ಸತತ ಮೂರು ರಾತ್ರಿಗಳ ಕಾಲ ನಡೆದ ಭಾರೀ ದಂಗೆಯ ಬಳಿಕ ಗುರುವಾರ ಫ್ರಾನ್ಸ್ ನ್ಯೂ ಕ್ಯಾಲೆಡೋನಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, ಟಿಕ್‌ಟಾಕ್ ಬ್ಯಾನ್ ಮಾಡಿದೆ. ಜೊತೆಗೆ 200 ಮಂದಿ ಬಂಧನ ಮಾಡಿದೆ.
ನ್ಯೂ ಕ್ಯಾಲೆಡೋನಿಯಾದಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದು ನೂರಾರು ಮಂದಿ ಗಾಯಗೊಂಡಿದ್ದಾರೆ. ಪ್ರಸ್ತುತ ಫ್ರಾನ್ಸ್ ತನ್ನ ಯೋಧರನ್ನು ನ್ಯೂ ಕ್ಯಾಲೆಡೋನಿಯಾದ ಬಂದರುಗಳು ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳುಹಿಸಿದೆ.
Violent riots broke out in New Caledonia after France adopted a bill aimed at allowing non-indigenous citizens to vote in local elections. By now the French authorities have imposed a curfew, closed the airport, and banned all public gatherings there pic.twitter.com/7QjArVYElm
— RT (@RT_com) May 16, 2024
ಪೆಸಿಫಿಕ್ ದ್ವೀಪಸಮೂಹದಲ್ಲಿ ಹೊಸ ಮತದಾನದ ನಿಯಮಗಳನ್ನು ಪರಿಚಯಿಸುವ ಫ್ರಾನ್ಸ್ ಪ್ರಸ್ತಾಪದ ವಿರುದ್ಧ ಸ್ಥಳೀಯ ಜನರ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಈ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು ಗುಂಡೇಟಿನಿಂದ ಪೊಲೀಸ್ ಅಧಿಕಾರಿ ಮತ್ತು ಹಲವಾರು ಮಂದಿ ಸಾವನ್ನಪ್ಪಿದರು.
ಇದನ್ನು ಓದಿದ್ದೀರಾ? ಅಘೋಷಿತ ತುರ್ತು ಪರಿಸ್ಥಿತಿ | ಅಂಬೇಡ್ಕರ್ ರಚಿತ ಸಂವಿಧಾನ ನಾಶಕ್ಕೆ ಬಿಜೆಪಿ ಪಿತೂರಿ: ಶರದ್ ಪವಾರ್
ನಾಲ್ಕು ದಿನಗಳ ಕಾಲ ಈ ಗಲಭೆ ನಡೆದಿದ್ದು, ನ್ಯೂ ಕ್ಯಾಲೆಡೋನಿಯಾದ ರಸ್ತೆಗಳಲ್ಲಿ ಬರೀ ಸುಟ್ಟ ವಾಹನಗಳು, ಕಲ್ಲು, ಸಿಮೆಂಟ್ ತುಂಡುಗಳು ಕಂಡುಬಂದಿದೆ. ಸಾಮಾನ್ಯವಾಗಿ ಪ್ರವಾಸಿಗರಿಂದ ಕಿಕ್ಕಿರಿದು ತುಂಬಿರುವ ನಗರದ ರಸ್ತೆಗಳಲ್ಲಿ ಪ್ರಸ್ತುತ ಶಸ್ತ್ರಸಜ್ಜಿತ ವಾಹನಗಳು ಸಂಚರಿಸುತ್ತಿದೆ.
ಭದ್ರತಾ ಪಡೆಗಳು ದಂಗೆಯ ಐದು ಶಂಕಿತ ನಾಯಕರನ್ನು ಗೃಹಬಂಧನದಲ್ಲಿ ಇರಿಸಿದೆ. ಘರ್ಷಣೆಗಳು ಭುಗಿಲೆದ್ದ ನಂತರ 200 ಕ್ಕೂ ಹೆಚ್ಚು ಗಲಭೆಕೋರರನ್ನು ಬಂಧಿಸಲಾಗಿದೆ. 64 ಪೊಲೀಸರು ಸೇರಿದಂತೆ ನೂರಾರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಲಿಂಗತ್ವ ಅಲ್ಪಸಂಖ್ಯಾತ ಗೇಬ್ರಿಯಲ್ ಅಟ್ಟಲ್ ಫ್ರಾನ್ಸ್‌ನ ನೂತನ ಪ್ರಧಾನಿ
ಟಿಕ್‌ಟಾಕ್ ಬ್ಯಾನ್
ಬಂದರುಗಳು ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ರಕ್ಷಿಸಲು ಸೈನಿಕರನ್ನು ಕಳುಹಿಸಲಾಗಿದೆ ಎಂದು ಫ್ರೆಂಚ್ ಪ್ರಧಾನಿ ಗೇಬ್ರಿಯಲ್ ಅಟಲ್ ಅವರು ತಿಳಿಸಿದ್ದಾರೆ. ಇನ್ನು ಗಲಭೆಕೋರರು ಟಿಕ್‌ಟಾಕ್ ಅನ್ನು ಬಳಸುತ್ತಿದ್ದರಿಂದ ಅದನ್ನು ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದರು. ಗುರುವಾರ ಬೆಳಿಗ್ಗೆ, ಎಎಫ್‌ಪಿ ಟಿಕ್‌ಟಾಕ್‌ನಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿರುವ 20ರಷ್ಟು ಖಾತೆಗಳನ್ನು ಗುರುತಿಸಿದೆ.





