ಫ್ರಾನ್ಸ್- ಬಲಪಂಥಕ್ಕೆ ಪ್ರಚಂಡ ಗೆಲುವಿನ ಸಮೀಕ್ಷೆಗಳು ಸುಳ್ಳಾದವು; ನಡುಪಂಥ ಮತ್ತು ಎಡಪಂಥದ ಸಮ್ಮಿಶ್ರ ಸರ್ಕಾರ ಸಾಧ್ಯತೆ

Date:

ಫ್ರಾನ್ಸ್ ಚುನಾವಣೆಗಳ ಮೊದಲ ಹಂತದಲ್ಲಿ ಕಟ್ಟರ್ ಬಲಪಂಥೀಯ ಪಕ್ಷ ನ್ಯಾಶನಲ್ ರ್‍ಯಾಲಿಗೆ ಸಫಲತೆ ಸಿಕ್ಕಿತ್ತು. ಆದರೆ ಎರಡನೆಯ ಹಂತದ ಮತದಾನದ ಹೊತ್ತಿಗೆ ಮತದಾರರು ಮನಸ್ಸು ಬದಲಾಯಿಸಿದ್ದರು. ಕಟ್ಟರ್ ಬಲಪಂಥದ ವಿರುದ್ಧ ಇತರೆ ಪಕ್ಷಗಳೂ ಒಗ್ಗಟ್ಟಿನ ಹೋರಾಟ ಹೂಡಿದವು.

 

ಯೂರೋಪಿನ ಎರಡು ಮಾಜಿ ವಸಾಹತುಶಾಹಿ ಶಕ್ತಿಗಳಾದ ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶಗಳು ತಮ್ಮ ರಾಜಕೀಯ ಗಡಿಯಾರದ ಮುಳ್ಳುಗಳನ್ನು ಮಧ್ಯದಿಂದ ತುಸು ಎಡಕ್ಕೆ ತಿರುಗಿಸಿವೆ. ಜೊತೆ ಜೊತೆಗೆ ಇರಾನಿನ ಮತದಾರರು ಸಂಪ್ರದಾಯವಾದಿ ಶಕ್ತಿಗಳ ವಿರುದ್ಧ ಮತ ನೀಡಿ ಉದಾರವಾದಿ ಪ್ರಧಾನಿಯನ್ನು ಆರಿಸಿದ್ದಾರೆ.
ಇಂಗ್ಲೆಂಡಿನಲ್ಲಿ ಕನ್ಸರ್ವೇಟಿವ್ ಪಕ್ಷದ 14 ವರ್ಷಗಳ ಬಲಪಂಥೀಯ ಆಡಳಿತ ಅಂತ್ಯಗೊಂಡು ಲೇಬರ್ ಪಾರ್ಟಿ ಅಧಿಕಾರ ಹಿಡಿದಿದೆ.

ಫ್ರೆಂಚ್ ಸಂಸದೀಯ ಚುನಾವಣೆಗಳು ಅಸಾಮಾನ್ಯ ಫಲಿತಾಂಶಗಳನ್ನು ಹೊರಹೊಮ್ಮಿಸಿವೆ. ನ್ಯಾಶನಲ್ ರ್‍ಯಾಲಿ ಎಂಬ ಕಟ್ಟರ್ ಬಲಪಂಥೀಯ ಪಕ್ಷಕ್ಕೆ ಪ್ರಚಂಡ ಗೆಲುವು ಸಿಗಲಿದೆ ಎಂಬ ಚುನಾವಣಾ ಸಮೀಕ್ಷೆಗಳು ಸುಳ್ಳಾಗಿವೆ. ಎರಡನೆಯ ಜಾಗತಿಕ ಸಮರ ನಡೆದು 80 ವರ್ಷಗಳು ಗತಿಸಿದ ನಂತರ ಮೊದಲ ಬಾರಿಗೆ ತೀವ್ರ ಬಲಪಂಥೀಯ ಪಕ್ಷವೊಂದು ಫ್ರಾನ್ಸ್ ನಲ್ಲಿ ಅಧಿಕಾರದ ಸಮೀಪ ಸಾರಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜನವಿರೋಧಿ ಜನಾಂಗೀಯ ವಾದ ಮತ್ತು ಫ್ಯಾಸಿಸ್ಟ್ ವಾದದ ಬಲಪಂಥವನ್ನು ಅಧಿಕಾರದಿಂದ ದೂರ ಇಡಲಾಗಿದೆ. ಪ್ರಪಂಚ ಬಲಪಂಥೀಯ ಗೆಲುವಿನತ್ತ ಹೊರಳುತ್ತಿದೆ ಎನ್ನಲಾಗುತ್ತಿದ್ದ ಹೊತ್ತಿನಲ್ಲಿ ಜರುಗಿರುವ ಬಹು ಮಹತ್ವದ ಬೆಳವಣಿಗೆಯಿದು.

