ಗಾಜಾಪಟ್ಟಿಯಲ್ಲಿ ಮುಗ್ಧ ಮಕ್ಕಳ ಮಾರಣಹೋಮ: ದೇವರು ಎಲ್ಲಿದ್ದಾನೆ?

Date:

ಗಾಜಾ ಪಟ್ಟಿಯಲ್ಲಿ ಯಾವುದೇ ಪಾಪ ಪ್ರಜ್ಞೆಯಿಲ್ಲದೆ ಸಾವಿರಾರು ಮುಗ್ಧ ಮಕ್ಕಳನ್ನು ಕೊಲ್ಲುತ್ತಿರುವ ಯಹೂದಿಯರನ್ನು ಕಂಡಾಗ ದೇವರು ಎಲ್ಲಿದ್ದಾನೆ ಎಂದು ಕೇಳಿಕೊಳ್ಳುವಂತಾಗಿದೆ… ದೇವರು ಎಲ್ಲಿದ್ದಾನೆ? ನನ್ನ ಒಳದನಿ ಹೇಳುತ್ತದೆ – ದೇವರು ಅಲ್ಲೇ ಇದ್ದಾನೆ. ಗಾಜಾ ಪಟ್ಟಿಯ ಬೀದಿಗಳಲ್ಲಿ ಛಿದ್ರ ಛಿದ್ರವಾಗಿ ಬಿದ್ದಿದ್ದಾನೆ.

ದೈನಂದಿನ ಬದುಕಲ್ಲಿ ಸ್ವಲ್ಪ ಏರುಪೇರಾದರೂ ನಮ್ಮ ಮನದಲ್ಲಿ ಥಟ್ ಅಂತ ಏಳುವ ಪ್ರಶ್ನೆ ದೇವರೆಲ್ಲಿದ್ದಾನೆ ಎಂದು. ಈ ಅನ್ಯಾಯ ನನಗೇ ಏಕೆ? ಅನ್ಯಾಯ ತಡೆಯಲಿಕ್ಕೆ ಸರ್ವಶಕ್ತನಿಗೆ ಸಾಧ್ಯವಿಲ್ಲವೇ? ಆಗಲಿಲ್ಲವೆಂದರೆ ಅವ ಸರ್ವಶಕ್ತ ಹೇಗಾದಾನು? ಈ ಪ್ರಶ್ನೆಗಳು ಆಗಾಗ ನನ್ನ ಮನದಲ್ಲೂ ಏಳುತ್ತವೆ. ಆಗ ಬದುಕು ನನಗೆ ನಿಜವಾಗಿಯೂ ಅಷ್ಟೊಂದು ಅನ್ಫೇರ್ ಆಗಿದೆಯೇ ಎಂದು ಪದೇ ಪದೆ ಕೇಳಿಕೊಳ್ಳುತ್ತೇನೆ. ಎಲೀ ವೀಸೆಲ್ ಬರೆದ “ನೈಟ್” ಎಂಬ ಕೃತಿಯ ಒಂದು ದೃಶ್ಯ ನನಗೆ ನೆನಪಾಗುತ್ತದೆ.

“ನೈಟ್” ಹಿಟ್ಲರನ ನಾಟ್ಜಿ ಯಾತನಾಶಿಬಿರದಲ್ಲಿ ವೀಸೆಲ್ ಕಳೆದ ಭಯಾನಕ ದಿನಗಳ, ಅನುಭವಿಸಿದ ಹಿಂಸೆಯ ಅನುಭವ ಕಥನ. ಅನ್ಯಾಯ, ಅಮಾನವೀಯ ಕೃತ್ಯ, ಭೀಭತ್ಸತತೆ, ಸಾವು, ನೋವುಗಳ ನಡುವೆ ದೇವರ ಇರುವಿಕೆ, ಅವನ ಮೇಲಿನ ನಮ್ಮ ನಂಬಿಕೆಯ ಕುರಿತು ಕಠಿಣ ಸವಾಲುಗಳನ್ನು “ನೈಟ್” ಕೇಳುತ್ತದೆ.

