ಇರಾಕ್‌ನ ಎರ್ಬಿಲ್‌ನಲ್ಲಿ ಅಮೆರಿಕ ಸೈನಿಕರು ತಂಗಿದ್ದ ಹೋಟೆಲ್ ಮೇಲೆ ಡ್ರೋನ್ ದಾಳಿ ನಡೆದಿದೆ. ದಾಳಿಯನ್ನು ತಾವೇ ನಡೆಸಿರುವುದಾಗಿ ‘ಇಸ್ಲಾಮಿಕ್ ರೆಸಿಸ್ಟೆನ್ಸ್ ಇನ್ ಇರಾಕ್’ ಎಂಬ ಶಸ್ತ್ರಸಜ್ಜಿತ ಗುಂಪು ಹೇಳಿಕೊಂಡಿದೆ.
ದಾಳಿ ಕುರಿತು ಶಸ್ತ್ರಸಜ್ಜಿತ ಗುಂಪು ಹೇಳಿಕೆ ಬಿಡುಗಡೆ ಮಾಡಿದೆ. ”ಆಕ್ರಮಣ ನೆಲೆಗಳ ವಿರುದ್ಧ ಡ್ರೋನ್‌ಗಳನ್ನು ಹಾರಿಸಲಾಗಿದೆ. ಅಮೆರಿಕ ಪಡೆಗಳು ತಂಗಿದ್ದ ಸ್ಥಳವೇ ನಮ್ಮ ಗುರಿಯಾಗಿತ್ತು” ಎಂದು ಹೇಳಿದೆ.
ಘಟನೆಯ ದೃಶ್ಯಗಳನ್ನು ಇರಾಕ್‌ನ ನಯಾ ಸುದ್ದಿ ಸಂಸ್ಥೆ ಪ್ರಕಟಿಸಿದೆ. ಅದರಲ್ಲಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಗೋಚರಿಸಿದೆ. ದಾಳಿಯಿಂದ ಹೋಟೆಲ್‌ಗೆ ಹಾನಿಯಾಗಿರುವ ಸಾಧ್ಯತೆ ಇದೆ. ಹಾನಿಯ ಪ್ರಮಾಣ ಮತ್ತು ಗಾಯಾಳುಗಳ ಬಗ್ಗೆ ಮಾಹಿತಿ ದೊರೆತಿಲ್ಲ.
ದಾಳಿಯ ಹಿನ್ನೆಲೆ ಭದ್ರತಾ ಪರಿಸ್ಥಿತಿ ತೀವ್ರಗೊಂಡಿದೆ. ಎರ್ಬಿಲ್‌ನಲ್ಲಿ ಹೆಚ್ಚುವರಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇನ್ನು, ಇದೇ ಸಮಯದಲ್ಲಿ, ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲಿನ ದಾಳಿ ನಡೆದಿದೆ. ಈ ದಾಳಿಯನ್ನು ಇರಾನ್ ನಡೆಸಿದೆ ಎಂದು ವರದಿಯಾಗಿದೆ. ದಾಳಿ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ಶೀಘ್ರವೇ ಅಮೆರಿಕದ ಪ್ರತಿಕ್ರಿಯೆ ಬರಲಿದೆ ಎಂದು ಹೇಳಿದ್ದಾರೆ.




