ಮಧ್ಯಪ್ರಾಚ್ಯದಲ್ಲಿ ನ್ಯಾಯಯುತ ಮತ್ತು ಶಾಶ್ವತ ಶಾಂತಿಗೆ ತನ್ನ ಐತಿಹಾಸಿಕ ಬದ್ಧತೆಯ” ಭಾಗವಾಗಿ ಫ್ರಾನ್ಸ್ ಪ್ಯಾಲಿಸ್ಟೀನ್ ದೇಶವನ್ನು ಗುರುತಿಸುತ್ತದೆ ಎಂದು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಗುರುವಾರ ತಡರಾತ್ರಿ ಘೋಷಿಸಿದರು.
ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಆ ಕುರಿತು ಔಪಚಾರಿಕ ಘೋಷಣೆ ಮಾಡುವುದಾಗಿ ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದರು. “ಇಂದಿನ ಅತ್ಯಂತ ತುರ್ತು ವಿಷಯವೆಂದರೆ ಗಾಜಾದಲ್ಲಿ ಯುದ್ಧ ನಿಲ್ಲುವುದು ಮತ್ತು ನಾಗರಿಕರಿಗೆ ಸಹಾಯ ಮಾಡುವುದು” ಎಂದು ಹೇಳಿದರು.
ಅಮೆರಿಕ, ಬ್ರಿಟನ್, ಕೆನಡಾ, ಜರ್ಮನಿ, ಜಪಾನ್ ಮತ್ತು ಇಟಲಿ ಸೇರಿದಂತೆ 7 ಪ್ರಮುಖ ಕೈಗಾರಿಕೀಕರಣಗೊಂಡ ರಾಷ್ಟ್ರಗಳ ಗುಂಪಿನಲ್ಲಿ ಫ್ರಾನ್ಸ್ ಮೊದಲನೆಯದಾಗಿ ಪ್ಯಾಲಿಸ್ಟೀನ್ ರಾಷ್ಟ್ರವನ್ನು ಗುರುತಿಸಲಿದೆ. ಈ ನಿರ್ಧಾರವು ಅಮೆರಿಕ ಸರ್ಕಾರವನ್ನು ಕೆರಳಿಸುವ ಸಾಧ್ಯತೆಯಿದೆ.
ಫ್ರಾನ್ಸ್ ಕ್ರಮಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೋಪದಿಂದ ಪ್ರತಿಕ್ರಿಯಿಸಿದ್ದಾರೆ. 2023 ರ ಅಕ್ಟೋಬರ್ 7 ರಂದು ನಡೆದ ಹತ್ಯಾಕಾಂಡದ ನಂತರ ಟೆಲ್ ಅವಿವ್ ಪಕ್ಕದಲ್ಲಿ ಪ್ಯಾಲಿಸ್ಟೀನ್ ರಾಷ್ಟ್ರವನ್ನು ಗುರುತಿಸುವ ಮ್ಯಾಕ್ರನ್ ಅವರ ನಿರ್ಧಾರವನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ಯಾಲಿಸ್ಟೀನ್ ರಾಷ್ಟ್ರವು “ಇಸ್ರೇಲ್ ಅನ್ನು ನಿರ್ಮೂಲನೆ ಮಾಡಲು ಒಂದು ಉಡಾವಣಾ ವೇದಿಕೆ” ಆಗಬಹುದು ಎಂದು ಹೇಳಿದರು.
