ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಅವರ ಸರ್ಕಾರದಲ್ಲಿ ಹೆಚ್ಚುತ್ತಿರುವ ಅಪರಾಧ, ಭ್ರಷ್ಟಾಚಾರ, ಹಿಂಸಾಚಾರ ಹಾಗೂ ಸರ್ಕಾರದ ಭದ್ರತಾ ವೈಫಲ್ಯದ ವಿರುದ್ಧ ಮೆಕ್ಸಿಕೋ ನಗರದಲ್ಲಿ ಶನಿವಾರ ಜನರೇಷನ್ ಝಡ್ ನ (Gen Z) ಸಾವಿರಾರು ಯುವಕರು ಬೀದಿಗಿಳಿದು ಪ್ರತಿಭಟನಾ ರ‍್ಯಾಲಿ ನಡೆಸಿದರು.
ದಕ್ಷಿಣ ಅಮೆರಿಕದಲ್ಲಿರುವ ಮೆಕ್ಸಿಕೋ ನಗರದಲ್ಲಿ ನಡೆಯುತ್ತಿರುವ ಈ ಜನರೇಷನ್ ಝಡ್ ಪ್ರತಿಭಟನೆಯಲ್ಲಿ, ಇದೇ ತಿಂಗಳ ನವೆಂಬರ್ 1 ರಂದು ಸಾರ್ವಜನಿಕವಾಗಿ ಮೇಯರ್ ಕಾರ್ಲೋಸ್ ಮಾಂಜೊನನ್ನು ಹತ್ಯೆ ಮಾಡಲಾಗಿದೆ. ಅದೇ ರೀತಿ ನಗರದಲ್ಲಿ ಹಲವು ಹತ್ಯೆಗಳು ನಡೆದಿವೆ, ಮತ್ತು ಅಧ್ಯಕ್ಷೆ ಕ್ಲೌಡಿಯಾ ಭ್ರಷ್ಟಚಾರದಲ್ಲಿ ಮುಳುಗಿದ್ದಾರೆ ಎಂದು ಘೋಷಣೆಗಳನ್ನು ಕೂಗಿದರು. ಈ ರ‍್ಯಾಲಿ ಪ್ರತಿಭಟನೆಗೆ ವಿರೋಧ ಪಕ್ಷಗಳ ಬೆಂಬಲವು ಜನರೇಷನ್ ಝಡ್ ಯುವಕರಿಗೆ ದೊರೆತಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಶನಿವಾರ (ನವೆಂಬರ್ 15, 2025) ನಡೆದ ಈ ಪ್ರತಿಭಟನಾ ರ‍್ಯಾಲಿಯಲ್ಲಿ ಮುಸುಕು ಧರಿಸಿದ್ದ ಕೆಲ ಯುವಕರ ಗುಂಪು, ಅಧಕ್ಷೆ ಕ್ಲೌಡಿಯಾ ಶೀನ್‌ಬಾಮ್ ಅರಮನೆಯ ಸುತ್ತಲಿನ ಬೇಲಿಗಳನ್ನು ಕಿತ್ತು ಒಳನುಗ್ಗಲು ಪ್ರಯತ್ನಿಸಿತು. ಈ ವೇಳೆ ಕಲ್ಲು ತೂರಾಟ, ಜೊತೆಗೆ ಅಲ್ಲಿದ್ದ ಪೊಲೀಸರು ಯುವಕರನ್ನು ಚದುರಿಸಲು ಅಶ್ರುವಾಯುಗಳನ್ನು ಸಿಡಿಸಿದರು ಮತ್ತು ಪೊಲೀಸರು ಮತ್ತು ಯುವಕರ ನಡುವೆ ಘರ್ಷಣೆ ಸಹ ನಡೆಯಿತು. 90ರ ದಶಕದ ಉತ್ತರಾರ್ಧ ಮತ್ತು 2010 ರ ಒಳಗೆ ಜನಿಸಿದ ಯುವಕರ ಗುಂಪನ್ನು ಜನರೇಷನ್ ಝಡ್ ಎಂದು ಕರೆಯಲಾಗುತ್ತದೆ.
