಿ 50 ರನ್‌ಗಳಿಸುವ ಮೂಲಕ ಬಾಬರ್ ಆಝಂ ಹೊಸ ದಾಖಲೆ ಬರೆದಿದ್ದಾರೆ.
ಟಿ-20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅವರು 38 ಅರ್ಧ ಶತಕಗಳನ್ನು ಬಾರಿಸಿದ್ದು, ಅತೀ ಹೆಚ್ಚು ಅರ್ಧ ಶತಕ ಗಳಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟಿಗನೆಂಬ ಹೆಗ್ಗಳಿಕೆ ಪಡೆದಿದ್ದರು. ಇದೀಗ, ಆಝಂ 39 ಅರ್ಧ ಶತಕಗಳನ್ನು ದಾಖಲಿಸುವ ಮೂಲಕ ಅರ್ಧ ಶತಕ ಸಿಡಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ.
ಅಲ್ಲದೆ, ತವರು ನೆಲದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮೂರೂ (3-0) ಪಂದ್ಯಗಳನ್ನು ಗೆದ್ದಿದೆ. ಟೂರ್ನಿಯ ಕಡೆಯ ಪಂದ್ಯದಲ್ಲಿ ಪಾಕ್ ತಂಡವು 6 ವಿಕೆಟ್‌ಗಳ ನಷ್ಟಕ್ಕೆ 207 ರನ್ ಗಳಿಸಿತ್ತು. ಪಾಕ್ ನೀಡಿದ ಗುರಿತ ಬೆನ್ನತ್ತದ ಆಸ್ಟ್ರೇಲಿಯಾ ತಂಡ ಕೇವಲ 96 ರನ್ ಗಳಿಸಿ, ಸೋಲುಂಡಿತು.
ಟಿ-20ಯಲ್ಲಿ ಗರಿಷ್ಠ ಅರ್ಧಶತಕ ಗಳಿಸಿದ ಕ್ರಿಕೆಟಿಗರ ಪಟ್ಟಿ
39-ಬಾಬರ್ ಆಝಂ
38-ವಿರಾಟ್ ಕೊಹ್ಲಿ
32-ರೋಹಿತ್ ಶರ್ಮಾ
30-ಮುಹಮ್ಮದ್ ರಿಝ್ವಾನ್
28-ಡೇವಿಡ್ ವಾರ್ನರ್ ಹಾಗೂ ಜೋಸ್ ಬಟ್ಲರ್