2022ರ ಅಧ್ಯಕ್ಷೀಯ ಚುನಾವಣೆಗಳಲ್ಲಿಯೂ ಹೀಗೆಯೇ ಆಗಿತ್ತು. ಇಮ್ಯಾನ್ಯುಯಲ್ ಮ್ಯಾಕ್ರಾನ್ ಗೆದ್ದಿದ್ದರು. ಆದರೆ, ಕಟ್ಟರ್ ಬಲಪಂಥೀಯ ಪಕ್ಷದ ಮೆರೀನ್ ಲಿ ಪೆನ್ ತೀವ್ರ ಸ್ಪರ್ಧೆ ಒಡ್ಡಿದ್ದರು. ಐರೋಪ್ಯ ಒಕ್ಕೂಟದ ಬಹುಮುಖ್ಯ ದೇಶವೊಂದರ ಅಧಿಕಾರ ಸೂತ್ರ ಬಲಪಂಥೀಯರ ಕೈ ತಪ್ಪಿದ ಈ ಬೆಳವಣಿಗೆಯಿಂದ ಇಡೀ ಯೂರೋಪ್ ನಿರಾಳ ನಿಟ್ಟುಸಿರು ಚೆಲ್ಲಿತ್ತು.

ಫ್ರಾನ್ಸ್ ಸಾರಿದ ಸ್ವಾತಂತ್ರ್ಯ, ಸಮಾನತೆ ಹಾಗೂ ಸೋದರತೆಯ ತಿರುಳು ತತ್ವಗಳನ್ನು ಆ ದೇಶದ ಮತದಾರರು ಎತ್ತಿ ಹಿಡಿದಿದ್ದಾರೆ. ಆದರೆ, ಈ ಚುನಾವಣೆ ತ್ರಿಶಂಕು ಸಂಸತ್ತಿನ ಫಲಿತಾಂಶ ನೀಡಿದೆ. ಎಡಪಂಥ ಮತ್ತು ನಡುಪಂಥಕ್ಕೆ ದೊರೆತಿರುವ ಮತಗಳು ಬಲಪಂಥ ವಿರೋಧೀ ಮತಗಳೇ ವಿನಾ ನೇರವಾಗಿ ಎಡಪಂಥ ಮತ್ತು ನಡುಪಂಥವನ್ನು ಬೆಂಬಲಿಸಿದ ಮತಗಳಲ್ಲ. ಜೊತೆಗೆ ವರ್ಷದಿಂದ ವರ್ಷಕ್ಕೆ ಬಲಪಂಥೀಯ ಶಕ್ತಿಗಳಿಗೆ ಬೆಂಬಲವೂ ಹೆಚ್ಚತೊಡಗಿದೆ. ಈ ವಾಸ್ತವಾಂಶಗಳಿಗೆ ಒತ್ತು ನೀಡಿಯೇ ಈ ಫಲಿತಾಂಶಗಳನ್ನು ನೋಡಬೇಕಿದೆ.
ಫ್ರಾನ್ಸ್‌ನ ದೊಡ್ಡ ಸಂಖ್ಯೆಯ ಮತದಾರರು ಕಟ್ಟರ್ ಬಲಪಂಥವನ್ನು ಒಪ್ಪುವುದಿಲ್ಲ ಎಂಬ ತಥ್ಯವನ್ನು ಈ ಚುನಾವಣೆ ಸಾರಿ ಹೇಳಿದೆ. ಕಟ್ಟರ್ ಬಲಪಂಥೀಯರು ಅಧಿಕಾರಕ್ಕೆ ಬಂದರೆ ಅಶಾಂತಿ ಹಬ್ಬುತ್ತದೆಂಬ ಆತಂಕವೂ ಜನರಲ್ಲಿದೆ.

