ಜಗತ್ತಿನ ಗಮನ ಸೆಳೆದ ಒಂದು ಬಂಧನ; ಗ್ರೆಟಾ ಥನ್​ಬರ್ಗ್ ಬಗ್ಗೆ ನೀವೆಷ್ಟು ಬಲ್ಲಿರಿ?

Date:

ವಿಶ್ವಸಂಸ್ಥೆಯ ಹವಾಮಾನ ವೈಪರೀತ್ಯ ಶೃಂಗಸಭೆಯಲ್ಲಿ 15 ವರ್ಷದ ಗ್ರೆಟಾ ಥನ್​ಬರ್ಗ್ ಮಾಡಿದ ಭಾಷಣಕ್ಕೆ ಜಗತ್ತೇ ನಿಬ್ಬೆರಗಾಗಿತ್ತು. ಹವಾಮಾನ ವೈಪರೀತ್ಯದಿಂದ ಇಡೀ ಜಗತ್ತು ವಿನಾಶದಂಚಿನತ್ತ ಸಾಗುತ್ತಿದೆ. ಎಲ್ಲರೂ ಯಾಕೆ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದ ಈ ಹುಡುಗಿ ನೇರಾನೇರ ಮೊನಚು ಮಾತುಗಳಿಂದ ವಿಶ್ವನಾಯಕರನ್ನು ತಿವಿದಿದ್ದರು.

ಪ್ಯಾಲೆಸ್ತೀನ್ ಪರ ಉಪವಾಸ ಸತ್ಯಾಗ್ರಹಿಗಳನ್ನು ಬೆಂಬಲಿಸಿ ಮಂಗಳವಾರ ಲಂಡನ್‌ನಲ್ಲಿ ನಡೆದ ಪ್ರದರ್ಶನದ ಸಂದರ್ಭದಲ್ಲಿ ಸ್ವೀಡಿಷ್ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಅವರನ್ನು ಬ್ರಿಟಿಷ್ ಪೊಲೀಸರು ಬಂಧಿಸಿದ್ದಾರೆ. ಆಸ್ಪೆನ್ ಇನ್ಶುರೆನ್ಸ್‌ನ ಲಂಡನ್ ಕಚೇರಿಗಳ ಹೊರಗೆ “ಪ್ರಿಸನರ್ಸ್ ಫಾರ್ ಪ್ಯಾಲೆಸ್ತೀನ್” ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾಗ ಥನ್‌ಬರ್ಗ್ ಅವರನ್ನು ಭಯೋತ್ಪಾದನಾ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ ಎಂದು ಗುಂಪು ಹೇಳಿದೆ ಎಂದು ಯುಕೆ ಅಭಿಯಾನ ಗುಂಪು ಡಿಫೆಂಡ್ ಅವರ್ ಜ್ಯೂರೀಸ್ ಅನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ಬಂಧನದ ಸಮಯದಲ್ಲಿ ಥನ್‌ಬರ್ಗ್ “ನಾನು ಪ್ಯಾಲೆಸ್ತೀನ್ ಆಕ್ಷನ್ ಕೈದಿಗಳನ್ನು ಬೆಂಬಲಿಸುತ್ತೇನೆ. ನಾನು ನರಮೇಧವನ್ನು ವಿರೋಧಿಸುತ್ತೇನೆ” ಎಂಬ ಫಲಕವನ್ನು ಹಿಡಿದಿದ್ದರು ಅಂತ ಹೇಳಲಾಗಿದೆ.

