ಶೇಖ್ ಹಸೀನಾಗೆ ಮರಣದಂಡನೆ; ʼಮಾನವೀಯತೆಯ ವಿರುದ್ಧದ ಅಪರಾಧʼ- ನ್ಯಾಯಮಂಡಳಿ

Date:

ಉದ್ಯೋಗದಲ್ಲಿ ಮೀಸಲಾತಿ ನೀಡುವಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು 2024ರ ಜುಲೈನಲ್ಲಿ ಬಾಂಗ್ಲಾದೇಶದಾದ್ಯಂತ ಉಗ್ರ ಸ್ವರೂಪದಲ್ಲಿ ಪ್ರತಿಭಟನೆ ನಡೆಸಿದ್ದರು. ಜುಲೈನಲ್ಲಿ ಆರಂಭವಾದ ಪ್ರತಿಭಟನೆಯು ಆಗಸ್ಟ್ 5 ರಂದು ತೀವ್ರಗೊಂಡಿತು. ಇದರ ಬೆನ್ನಲ್ಲೆ ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಲು ಸೇನೆ ಮತ್ತು ಪೊಲೀಸರಿಗೆ ಶೇಖ್ ಹಸೀನಾ ಆದೇಶಿದ್ದರು.

2024ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ದಂಗೆಯ ಸಂದರ್ಭದಲ್ಲಿ ಆಗಿನ ಪ್ರಧಾನಿ ಶೇಖ್ ಹಸೀನಾ ‘ಮಾನವೀಯತೆ ವಿರುದ್ಧ ಅಪರಾಧ ಎಸಗಿದ್ದಾರೆ’ ಎಂದು ತೀರ್ಮಾನಿಸಿ ಬಾಂಗ್ಲಾದೇಶದಲ್ಲಿರುವ ಅಂತರರಾಷ್ಟ್ರಿಯ ಅಪರಾಧ ನ್ಯಾಯಮಂಡಳಿಯು, 78 ವರ್ಷದ ಶೇಖ್ ಹಸೀನಾ ಅವರಿಗೆ ಮರಣ ದಂಡನೆ ವಿಧಿಸಿದೆ.

ಉದ್ಯೋಗದಲ್ಲಿ ಮೀಸಲಾತಿ ನೀಡುವಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಕಳೆದ ವರ್ಷ ಜುಲೈನಲ್ಲಿ ಬಾಂಗ್ಲಾದೇಶದಾದ್ಯಂತ ಉಗ್ರ ಸ್ವರೂಪದಲ್ಲಿ ಪ್ರತಿಭಟನೆ ನಡೆಸಿದ್ದರು. ಜುಲೈನಲ್ಲಿ ಆರಂಭವಾದ ಪ್ರತಿಭಟನೆಯು ಆಗಸ್ಟ್ 5 ರಂದು ತೀವ್ರಗೊಂಡಿತು. ಇದರ ಬೆನ್ನಲ್ಲೆ ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಲು, ಅವರ ಹತ್ಯೆ ಮಾಡಲು ಸೇನೆ ಮತ್ತು ಪೊಲೀಸರಿಗೆ ಶೇಖ್ ಹಸೀನಾ ಆದೇಶಿದ್ದರು. ಆ ಪ್ರತಿಭಟನೆಯಲ್ಲಿ ಢಾಕಾದಲ್ಲಿ ಆರು ಮಂದಿ ಪ್ರತಿಭಟನಕಾರರನ್ನು ಪೊಲೀಸರು ಹತ್ಯೆ ಮಾಡಿದರು. ಆಕ್ರೋಶಗೊಂಡ ವಿದ್ಯಾರ್ಥಿಗಳು ಪ್ರಧಾನಿ ಶೇಖ್ ಹಸೀನಾ ಅವರ ಮನೆಗೆ ನುಗ್ಗಿ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ. ಇದರ ಬೆನ್ನಲ್ಲೆ ಶೇಖ್ ಹಸೀನಾ ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಅದೇ ದಿನ ಬಾಂಗ್ಲಾದೇಶವನ್ನು ತೊರೆದು ಭಾರತಕ್ಕೆ ಪಲಾಯನ ಮಾಡಿದ್ದರು. ಸದ್ಯ ಹಸೀನಾ ಅವರು ಭಾರತದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇದರ ಬಳಿಕ ಹಸೀನಾ ಅವರ ಸರ್ಕಾರ ಪತನಗೊಂಡಿತು. ಆ ಬಳಿಕ ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ಅಧಿಕಾರದಲ್ಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿ : ಬಾಂಗ್ಲಾ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ ಮರಣದಂಡನೆ ವಿಧಿಸಿದ ಅಪರಾಧ ನ್ಯಾಯಮಂಡಳಿ

