ಮಾದಕ ವಸ್ತು ಕಳ್ಳಸಾಗಣೆ; ಭಾರತ ಮೂಲದ ಕೆನಡಾ ಪ್ರಜೆ ಅಮೆರಿಕದಲ್ಲಿ ಬಂಧನ

Date:

ಐಎಸ್ಐ-ಚೀನಾ-ಕೆನಡಾ ಸಂಪರ್ಕ ಹೊಂದಿರುವ ಅಂತಾರಾಷ್ಟ್ರೀಯ ಮಾದಕ ವಸ್ತು ಜಾಲವನ್ನು ಭೇದಿಸಿರುವ ಅಮೆರಿಕದ ಡ್ರಗ್ ಎನ್‌ಫೋರ್ಸ್‌ಮೆಂಟ್ ಏಜೆನ್ಸಿ (ಎಫ್‌ಡಿಎ) ಭಾರತ ಮೂಲದ ಕೆನಡಿಯನ್ ಗ್ಯಾಂಗ್‌ಸ್ಟಾರ್‌ ಒಪಿಂದರ್ ಸಿಂಗ್ ಸಿಯಾನ್ ಅಕಾ ಥಾನೋಸ್ ಎಂಬಾತನನ್ನು ಬಂಧಿಸಿದೆ. ಈತನ ನೇತೃತ್ವದ ತಂಡ ಬ್ರಿಟಿಷ್ ಕೊಲಂಬಿಯಾದಿಂದ ಜಾಗತಿಕ ಮಟ್ಟದಲ್ಲಿ ಫೆಂಟನಿಲ್ ಮತ್ತು ಮೆಟಾಫೆಟಮಿನ್ ಕಳ್ಳಸಾಗಾಣಿಕೆ ಮಾಡುತ್ತಿತ್ತು ಎಂದು ತಿಳಿದು ಬಂದಿದೆ.

ಸಿಯಾನ್‌ನನ್ನು ಅರಿಜೋನಾದಲ್ಲಿ ಜೂನ್ 27ರಂದು ಬಂಧಿಸಲಾಗಿದ್ದು, ಆಸ್ಟ್ರೇಲಿಯಾಗೆ ಮೆಟಾಫೆಟಮಿನ್ ಕಳ್ಳಸಾಗಾಣಿಕೆ ಮಾಡುತ್ತಿದ್ದ ಹಾಗೂ ಕೆನಡಾ ಮೂಲಕ ಅಮೆರಿಕನ್ನು ಫೆಂಟನಿಲ್ ಗೆ ಅಗತ್ಯ ರಾಸಾಯನಿಕಗಳನ್ನು ಪೂರೈಸುತ್ತಿದ್ದ ಜಾಲದಲ್ಲಿ ಶಾಮೀಲಾದ ಆರೋಪದಲ್ಲಿ ಬಂಧಿಸಲಾಗಿದೆ.

ಈ ಜಾಲದ ಬಗ್ಗೆ 2022ರಲ್ಲೇ ತನಿಖೆ ಆರಂಭವಾಗಿದ್ದು, ಚೀನಾದ ಕಮ್ಯುನಿಸ್ಟ್ ಪಾರ್ಟಿಗೆ ಸಂಬಂಧಿಸಿದ ಮತ್ತು ಮೆಕ್ಸಿಕೋದ ಸಿನಾಲೊ ಕಾರ್ಟೆಲ್‌ಗೆ ಸಂಬಂಧಿಸಿದ ರಾಸಾಯನಿಕ ಪೂರೈಕೆದಾರರ ಜತೆಗಿನ ಸಂಪರ್ಕದೊಂದಿಗೆ ಕಾರ್ಯಾಚರಣೆ ಮಾಡುತ್ತಿದ್ದ ಎಂಬ ಅಂಶವನ್ನು ಅಮೆರಿಕದ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ದೇವನಹಳ್ಳಿ ಐತಿಹಾಸಿಕ ಗೆಲುವಿಗೆ ರೈತರು, ಪ್ರಗತಿಪರ ಸಂಘಟನೆಗಳು ಹಾಗೂ ಸಿದ್ದರಾಮಯ್ಯ ಕಾರಣ

ಟರ್ಕಿಯ ಗುಪ್ತಚರ ವಿಭಾಗ ನೀಡಿದ ಸುಳಿವಿನ ಮೇರೆಗೆ ಪ್ರಾಥಮಿಕ ತನಿಖೆ ನಡೆಸಿದ ಬಳಿಕ ಸಿಯಾನ್‌ನನ್ನು ಬಲೆಗೆ ಬೀಳಿಸಲು ಮತ್ತು ಡಿಇಎ ವ್ಯಾಪಕ ಜಾಲ ಬೀಸಿತ್ತು. ಪ್ರಮುಖ ಆರೋಪಿಯಾಗಿರುವ ಸಿಂಗ್ ಐಎಸ್ಐ ಬೆಂಲಿತ ಬ್ರದರ್ಸ್ ಕೀಪರ್ಸ್ ಗ್ಯಾಂಗ್‌ನ ಹಿರಿಯ ಸದಸ್ಯನಾಗಿದ್ದು, ಭಾರತದ ಪಂಜಾಬ್ ಮೂಲದ, ಕೆನಡಾದಲ್ಲಿ ವಾಸವಿರುವ ತಳಹಂತದ ಕಾರ್ಯಕರ್ತರ ಜಾಲವನ್ನು ಹೊಂದಿದ್ದ ಎನ್ನಲಾಗಿದೆ.

ಈ ಗ್ಯಾಂಗ್ ಖಲಿಸ್ತಾನಕ್ಕೆ ಹಲವು ಸಂದರ್ಭಗಳಲ್ಲಿ ಬೆಂಬಲ ಒದಗಿಸಿತ್ತು ಹಾಗೂ ಏರ್‌ಇಂಡಿಯಾ ಬಾಂಬ್ ದಾಳಿ ಪ್ರಕರಣದ ಸೂತ್ರಧಾನ ತಲ್ವಿಂದರ್ ಸಿಂಗ್ ಪರ್ಮರ್ ಮತ್ತು ಇತರರಿಗೆ ಬೆಂಬಲ ನೀಡಿತ್ತು ಎಂದು ಮೂಲಗಳು ಹೇಳಿವೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...