ಭಾರತದ ಒಂದು ಜಿಲ್ಲೆಗೆ 2.2 ಲಕ್ಷ H-1B ವೀಸಾ: ಅಮೆರಿಕದ ಅರ್ಥಶಾಸ್ತ್ರಜ್ಞರ ಆರೋಪ

Date:

ಭಾರತದಲ್ಲಿ ಚೆನ್ನೈ ಜಿಲ್ಲೆಗೆ 2.20 ಲಕ್ಷ H-1B ವೀಸಾಗಳು ಮಂಜೂರಾಗಿವೆ ಎಂದು ಅಮೆರಿಕದ ಮಾಜಿ ಪ್ರತಿನಿಧಿ ಹಾಗೂ ಅರ್ಥಶಾಸ್ತ್ರಜ್ಞ ಡಾ. ಡೇವ್ ಬ್ರಾಟ್ ಆರೋಪಿಸಿದ್ದಾರೆ.

ಸ್ಟೀವ್ ಬ್ಯಾನನ್ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಬ್ರಾಟ್, ವಾರ್ಷಿಕ ಮಿತಿ 85,000 ಇದ್ದರೂ, ಭಾರತದ ಚೆನ್ನೈ ಜಿಲ್ಲೆಗೆ ಮಾತ್ರ 2.20 ಲಕ್ಷ H-1B ವೀಸಾಗಳು ಮಂಜೂರು ಮಾಡಲಾಗಿದೆ. H-1B ವೀಸಾ ಕೇಳುವಾಗ ನಿಮ್ಮ ಕುಟುಂಬದ ಬಗ್ಗೆ ಯೋಚಿಸಿ; ಈ ವಂಚಿತ ವೀಸಾಗಳು ಅವರ ಭವಿಷ್ಯ ಕದ್ದಿವೆ. H-1B ವೀಸಾಗಳಲ್ಲಿ ಚೀನಾದ ಪಾಲು ಕೇವಲ 12 ಶೇಕಡಾ ಎಂದೂ ಅವರು ಹೇಳಿದ್ದಾರೆ.

2024ರಲ್ಲಿ ಚೆನ್ನೈ ನಲ್ಲಿನ ಅಮೆರಿಕದ ರಾಯಭಾರ ಕಚೇರಿ 2.20 ಲಕ್ಷ H-1B ಮತ್ತು 1.40 ಲಕ್ಷ H-4 ಅವಲಂಬಿತ ವೀಸಾಗಳನ್ನು ಪ್ರಕ್ರಿಯೆಗೊಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಶೇ.80–90 ರಷ್ಟು ಅರ್ಜಿಗಳು ನಕಲಿ

ಈ ನಡುವೆ, ಭಾರತೀಯ ಮೂಲದ ಅಮೆರಿಕದ ವಿದೇಶಾಂಗ ಸೇವೆಯಲ್ಲಿನ ಅಧಿಕಾರಿ ಮಹ್ವಾಶ್ ಸಿದ್ದಿಕಿ ಅವರು ಎರಡು ದಶಕಗಳ ಹಿಂದಿನ ಚೆನ್ನೈ ಕಾನ್ಸುಲೇಟ್‌ ಅನುಭವವನ್ನು ಹಂಚಿಕೊಂಡಿದ್ದು, ಮತ್ತೊಂದು ಚರ್ಚೆಗೆ ಕಾರಣವಾಗಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕಾರ್ಪೊರೇಟ್ ಹಿತಕ್ಕಾಗಿ ಕಾರ್ಮಿಕರ ಹಕ್ಕುಗಳ ಹತ್ತಿಕ್ಕುತ್ತಿರುವ ಮೋದಿ

2005–07ರ ಅವಧಿಯಲ್ಲಿ ಕಾನ್ಸುಲೇಟ್‌ನಲ್ಲಿ ಸೇವೆ ಸಲ್ಲಿಸಿದ ಅವರು, “ಭಾರತದಿಂದ ಸಲ್ಲಿಸಲಾಗುವ H-1B ಅರ್ಜಿಗಳಲ್ಲಿ ಶೇ. 80–90 ರಷ್ಟು ನಕಲಿ ದಾಖಲೆಗಳೇ ತುಂಬಿರುತ್ತದೆ. ನಕಲಿ ಪದವಿಗಳು, ನಕಲಿ ವಿವಾಹ ಪ್ರಮಾಣಪತ್ರಗಳು, ನಕಲಿ ಶೈಕ್ಷಣಿಕ ದಾಖಲೆಗಳು ಇವೆಲ್ಲ ಸಾಮಾನ್ಯವಾಗಿದ್ದವು” ಎಂದು ಅವರು ಆರೋಪಿಸಿದ್ದಾರೆ.

ಚೆನ್ನೈ ಕಾನ್ಸುಲೇಟ್ ಆಗ ಹೈದರಾಬಾದ್, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿಂದ ಬಂದ ಅರ್ಜಿಗಳನ್ನು ನಿರ್ವಹಿಸುತ್ತಿತ್ತು. ಇದರಲ್ಲೂ ಹೈದರಾಬಾದ್ ಅತ್ಯಂತ ಕಳವಳಕಾರಿ ಕೇಂದ್ರವಾಗಿದ್ದು, ಅಮೀರ್‌ಪೇಟೆಯಲ್ಲಿ ವೀಸಾ ಪಡೆಯಲು ನಕಲಿ ದಾಖಲೆಗಳನ್ನು ‘ಪ್ಯಾಕೇಜ್’ ಆಗಿ ನೀಡುವ ಮಳಿಗೆಗಳು ಇದ್ದವು ಎಂದು ಅವರು ಹೇಳಿದ್ದಾರೆ.

ಈ ಪೈಕಿ ಮಹ್ವಾಶ್ ಸಿದ್ದಿಕಿ ಅವರು ಸ್ವತಃ ಕನಿಷ್ಠ 51,000 H-1B ವೀಸಾ ಅರ್ಜಿಗಳನ್ನು ವಿಲೇವಾರಿ ಮಾಡಿರುವುದಾಗಿ ತಿಳಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...