ಹಸೀನಾ ಅವರ ವಿರುದ್ಧ ಐದು ಆರೋಪಗಳು ದಾಖಲಾಗಿದ್ದವು. ಈ ಐದೂ ಆರೋಪಗಳಲ್ಲೂ ಅವರು ದೋಷಿ ಎಂದು ಸಾಬೀತಾಗಿದೆ ಎಂದು ನ್ಯಾಯಮಂಡಳಿ ಹೇಳಿದೆ. ಅದರಲ್ಲಿ 3 ಆರೋಪಗಳನ್ನು ಆಧರಿಸಿ ಸದ್ಯ ಮರಣದಂಡನೆ ವಿಧಿಸಲಾಗಿದೆ. ನ್ಯಾಯಮಂಡಳಿ ನೀಡಿರುವ ತೀರ್ಪಿನ ಪ್ರಕಾರ “ಹಸೀನಾ ಅವರು ಪ್ರತಿಭಟನೆಯನ್ನು ದಮನ ಮಾಡುವ ಸಲುವಾಗಿ ನಡೆಸಿದ ಹಿಂಸೆಯ ‘ಮಾಸ್ಟರ್ ಮೈಂಡ್’ ಆಗಿದ್ದಾರೆ. ಹಸೀನಾ ಅವರೇ ತಪ್ಪಿತಸ್ಥರು ಎಂಬುದಕ್ಕೆ ಯಾವುದೇ ಸಂಶಯವಿಲ್ಲದಂತೆ ಸಾಕ್ಷಿ ಸಾಬೀತು ಮಾಡಲಾಗಿದೆ” ಎಂದು ಅಭಿಪ್ರಾಯಪಟ್ಟಿದೆ.

ಪ್ರಕರಣ ನಡೆದು ಬಂದ ಹಾದಿ

2024ರ ಜುಲೈ-ಆಗಸ್ಟ್ ನಲ್ಲಿ ಪ್ರತಿಭಟನೆ ನಡೆದಿದ್ದು, ಇದೇ ವೇಳೆ ಹಿಂಸಾಚಾರವೂ ನಡೆದಿತ್ತು. ಈ ಬಗ್ಗೆ ದೂರು ದಾಖಲಾಗಿತ್ತು. ಹಸೀನಾ ದೇಶವನ್ನು ತೊರೆದಿದ್ದರು. ಈ ದೂರಿನ ಅನ್ವಯ ಪೊಲೀಸರು ತನಿಖೆ ಆರಂಭಿಸಿದ್ದರು. 2025ರ ಮೇ ತಿಂಗಳಲ್ಲಿ 135 ಪುಟಗಳ ಮೊದಲ ಆರೋಪಪಟ್ಟಿ ಸಲ್ಲಿಕೆಯಾಗಿತ್ತು. ಇದಕ್ಕೆ ಪೂರಕವಾಗಿ 8,747 ಪುಟಗಳಿರುವ ದಾಖಲೆ ಮತ್ತು ಸಾಕ್ಷ್ಯಗಳು ಸಲ್ಲಿಕೆಯಾಗಿತ್ತು. ಜುಲೈ 10ಕ್ಕೆ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು ತಯಾರಿಸಲಾಯಿತು. ಆಗಸ್ಟ್ 4ರಿಂದ ವಿಚಾರಣೆ ಆರಂಭವಾಯಿತು. ನಂತರ ಆಕ್ಟೋಬರ್ 23ಕ್ಕೆ ವಿಚಾರಣೆ ಅಂತ್ಯಗೊಂಡು, ನ್ಯಾಯಮಂಡಳಿಯು 453 ಪುಟಗಳ ತೀರ್ಪು ಬರೆಯಿತು. ಸೋಮವಾರ(17/11/2025) ದಂದು ಹಸೀನಾ ಮತ್ತು ಮಾಜಿ ಐಜಿಪಿಗೆ ಮರಣದಂಡನೆಯನ್ನು ವಿಧಿಸಿ ತೀರ್ಪು ನೀಡಿತು.

