Epstein files | ಬಿಡುಗಡೆಯಾದ ಹೊಸ ದಾಖಲೆಯಲ್ಲಿ ಡೊನಾಲ್ಡ್ ಟ್ರಂಪ್ ಹೆಸರು

Date:

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಕೋಟ್ಯಧಿಪತಿ ಮತ್ತು ಲೈಂಗಿಕ ಅಪರಾಧಿಯ ಸುತ್ತ ಹೆಣೆದುಕೊಂಡಿರುವ ‘Epstein files’ನ ಹೊಸ ದಾಖಲೆ ಬಿಡುಗಡೆಯಾಗಿದ್ದು, ಜೆಫ್ರಿ ಎಪ್‌ಸ್ಟೀನ್ ಅವರ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸಿದ ಪ್ರಯಾಣಿಕರ ಪಟ್ಟಿಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರೂ ಕಾಣಿಸಿಕೊಂಡಿದೆ.

2020ರ ಜನವರಿ 7ರ ಆಂತರಿಕ ಇಮೇಲ್‌ನಲ್ಲಿ ಮಾಹಿತಿ ಕಾಣಿಸಿಕೊಂಡಿದೆ. “ಡೊನಾಲ್ಡ್ ಟ್ರಂಪ್ ಎಪ್‌ಸ್ಟೀನ್ ಅವರ ಖಾಸಗಿ ಜೆಟ್‌ನಲ್ಲಿ ಹಿಂದೆ ವರದಿಯಾಗಿದ್ದಕ್ಕಿಂತ ಹಲವು ಬಾರಿ ಪ್ರಯಾಣಿಸಿದ್ದಾರೆ” ಎಂದು ಹೇಳಿದೆ. ಬಿಬಿಸಿ ವರದಿ ಮಾಡಿದಂತೆ ಈ ಇಮೇಲ್‌ನ ಸಬ್‌ಜೆಕ್ಟ್ ಲೈನ್ ‘RE: Epstein flight records’ ಎಂದಾಗಿತ್ತು.

ಇದನ್ನು ಓದಿದ್ದೀರಾ? Epstein files | ಕಡತಗಳು ಬಿಚ್ಚಿಡುವ ಕರಾಳ ಸತ್ಯವೇನು? ಇದೆಯೇ ಇಸ್ರೇಲ್ ನಂಟು?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಮೇಲ್ ಪ್ರಕಾರ ಟ್ರಂಪ್ ಹೆಸರು 1993 ಮತ್ತು 1996ರ ನಡುವೆ ಕನಿಷ್ಠ ಎಂಟು ವಿಮಾನಗಳಲ್ಲಿ ಪ್ರಯಾಣಿಸಿದ ಪ್ರಯಾಣಿಕರಾಗಿ ಪಟ್ಟಿಮಾಡಲಾಗಿದೆ. ಇದರಲ್ಲಿ ಮ್ಯಾಕ್ಸ್‌ವೆಲ್ ಸಹ ಇದ್ದ ಕನಿಷ್ಠ ನಾಲ್ಕು ವಿಮಾನಗಳು ಸೇರಿವೆ. ಟ್ರಂಪ್ ಅವರು ಇತರರೊಂದಿಗೆ ಮತ್ತು ವಿವಿಧ ಸಮಯಗಳಲ್ಲಿ, ಮಾರ್ಲಾ ಮೇಪಲ್ಸ್, ಅವರ ಮಗಳು ಟಿಫಾನಿ ಮತ್ತು ಅವರ ಮಗ ಎರಿಕ್ ಅವರೊಂದಿಗೆ ಪ್ರಯಾಣಿಸಿದ್ದಾರೆ ಎಂದು ಅದು ಹೇಳಿದೆ.

“1993ರಲ್ಲಿ ಒಂದು ವಿಮಾನದಲ್ಲಿ, ಅವರು ಮತ್ತು ಎಪ್‌ಸ್ಟೀನ್ ಮಾತ್ರ ಇದ್ದರು. ಇನ್ನೊಂದರಲ್ಲಿ, ಕೇವಲ ಮೂವರು ಪ್ರಯಾಣಿಕರು- ಎಪ್‌ಸ್ಟೀನ್, ಟ್ರಂಪ್ ಮತ್ತು ಆಗ 20 ವರ್ಷ ವಯಸ್ಸಿನವರಾಗಿದ್ದ ಒಬ್ಬರು ವ್ಯಕ್ತಿ” ಎಂದು ಇಮೇಲ್ ನಿರ್ದಿಷ್ಟ ವಿಮಾನಗಳ ಬಗ್ಗೆ ವಿವರಣೆ ಹೊಂದಿದೆ.

ಏನಿದು ಎಪ್‌ಸ್ಟೀನ್ ಫೈಲ್ಸ್?

ಎಪ್‌ಸ್ಟೀನ್ ಫೈಲ್ಸ್ (Epstein Files) ಎಂಬುದು ಅಮೆರಿಕಾದ ಮಲ್ಟಿ-ಮಿಲಿಯನೇರ್ ಮತ್ತು ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ನನ್ನು ಒಳಗೊಂಡ ಸಾವಿರಾರು ಪುಟಗಳ ನ್ಯಾಯಾಲಯದ ದಾಖಲೆಗಳಾಗಿವೆ. ಈ ದಾಖಲೆಗಳು ಮುಖ್ಯವಾಗಿ 2015ರಲ್ಲಿ ಸಂತ್ರಸ್ತೆ ವರ್ಜೀನಿಯಾ ಜಿಯುಫ್ರೆ ಎಂಬುವವರು ಎಪ್‌ಸ್ಟೀನ್‌ನ ಗೆಳತಿ ಘಿಸ್ಲೇನ್ ಮ್ಯಾಕ್ಸ್‌ವೆಲ್ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯ ಭಾಗವಾಗಿವೆ.

ಈ ಕಡತಗಳಲ್ಲಿ ವಿಶ್ವದ ಅತ್ಯಂತ ಪ್ರಭಾವಶಾಲಿ ರಾಜಕಾರಣಿಗಳು, ಉದ್ಯಮಿಗಳು ಮತ್ತು ರಾಜಮನೆತನದ ವ್ಯಕ್ತಿಗಳ ಹೆಸರುಗಳು ಪ್ರಸ್ತಾಪವಾಗಿವೆ. ಇವರಲ್ಲಿ ಅಮೆರಿಕಾದ ಮಾಜಿ ಅಧ್ಯಕ್ಷರಾದ ಬಿಲ್ ಕ್ಲಿಂಟನ್ ಮತ್ತು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಾಗೆಯೇ ಬ್ರಿಟನ್‌ನ ಪ್ರಿನ್ಸ್ ಆಂಡ್ರ್ಯೂ ಅವರ ಹೆಸರುಗಳು ಪ್ರಮುಖವಾಗಿವೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...