ನಮ್ಮ ಮೆಟ್ರೋದಲ್ಲಿ ಟಿಕೆಟ್ ಖರೀದಿಸದೆ ಪ್ರಯಾಣಿಸಿದ್ದ ಯೂಟ್ಯೂಬರ್ ಈಗ ಯುರೋಪ್ ಸಂಸದ!

Date:

ಕಳೆದ ವರ್ಷ ನಮ್ಮ ಮೆಟ್ರೋದಲ್ಲಿ ಟಿಕೆಟ್ ತೆಗೆಯದೆ ಉಚಿತವಾಗಿ ಪ್ರಯಾಣಿಸಿ ಸುದ್ದಿಯಾಗಿದ್ದ 24 ವರ್ಷದ ಯೂಟ್ಯೂಬರ್ ಫಿಡಿಯಾಸ್ ಪನಯೋಟೌ ಈಗ ರಾಜಕೀಯ ಜೀವನಕ್ಕೆ ಎಂಟ್ರಿ ನೀಡಿದ್ದಾರೆ. ತನ್ನ ಕುಚೇಷ್ಟೆಯ ವಿಡಿಯೋಗಳ ಮೂಲಕವೇ ಸದ್ದು ಮಾಡಿದ್ದ ಯೂಟ್ಯೂಬರ್ ಈಗ ಯುರೋಪಿಯನ್ ಸಂಸತ್ತಿನ ಸದಸ್ಯರಾಗಿದ್ದಾರೆ.

ಈ ಹಿಂದೆ ಯಾವುದೇ ರಾಜಕೀಯ ಅನುಭವವನ್ನು ಅಥವಾ ಯಾವುದೇ ಪಕ್ಷದೊಂದಿಗೆ ಸಂಬಂಧವನ್ನು ಹೊಂದಿರದ ಫಿಡಿಯಾಸ್ ಪನಯೋಟೌ ಇತ್ತೀಚಿನ ಸೈಪ್ರಿಯೋಟ್‌ ಚುನಾವಣೆಯಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಇನ್ನು ಈ ಹಿಂದೆ ಎಂದಿಗೂ ತಾನು ಕೂಡಾ ಮತ ಚಲಾಯಿಸಿಲ್ಲ ಎಂದು ಫಿಡಿಯಾಸ್ ಹೇಳಿಕೊಂಡಿದ್ದಾರೆ.

ಸುಮಾರು ಐದನೇ ಒಂದು ಭಾಗದಷ್ಟು ಮತಗಳನ್ನು ಪಡೆದುಕೊಂಡ ಯೂಟ್ಯೂಬರ್ ಫಿಡಿಯಾಸ್ ಡಿಐಎಸ್‌ವೈ ಪಕ್ಷ ಮತ್ತು ಎಡ ಪಕ್ಷ ಎಕೆಇಎಲ್‌ಗಿಂತ ಮೂರನೇ ಸ್ಥಾನದಲ್ಲಿದ್ದಾರೆ. ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳ ಮೂಲಕ ಜನಪ್ರಿಯತೆ ಪಡೆದಿರುವ ಫಿಡಿಯಾಸ್ ಈಗ ರಾಜಕೀಯವಾಗಿಯೂ ತೊಡಗಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಯೂಟ್ಯೂಬರ್ ಫಿಡಿಯಾಸ್ ಯಾರು?  

24 ವರ್ಷದ ಯೂಟ್ಯೂಬರ್ ಫಿಡಿಯಾಸ್ ತನ್ನನ್ನು ತಾನು ‘ವೃತ್ತಿಪರ ತಪ್ಪು ಮಾಡುವವ’ (professional mistake maker) ಎಂದು ಕರೆದುಕೊಂಡಿದ್ದು, ಯೂಟ್ಯೂಬ್‌ನಲ್ಲಿ 2.6 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಮತ್ತು ಟಿಕ್‌ಟಾಕ್‌ನಲ್ಲಿ ಅದಕ್ಕಿಂತಲೂ ಅಧಿಕ ಚಂದಾದಾರರನ್ನು ಹೊಂದಿದ್ದಾರೆ.

ಇದನ್ನು ಓದಿದ್ದೀರಾ?  ವಿಡಿಯೋಗಾಗಿ ಟಿಕೆಟ್ ಇಲ್ಲದೆ ಮೆಟ್ರೋದಲ್ಲಿ ಪ್ರಯಾಣಿಸಿದ ಖ್ಯಾತ ಯೂಟ್ಯೂಬರ್; ಕ್ರಮಕ್ಕೆ ಮುಂದಾದ ಮೆಟ್ರೋ

ಎಲಾನ್ ಮಸ್ಕ್ ಸೇರಿದಂತೆ ಹಲವಾರು ಸೆಲೆಬ್ರೆಟಿಗಳನ್ನು ತಬ್ಬಿಕೊಳ್ಳುವ ಯತ್ನ ಮಾಡುವುದು ಮತ್ತು ಶವಪೆಟ್ಟಿಗೆಯಲ್ಲಿ ಒಂದು ವಾರ ಕಳೆಯುವಂತಹ ವಿಡಿಯೋಗಳು ವೈರಲ್ ಆಗಿದೆ. ನಮ್ಮ ಮೆಟ್ರೋದಲ್ಲಿ ಟಿಕೆಟ್ ಖರೀದಿಸದೆಯೇ ಪ್ರಯಾಣ ಮಾಡಿ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದರು.

