ಅಮೆರಿಕದಲ್ಲಿ ನಡೆಯುತ್ತಿರುವ ಭಯಾನಕ ಡಿಜಿಟಲ್ ಅರೆಸ್ಟ್: ಬೀದಿಯಲ್ಲಿ ತಡೆದು ಕೈಕೋಳ!

Date:

ವಲಸೆ ನಿಯಂತ್ರಣ ಹೆಸರಿನಲ್ಲಿ ತಂತ್ರಜ್ಞಾನದ ದೈತ್ಯ ಕಂಪನಿಗಳು ಹೊಸ ಮಾದರಿಯ ಅಲ್ಲೊಲ ಕಲ್ಲೊಲ ಸೃಷ್ಟಿಸುತ್ತಿದೆ. ಅಕ್ರಮ ವಲಸೆಯನ್ನು ತಡೆಗಟ್ಟಲು ಯುಎಸ್ ಇಮಿಗ್ರೇಷನ್ ಮತ್ತು ಕಸ್ಟಮ್ಸ್ ಜಾರಿ (ICE) ಅಧಿಕಾರಿಗಳು ಬಳಸುತ್ತಿರುವ ಹೊಸ ಡಿಜಿಟಲ್ ನಿಯಂತ್ರಣ ವಿಧಾನಗಳ ಬಗ್ಗೆ ಸಮಾಜವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಅಮೆರಿಕದ ನಾಗರಿಕರನ್ನು ಬೀದಿಯಲ್ಲಿ ತಡೆದು, ಅವರ ಒಪ್ಪಿಗೆಯಿಲ್ಲದೆ Mobile Fortify ಎಂಬ ಆ್ಯಪ್ ಮೂಲಕ ಮುಖ ಸ್ಕ್ಯಾನ್ ಮಾಡಿ, ಕೈಕೋಳ ಹಾಕಿ, ವಿವರಗಳು ಸ್ಪಷ್ಟವಾಗುವವರೆಗೆ ಸ್ಥಳೀಯ ಪೊಲೀಸ್ ವ್ಯಾನ್‌ಗಳಲ್ಲಿ ಇರಿಸಿದ್ಧ ಘಟನೆ ಸಂಬಂಧ ಈಗಾಗಲೇ ಇಲಿನಾಯ್ ರಾಜ್ಯ ಮತ್ತು ಚಿಕಾಗೋ ನಗರವು ಮೊಕದ್ದಮೆಗಳನ್ನು ಹೂಡಲಾಗಿದೆ.

ಇದನ್ನು ಓದಿದ್ದೀರಾ? ಡಿಜಿಟಲ್ ಅರೆಸ್ಟ್ ಪ್ರಕರಣಗಳ ಎಫ್‌ಐಆರ್‌ ಮಾಹಿತಿ ಸಿಬಿಐಗೆ ನೀಡಿ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದು ಹೇಗೆ ಕೆಲಸ ಮಾಡುತ್ತದೆ?

Mobile Fortify ಆ್ಯಪ್ ICE ಏಜೆಂಟ್‌ಗಳಿಗೆ “ಮುಂಚೂಣಿ ದತ್ತಾಂಶ ಸಂಗ್ರಹಣಾ ಸಾಧನವಾಗಿ” (front-line data collection tool) ಕಾರ್ಯನಿರ್ವಹಿಸುತ್ತದೆ. ಈ ಆ್ಯಪ್ ಸ್ಮಾರ್ಟ್‌ಫೋನ್ ಕ್ಯಾಮೆರಾವನ್ನು ಬಳಸಿ ಮುಖ ಮತ್ತು ಬೆರಳಚ್ಚುಗಳನ್ನು ಸ್ಕ್ಯಾನ್ ಮಾಡುತ್ತದೆ. ಆ ಚಿತ್ರವನ್ನು ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಇಲಾಖೆ, ಪೊಲೀಸ್ ಮತ್ತು FBIನ ಬೃಹತ್ ಡೇಟಾಬೇಸ್‌ಗಳಿಗೆ ಕಳುಹಿಸುತ್ತದೆ ಮತ್ತು ನಂತರ ವ್ಯಕ್ತಿಯ ವಿವರ ಹಾಗೂ ವಲಸೆ ಸ್ಥಿತಿಯನ್ನು ಅಧಿಕಾರಿಗೆ ವರದಿ ಮಾಡುತ್ತದೆ.

