ಸುಡಾನ್‌ | ಅಣೆಕಟ್ಟು ಒಡೆದು ಪ್ರವಾಹ; ಕನಿಷ್ಠ 30 ಮಂದಿ ಸಾವು, ಹಲವರು ನಾಪತ್ತೆ

Date:

ಪೂರ್ವ ಸುಡಾನ್‌ನಲ್ಲಿ ಅಣೆಕಟ್ಟು ಒಡೆದು ಕನಿಷ್ಠ 30 ಮಂದಿ ಸಾವನ್ನಪ್ಪಿದ್ದಾರೆ, ಹಲವರು ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆ ಉಲ್ಲೇಖಿಸಿದೆ.

ಭಾರೀ ಮಳೆಯಿಂದಾಗಿ ಪೋರ್ಟ್ ಸುಡಾನ್‌ನ ಉತ್ತರಕ್ಕೆ 40 ಕಿಲೋಮೀಟರ್ (25 ಮೈಲುಗಳು) ಇರುವ ಅರ್ಬಾತ್ ಅಣೆಕಟ್ಟು ಕುಸಿದಿದೆ. ಈ ಪ್ರವಾಹವು 20 ಹಳ್ಳಿಗಳನ್ನು ನಾಶಮಾಡಿದೆ. ಈಗಾಗಲೇ ಅಂತರ್‌ ಯುದ್ಧದಲ್ಲಿ ಸಿಲುಕಿರುವ ಸುಡಾನ್‌ನಲ್ಲಿ ಈಗ ಪ್ರವಾಹವು ಮತ್ತಷ್ಟು ಸಂಕಷ್ಟ ತಂದಿದೆ.

“ಈ ಪ್ರದೇಶವನ್ನು ಗುರುತಿಸಲಾಗುತ್ತಿಲ್ಲ. ವಿದ್ಯುತ್ ಮತ್ತು ನೀರಿನ ಪೈಪ್‌ಗಳು ನಾಶವಾಗಿವೆ” ಎಂದು ರೆಡ್ ಸೀ ರಾಜ್ಯದ ಜಲ ಪ್ರಾಧಿಕಾರದ ಮುಖ್ಯಸ್ಥ ಒಮರ್ ಐಸಾ ಹರೌನ್ ತಿಳಿಸಿರುವುದಾಗಿ ವರದಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈವರೆಗೆ ಕನಿಷ್ಠ 30 ಮಂದಿ ಸಾವನ್ನಪ್ಪಿರುವುದು ದೃಡಪಟ್ಟಿದ್ದು, ಚಿನ್ನದ ಗಣಿಗಾರರು ಸೇರಿದಂತೆ 150ರಿಂದ 200 ಜನರು ಕಾಣೆಯಾಗಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಇದನ್ನು ಓದಿದ್ದೀರಾ? ಸುಡಾನ್‌ನಲ್ಲಿ ಸಂಘರ್ಷ: 800 ಮಂದಿ ಹತ್ಯೆ, 48 ಲಕ್ಷ ಜನರ ಸ್ಥಳಾಂತರ

ಈ ಪ್ರವಾಹವು ಸುಮಾರು 50,000 ಜನರ ಮೇಲೆ ಪರಿಣಾಮ ಬೀರಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಇನ್ನು ಅಣೆಕಟ್ಟಿನ ಪೂರ್ವದ ಪ್ರದೇಶವನ್ನು ಇನ್ನೂ ತಲುಪಲು ಸಾಧ್ಯವಾಗದ ಕಾರಣ ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಅರ್ಬಾತ್ ಅಣೆಕಟ್ಟು ಪೋರ್ಟ್ ಸುಡಾನ್‌ಗೆ ಪ್ರಮುಖ ನೀರಿನ ಮೂಲವಾಗಿತ್ತು. ಇಲ್ಲೇ ದೇಶದ ಪ್ರಮುಖ ಕೆಂಪು ಸಮುದ್ರ ಬಂದರು ಇತ್ತು ಮತ್ತು ಸಹಾಯ ವಿತರಣೆಯ ಕೇಂದ್ರವಾಗಿತ್ತು. ಅಣೆಕಟ್ಟು ನಾಶವಾಗಿ, ನಗರವು ಈಗ ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿದೆ.

ಈ ವರ್ಷ ಸುಡಾನ್ ದೇಶದಾದ್ಯಂತ ಪ್ರವಾಹದಲ್ಲಿ 132 ಜನರು ಸಾವನ್ನಪ್ಪಿದ್ದಾರೆ. 118,000 ಜನರು ಸ್ಥಳಾಂತರಗೊಂಡಿದ್ದಾರೆ ಎಂದು ಸುಡಾನ್ ಸರ್ಕಾರದ ಅಧಿಕೃತ ಡೇಟಾ ಹೇಳುತ್ತದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...