ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮೇಲೆ ಮತ್ತೆ ಗುಂಡಿನ ದಾಳಿ

Date:

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ನಡೆದು ಎರಡು ತಿಂಗಳ ನಂತರ ಮತ್ತೆ ಅವರ ಹತ್ಯೆಗೆ ಯತ್ನ ನಡೆದಿದೆ. ಡೊನಾಲ್ಡ್​ ಟ್ರಂಪ್ ಭಾನುವಾರ ಫ್ಲೋರಿಡಾದಲ್ಲಿ ಗಾಲ್ಫ್ ಆಡುತ್ತಿದ್ದಾಗ ಗುಂಡಿನ ದಾಳಿ ಮಾಡಲಾಗಿದೆ.

“ನನ್ನ ಸಮೀಪದಲ್ಲಿ ಗುಂಡಿನ ದಾಳಿಗಳು ನಡೆದಿವೆ. ಆದರೆ ವದಂತಿಗಳು ಹರಡುವ ಮುನ್ನ ನಾನು ಸುರಕ್ಷಿತವಾಗಿದ್ದೇನೆ ಮತ್ತು ಚೆನ್ನಾಗಿದ್ದೇನೆ ಎಂಬುದನ್ನು ನೀವು ತಿಳಿಯಬೇಕೆಂದು ನಾನು ಬಯಸುತ್ತೇವೆ” ಎಂದು ನಿಧಿಸಂಗ್ರಹಣೆಯ ಇಮೇಲ್‌ನಲ್ಲಿ ಟ್ರಂಪ್ ಬರೆದುಕೊಂಡಿರುವುದಾಗಿ ವರದಿಯಾಗಿದೆ.

ಜುಲೈ 13ರಂದು ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಟ್ರಂಪ್ ಬಲ ಕಿವಿಗೆ ಗುಂಡು ತಾಗಿತ್ತು. ಆದರೆ ಪ್ರಾಣಾಪಾಯದಿಂದ ಪಾರಾಗಿದ್ದರು. ಭಾನುವಾರ ಮತ್ತೆ ಎರಡನೇ ಬಾರಿಗೆ ಗುಂಡಿನ ದಾಳಿ ನಡೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ಚುನಾವಣಾ ಪ್ರಚಾರದ ವೇಳೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಕಿವಿಗೆ ಗಾಯ

ಡೊನಾಲ್ಡ್ ಟ್ರಂಪ್ ಹತ್ಯೆಗೆ ಎರಡನೇ ಬಾರಿಗೆ ಪ್ರಯತ್ನ ನಡೆದಿದೆ ಎಂಬುದನ್ನು ಅಮೆರಿಕದ ಫೆಡರಲ್ ಬ್ಯುರೋ ಇನ್ವೆಸ್ಟಿಗೇಷನ್‌ (ಎಫ್‌ಬಿಐ) ದೃಢಪಡಿಸಿದೆ. “ಹತ್ಯೆ ಯತ್ನದಂತೆ ತೋರುತ್ತಿದೆ” ಎಂದು ಎಫ್‌ಬಿಐ ಹೇಳಿದೆ.

“ಯುಎಸ್ ಸೀಕ್ರೆಟ್ ಸರ್ವೀಸ್ ಏಜೆಂಟರು ಟ್ರಂಪ್ ಮೇಲೆ ಗುಂಡಿನ ದಾಳಿಯಾಗುತ್ತಿದ್ದಂತೆ ಬಂದೂಕುಧಾರಿಯತ್ತ ಗುಂಡು ಹಾರಿಸಿದ್ದಾರೆ. ಕೆಲವೇ ಸೆಕೆಂಡುಗಳಲ್ಲಿ, ಶಂಕಿತ ಶೂಟರ್ ತನ್ನ ಎಕೆ-47 ರೈಫಲ್, ಒಂದು ಕ್ಯಾಮೆರಾ ಮತ್ತು ಎರಡು ಬ್ಯಾಗ್ ಪ್ಯಾಕ್‌ಗಳನ್ನು ಸ್ಥಳದಲ್ಲಿಯೇ ಬಿಟ್ಟು ಕಪ್ಪು ಎಸ್‌ಯುವಿಯಲ್ಲಿ ಪರಾರಿಯಾಗಿದ್ದಾನೆ” ಎಂದು ಪಾಮ್ ಬೀಚ್ ಕೌಂಟಿ ಶೆರಿಫ್ ರಿಕ್ ಬ್ರಾಡ್‌ಶಾ ಎಪಿಗೆ ತಿಳಿಸಿದ್ದಾರೆ.

ಎರಡನೇ ಬಾರಿಗೆ ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನ ನಡೆದಿರುವುದನ್ನು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಅಧ್ಯಕ್ಷ ಜೋ ಬೈಡೆನ್ ಖಂಡಿಸಿದ್ದಾರೆ. ಅಮೆರಿಕದಲ್ಲಿ ಹಿಂಸಾಚಾರಕ್ಕೆ ಯಾವುದೇ ಸ್ಥಳವಿಲ್ಲ ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...