ಪ್ಯಾಲೆಸ್ತೀನ್ ಆಕ್ಷನ್ – ಇದು ಒಂದು ಜನಾಂದೋಲನ, ಇದು ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನ ಪೂರೈಸುವ ಕಂಪನಿಗಳ ವಿರುದ್ದ ಪ್ರತಿಭಟನೆಗಳನ್ನು ಮಾಡುತ್ತದೆ. ಜುಲೈ 2025ರಲ್ಲಿ ಯುಕೆ ಸರ್ಕಾರ ಇದನ್ನು “ಭಯೋತ್ಪಾದನಾ ಸಂಘಟನೆ” ಎಂದು ನಿಷೇಧಿಸಿತು. ಅಂದಿನಿಂದ, ಈ ಸಂಘಟನೆಯ ಸದಸ್ಯರನ್ನು ಭಯೋತ್ಪಾದಕರು ಎಂದು ಆರೋಪಿಸಿ ಜೈಲಿಗೆ ಹಾಕಲಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
arrest 9

ಬಂಧಿಸಿದವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಮತ್ತು ಇಂತಹ ಆರೋಪಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ, ಸುಮಾರು ಎಂಟು ಮಂದಿ ಪ್ಯಾಲೆಸ್ತೀನ್ ಆಕ್ಷನ್‌ ಹೆಸರಲ್ಲಿ ನವೆಂಬರ್ 2 ರಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಈಗಾಗಲೇ ಒಂದು ತಿಂಗಳು ಕಳೆದಿದೆ ಮತ್ತು 6 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇನ್ನೂ ಈ ಭಯೋತ್ಪಾದನೆ ಹೆಸರಲ್ಲಿ, ಯಾವುದೇ ಆಧಾರವಿಲ್ಲದ ಆರೋಪದಲ್ಲಿ ಹಲವರು ಒಂದು ವರ್ಷಕ್ಕಿಂತಲೂ ಹೆಚ್ಚು ಜೈಲಿನಲ್ಲಿದ್ದಾರೆ. ಇದು ನ್ಯಾಯನಾ? ಇದು ಮಾನವ ಹಕ್ಕುಗಳ ಉಲ್ಲಂಘನೆ ಅಲ್ಲವೇ? ಗ್ರೇಟಾ ಥನ್‌ಬರ್ಗ್ ಅವರು ಬಂಧಿತರ ಜೊತೆ ನಿಂತಿದ್ದರು. ಅವರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಡಿ. ೨೨, ಸೋಮವಾರ, ನೂರಾರು ಸಂಖ್ಯೆಯ ಪ್ರತಿಭಟನಾಕಾರರು ಆಸ್ಪನ್ ಇನ್ಸೂರನ್ಸ್ ಕಚೇರಿಯ ಹೊರಗೆ ಪ್ರತಿಭಟಿಸಿದ್ದರು. ಏಕೆಂದರೆ ಇದೇ ಕಂಪನಿ ಇಸ್ರೇಲ್‌ನ ಆಯುಧ ಕೈಗಾರಿಕೆಗಳನ್ನು ಬೆಂಬಲಿಸುತ್ತಿದೆ. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕೆ ಗ್ರೆಟಾ ಥನ್‍ಬರ್ಗ್ ಅವರನ್ನೂ ಬಂಧಿಸಲಾಗಿದೆ.

ಯಾರೀಕೆ ಅತಿ ಕಿರಿಯ ಪರಿಸರ ಕಾರ್ಯಕರ್ತೆ ಗ್ರೆಟಾ?

ಈಕೆಯ ಪೂರ್ತಿ ಹೆಸರು ಗ್ರೆಟಾ ಎಲಿಯೊನೊರಾ ಅರ್ನ್ಮನ್ ಥನ್‍ಬರ್ಗ್, ವಯಸ್ಸು 22, ಹುಟ್ಟಿದ್ದು ಸ್ವೀಡನ್ ದೇಶದ ಸ್ಟಾಕ್ ಹೋಂನಲ್ಲಿ. 2020ರಲ್ಲಿ ಭಾರತದ ದೆಹಲಿ ಗಡಿಯಲ್ಲಿ ರೈತರು ನಡೆಸಿದ್ದ ಹೋರಾಟಕ್ಕೂ ಈಕೆ ಬೆಂಬಲವನ್ನು ನೀಡಿದ್ದರು. ಈ ಕಾರಣಕ್ಕೆ ಬಲಪಂಥೀಯರಿಂದ ಟ್ರೋಲ್‌ಗೆ ಒಳಗಾಗಿದ್ದರು. ತನ್ನ ಹೋರಾಟದಲ್ಲಿ ಲೆಕ್ಕವಿಲ್ಲದಷ್ಟು ಬಾರಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದಾರೆ ಗ್ರೆಟಾ.