ಕಳೆದ ಹತ್ತು ವರ್ಷಗಳ ಮ್ಯಾಕ್ರಾನ್ ಆಡಳಿತದಲ್ಲಿ ತೀವ್ರ ನಿರುದ್ಯೋಗ, ವೇತನ ಸ್ಥಗಿತ ಹಾಗೂ ಕಠಿಣವೆನಿಸುವ ಪಿಂಚಣಿ ಸುಧಾರಣೆಗಳಿಂದ ಫ್ರೆಂಚರು ಹೈರಾಣಾಗಿರುವುದು ವಾಸ್ತವ. ಹಲವು ಬಗೆಯ ಜನಪ್ರತಿಭಟನೆಗಳು ನಡೆದಿವೆ. ಮ್ಯಾಕ್ರಾನ್ ಅಧ್ಯಕ್ಷತೆ ಭ್ರಮನಿರಸನ ಹುಟ್ಟಿಸಿದೆ. ಅವರು ಅನುಸರಿಸಿರುವ ನಡುಪಂಥೀಯ ಮಾರುಕಟ್ಟೆ ಪರವಾದ ರಾಜಕಾರಣವನ್ನು ಅವರ ಹೊಸ ಮಿತ್ರಪಕ್ಷಗಳು ಒಪ್ಪುವುದಿಲ್ಲ. ಇಂತಹ ಹಲವು ಅಂತರ್ವಿರೋಧಗಳು ಈ ಗೆಲುವಿನಲ್ಲಿ ಅಡಗಿವೆ. ತೀವ್ರ ಬಲಪಂಥೀಯ ರಾಜಕಾರಣ ಈವರೆಗೆ ಅಂಚಿನಲ್ಲಿತ್ತು. ಈಗ ಮುಖ್ಯಧಾರೆಗೆ ಲಗ್ಗೆ ಇಟ್ಟಿದೆ ಅಷ್ಟೇ ಅಲ್ಲ, ಮುಂಬರುವ ದಿನಗಳಲ್ಲಿ ಧೃವೀಕರಣವನ್ನು ಹೊಸ ರಭಸದಿಂದ ಮುಂದೆ ತಳ್ಳಲಿದೆ. ಮೆರೀನ್ ಅವರ ಕಟ್ಟರ್ ಬಲಪಂಥೀಯ ರಾಜಕಾರಣವನ್ನು ಫ್ರೆಂಚ್ ಗಣರಾಜ್ಯದ ಮೌಲ್ಯಗಳ ಉಲ್ಲಂಘನೆ ಎಂದು ಫ್ರಾನ್ಸ್ ಬಗೆದಿದ್ದ ಕಾಲವೂ ಒಂದಿತ್ತು. ಅಂತಹ ದಿನಗಳನ್ನು ಹಿಂದಕ್ಕೆ ಸರಿಸಿದ್ದಾರೆ ಮೆರೀನ್.

ಮೆರೀನ್ ಅವರು ರಷ್ಯಾದ ಅಧ್ಯಕ್ಷ ಪುತಿನ್ ಅವರ ಸಮೀಪವರ್ತಿ. ಯುಕ್ರೇನ್ ಮೇಲೆ ಪುತಿನ್ ಸಾರಿರುವ ಯುದ್ಧವನ್ನು ಐರೋಪ್ಯ ಒಕ್ಕೂಟ ಮತ್ತು ನ್ಯಾಟೋ ವಿರೋಧಿಸಿವೆ. ಐರೋಪ್ಯ ಒಕ್ಕೂಟದ ಪ್ರಬಲ ಬೆಂಬಲಿಗ ದೇಶ ಫ್ರಾನ್ಸ್. ಹೀಗಾಗಿ ಮೆರೀನ್ ಗೆಲುವು ಭಾರೀ ರಾಜಕೀಯ ಭೂಕಂಪವನ್ನು ಸೃಷ್ಟಿಸಲಿತ್ತು.
ಎಡಪಂಥ, ಕಟ್ಟರ್ ಬಲಪಂಥ ಹಾಗೂ ನಡುಪಂಥ ಫ್ರಾನ್ಸ್ ನ ಮೂರು ದೊಡ್ಡ ರಾಜಕೀಯ ಶಕ್ತಿಗಳು. ಇವುಗಳ ಜೊತೆಗೆ ಸೌಮ್ಯ ಬಲಪಂಥವನ್ನೂ ಸೇರಿಸಬಹುದು. ಈ ಪಕ್ಷಗಳ ಒಳಗೊಳಗೇ ನಾನಾ ಪ್ರತಿಸ್ಪರ್ಧಿಗಳು ಮತ್ತು ಪಕ್ಷಗಳು ಕೂಡ ಉಂಟು.