ಕಳೆದ ವರ್ಷ ನಮ್ಮ ಮೆಟ್ರೋದಲ್ಲಿ ಉಚಿತವಾಗಿ ಪ್ರಯಾಣಿಸುತ್ತಿರುವ ತನ್ನ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. “ಭಾರತದಲ್ಲಿ ಮೆಟ್ರೋದಲ್ಲಿ ಹೇಗೆ ಉಚಿತವಾಗಿ ಪ್ರಯಾಣಿಸುವುದು ಎಂದು ನಾನು ನಿಮಗೆ ಕಲಿಸುತ್ತೇನೆ” ಎಂದು ಯೂಟ್ಯೂಬರ್ ಈ ವಿಡಿಯೋದಲ್ಲಿ ಆರಂಭದಲ್ಲಿ ಹೇಳಿದ್ದಾರೆ. ಹಾಗೆಯೇ ಆರಂಭದಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಲು ಸಾಧ್ಯವೇ ಎಂದು ಒಂದೆರಡು ಪ್ರಯಾಣಿಕರಲ್ಲಿ ಕೇಳಿದ್ದರು.

2023ರಲ್ಲಿ, ರೈಲು ಟಿಕೆಟ್ ಮತ್ತು ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಉಪಹಾರ ಸೇವಿಸಿ ಬಿಲ್ ನೀಡದಿರುವುದರ ವಿಡಿಯೋ ಮಾಡಿ ಜಪಾನ್‌ನಲ್ಲಿ ಆಕ್ರೋಶಕ್ಕೆ ಗುರಿಯಾಗಿದ್ದರು, ಬಳಿಕ ಕ್ಷಮೆಯಾಚಿಸಿದ್ದರು. ಜಪಾನ್‌ ಬುಲೆಟ್ ರೈಲಿನಲ್ಲಿ ಶೌಚಾಲಯಗಳಲ್ಲಿ ಅಡಗಿಕೊಂಡು ಮತ್ತು ಅನಾರೋಗ್ಯದ ನೆಪ ಹೇಳಿ ಟಿಕೆಟ್ ಇಲ್ಲದೆಯೇ ಪ್ರಯಾಣಿಸಿದ್ದರು.

 

View this post on Instagram

 

A post shared by Fidias Panayiotou (@fidias0)

ಏಪ್ರಿಲ್‌ನಲ್ಲಿ ಫಿಡಿಯಾಸ್ ನಾಮಪತ್ರವನ್ನು ಸಲ್ಲಿಸುವಾಗ “ನನ್ನ ಗುರಿ ಗೆಲುವು ಸಾಧಿಸುವುದಲ್ಲ. ಬದಲಾಗಿ ರಾಜಕೀಯದಲ್ಲಿ ತೊಡಗಿಕೊಳ್ಳಲು ಯುವಜನರನ್ನು ಪ್ರೇರೇಪಿಸುವುದು” ಎಂದು ಹೇಳಿಕೊಂಡಿದ್ದರು. ಈಗ ಈ ಹಿಂದೆ ಎಂದಿಗೂ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗದ ಫಿಡಿಯಾಸ್ ಸಂಸದರಾಗಿದ್ದಾರೆ.

ಸೈಪ್ರಸ್‌ನಲ್ಲಿ ಕೇವಲ ಶೇಕಡ 59ಕ್ಕಿಂತ ಕಡಿಮೆ ಮತದಾನ ನಡೆದಿದೆ. ಆದರೆ 2019ರ ಚುನಾವಣೆಯಲ್ಲಿ ಚಲಾಯಿಸಲಾದ ಶೇಕಡ 45ಕ್ಕಿಂತ ಅಧಿಕ ಮತದಾನವಿದೆ. ಮತದಾನ ಪ್ರಮಾಣ ಹೆಚ್ಚಳಕ್ಕೆ ಫಿಡಿಯಾಸ್‌ ಚುನಾವಣೆ ಕಣದಲ್ಲಿರುವುದು ಕೂಡಾ ಒಂದು ಕಾರಣ ಎಂದು ವಿಶ್ಲೇಷಕರು ಹೇಳಿದ್ದಾರೆ. ಫಿಡಿಯಾಸ್‌ ಹೆಚ್ಚಾಗಿ ಯುವಕರ ಮತವನ್ನು ಪಡೆದಿದ್ದಾರೆ ಎಂದು ವರದಿಯೊಂದು ಉಲ್ಲೇಖಿಸಿದೆ.

?s=150&d=mp&r=g
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...