photo 419164

ಗ್ರೆಟಾ ಟಿನ್ಟಿನ್ ಎಲಿಯೊನೊರಾ ಅರ್ನ್ಮನ್ ಥನ್‍ಬರ್ಗ್ ಹುಟ್ಟಿದ್ದು, 2003ರ ಜನವರಿ 3. ಹವಾಮಾನ ಬದಲಾವಣೆಯ ಕುರಿತು ಜಾಗೃತಿ ಮೂಡಿಸುವ ಮೂಲಕ ಪ್ರವರ್ಧಮಾನಕ್ಕೆ ಬಂದ ಯುವ ಹೋರಾಟಗಾರ್ತಿ. ಸ್ವೀಡನ್‌ ಮೂಲದವರಾದ ಈಕೆಯ ತಾಯಿ ಗಾಯಕಿ. ತಂದೆ ನಟ. ತನ್ನ ಎಂಟನೇ ವಯಸ್ಸಿಗೆ ಪರಿಸರ ಸಂರಕ್ಷಣಾ ಹೋರಾಟಕ್ಕೆ ಧುಮುಕಿದ ಗ್ರೆಟಾ ಇದೀಗ ಜಾಗತಿಕ ಮಟ್ಟದಲ್ಲಿ ಹೆಸರು ಪಡೆದ ಯುವತಿ. ಚುನಾವಣೆ ಬಳಿಕ ‘ಫ್ರೈಡೇಸ್‌ ಫಾರ್‌ ಫ್ಯೂಚರ್‌’ ಎಂಬ ಅಭಿಯಾನ ಹಮ್ಮಿಕೊಂಡರು. ಶುಕ್ರವಾರದಂದು ಶಾಲೆಗೆ ರಜೆ ಹಾಕಿ ಜಾಗತಿಕ ತಾಪಮಾನದ ವಿರುದ್ದ ಸಮರ ಸಾರಿದರು. ವಿಶ್ವ ನಾಯಕರು ಈ ಬಗ್ಗೆ ಗಮನ ಹರಸಿಬೇಕು ಎಂದು ಒತ್ತಾಯಿಸಿದರು. ಆಕೆಯ ಹೋರಾಟ ಸ್ವೀಡನ್‌ ಹೊರಗೂ ಜನಜನಿತವಾಯ್ತು. ಬೆಲ್ಜಿಯಂ, ಕೆನಾಡ, ಅಮೆರಿಕ, ಡೆನ್ಮಾರ್ಕ್‌, ಫ್ರಾನ್ಸ್‌, ನೆದೆರ್ಲೆಂಡ್‌ ಸೇರಿ ವಿಶ್ವದ ಮೂಲೆ ಮೂಲೆಗೂ ಗ್ರೆಟಾ ಅಭಿಯಾನ ತಲುಪಿತು. ತನ್ನ ನೇರ ನುಡಿಯಿಂದ ಹೆಸರಾಗಿರುವ ಈಕೆ, ಉಕ್ರೇನ್, ಪ್ಯಾಲೆಸ್ತೀನ್ ಹಕ್ಕುಗಳು ಯುದ್ದ ವಿರೋಧಿ ಹೋರಾಟದಲ್ಲೂ ಗುರುತಿಸಿಕೊಂಡವರು. ಸ್ವೀಡನ್‌ನ ಸಾಮಾನ್ಯ ಕುಟುಂಬಲ್ಲಿ ಜನಿಸಿದ ಗ್ರೆಟಾ 15 ನೇ ವಯಸ್ಸಿಗೆ ಅಂತಾರಾಷ್ಟ್ರೀಯ ತಾರೆಯಾಗಿ ಬೆಳೆದಳು. ಅಷ್ಟೇ ಅಲ್ಲ ಫೋರ್ಬ್ಸ್ ಬಿಡುಗಡೆ ಮಾಡುವ ಜಾಗತಿಕ ಪ್ರಭಾವೀ ಮಹಿಳೆಯರ ಪಟ್ಟಿಯಲ್ಲೂ ಥನ್‍ಬರ್ಗ್ ಸ್ಥಾನವನ್ನು ಪಡೆದುಕೊಂಡಿದ್ದರು.