Mobile Fortify ಆ್ಯಪ್ ಕುಖ್ಯಾತ, Palantir ಕಂಪನಿಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಈ ಕಂಪನಿಯು ವಿಶೇಷವಾದ ELITE ವ್ಯವಸ್ಥೆಯನ್ನು ರೂಪಿಸಿದೆ. ಇದು ಅಮೆರಿಕನ್ನರ ವೈದ್ಯಕೀಯ ವಿಮೆ, ಮೊಬೈಲ್ ಆಪರೇಟರ್‌ಗಳು, ಕಾನೂನು ಜಾರಿ ಸಂಸ್ಥೆಗಳು, ಸಾಮಾಜಿಕ ಜಾಲತಾಣಗಳು ಮತ್ತು ಮುಕ್ತ ಇಂಟರ್‌ನೆಟ್ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸುತ್ತದೆ.

ಪ್ಯಾಲಂಟಿರ್ ಟೆಕ್ನಾಲಜೀಸ್ (Palantir Technologies) ಗಾಜಾದ ನರಮೇಧದಲ್ಲಿ ಇಸ್ರೇಲ್ ರಕ್ಷಣಾ ಸಚಿವಾಲಯಕ್ಕೆ ಸಕ್ರಿಯವಾಗಿ ವಿಸ್ತೃತ ಬೆಂಬಲ ನೀಡುತ್ತಿದೆ. ಅಧಿಕೃತವಾಗಿ 75 ಸಾವಿರಕ್ಕೂ ಹೆಚ್ಚಾಗಿ ಸತ್ತಿರುವ ಈ ನರಮೇಧದಲ್ಲಿ ಕೃತಕ ಬುದ್ಧಿಮತ್ತೆಯ (AI) ಬಳಕೆಗೆ ಸಂಬಂಧಿಸಿದಂತೆ ಈ ಪಾಲುದಾರಿಕೆಯು ತೀವ್ರ ಟೀಕೆ ಮತ್ತು ಪರಿಶೀಲನೆಗೆ ಒಳಗಾಗಿದೆ. ಕಂಪನಿಯ ಸಿಇಒ ಅಲೆಕ್ಸ್ ಕಾರ್ಪ್ (Alex Karp) ಬಹಿರಂಗವಾಗಿಯೇ ಇಸ್ರೇಲ್‌ಗೆ ಬೆಂಬಲ ಸೂಚಿಸಿದ್ದು, ಇಸ್ರೇಲ್‌ನ ಗುರಿಗಳನ್ನು ಗುರುತಿಸಲು ಮತ್ತು ವಿಶ್ಲೇಷಿಸಲು ಕಂಪನಿಯ AI ಪ್ಲಾಟ್‌ಫಾರ್ಮ್‌ಗಳನ್ನು ಬಳಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಇದನ್ನು ಓದಿದ್ದೀರಾ? 86 ವರ್ಷದ ವೃದ್ಧೆಗೆ 2 ತಿಂಗಳು ಡಿಜಿಟಲ್ ಅರೆಸ್ಟ್: 20 ಕೋಟಿ ರೂ. ವಂಚನೆ

ELITE ಸಿಸ್ಟಮ್ ಈ ಎಲ್ಲಾ ಮಾಹಿತಿಯನ್ನು ವಿಶ್ಲೇಷಿಸಿ, ಅಕ್ರಮ ವಲಸಿಗರು ಎಲ್ಲಿದ್ದಾರೆ ಎಂಬುದನ್ನು ಪತ್ತೆಹಚ್ಚಿ, ಬಂಧನ ಪ್ರಕ್ರಿಯೆ ನಡೆಸಲು ಸೂಕ್ತವಾದ ಸ್ಥಳಗಳನ್ನು ಸೂಚಿಸುತ್ತದೆ. ಆದರೆ ಇದು ಇನ್ನೂ ಪರಿಪೂರ್ಣವಾಗಿ ಕೆಲಸ ಮಾಡುತ್ತಿಲ್ಲ. ವಿಶೇಷವಾಗಿ ಕಪ್ಪು ವರ್ಣೀಯರ ಮುಖಗಳನ್ನು ಗುರುತಿಸುವಲ್ಲಿ ಈ ಪ್ರೋಗ್ರಾಂ ವಿಫಲವಾಗುತ್ತಿದೆ. ಉದಾಹರಣೆಗೆ, ನ್ಯೂಯಾರ್ಕ್‌ನ ಮೋರಿಸ್ ವಿಲಿಯಮ್ಸ್ ಎಂಬುವವರು ಲೈಂಗಿಕ ಅಪರಾಧದ ಶಂಕೆಯ ಮೇಲೆ ಎರಡು ದಿನಗಳ ಕಾಲ ಜೈಲಿನಲ್ಲಿ ಕಳೆಯಬೇಕಾಯಿತು; ನಂತರ ಅಧಿಕಾರಿಗಳು ವ್ಯವಸ್ಥೆ ತಪ್ಪನ್ನು ಒಪ್ಪಿಕೊಂಡ್ಡಿದ್ದಾರೆ.