ನ್ಯಾಯಮಂಡಳಿ ನೀಡಿರುವ ತೀರ್ಪಿಗೆ ಹಸೀನಾ ಅವರು ಪ್ರತಿಕ್ರಿಯಿಸಿದ್ದು, “ನನಗೆ ಯಾವುದೇ ಭಯವಿಲ್ಲ, ಜನರ ಆದೇಶವನ್ನು ಪಡೆಯದೆ ಸರ್ಕಾರದಿಂದ ಈ ನ್ಯಾಯಮಂಡಳಿಯನ್ನು ರಚಿಸಲಾಗಿದೆ. ಇಂಥ ಮೋಸದ ನ್ಯಾಯಮಂಡಳಿಯು ನೀಡಿದ ತೀರ್ಪಿದು. ಇದು ರಾಜಕೀಯ ಪ್ರೇರಿತವಾದ ತೀರ್ಪು. ಪಕ್ಷಪಾತವಾಗಿ ನನಗೆ ಮರಣದಂಡನೆ ವಿಧಿಸಿದ್ದಾರೆ. ಜನರಿಂದ ಆಯ್ಕೆಯಾದ ಪ್ರಧಾನಿಯೊಬ್ಬರನ್ನು ಮತ್ತು ಅವಾಮಿ ಲೀಗ್ ಪಕ್ಷವನ್ನು ಅಳಿಸಿ ಹಾಕುವ ಉದ್ದೇಶವು ಮಧ್ಯಂತರ ಸರ್ಕಾರಕ್ಕಿದೆ ಎಂಬುದು ಈ ತೀರ್ಪಿನಿಂದ ತಿಳಿಯುತ್ತದೆ. “ನನ್ನ ಮೇಲೆ ಆರೋಪ ಹೊರಿಸಲು ಯಾವ ಸಾಕ್ಷ್ಯಗಳನ್ನು ನ್ಯಾಯಮಂಡಳಿಯ ಎದುರು ಒದಗಿಸಿದ್ದಾರೋ ಅವರನ್ನು ಎದುರಿಸಲು ನಾನು ಭಯಪಡುವುದಿಲ್ಲ” ಎಂದಿದ್ದಾರೆ.

deccanherald2024 08 072dix55qqSh

1971ರ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನದಿಂದ ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಿದ ಸಮಯದಲ್ಲಿ ನಡೆದ ಮಾನವೀಯತೆಯ ವಿರುದ್ಧದ ಅಪರಾಧಗಳನ್ನು ತನಿಖೆ ಮಾಡಲು 2010ರಲ್ಲಿ ಹಸೀನಾ ಅವರೇ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯನ್ನು ಸ್ಥಾಪಿಸಿದ್ದರು. ಈ ಹಿಂದೆ ಅವರು ಅಧಿಕಾರದಲ್ಲಿದ್ದ ವೇಳೆಯಲ್ಲಿ ರಾಜಕೀಯ ಪ್ರೇರಿತ ಉದ್ದೇಶಗಳಿಗೆ ಹಾಗೂ ತಮಗೆ ಮನಸ್ಸಿಗೆ ಬಂದಂತೆ ಬಳಸಿಕೊಂಡಿದ್ದಾರೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಆರೋಪಿಸಿದ್ದರು. ಆದರೆ ಈಗ ಹಸೀನಾ ಅವರೇ ಈ ನ್ಯಾಯಮಂಡಳಿ ನೀಡಿರುವ ತೀರ್ಪು ‘ಮೋಸದ ತೀರ್ಪು’ ಎಂದು ಟೀಕಿಸಿದ್ದಾರೆ.