ಇದಾದ ಬಳಿಕ ಜಾಗತಿಕ ತಾಪಮಾನದ ಬಗ್ಗೆ ಭಾಷಣ ಮಾಡಲು ಆಕೆಗೆ ವಿಶ್ವದ ವಿವಿಧ ಭಾಗಗಳಿಗೆ ಆಮಂತ್ರಣ ಸಿಗಲಾರಂಭಿಸಿತು. ಸಿಟ್ಜರ್‌ಲೆಂಡ್‌ನ ದಾವೋಸ್‌ನಲ್ಲಿ 2019 ರಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗದ ಸಭೆಯಲ್ಲಿ ಭಾಷಣ ಮಾಡಲು ಗ್ರೆಟಾಗೆ ಆಹ್ವಾನ ಲಭಿಸಿತು.

ವಿಶ್ವಸಂಸ್ಥೆಯ ಹವಾಮಾನ ವೈಪರೀತ್ಯ ಶೃಂಗಸಭೆಯಲ್ಲಿ 15 ವರ್ಷದ ಗ್ರೆಟಾ ಥನ್​ಬರ್ಗ್ ಭಾಷಣ ಬಹಳಷ್ಟು ಮಂದಿಯನ್ನು ಸ್ತಂಭೀಭೂತಗೊಳಿಸಿತ್ತು. ಹವಾಮಾನ ವೈಪರೀತ್ಯದಿಂದ ಇಡೀ ಜಗತ್ತು ವಿನಾಶದಂಚಿನತ್ತ ಸಾಗುತ್ತಿದೆ. ಎಲ್ಲರೂ ಯಾಕೆ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದ ಈ ಹುಡುಗಿ ನೇರಾನೇರ ಮೊನಚು ಮಾತುಗಳನ್ನು ವಿಶ್ವನಾಯಕರನ್ನು ತಿವಿದಿದ್ದರು. ಸ್ವೀಡನ್ ದೇಶದ ಈ ಬಾಲಕಿ ಅಂದು ಮಾಡಿದ ಭಾಷಣ ವಿಶ್ವಾದ್ಯಂತ ಶಾಲಾ ಮಕ್ಕಳನ್ನು ಬಡಿದೆಬ್ಬಿಸಿತ್ತು. ಆಕೆ ಮಾಡಿದ ಭಾಷಣ ಭಾರೀ ವೈರಲ್‌ ಆಗಿತ್ತು. ವಿಶ್ವ ನಾಯಕರ ಮುಂದೆ “ನನ್ನ ಬಾಲ್ಯವನ್ನು ಕಸಿದುಕೊಳ್ಳಲು ನಿಮಗೆಷ್ಟು ಧೈರ್ಯ?” ಎಂದು ಗುಡುಗಿದ್ದರು. ಆಕೆಯ ಈ ಭಾಷಣ ಜಗತ್ತಿನಾದ್ಯಂತ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ವಿಶ್ವ ನಾಯಕರ ಕಣ್ಣು ತೆರೆಸಿತ್ತು.

ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್‌ ಅವರನ್ನೂ ಟೀಕೆ ಮಾಡಿದ್ದ ಗ್ರೆಟಾ, ಚಿಲ್‌ ಟ್ರಂಪ್‌ ಚಿಲ್‌ ಎಂದು ಟ್ರಂಪ್‌ ಕಾಲೆಳೆದಿದ್ದರು. ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಮತದಾನ ಎಣಿಕೆ ನಿಲ್ಲಿಸಿ ಎಂದು ಟ್ರಂಪ್‌ ಟ್ವಿಟ್ಟರ್‌ನಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಗ್ರೆಟಾ, ಇದು ಹಾಸ್ಯಾಸ್ಪದ. ಕೋಪ ನಿಯಂತ್ರಿಸಲು ಡೊನಾಲ್ಡ್‌ ಕೆಲಸ ಮಾಡಬೇಕು. ತನ್ನ ಸ್ನೇಹಿತರೊಂದಿಗೆ ಹಳೇ ಸಿನಿಮಾಗೆ ಹೋಗಬೇಕು. ಚಿಲ್‌ ಡೊನಾಲ್ಡ್‌ ಚಿಲ್‌ ಎಂದು ಟ್ವೀಟ್‌ ಮಾಡಿದ್ದರು. ಇದು ಭಾರೀ ವೈರಲ್‌ ಆಗಿತ್ತು. ಇದಾದ ಬಳಿಕ ಟೈಮ್‌ ನಿಯಾತಕಾಲಿಕೆಯ ವರ್ಷದ ವ್ಯಕ್ತಿ ಎಂಬ ಗೌರವಕ್ಕೂ ಗ್ರೆಟಾ ಪಾತ್ರಳಾಗಿದ್ದರು. ಪರಿಸರ ಮತ್ತು ಹವಾಮಾನದ ವಿಚಾರಕ್ಕೆ ಸಂಬಂಧಿಸಿದಂತೆ ಈಕೆಯ ಹೋರಾಟಕ್ಕೆ ಗೋಲ್ಡನ್ ಕಮೆರಾ, ರಾಚೆಲ್ ಕಾರ್ಸೆನ್ ಸೇರಿದಂತೆ ಹಲವು ಪ್ರಶಸ್ತಿಗಳು ಬಂದಿವೆ.

Gretha

ಇದನ್ನೂ ಓದಿ ಈ ದಿನ ಸಂಪಾದಕೀಯ | ಕೇರಳಕ್ಕೆ ಕಾಲಿಟ್ಟ ಕೋಮುದ್ವೇಷಿ ಗುಂಪುಹತ್ಯೆಯ ಪಿಡುಗು!

2020 ರಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸಿದ್ದ ಪ್ರತಿಭಟನೆ ಜಗತ್ತಿನ ಗಮನವನ್ನ ಸೆಳೆದಿತ್ತು. ಅಂತಾರಾಷ್ಟ್ರೀಯ ತಾರೆಯರು ರೈತರ ಹೋರಾಟ ಬೆಂಬಲಿಸಿ ಮಾಡಿದ ಟ್ವೀಟ್‌ನಿಂದಾಗಿ ರೈತರ ಹೋರಾಟ ಮತ್ತಷ್ಟು ಕಾವು ಪಡೆದುಕೊಂಡಿತ್ತು. ಈ ಹೋರಾಟವನ್ನು ಬೆಂಬಲಿಸಿ ಗ್ರೆಟಾ ಥನ್‌ಬರ್ಗ್‌ ಕೂಡ ಟ್ವೀಟ್‌ ಮಾಡಿದ್ದರು. ಇದು ಭಾರೀ ಚರ್ಚೆಗೂ ಕೂಡ ಗ್ರಾಸವಾಗಿತ್ತು. “ರೈತರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ರೈತರ ಬಗ್ಗೆ ಭಾರತ ಹೇಗೆಲ್ಲಾ ಕಾಳಜಿ ವಹಿಸಬೇಕು” ಎಂದು ತನ್ನ ಕಾಳಜಿಯನ್ನು ಟ್ವಿಟರ್​ ಮೂಲಕ ಹೇಳಿಕೊಂಡಿದ್ದರು.

ಇದೀಗ ಹೋರಾಟಗಾರ್ತಿಯ ಬಂಧನಕ್ಕೆ ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಸರ್ವಾಧಿಕಾರಿ ಸರ್ಕಾರಗಳು ಹೇಗೆ ಹೋರಾಟಗಾರರನ್ನು ಮಣಿಸತ್ತೆ ಅನ್ನೋದಕ್ಕೆ ಇದೂ ಒಂದು ಉದಾಹರಣೆ ಅಂತ ಜನರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...