ಇದನ್ನು ಓದಿದ್ದೀರಾ? ಪ್ಯಾಲಿಸ್ಟೀನ್‌ಗೆ ಅಧಿಕೃತ ದೇಶದ ಸ್ಥಾನಮಾನ ನೀಡಿದ ಐರ್ಲೆಂಡ್
ಪ್ಯಾಲಿಸ್ಟೀನ್ ರಾಷ್ಟ್ರ ಸ್ಥಾನಮಾನಕ್ಕೆ ಫ್ರಾನ್ಸ್ ಮಾನ್ಯತೆ ನೀಡುವುದನ್ನು ಇಸ್ರೇಲ್ ನಿರಂತರವಾಗಿ ವಿರೋಧಿಸುತ್ತಾ ಬಂದಿದೆ. ಮ್ಯಾಕ್ರನ್ “ಯಹೂದಿ ರಾಜ್ಯದ ವಿರುದ್ಧ ಧರ್ಮಯುದ್ಧ” ನಡೆಸುತ್ತಿದ್ದಾರೆ ಎಂದು ಆರೋಪಿಸಿದೆ. ಎರಡೂ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟಿದ್ದು, ಈಗ ಮತ್ತಷ್ಟು ಹದಗೆಡಲಿದೆ ಎನ್ನಲಾಗುತ್ತಿದೆ.
“ಈ ಅಜಾಗರೂಕ ನಿರ್ಧಾರವು ಹಮಾಸ್ ಪ್ರಚಾರಕ್ಕೆ ಮಾತ್ರ ಸಹಾಯ ಮಾಡುತ್ತದೆ ಮತ್ತು ಶಾಂತಿಗೆ ಅಡ್ಡಿಯಾಗುತ್ತದೆ” ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಫ್ರಾನ್ಸ್‌ನ ಪ್ಯಾಲಿಸ್ಟೀನ್ ರಾಯಭಾರಿ ಹಲಾ ಅಬೌ-ಹಸ್ಸಿರಾ ಅವರು ಮ್ಯಾಕ್ರನ್‌ರ ನಿರ್ಧಾರವನ್ನು ಶ್ಲಾಘಿಸಿದ್ದಾರೆ.
ಸ್ಪೇನ್, ಐರ್ಲೆಂಡ್ ಮತ್ತು ನಾರ್ವೆ ಸೇರಿದಂತೆ ಇತರ ಯುರೋಪಿಯನ್ ರಾಷ್ಟ್ರಗಳು ಕಳೆದ ವರ್ಷ ಪ್ಯಾಲಿಸ್ಟೀನ್ ರಾಷ್ಟ್ರಕ್ಕೆ ಮಾನ್ಯತೆ ನೀಡಿದ್ದವು. ಆದರೆ ಫ್ರಾನ್ಸ್ ನಿರ್ಧಾರವು ವಿಭಿನ್ನ ಕ್ರಮದಲ್ಲಿದೆ. ಪಶ್ಚಿಮ ಯುರೋಪಿನಲ್ಲಿರುವ ಫ್ರಾನ್ಸ್‌ನಲ್ಲಿ ಅತಿ ಹೆಚ್ಚು ಯಹೂದಿ ಮತ್ತು ಮುಸ್ಲಿಂ ಸಮುದಾಯವಿದೆ. ಅಲ್ಲದೆ ಯುರೋಪಿಯನ್ ಒಕ್ಕೂಟದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಏಕೈಕ ಪರಮಾಣು ಶಕ್ತಿ ಮತ್ತು ಏಕೈಕ ಶಾಶ್ವತ ಸದಸ್ಯವಾಗಿದೆ.
ಗಾಜಾ ನಗರವು ಬಹುತೇಕ ನಾಶವಾಗಿ, ಸಾವಿರಾರು ನಿವಾಸಿಗಳು ಸಾವನ್ನಪ್ಪಿದ್ದರೂ, ಯುದ್ಧವನ್ನು ಕೊನೆಗೊಳಿಸಲು ನೆತನ್ಯಾಹು ನಿರಾಕರಿಸಿರುವುದು ಹೆಚ್ಚುತ್ತಿರುವ ವಿಶ್ವ ನಾಯಕರಂತೆ ಮ್ಯಾಕ್ರನ್ ಅವರನ್ನು ಕೆರಳಿಸಿದೆ.
Fidèle à son engagement historique pour une paix juste et durable au Proche-Orient, j’ai décidé que la France reconnaîtra l’État de Palestine.
— Emmanuel Macron (@EmmanuelMacron) July 24, 2025
J’en ferai l’annonce solennelle à l’Assemblée générale des Nations unies, au mois de septembre prochain.… pic.twitter.com/7yQLkqoFWC