ಹಸೀನಾ ಜೊತೆ ಮಾಜಿ ಗೃಹ ಸಚಿವ ಅಸದುಝ್ಝಮಾನ್‌ ಝಾನ್‌ ಕಮಾಲ್‌ ಅವರಿಗೂ ಮರಣದಂಡನೆ ವಿಧಿಸಲಾಗಿದೆ. ಕಮಾಲ್ ಅವರೂ ಬಾಂಗ್ಲಾದಿಂದ ಪಲಾಯನ ಮಾಡಿದ್ದಾರೆ. ಇದೇ ಪ್ರಕರಣದಲ್ಲಿ ಮಾಜಿ ಐಜಿಪಿ ಚೌಧರಿ ಅಬ್ದುಲ್ಲಾ ಅಲ್-ಮಾಮೂಮ್ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ವಿಚಾರಣಾ ಪ್ರಕ್ರಿಯೆಯಲ್ಲಿ ಅಲ್-ಮಾಮುನ್ ಸಹಕರಿಸಿದ್ದಾರೆ. ಆದ್ದರಿಂದ ಅವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ನ್ಯಾಯಮಂಡಳಿ ಹೇಳಿದೆ. ಜೊತೆಗೆ ಹಸೀನಾ ಹಾಗೂ ಕಮಾಲ್ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ನ್ಯಾಯಮಂಡಳಿ ಆದೇಶಿಸಿದೆ.

2024ರ ಜುಲೈ-ಆಗಸ್ಟ್ ನಲ್ಲಿ ನಡೆದ ಪ್ರತಿಭಟನೆ ಗಂಭೀರವೆಂದು ಪರಿಗಣಿಸಿ, ಆ ಪ್ರತಿಭಟನೆಯಲ್ಲಿ ಸಾವನ್ನಪ್ಪಿದ ಹಾಗೂ ಗಾಯಗೊಂಡ ಪ್ರತಿಭಟನಕಾರರಿಗೆ ಹೆಚ್ಚಿನ ಪರಿಹಾರಗಳನ್ನು ಸರ್ಕಾರ ನೀಡಬೇಕೆಂದು ನ್ಯಾಯಮಂಡಳಿ ಹೇಳಿದೆ.

ಯಾರು ಈ ಹಸೀನಾ?

ಬಾಂಗ್ಲಾದೇಶದ ಸ್ಥಾಪಕ ಪಿತಾಮಹ ಹಾಗೂ ‘ಬಾಂಗ್ಲಾ ರಾಷ್ಟ್ರಪಿತ’ ಎಂದೇ ಖ್ಯಾತರಾಗಿದ್ದ ಮಾಜಿ ಅಧ್ಯಕ್ಷ ಶೇಖ್ ಮುಜಿಬುರ್ ರೆಹಮಾನ್ ಅವರ ಪುತ್ರಿ ಶೇಖ್ ಹಸೀನಾ. 1971ರ ಯುದ್ಧದಲ್ಲಿ ಬಾಂಗ್ಲಾದೇಶ ಪಾಕಿಸ್ತಾನದಿಂದ ಬೇರ್ಪಟ್ಟು, ಸ್ವತಂತ್ರ ರಾಷ್ಟ್ರವಾಗಿ ಸ್ಥಾಪನೆಯಾಯಿತು. ಅದಾದ 4 ವರ್ಷಗಳ ನಂತರ 1975ರಲ್ಲಿ ನಡೆದ ಮಿಲಿಟರಿ ದಂಗೆಯಲ್ಲಿ ಮುಜಿಬುರ್ ರೆಹಮಾನ್ ಹತ್ಯೆಗೀಡಾಗಿದ್ದರು.