ಅದು ಯಾತನಾಶಿಬಿರ. ಸಾವಿರಾರು ಯಹೂದಿಯರ ಮಾರಣಹೋಮ ನಡೆಯುತ್ತಿದೆ. ಕೆಲವರನ್ನು ಭುಗಿಲೆದ್ದು ಉರಿಯುವ ಒಲೆಗಳ ಒಳಕ್ಕೆ ತಳ್ಳಲಾಗುತ್ತಿದೆ. ಇನ್ನು ಹಲವರನ್ನು ನೇಣಿಗೇರಿಸಲಾಗುತ್ತಿದೆ. ಯಹೂದಿ ಜನಾಂಗದ ಪುಟ್ಟ ಕಂದಮ್ಮಗಳನ್ನು, ಮಕ್ಕಳನ್ನು ಕೊಲ್ಲಲು ಶುರುಮಾಡಿಕೊಂಡ ಹಿಟ್ಲರನ ನಾಟ್ಜೀ ಅಟ್ಟಹಾಸ ತಳವಿಲ್ಲದ ಪಾತಾಳ ತಲುಪಿದೆ. ಅಂತಹದೊಂದು ದೃಶ್ಯ ನೈಟ್ ಕೃತಿಯಲ್ಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮೂರು ನೇಣುಗಂಬಗಳು ನಿಲ್ಲಿಸಲಾಗಿದೆ. ಕುಣಿಕೆಯನ್ನು ಕತ್ತಿಗೆ ಬಿಗಿದು ಕುರ್ಚಿಯ ಮೇಲೆ ಮೂವರನ್ನು ಏರುವಂತೆ ಹೇಳಿ, ಆ ಕುರ್ಚಿಗಳನ್ನು ಅವರ ಕಾಲಿನಡಿಯಿಂದ ತೆಗೆಯಲಾಗಿದೆ. ಹಿರಿಯ ವಯಸ್ಸಿನ ಪುರುಷರು ಕೆಲವೇ ಕ್ಷಣಗಳಲ್ಲಿ ಕೊನೆಯುಸಿರೆಳೆದರೆ, ಇವರ ನಡುವೆ ನೇಣುಗಂಬ ಏರಿದ ಪುಟ್ಟ ಹುಡುಗನ ಉಸಿರು ಇನ್ನು ಸಂಪೂರ್ಣವಾಗಿ ನಿಂತಿಲ್ಲ. ಆತ ನೇಣುಗಂಬದಲ್ಲಿ ಒದ್ದಾಡುತ್ತಲೇ ಇದ್ದಾನೆ. ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಲೇ ಇರುತ್ತಾನೆ.

ಇದನ್ನು ಓದಿದ್ದೀರಾ?: ಹಿರೇಮಠ ಸಂದರ್ಶನ-1 | ಮನುಷ್ಯನಲ್ಲಿ ಮನುಷ್ಯತ್ವನೇ ಇಲ್ಲ ಅಂದ್ರೆ, ಪ್ರಕೃತಿ ಸರಿಪಡಿಸಲಾಗದ ರೀತಿ ಬುಡಮೇಲಾಗ್ತದೆ

ಇಷ್ಟಕ್ಕೇ ನಿಲ್ಲಿಸದೆ ಯಾತನಾಶಿಬಿರದ್ದಲಿದ್ದ ಉಳಿದ ಯಹೂದಿಯರನ್ನು ನೇಣುಗಂಬದ ಮುಂದೆ ಪೆರೇಡ್ ಮಾಡಿಸಲಾಗುತ್ತದೆ. ಎಲೀ ವೀಸೆಲ್ ಮತ್ತುಳಿದ ಯಹೂದಿಯರು ಪುಟ್ಟ ಹುಡುಗನ ಮುಖ ನೋಡುತ್ತಾರೆ, ಹುಡುಗನ ಹೊರಚಾಚಿದ ನಾಲಿಗೆ ಇನ್ನು ಕೆಂಪಾಗಿಯೇ ಇದೆ, ಕಣ್ಣುಗಳಲ್ಲಿ ಜೀವಕಿರಣವಿದೆ.

ಹೀಗೆ ಸಾಲಿನಲ್ಲಿ ಸಾಗುತ್ತಾ ಸಾವಿನ ದರ್ಶನ ಮಾಡುತ್ತಾ ಸಾಗುತ್ತಿದ್ದ ಎಲೀ ವೀಸೆಲ್‌ನನ್ನು ಹಿಂದಿದ್ದವ ಕೇಳುತ್ತಾನೆ- ದೇವರು ಹೀಗೆಲ್ಲಿದ್ದಾನೆ? ಎಲೀ ವೀಸೆಲ್ ಒಳದನಿ ಹೇಳುತ್ತದೆ – “ದೇವರು ಎಲ್ಲಿದ್ದಾನೆ? ಇಲ್ಲೇ ಇದ್ದಾನೆ. ನನ್ನ ಕಣ್ಣೆದುರು ನೇಣುಗಂಬದಲ್ಲಿ ನೇತಾಡುತ್ತಿದ್ದಾನೆ” ಎಂದು.