BB1pzyWr
ನ್ಯಾಶನಲ್‌ ರ್‍ಯಾಲಿ ಪಕ್ಷದ ಸಂಭ್ರಮಾಚರಣೆ

ಫ್ರಾನ್ಸ್ ಚುನಾವಣೆಗಳ ಮೊದಲ ಹಂತದಲ್ಲಿ ಕಟ್ಟರ್ ಬಲಪಂಥೀಯ ಪಕ್ಷ ನ್ಯಾಶನಲ್ ರ್‍ಯಾಲಿಗೆ ಸಫಲತೆ ಸಿಕ್ಕಿತ್ತು. ಆದರೆ ಎರಡನೆಯ ಹಂತದ ಮತದಾನದ ಹೊತ್ತಿಗೆ ಮತದಾರರು ಮನಸ್ಸು ಬದಲಾಯಿಸಿದ್ದರು. ಕಟ್ಟರ್ ಬಲಪಂಥದ ವಿರುದ್ಧ ಇತರೆ ಪಕ್ಷಗಳೂ ಒಗ್ಗಟ್ಟಿನ ಹೋರಾಟ ಹೂಡಿದವು.

ನ್ಯಾಶನಲ್ ರ್‍ಯಾಲಿ ನೇತೃತ್ವದ ಒಕ್ಕೂಟ ಮೂರನೆಯ ಸ್ಥಾನದಲ್ಲಿದೆ. ವಾರದ ಹಿಂದೆ ಈ ಒಕ್ಕೂಟಕ್ಕೆ 300 ಸೀಟುಗಳು ಸಿಗಬಹುದೆಂದು ಅಂದಾಜು ಮಾಡಲಾಗಿತ್ತು. ಆದರೆ ಅಂತಿಮವಾಗಿ ದಕ್ಕಿದ್ದು 142 ಸೀಟುಗಳು ಮಾತ್ರ. ಆದರೆ ಅತಿ ಹೆಚ್ಚಿನ ಸಂಖ್ಯೆಯ ಸೀಟುಗಳನ್ನು ಗಳಿಸಿರುವ ಪಕ್ಷ ನ್ಯಾಶನಲ್ ರ್‍ಯಾಲಿಯೇ ಆಗಿದೆ.

ತೀವ್ರ ಬಲಪಂಥೀಯರು ಅಧಿಕಾರಕ್ಕೆ ಬರುವುದನ್ನು ತಡೆದಿರುವ ಈ ಬೆಳವಣಿಗೆಯ ಹಿಂದೆ ಮುಖ್ಯವಾದ ಎರಡು ಅಂಶಗಳಿವೆ—ಒಂದನೆಯದಾಗಿ ಫ್ರೆಂಚ್ ಮತದಾರರು ಎರಡನೆಯ ಸುತ್ತಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಮತದಾನ ಮಾಡಿದ್ದು ಮತ್ತು ಎರಡನೆಯದಾಗಿ ಬಲಪಂಥೀಯ ನ್ಯಾಶನಲ್ ರ್‍ಯಾಲಿಗೆ ಅಡ್ಡಗಾಲು ಹಾಕಲೆಂದು ಇತರೆ ಪಕ್ಷಗಳು ಒಟ್ಟಾಗಿ ಒಕ್ಕೂಟ ಮಾಡಿಕೊಂಡಿದ್ದು.