ಅವಾಮಿ ಲೀಗ್ ಪಕ್ಷದ ನಾಯಕಿಯಾಗಿ 1996ರಲ್ಲಿ ಹಸೀನಾ ಪ್ರಧಾನ ಮಂತ್ರಿಯಾಗಿ ಮೊದಲ ಬಾರಿಗೆ ಆಯ್ಕೆಯಾಗಿ ಬಂದರು. 1949ರಲ್ಲಿ ಸ್ಥಾಪನೆಯಾದ ಅವಾಮಿ ಲೀಗ್ 1971ರ ಯುದ್ಧದಲ್ಲಿ ಬಾಂಗ್ಲಾ ಸ್ವತಂತ್ರಗೊಳ್ಳಲಿ ಸಾಕಷ್ಟು ಶ್ರಮಿಸಿತ್ತು. ಈಗ ಅವಾಮಿ ಲೀಗ್ ನೋಂದಣೆಯನ್ನು ರದ್ದುಗೊಳಿಸಲಾಗಿದೆ ಮತ್ತು ಅದರ ರಾಜಕೀಯ ಚಟುವಕೆಗಳಿಗೆ ನಿಷೇಧ ಹೇರಲಾಗಿದೆ.

Bangladesh Violence 01556

2001ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಖಲೀದಾ ಜಿಯಾ ನೇತೃತ್ವದ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ವಿರುದ್ಧ ಶೇಖ್ ಹಸೀನಾ ಅವರ ಪಕ್ಷ ಸೋಲಬೇಕಾಯಿತು. ಮತ್ತೆ 2009ರಲ್ಲಿ ಪ್ರಧಾನಿ ಹುದ್ದೆಗೆ ಏರಿದ ಹಸೀನಾ 2024ರವರೆಗೆ ಪ್ರಧಾನಿ ಸ್ಥಾನದಲ್ಲಿದ್ದರು. ಸತತ 15 ವರ್ಷಗಳು ದೀರ್ಘ ಅಧಿಕಾರವನ್ನು ಅನುಭವಿಸಿದ್ದಾರೆ.

ಉದ್ಯೋಗ ಮೀಸಲಾತಿಗಾಗಿ ಹೊತ್ತಿ ಉರಿದ ಬಾಂಗ್ಲಾದೇಶ

ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಕಳೆದ ವರ್ಷ ಜುಲೈ ತಿಂಗಳಲ್ಲಿ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕೊಟ್ಟಿಲ್ಲ ಜೊತೆಗೆ ನಿರುದ್ಯೋಗದ ಸಮಸ್ಯೆ ಹೆಚ್ಚಾಗುತ್ತಿದೆ ಮೂಲಕ ಎಂದು ಸಾವಿರಾರು ಯುವಕರು ಬೀದಿಗಿಳಿದು ಪ್ರತಿಭಟಿಸಿದರು. ಪ್ರತಿಭಟನಕಾರರು ಹಸೀನಾ ರಾಜೀನಾಮೆ ಕೊಡಬೇಕು ಎಂದು ಘೋಷಣೆಗಳನ್ನು ಕೂಗಿದರು. ಇಡೀ ಬಾಂಗ್ಲಾದೇಶದಲ್ಲಿಯೇ ದೊಡ್ಡ ದಂಗೆ ಎದ್ದಿತು. ಈ ದಂಗೆಯು ದೇಶದಾದ್ಯಂತ ಅಶಾಂತಿಯನ್ನು ಸೃಷ್ಟಿಸಿದ್ದು, ನೂರಾರು ನಾಗರಿಕರ ಸಾವಿಗೆ ಕಾರಣವಾಯಿತು.