ಜನರ ಪ್ರತಿರೋಧ

ಜನರು ಇದರ ವಿರುದ್ಧ ದೂರುತ್ತಿದ್ದಾರೆ ಮತ್ತು ವಕೀಲರು ಅಮೆರಿಕದ ಸಂವಿಧಾನದ 4ನೇ ತಿದ್ದುಪಡಿಯ ಉಲ್ಲಂಘನೆಯನ್ನು (ವಾರೆಂಟ್ ಇಲ್ಲದೆ ಶೋಧ ಮತ್ತು ವೈಯಕ್ತಿಕ ದತ್ತಾಂಶದ ಬಳಕೆ) ಉಲ್ಲೇಖಿಸುತ್ತಿದ್ದಾರೆ. ಆದರೆ ಇದನ್ನು ನಿಲ್ಲಿಸುವ ಉದ್ದೇಶ ಯಾರಿಗೂ ಇದ್ದಂತಿಲ್ಲ. Palantir ಕಂಪನಿಯು ಒಂದಾದ ಮೇಲೊಂದು ಗುತ್ತಿಗೆಗಳನ್ನು ಪಡೆಯುತ್ತಿದೆ — 2025ರಲ್ಲೇ ಅಕ್ರಮ ವಲಸೆಯ ವಿರುದ್ಧ ಹೋರಾಡುವ ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸಲು ಅವರಿಗೆ 30 ಮಿಲಿಯನ್ ಡಾಲರ್ ಹಣ ಸಂದಾಯವಾಗಿದೆ.

ಸರ್ಕಾರವು ತಂತ್ರಜ್ಞಾನದ ದೈತ್ಯ ಕಂಪನಿಗಳೊಂದಿಗೆ ವಿಲೀನಗೊಳ್ಳುತ್ತಿರುವುದಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ ಮತ್ತು ಭವಿಷ್ಯದಲ್ಲಿ ನೈಜ ಅಧಿಕಾರವು ಈ ಕಂಪನಿಗಳ ಕೈಗೆ ಹಸ್ತಾಂತರವಾಗುವ ಸಾಧ್ಯತೆಯಿದೆ. ಇದಕ್ಕೆ ಟ್ರಂಪ್ ಅವರೇ ಕಾರಣ ಎಂದು ತಪ್ಪಾಗಿ ಭಾವಿಸಬಾರದು ಈ ಪ್ರಕ್ರಿಯೆಯು 2014ರಲ್ಲೇ ಪ್ರಾರಂಭವಾಗಿತ್ತು. ಟ್ರಂಪ್‌ ಅದನ್ನು ಇನ್ನು ಉಗ್ರವಾಗಿ ಅನುಷ್ಠಾನಗೊಳಿಸುತ್ತಿದ್ದಾರೆ. ಅಮೆರಿಕದಲ್ಲಿ ಇರುವ ಭಾರತಿಯ ಅಕ್ರಮ ವಲಸಿಗರ ಸಂಕ್ಯೆ ಸುಮಾರು 7 ಲಕ್ಷ ಎಂದು ಅಂದಾಜಿಸಲಾಗುತ್ತಿದೆ. 2025ರಲ್ಲಿ 3,258 ಭಾರತಿಯರನ್ನು ಗಡಿಪಾರು ಮಾಡಲಾಗಿದೆ. ಅದು ಈ ವರ್ಷ ಇನ್ನಷ್ಟು ಹೆಚ್ಚಾಗಲಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...