‘ಫ್ರಾನ್ಸಿನ‘ ಎಡಪಂಥೀಯ ಪಕ್ಷಗಳು ಹಠಾತ್ತಾಗಿ ತಮ್ಮ ಎಲ್ಲ ಮತಭೇದಗಳನ್ನು ಮರೆತು ಬಲಪಂಥೀಯ ನ್ಯಾಶನಲ್ ರ್‍ಯಾಲಿ ಪಾರ್ಟಿಗೆ ವಿರುದ್ಧವಾಗಿ ಬಲಿಷ್ಠ ಮೈತ್ರಿಕೂಟ ಕಟ್ಟಿಕೊಂಡವು. ಮ್ಯಾಕ್ರಾನ್ ಸಮರ್ಥಕರು ಮತ್ತು ಎಡಪಂಥೀಯರು ತಮ್ಮ ನಡುವಣ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾದ ಕಾರಣ ಫಲಿತಾಂಶ ಬದಲಾಯಿತು’ ಎಂಬುದು ಬಲಪಂಥೀಯ ನಾಯಕಿ ಮೆರೀನ್ ಲಿ ಪೆನ್ ವ್ಯಾಖ್ಯಾನ. ‘ನಮ್ಮ ವಿಜಯವನ್ನು ಮುಂದೂಡಲಾಗಿದೆ ಅಷ್ಟೇ. ಆದರೆ ನಮ್ಮ ಪರಾಜಯದಲ್ಲೇ ನಮ್ಮ ವಿಜಯ ಹುದುಗಿದೆ. ಮುಂಬರುವ ದಿನಗಳಲ್ಲಿ ಯಾವ ಶಕ್ತಿಯೂ ನಮ್ಮನ್ನು ತಡೆದು ನಿಲ್ಲಿಸುವುದು ಸಾಧ್ಯವಿಲ್ಲ’ ಎಂದಿದ್ದಾರೆ. ಈಕೆಯ ಪಕ್ಷದ ಸೀಟುಗಳು 89ರಿಂದ 142ಕ್ಕೆ ಏರಿವೆ, 2027ರಲ್ಲಿ ಮ್ಯಾಕ್ರಾನ್ ಅಧ್ಯಕ್ಷೀಯ ಅವಧಿ ತೀರಲಿದೆ. ಆಗ ನಡೆಯುವ ಅಧ್ಯಕ್ಷೀಯ ಚುನಾವಣೆಗಳಿಗೆ ಈಗಲೇ ತಯಾರಿ ನಡೆಸಿದ್ದಾರೆ ಮೆರೀನ್ ಲಿ ಪೆನ್.

69589473 906
ನ್ಯೂ ಪಾಪ್ಯೂಲರ್ ಫ್ರಂಟ್

ತೀವ್ರ ಎಡಪಂಥೀಯ ಮತ್ತು ಎಡಪಂಥೀಯ ಪಕ್ಷಗಳು ಒಟ್ಟಾಗಿ ‘ನ್ಯೂ ಪಾಪ್ಯೂಲರ್ ಫ್ರಂಟ್’ ರಚಿಸಿಕೊಂಡವು. ನ್ಯಾಶನಲಿಸ್ಟ್ ರ್‍ಯಾಲಿಯನ್ನು ಸೋಲಿಸುವುದು ಈ ಒಕ್ಕೂಟದ ಏಕೈಕ ಉದ್ದೇಶವಾಗಿತ್ತು. ತಮ್ಮ ಉದ್ದೇಶದಲ್ಲಿ ಸಫಲವಾದದ್ದು ಮಾತ್ರವಲ್ಲದೆ, ತನ್ನ ನಿರೀಕ್ಷೆಗಳನ್ನೂ ಮೀರಿ ಜನಬೆಂಬಲ ಗಳಿಸಿತು. ಅತಿ ಹೆಚ್ಚು ಸೀಟು (142) ಗಳಿಸಿದ ‘ಪಕ್ಷ’ವಾಗಿ ಹೊರಹೊಮ್ಮಿತು. ಮ್ಯಾಕ್ರಾನ್ ಅವರ ಮಧ್ಯಮಮಾರ್ಗಿ ಪಕ್ಷ 150 ಸೀಟು ಗಳಿಸಿ ಎರಡನೆಯ ಸ್ಥಾನದಲ್ಲಿದೆ. ಮರೀನ್ ಲಿ ಪೆನ್ ಅವರ ತೀವ್ರ ಬಲಪಂಥೀಯ ಪಕ್ಷ (142 ಸೀಟುಗಳು) ಮೂರನೆಯ ಸ್ಥಾನದಲ್ಲಿದೆ. ಉಳಿದ ಸೀಟುಗಳು ಬಲಪಂಥೀಯ ಮತ್ತು ಎಡಪಂಥೀಯ ಪಕ್ಷೇತರರು ಮತ್ತು ಇತರೆ ಪಕ್ಷೇತರ ಅಭ್ಯರ್ಥಿಗಳ ಪಾಲಾಗಿವೆ.