ಕಣ್ಣೆದುರಿಗೆ ದೇವರು ಸಾಯುವುದನ್ನ ಜನ ನೋಡಿದ್ದು ಇದೇ ಮೊದಲಲ್ಲ ಕೊನೆಯು ಅಲ್ಲ. “ನೈಟ್” ಕೃತಿಯಲ್ಲಿ ಬರುವ ಈ ದೃಶ್ಯಕ್ಕೂ ಗೋಲ್ಗೋಥ ಬೆಟ್ಟದ ಮೇಲೆ ಯೇಸು ಕ್ರಿಸ್ತನನ್ನು ಶಿಲುಬೆಗೇರಿಸಿದಕ್ಕೂ ಎಷ್ಟು ಸಾಮ್ಯತೆಗಳಿವೆಯಲ್ಲವೇ? ಆದರೆ ಶಿಲುಬೆ ಏರಿದ ಯೇಸು ಕ್ರಿಸ್ತ ಶುಭ ಶುಕ್ರವಾರದಂದು ಮರುಕಾಣಿಸಿಕೊಳ್ಳುತ್ತಾನೆ, ದೇವರಲ್ಲಿನ ನಂಬಿಕೆಯನ್ನು ಕಿಂಚಿತ್ತೂ ಅಲುಗಾಡದಂತೆ ಯೇಸು ಕ್ರಿಸ್ತನೇ ನೋಡಿಕೊಳ್ಳುತ್ತಾನೆ. ಇಂತಹ ನಂಬಿಕೆಗಳಾವುವು ಹಿಟ್ಲರನ ಯಾತನಾ ಶಿಬಿರದ ನಂತರ ಉಳಿದಂತಿಲ್ಲ.

ಕಾಲಚಕ್ರ ಉರುಳಿ ಇಂದು ಗಾಜಾ ಪಟ್ಟಿಯಲ್ಲಿ ಯಾವುದೇ ಪಾಪ ಪ್ರಜ್ಞೆಯಿಲ್ಲದೆ ಸಾವಿರಾರು ಮುಗ್ಧ ಮಕ್ಕಳನ್ನು ಕೊಲ್ಲುತ್ತಿರುವ ಯಹೂದಿಯರನ್ನು ಕಂಡಾಗ ದೇವರು ಎಲ್ಲಿದ್ದಾನೆ ಎಂದು ಕೇಳಿಕೊಳ್ಳುವಂತಾಗಿದೆ… ದೇವರು ಎಲ್ಲಿದ್ದಾನೆ? ನನ್ನ ಒಳದನಿ ಹೇಳುತ್ತದೆ – ದೇವರು ಅಲ್ಲೇ ಇದ್ದಾನೆ. ಗಾಜಾ ಪಟ್ಟಿಯ ಬೀದಿಗಳಲ್ಲಿ ಛಿದ್ರ ಛಿದ್ರವಾಗಿ ಬಿದ್ದಿದ್ದಾನೆ.

WhatsApp Image 2025 11 17 at 5.29.17 PM
‍ಹರೀಶ್ ಗಂಗಾಧರ್
+ posts

‍ಲೇಖಕ, ಪ್ರಾಧ್ಯಾಪಕ

ಪೋಸ್ಟ್ ಹಂಚಿಕೊಳ್ಳಿ:

‍ಹರೀಶ್ ಗಂಗಾಧರ್
‍ಹರೀಶ್ ಗಂಗಾಧರ್
‍ಲೇಖಕ, ಪ್ರಾಧ್ಯಾಪಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಸ್ರೇಲ್‌ ಮೇಲೆ ಇರಾನ್ ದಾಳಿ; 50ಕ್ಕೂ ಹೆಚ್ಚು ಸಾವು, ಇಂಟರ್‌ಸೆಪ್ಟರ್ ನಾಶ

ಇಸ್ರೇಲ್‌ನ ಪರಮಾಣು ಚಟುವಟಿಕೆಗಳ ಪ್ರಮುಖ ಕೇಂದ್ರವೆಂದೇ ಗುರುತಿಸಲ್ಪಟ್ಟಿರುವ ದಕ್ಷಿಣದ ಡಿಮೋನಾ ನಗರದ...

ಅಸ್ಸಾಂ ಅಖಾಡ: ಬಿಜೆಪಿ ಮಿತ್ರಪಕ್ಷ ಎಜಿಪಿಯಿಂದ ಶೇ. 50 ಮುಸ್ಲಿಂ ಅಭ್ಯರ್ಥಿಗಳು; ಏನಿದು ‘ಕಮಲ’ದ ಹೊಸ ರಣತಂತ್ರ?

ತಾನು ತನ್ನ ಸೈದ್ಧಾಂತಿಕ ನಿಲುವಿನಂತೆ ಮುಸ್ಲಿಮರಿಗೆ ಟಿಕೆಟ್ ನಿರಾಕರಿಸಿದರೂ, ಅಧಿಕಾರ ಹಿಡಿಯುವ...

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...