ಕ್ರಿಸ್‌ಮಸ್ ಸಂದೇಶ: ಗಾಜಾದಲ್ಲಿ ಪ್ಯಾಲೆಸ್ತೀನಿಗಳ ದುಃಸ್ಥಿತಿಯನ್ನು ಖಂಡಿಸಿದ ಪೋಪ್ ಲಿಯೊ

Date:

ಪೋಪ್ ಲಿಯೊ ಅವರು ತನ್ನ ಕ್ರಿಸ್‌ಮಸ್ ಸಂದೇಶದಲ್ಲಿ ಪ್ಯಾಲೆಸ್ತೀನಿಗಳು ಮೈಕೊರೆಯುವ ಚಳಿಯಲ್ಲಿ ಜರ್ಜರಿತ ಡೇರೆಗಳಲ್ಲಿ ವಾಸವಾಗಿರುವ ಗಾಜಾದಲ್ಲಿನ ಪರಿಸ್ಥಿತಿಯನ್ನು ಖಂಡಿಸಿದ್ದಾರೆ.

ಮೊದಲ ಅಮೆರಿಕನ್ ಪೋಪ್ ಆಗಿರುವ ಲಿಯೊ,‘ಯೇಸುಕ್ರಿಸ್ತನು ಗೋದಲಿಯಲ್ಲಿ ಜನಿಸಿದ್ದ ಕಥೆಯು ದೇವರು ಜಗತ್ತಿನ ಜನರ ನಡುವೆ ತನ್ನ ‘ದುರ್ಬಲವಾದ ಡೇರೆ ಹಾಕಿದ್ದಾನೆ’ ಎನ್ನುವುದನ್ನು ತೋರಿಸುತ್ತದೆ ಹಾಗಾದರೆ, ವಾರಗಳಿಂದಲೂ ಮಳೆ, ಗಾಳಿ ಮತ್ತು ಚಳಿಗೆ ಒಡ್ಡಿಕೊಂಡಿರುವ ಡೇರೆಗಳ ಬಗ್ಗೆ ನಾವು ಯೋಚಿಸುವುದು ಏಕೆ ಸಾಧ್ಯವಿಲ್ಲ? ’ ಎಂದು ಪ್ರಶ್ನಿಸಿದರು.

ದಿವಂಗತ ಪೋಪ್ ಅವರ ಉತ್ತರಾಧಿಕಾರಿಯಾಗಿ ಕಳೆದ ಮೇ ತಿಂಗಳಿನಲ್ಲಿ ಆಯ್ಕೆಯಾದ ಬಳಿಕ ತನ್ನ ಮೊದಲ ಕ್ರಿಸ್‌ಮಸ್ ಆಚರಿಸುತ್ತಿರುವ ಪೋಪ್ ಲಿಯೊ ತನ್ನ ಪೂರ್ವಾಧಿಕಾರಿಗಿಂತ ಶಾಂತ, ಹೆಚ್ಚು ರಾಜತಾಂತ್ರಿಕ ಶೈಲಿಯನ್ನು ಹೊಂದಿದ್ದು,ಸಾಮಾನ್ಯವಾಗಿ ತನ್ನ ಧರ್ಮೋಪದೇಶಗಳಲ್ಲಿ ರಾಜಕೀಯ ಉಲ್ಲೇಖಗಳಿಂದ ದೂರವಿರುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆದರೆ ಅವರು ಗಾಜಾದಲ್ಲಿ ಪ್ಯಾಲೆಸ್ತೀನಿಗಳ ದುಃಸ್ಥಿತಿಯ ಬಗ್ಗೆ ಹಲವಾರು ಸಲ ವಿಷಾದವನ್ನು ವ್ಯಕ್ತಪಡಿಸಿದ್ದು, ಇಸ್ರೇಲ್‌ನೊಂದಿಗೆ ದಶಕಗಳ ಸಂಘರ್ಷಕ್ಕೆ ಪರಿಹಾರವು ಪ್ಯಾಲೆಸ್ತೀನಿ ರಾಷ್ಟ್ರವನ್ನು ಒಳಗೊಂಡಿರಲೇಬೇಕು ಎಂದು ಕಳೆದ ತಿಂಗಳು ಹೇಳಿದ್ದರು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವ ಪೊರೆದ ಅಮೆರಿಕ; ಪುಡಿಗಟ್ಟುತ್ತಿರುವ ಭಾರತ