ಶೇ.37.4ರಷ್ಟು ಅತಿ ಹೆಚ್ಚಿನ ಪ್ರಮಾಣದ ಮತಗಳು ನ್ಯಾಶನಲ್ ರ್‍ಯಾಲಿಗೆ ದೊರೆತಿವೆ. ಆದರೂ ಸರ್ಕಾರ ರಚಿಸಲು ಬೇಕಿರುವ 289ರ ಸರಳ ಬಹುಮತ ಪಡೆಯಲು ಸೋತಿದೆ. ನ್ಯಾಶನಲ್ ರ್‍ಯಾಲಿಯ ಸರ್ಕಾರವನ್ನು ಎದುರು ನೋಡುತ್ತಿದ್ದ ದೇಶಕ್ಕೆ ಇದೀಗ ಅತಂತ್ರ ಸಂಸತ್ತು ಎದುರಾಗಿದೆ.

ಆದರೆ ಪ್ರಪಂಚ ಬಲಪಂಥದತ್ತ ಹೊರಳುವುದು ಅನಿವಾರ್ಯವೇನೂ ಅಲ್ಲ ಎಂಬ ಅಂಶವನ್ನು ಸಾರಿವೆ. ಜಾಣ ರಾಜಕಾರಣ ಮತ್ತು ಮತದಾರರ ದೃಢಸಂಕಲ್ಪವು ಅಧಿಕಾರ ಹಿಡಿಯದಂತೆ ಬಲಪಂಥವನ್ನು ತಡೆದಿವೆ.
ಫ್ರೆಂಚ್ ಚುನಾವಣೆಗಳು ಎರಡು ಸುತ್ತಿನ ಮತದಾನ ವ್ಯವಸ್ಥೆಯನ್ನು ಹೊಂದಿವೆ. ಮೊದಲ ಸುತ್ತಿನಲ್ಲಿ ಶೇ.50ರಷ್ಟು ಮತಗಳನ್ನು ಪಡೆಯಲು ಉಮೇದುವಾರರು ವಿಫಲವಾದ ಕ್ಷೇತ್ರಗಳಲ್ಲಿ ಎರಡನೆಯ ಸುತ್ತಿನ ಮತದಾನ ನಡೆಯುತ್ತದೆ. ಮೊದಲ ಸುತ್ತಿನಲ್ಲಿ ಮರೀನ್ ಲಿ ಪೆನ್ ಅವರ ಕಟ್ಟರ್ ಬಲಪಂಥೀಯ ಪಕ್ಷ ಅತಿ ಹೆಚ್ಚು ಸಂಖ್ಯೆಯ ಮತಗಳನ್ನು ಪಡೆದಿತ್ತು. ಆದರೆ ಈ ಸಂಖ್ಯೆ 289 ಸ್ಥಾನಗಳ ಗೆಲುವಿಗೆ ಸಾಕಾಗಲಿಲ್ಲ. ಒಟ್ಟು 577 ಕ್ಷೇತ್ರಗಳ ಪೈಕಿ 501ರಲ್ಲಿ ಎರಡನೆಯ ಸುತ್ತಿನ ಮತದಾನ ನಡೆಯಲೇಬೇಕಾಯಿತು. ಎರಡೂ ಸುತ್ತುಗಳಲ್ಲಿ ಇತರೆ ಪಕ್ಷಗಳಿಗಿಂತ ಹೆಚ್ಚು ಮತ ಗಳಿಸಿದರೂ ಸರಳ ಬಹುಮತ ಕಟ್ಟರ್ ಬಲಪಂಥೀಯ ಪಕ್ಷಕ್ಕೆ ದೊರೆಯಲಿಲ್ಲ. ತ್ರಿಕೋಣೀಯ ಸ್ಪರ್ಧೆಯಲ್ಲಿ ಮುಂದಿದ್ದ ತೀವ್ರ ಬಲಪಂಥೀಯ ಪಕ್ಷವನ್ನು ಎದುರಿಸಲು ಎಡಪಂಥೀಯರು ಮತ್ತು ಮಧ್ಯಮಾರ್ಗಿಗಳು ಕೈಜೋಡಿಸಿ ತಂತ್ರ ಹೆಣೆದರು.

