ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಹೊಸ ರೀತಿಯ H-1B ವೀಸಾ ನೀತಿಯನ್ನು ರೂಪಿಸಿದೆ. ವಿದೇಶಿ ನುರಿತ ಕಾರ್ಮಿಕರನ್ನು ತಾತ್ಕಾಲಿಕವಾಗಿ ಅಮೆರಿಕಕ್ಕೆ ಕರೆತಂದು ಅಮೆರಿಕನ್ನರಿಗೆ ಹೈ-ಟೆಕ್ ಉದ್ಯೋಗಗಳಲ್ಲಿ ತರಬೇತಿ ನೀಡಿ, ನಂತರ ಅವರ ದೇಶಕ್ಕೆ ಕಳುಹಿಸುವುದು.
ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಈ ಯೋಜನೆಯ ಬಗ್ಗೆ ತಿಳಿಸಿರುವ ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ಟ್ರಂಪ್ ಸರ್ಕಾರದ ಹೊಸ ನೀತಿಯನ್ನು “ಜ್ಞಾನ ವರ್ಗಾವಣೆ” ಮಾದರಿಯೆಂದು ತಿಳಿಸಿದ್ದಾರೆ. ಇದರ ಉದ್ದೇಶ ಅಮೆರಿಕದಲ್ಲಿ ಕುಸಿದಿರುವ ಉತ್ಪಾದನಾ ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವುದಾಗಿದೆ. 20-30 ವರ್ಷಗಳಿಂದ ನಾವು ನಿಖರ ಉತ್ಪಾದನಾ ಉದ್ಯೋಗಗಳನ್ನು ವಿದೇಶಕ್ಕೆ ಕಳುಹಿಸಿದ್ದೇವೆ. ರಾತ್ರೋರಾತ್ರಿ ಹಡಗುಗಳನ್ನು ನಿರ್ಮಿಸಲು ಸಾಧ್ಯವಿಲ್ಲ. ಸೆಮಿಕಂಡಕ್ಟರ್ ಉದ್ಯಮವನ್ನು ಅಮೆರಿಕಕ್ಕೆ ಮರಳಿ ತರಬೇಕು. ಅರಿಜೋನಾದಲ್ಲಿ ದೊಡ್ಡ ಕಾರ್ಖಾನೆಗಳು ಬರುತ್ತಿವೆ. ಇವೆಲ್ಲಕ್ಕೂ ನಮ್ಮರಿಗೆ ತರಬೇತಿ ಅಗತ್ಯ ಎಂದು ಬೆಸೆಂಟ್ ಹೇಳಿದ್ದಾರೆ.
ವಿದೇಶಿ ನುರಿತ ಕಾರ್ಮಿಕರನ್ನು 3, 5 ಅಥವಾ 7 ವರ್ಷಗಳ ಕಾಲ ಕರೆತಂದು ಅಮೆರಿಕನ್ನರಿಗೆ ತರಬೇತಿ ನೀಡಿಸಿ, ನಂತರ ಅವರನ್ನು ಅವರ ದೇಶಕ್ಕೆ ಕಳುಹಿಸಲಾಗುವುದು. ಅಮೆರಿಕನ್ನರು ಈಗಲೇ ಈ ಉದ್ಯೋಗಗಳನ್ನು ಮಾಡಲು ಸಾಧ್ಯವಿಲ್ಲ, ಆದರೆ ಶೀಘ್ರದಲ್ಲೇ ಸಾಧ್ಯ ಎಂದು ಸ್ಕಾಟ್ ಬೆಸೆಂಟ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿಯಡಿ ದೇಶ ಸುರಕ್ಷಿತವೆಂಬ ಸುಳ್ಳುಗುಳ್ಳೆಯ ಒಡೆದ ಸ್ಫೋಟ
ಹಡಗು ನಿರ್ಮಾಣ, ಸೆಮಿಕಂಡಕ್ಟರ್ ತಯಾರಿಕೆ – ಇದನ್ನು ಹಲವು ವರ್ಷಗಳಿಂದ ಅಮೆರಿಕದಲ್ಲಿ ಮಾಡಿಲ್ಲ. ವಿದೇಶಿ ಪಾಲುದಾರರು ಬಂದು ಅಮೆರಿಕನ್ನರಿಗೆ ಕಲಿಸುತ್ತಾರೆ. ಈ ಯೋಜನೆ ಟ್ರಂಪ್‌ರ ಮಹತ್ವಾಕಾಂಕ್ಷಿ ಗುರಿ. ಮುಖ್ಯ ಉದ್ಯಮಗಳನ್ನು ಅಮೆರಿಕಕ್ಕೆ ಮರಳಿ ತಂದು ಆಮದು ಅವಲಂಬನೆ ಕಡಿಮೆ ಮಾಡುವುದಾಗಿದೆ ಎಂದು ಬೆಸೆಂಟ್ ಹೇಳಿದ್ದಾರೆ.
ಕಳೆದ 20-30 ವರ್ಷಗಳಿಂದ ಅಮೆರಿಕವು ಸೂಕ್ಷ್ಮ ಉತ್ಪಾದನಾ ಕ್ಷೇತ್ರದಲ್ಲಿ ಹಿಂದುಳಿದಿದೆ. ಈಗ ನಾವು ಅದನ್ನು ಹಿಂತಿರುಗಿಸಬೇಕಾಗಿದೆ. ಚಿಪ್ ನಿರ್ಮಾಣ ಮತ್ತು ಶಿಪ್ ನಿರ್ಮಾಣದಂತಹ ಕೈಗಾರಿಕೆಗಳನ್ನು ಪುನಃ ಅಮೆರಿಕದಲ್ಲಿ ಸ್ಥಾಪಿಸುವ ಗುರಿ ಇದೆ ಎಂದು ಸ್ಕಾಟ್ ಬೆಸೆಂಟ್ ತಿಳಿಸಿದ್ದಾರೆ.
ಈ ಕ್ಷಣಕ್ಕೆ ಅಮೆರಿಕನ್ನರು ಆ ಕೆಲಸವನ್ನು ಮಾಡಲಾರರು, ಇನ್ನೂ ಸಿದ್ಧರಿಲ್ಲ. ವಿದೇಶಿ ತಜ್ಞರು ಬಂದು ಕಲಿಸಿದರೆ ಅದು ಅಮೆರಿಕಕ್ಕೆ ಅನುಕೂಲ ಎಂದು ಬೆಸೆಂಟ್ ಹೇಳಿದರು.