ಎರಡು ವರ್ಷಗಳ ತೀವ್ರ ಬಾಂಬ್ ದಾಳಿಗಳು ಮತ್ತು ಮಿಲಿಟರಿ ಕಾರ್ಯಾಚರಣೆಗಳ ಬಳಿಕ ಇಸ್ರೇಲ್ ಮತ್ತು ಹಮಾಸ್ ಕಳೆದ ಅಕ್ಟೋಬರ್‌ ನಲ್ಲಿ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಆದರೆ 20 ಲಕ್ಷಕ್ಕೂ ಅಧಿಕ ಜನರು ನಿರ್ವಸಿತರಾಗಿರುವ ಗಾಝಾಕ್ಕೆ ಈಗಲೂ ಅತ್ಯಲ್ಪ ಪ್ರಮಾಣದಲ್ಲಿ ನೆರವು ಪೂರೈಕೆಯಾಗುತ್ತಿದೆ ಎಂದು ಮಾನವೀಯ ನೆರವು ಸಂಸ್ಥೆಗಳು ಪ್ರತಿಪಾದಿಸಿವೆ.

ಗುರುವಾರ ವ್ಯಾಟಿಕನ್‌ ನ ಸೈಂಟ್ ಪೀಟರ್ಸ್ ಬ್ಯಾಸಿಲಿಕಾದಲ್ಲಿ ಸಾವಿರಾರು ಜನರು ನೆರೆದಿದ್ದ ಸಂದರ್ಭ ತನ್ನ ಧರ್ಮೋಪದೇಶದಲ್ಲಿ ಪೋಪ್ ಲಿಯೊ, ಜಗತ್ತಿನಾದ್ಯಂತ ನಿರ್ವಸಿತರ ಸ್ಥಿತಿಗಳು ಮತ್ತು ಯುದ್ಧಗಳಿಂದ ಆಗುತ್ತಿರುವ ವಿನಾಶದ ಬಗ್ಗೆಯೂ ವಿಷಾದಿಸಿದರು.

ಜರ್ಜರಿತವಾಗಿರುವುದು ಈಗಲೂ ನಡೆಯುತ್ತಿರುವ ಅಥವಾ ಮುಕ್ತಾಯಗೊಂಡಿರುವ ಅಷ್ಟೊಂದು ಯುದ್ಧಗಳ ಬಿಸಿಯನ್ನು ಅನುಭವಿಸಿರುವ ರಕ್ಷಣೆಯೇ ಇಲ್ಲದ ಜನರು. ಈ ಯುದ್ಧಗಳು ಅವಶೇಷಗಳು ಮತ್ತು ಮಾಯದ ಗಾಯಗಳನ್ನು ಉಳಿಸಿ ಹೋಗಿವೆ. ಜರ್ಜರಿತವಾಗಿರುವುದು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಲ್ಪಟ್ಟಿರುವ ಯುವಜನರ ಮನಸ್ಸುಗಳು ಮತ್ತು ಬದುಕುಗಳು,ಅವರು ಮುಂಚೂಣಿಯಲ್ಲಿದ್ದಾಗ ತಮ್ಮಿಂದ ಅಪೇಕ್ಷಿಸಲ್ಪಟ್ಟಿದ್ದರ ಮತ್ತು ತಮ್ಮನ್ನು ಸಾವಿನ ದವಡೆಗೆ ತಳ್ಳಿರುವವರ ಸುಳ್ಳುಗಳಿಂದ ತುಂಬಿದ ಭಾಷಣಗಳ ಅರ್ಥಹೀನತೆಯನ್ನು ಅನುಭವಿಸುತ್ತಾರೆ ಎಂದು ಪೋಪ್ ಹೇಳಿದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...