ಮೊದಲ ಸುತ್ತಿನಲ್ಲಿ ಕಟ್ಟರ್ ಬಲಪಂಥೀಯ ಪಕ್ಷ ಹೆಚ್ಚು ಮತಗಳನ್ನು ಗಳಿಸಿದ ಬೆಳವಣಿಗೆ ಮ್ಯಾಕ್ರಾನ್ ನೇತೃತ್ವದ ಮಧ್ಯಮಾರ್ಗಿ ಪಕ್ಷಗಳ ಮೈತ್ರಿಕೂಟ ಮತ್ತು ಎಡಪಕ್ಷಗಳು ಹೊಸ ಮೈತ್ರಿಕೂಟ ರಚಿಸಿಕೊಂಡವು. ಎಡಪಂಥೀಯ ಪಕ್ಷಗಳ 102 ಅಭ್ಯರ್ಥಿಗಳು ಮತ್ತು ಮಧ್ಯಮಾರ್ಗಿ ಪಕ್ಷಗಳ 83 ಉಮೇದುವಾರರು ಕಣದಿಂದ ಹಿಂದೆ ಸರಿದರು. ಅವರ ಈ ತ್ಯಾಗವು ಮತಗಳು ಮೂರು ದಿಕ್ಕುಗಳಲ್ಲಿ ಚದುರುವುದನ್ನು ತಪ್ಪಿಸಿತು. ಮೊದಲ ಸುತ್ತಿನ ಚುನಾವಣೆಯಲ್ಲಿ ಎಡ, ಬಲ ಹಾಗೂ ಮಧ್ಯಮಾರ್ಗಿ ಪಕ್ಷಗಳ ನಡುವೆ ಏರ್ಪಟ್ಟಿದ್ದ ತ್ರಿಕೋಣ ಪೈಪೋಟಿ ಎರಡನೆಯ ಸುತ್ತಿನಲ್ಲಿ ದ್ವಿಪಕ್ಷೀಯ ಆಯಿತು. ಚುನಾವಣೆಯ ಫಲಿತಾಂಶಗಳು ಹೊರಳಿದವು. ತ್ರಿಶಂಕು ಲೋಕಸಭೆಯ ಸ್ಥಿತಿ ಏರ್ಪಟ್ಟಿತು.