1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ನಂತರ, ರಾಷ್ಟ್ರವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಪುನರ್‌ರಚಿಸಲಾಯಿತು. ರಾಜ್ಯದ ರಚನೆಯ ಮೂಲದಲ್ಲಿ ಶೇಖ್ ಹಸೀನಾ ಅವರ ತಂದೆ, ಶೇಖ್ ಮುಜಿಬುರ್ ರೆಹಮಾನ್ ನೀಡಿದ ಪ್ರಮುಖ ಭರವಸೆಗಳಲ್ಲಿ ಒಂದೆಂದರೆ, ಪಾಕಿಸ್ತಾನಿ ಮಿಲಿಟರಿಯನ್ನು ಎದುರಿಸಿ ಸ್ವತಂತ್ರ ಬಾಂಗ್ಲಾದೇಶ ರಚನೆಗೆ ತ್ಯಾಗ ಮತ್ತು ಬಲಿದಾನ ನೀಡಿದವರಿಗೆ ನ್ಯಾಯ ಒದಗಿಸುತ್ತೇವೆ ಎಂಬ ಭರವಸೆ ನೀಡಿದ್ದರು.

1829386 screenshot2024 08 07at83

1972 ರಲ್ಲಿ ಮುಜಿಬುರ್ ರೆಹಮಾನ್ ಸ್ವಾತಂತ್ರ ಹೋರಾಟಗಾರರಿಗೆ ಉದ್ಯೋಗದಲ್ಲಿ ಕೋಟಾ ನೀಡಲು ತೀರ್ಮಾನಿಸಿದರು. ಇದರ ಜೊತೆಗೆ ಪಾಕಿಸ್ತಾನಿ ಮಿಲಿಟರಿಯಿಂದ ಹಿಂಸೆಗೊಳಗಾದ ಬಾಂಗ್ಲಾದೇಶದ ಮಹಿಳೆಯರಿಗೆ ಮುಜಿಬ್ ಕೋಟಾವನ್ನು ಸಹ ರೂಪಿಸಿದರು. 1975ರಲ್ಲಿ ಶೇಖ್ ಮುಜಿಬುರ್ ಹತ್ಯೆಯ ನಂತರ, ಕೋಟಾ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳು ಕಂಡುಬಂದವು.

ಹಲವು ವರ್ಷಗಳು ಕಳೆದಂತೆ, ಕೋಟಾ ವ್ಯವಸ್ಥೆಯನ್ನು ಪಡೆಯಬಹುದಾದ ಸ್ವಾತಂತ್ರ್ಯ ಹೋರಾಟಗಾರರ ಸಂಖ್ಯೆ ಕಡಿಮೆಯಾಯಿತು. ನಂತರ ಕೋಟಾದ ದುರುಪಯೋಗವೇ ಹೆಚ್ಚಾಯಿತು. ಸ್ವಾತಂತ್ರ್ಯ ಹೋರಾಟಗಾರರ ನಂತರ ಉದ್ಯೋಗಗಳನ್ನು ಅವರ ಮಕ್ಕಳು ನೀಡಲಾಗುತ್ತಿತ್ತು. ಇದನ್ನು ವಿರೋಧಿಸಿದ ಹಸೀನಾ, ಈ ಕೋಟಾದಲ್ಲಿ ಪಕ್ಷದ ಸದಸ್ಯರಿಗೂ ಸೇರಿಸುವ ಉದ್ದೇಶಿತ ತೀರ್ಮಾನವೊಂದನ್ನು ಕೈಗೊಂಡರು. ಮೀಸಲಾತಿ ಸ್ಥಾನಗಳನ್ನು ಸರಿದೂಗಿಸಲು ಇದನ್ನು ತರಲಾಗಿದೆ ಎಂದು ಸಮರ್ಥಿಸಿಕೊಂಡರು.