ಈ ಘಟನೆಯಲ್ಲಿ 100ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಈಗಾಗಲೇ 40ಕ್ಕೂ ಹೆಚ್ಚು ಪೊಲೀಸರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲೇ ಸ್ಥಳೀಯದಲ್ಲಿದ್ದ ಹಲವಾರು ನಾಗರಿಕರು ಸಹ ಗಾಯಗೊಂಡಿದ್ದಾರೆ.
ಇದೇ ತಿಂಗಳ ಆರಂಭದಲ್ಲಿ ಹತ್ಯೆಯಾದ ಒಬ್ಬ ಮೇಯರ್‌ಗೆ ನ್ಯಾಯ ಕೇಳಲು ಆರಂಭವಾದ ಜನರೇಷನ್ ಝಡ್ ಪ್ರತಿಭಟನೆ ಶನಿವಾರ ಹಿಂಸಾಚಾರಕ್ಕೆ ತಿರುಗಿತು. “ಮೇಯರ್ ಕಾರ್ಲೋಸ್ ಸಾಯಲಿಲ್ಲ. ಅವರನ್ನು ಸರ್ಕಾರವೇ ಕೊಂದಿತು” ಎಂದು ಘೋಷಣೆಗಳನ್ನು ಕೂಗಿದರು.
“ನಮಗೆ ಹೆಚ್ಚಿನ ಭದ್ರತೆ ಬೇಕು. ಭದ್ರತಾ ವೈಫಲ್ಯಗಳು ಸರಿಯಾಗಬೇಕು” ಎಂದು ಪ್ರತಿಭಟನೆಯಲ್ಲಿ ತೊಡಗಿದ್ದ 29 ವರ್ಷದ ಆಂಡ್ರೆಸ್ ಮಾಸಾ ಹೇಳಿದ್ದಾರೆ. ಅದೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 43 ವರ್ಷದ ವೈದ್ಯೆ ಅರಿಜ್‌ಬೆತ್ ಗಾರ್ಸಿಯಾ, “ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಹೆಚ್ಚಿನ ಹಣಕಾಸು ಒದಗಿಸುಬೇಕು” ಎಂದರು.
ಈ ಪ್ರತಿಭಟನ ರ‍್ಯಾಲಿಯಲ್ಲಿ ಭಾವಹಿಸಿದ ಹಲವಾರು ಯುವಕರನ್ನು ಬಂಧಿಸಲಾಗಿದೆ. ಈ ಪ್ರತಿಭಟನೆಯ ಮೂಲಕ ಶೀನ್ ಬಾಮ್ ಅವರು ಸರ್ಕಾರದ ಭ್ರಷ್ಟಾಚಾರದ ವಿರುದ್ಧ ನೇರವಾಗಿವಾಗಿ ಗುರಿಮಾಡಲಾಗಿದೆ.
ಸಾಮಾಜಿಕ ಮಾಧ್ಯಮದ ಮೇಲಿನ ನಿಷೇಧದ ವಿರುದ್ಧ ಸೆಪ್ಟೆಂಬರ್‌ನಲ್ಲಿ ನೇಪಾಳದಲ್ಲಿ ಅತಿದೊಡ್ಡ “ಜನರೇಷನ್ ಝಡ್” ಪ್ರತಿಭಟನೆಗಳು ನಡೆದವು ಮತ್ತು ಆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದಲ್ಲದೇ, ದೇಶದ ಪ್ರಧಾನ ಮಂತ್ರಿಯ ರಾಜೀನಾಮೆಗೆ ಕಾರಣವಾಯಿತು. ಜನರೇಷನ್ ಝಡ್ ನಡೆಸಿದ ಹೋರಾಟದ ದೊಡ್ಡ ಗೆಲುವು ಇದಾಗಿತ್ತು. ಇದೇ ಆಗಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗ ಮೀಸಲಾತಿಗಳ ವಿರುದ್ಧ ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರರು ನಡೆಸಿದ ಪ್ರತಿಭಟನೆಯ ಪರಿಣಾಮವಾಗಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶವನ್ನು ತೊರೆಯಬೇಕಾಯಿತು.