marine le pen GettyImages 1239980467
ಮರೀನ್‌ ಲೀ ಪೆನ್‌

ಇತ್ತೀಚೆಗೆ ಯೂರೋಪಿಯನ್ ಪಾರ್ಲಿಮೆಂಟ್‌ಗೆ ಜರುಗಿದ ಚುನಾವಣೆಗಳಲ್ಲಿ ಫ್ರಾನ್ಸ್‌ನ ಮತದಾರರು ಮರೀನ್ ಲಿ ಪೆನ್ ಅವರ ಬಲಪಂಥೀಯ ಪಕ್ಷವನ್ನು ಗೆಲ್ಲಿಸಿದ್ದರು. ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಮಧ್ಯಮಮಾರ್ಗಿ. ಬಲಪಂಥೀಯ ಪಕ್ಷ ಬಹುಮತ ಗಳಿಸಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸುವ ಉದ್ದೇಶದಿಂದ ಅವಧಿಗೆ ಮುನ್ನವೇ ಫ್ರೆಂಚ್ ಲೋಕಸಭೆಯನ್ನು ವಿಸರ್ಜಿಸಿ ಮಧ್ಯಂತರ ಚುನಾವಣೆ ಘೋಷಿಸಿದರು. ಆದರೆ ಈ ಚುನಾವಣೆಗಳು ಅವರು ಬಯಸಿದ ಫಲಿತಾಂಶ ನೀಡಲಿಲ್ಲ. ಮಧ್ಯಮಮಾರ್ಗಿ ಪಕ್ಷಗಳು ಬಹುಮತ ಗಳಿಕೆಯಿಂದ ಬಹು ದೂರ ಉಳಿದವು. ತೀವ್ರ ಬಲಪಂಥೀಯ ಪಕ್ಷ ಸ್ಪರ್ಧೆಯಲ್ಲಿ ಇತರೆ ಎಲ್ಲ ಪಕ್ಷಗಳನ್ನು ಹಿಂದಿಕ್ಕಿತು. ತೀವ್ರ ಬಲಪಂಥೀಯ ಪಕ್ಷವನ್ನು ಅಧಿಕಾರದಿಂದ ದೂರ ಇಡುವಷ್ಟರ ಮಟ್ಟಿಗೆ ಮ್ಯಾಕ್ರಾನ್ ಸಫಲರಾಗಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ ಪಂದ್ಯಗಳು ಅಂಗಳಕ್ಕೆ ಬಂದು ನಿಂತಿವೆ. ಈ ಹೊತ್ತಿನಲ್ಲಿ ಹೊಸ ಮೈತ್ರಿ ಸರ್ಕಾರ ರಚನೆಗೆ ನಡುಪಂಥ, ನಡುಪಂಥದ ತುಸುವೇ ಬಲಕ್ಕಿರುವ ಪಂಥ, ತೀವ್ರ ಎಡಪಂಥ ಹಾಗೂ ಎಡಪಂಥೀಯರ ನಡುವೆ ದೀರ್ಘ ಚೌಕಾಶಿ ನಡೆಯಲಿದೆ. ಪ್ರಧಾನಿ ಯಾರಾಗಬೇಕು ಎಂಬ ಕುರಿತೂ ಏಕಮತ ಸಾಧಿಸುವುದು ಸವಾಲೇ ಆಗಿದೆ.

ಫ್ರಾನ್ಸ್ ನ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರಾನ್ ಅವರ ರೆನೈಸಾನ್ಸ್ ಪಾರ್ಟಿ ಎಂಬ ನಡುಪಂಥೀಯ ಪಕ್ಷ ಮತ್ತು ನ್ಯೂ ಪಾಪ್ಯೂಲರ್ ಫ್ರಂಟ್ ಎಂಬ ಎಡಪಕ್ಷ ಕೈಗೂಡಿಸಿ ಸಮ್ಮಿಶ್ರ ಸರ್ಕಾರವೊಂದು ರೂಪು ತಳೆಯುವ ಸಾಧ್ಯತೆ ದಟ್ಟವಾಗಿದೆ.

ತ್ರಿಶಂಕು ಅಥವಾ ಅತಂತ್ರ ಲೋಕಸಭೆ ಎಂಬುದು ಫ್ರೆಂಚರ ಪಾಲಿಗೆ ಹಿಂದೆಂದೂ ಕಂಡಿರದ ಅಪರಿಚಿತ ಹಾದಿ. ಅಪ್ಪಟ ಸಮ್ಮಿಶ್ರ ಸರ್ಕಾರವೆಂಬುದು ಹೊಚ್ಚ ಹೊಸ ಅನುಭವ. ಕತ್ತಿಯಂಚಿನ ಈ ನಡಿಗೆಯಲ್ಲಿ ರಾಜಕೀಯ ಅಸ್ಥಿರತೆ ಮತ್ತು ಅನಿಶ್ಚಯತೆ ಸ್ವಾಭಾವಿಕ. ಮುಂಬರುವ ದಿನಗಳಲ್ಲಿ ಬಲಪಂಥೀಯರು ಮತ್ತು ಇತರರ ನಡುವಣ ತೀವ್ರ ತಿಕ್ಕಾಟಕ್ಕೆ ಫ್ರಾನ್ಸ್ ದೇಶ ಸಾಕ್ಷಿಯಾಗಲಿದೆ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...