ಶೇಖ‌್ ಹಸೀನಾ ಆಡಳಿತದಲ್ಲಿದ್ದ ಬಾಂಗ್ಲಾದೇಶವು ಅಧಿಕಾರಶಾಹಿಗಳಿಗೆ ಮತ್ತು ಹಣವಂತರಿಗೆ ಮಣೆಹಾಕುವ ಕೆಲಸ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದವು. ಇದು ದೇಶದ ವಿದ್ಯಾವಂತ ಯುವಕರನ್ನು ಕೆರಳುವಂತೆ ಮಾಡಿತು. ಸರ್ಕಾರಿ ನೌಕರಿ ಪಡೆಯಲೆಂದು ಕಷ್ಟಪಟ್ಟು ಓದಿದ ಲಕ್ಷಾಂತರ ಯುವಕರಿಗೆ ಸಿಗದ ಮೀಸಲಾತಿ, ಮತ್ತೆ ಅಧಿಕಾರಸ್ಥರ ಮಕ್ಕಳಿಗೆ ಸಿಗುತ್ತಿರುವುದು ಇಡೀ ಬಾಂಗ್ಲಾ ಹೊತ್ತಿ ಉರಿಯುವಂತೆ ಮಾಡಿತು.

ಬಾಂಗ್ಲಾ ಮತ್ತು ಭಾರತದ ಪ್ರತಿಕ್ರಿಯೆ

ಅಂತರರಾಷ್ಟ್ರೀಯ ನ್ಯಾಯಮಂಡಳಿ ತೀರ್ಪು ನೀಡಿ, ಬಾಂಗ್ಲಾದೇಶಕ್ಕೆ ಶೇಖ್ ಹಸೀನಾ ಅವರನ್ನು ಭಾರತದಿಂದ ಹಸ್ತಾಂತರಿಸುವಂತೆ ಒತ್ತಾಯಿಸಿದ ಕೂಡಲೇ ಭಾರತೀಯ ವಿದೇಶಾಂಗ ಸಚಿವಾಲಯವು ಪ್ರತಿಕ್ರಿಯಿಸಿದೆ.

“ನ್ಯಾಯಮಂಡಳಿಯ ತೀರ್ಪನ್ನು ಭಾರತವು ಗಮನಿಸಿದೆ. ಬಾಂಗ್ಲಾದೇಶವು ನೆರೆಯ ದೇಶವಾಗಿದ್ದು ಭಾರತವು ಎರಡೂ ದೇಶಗಳ ಜನರ ಹಿತಾಸಕ್ತಿಗೆ ಬದ್ಧವಾಗಿದೆ. ಶಾಂತಿ ಪ್ರಜಾಪ್ರಭುತ್ವ ಮತ್ತು ಸ್ಥಿರತೆ ವಿಚಾರದಲ್ಲಿಯೂ ನಮಗೆ ಬದ್ಧತೆ ಇದೆ. ನಾವು ಎಲ್ಲರೊಂದಿಗೂ ಸಕಾರಾತ್ಮಕವಾಗಿ ಇರಲಿದ್ದೇವೆ” ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿಕೊಂಡಿದೆ.

ಹಸೀನಾ ಅವರು “ಅಮಾನವೀಯ” ಅಪರಾಧಗಳನ್ನು ಮಾಡಿದ್ದಾರೆ ಮತ್ತು ಅಂತಹ ವ್ಯಕ್ತಿಗಳಿಗೆ ಭಾರತ ಆಶ್ರಯ ನೀಡುವುದು “ಅತ್ಯಂತ ಸ್ನೇಹಪರವಲ್ಲದ ವರ್ತನೆ” ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯವು ಹೇಳಿದೆ. “ಅವರನ್ನು ಈ ಕೂಡಲೇ ಬಾಂಗ್ಲಾದೇಶಕ್ಕೆ ಮತ್ತಷ್ಟು ವಿಳಂಬ ಮಾಡದೇ ಮರಳಿ ಕಳುಹಿಸಬೇಕು ಎಂದು ನಾವು ಭಾರತ ಸರ್ಕಾರವನ್ನು ಕೋರುತ್ತೇವೆ” ಎಂದು ಸಚಿವಾಲಯ ಹೇಳಿದೆ.

Manoj
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...