ಇರಾಕ್, ಲಿಬಿಯಾ, ಸಿರಿಯಾ, ಅಫ್ಘಾನ್‌ನಲ್ಲಿ ಅಮೆರಿಕ ಮಾಡಿದ ಅನಾಹುತಗಳೇನು? ಇಲ್ಲಿದೆ ಓದಿ…

Date:

ಇರಾನ್‌ ಮೇಲೆ ಅಮೆರಿಕ-ಇಸ್ರೇಲ್‌ ಜಂಟಿಯಾಗಿ ‘ಆಪರೇಷನ್ ಎಪಿಕ್ ಫ್ಯೂರಿ’ ಹೆಸರಿನಲ್ಲಿ ದಾಳಿ ಆರಂಭಿಸಿ ನಾಲ್ಕು ದಿನಗಳ ಕಳೆದಿವೆ. ಈ ಯುದ್ಧದ ಆರಂಭದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಗುರಿಗಳ ಬಗ್ಗೆ ಸ್ಪಷ್ಟವಾಗಿದ್ದರು: ‘ಇರಾನ್ ಇನ್ನು ಮುಂದೆ ಪರಮಾಣು ಅಥವಾ ಸಾಂಪ್ರದಾಯಿಕ ಮಿಲಿಟರಿ ಬೆದರಿಕೆಯಾಗಿ ಉಳಿಯಬಾರದು. ಅಲ್ಲಿನ ಖಮೇನಿ ಆಡಳಿತವನ್ನು ಅಧಿಕಾರದಿಂದ ಕೆಳಗಿಳಿಸಬೇಕು’ ಎಂಬುದು ಅಮೆರಿಕದ ಉದ್ದೇಶವಾಗಿತ್ತು. ಅಂದಿನಿಂದ, ಟ್ರಂಪ್ ಮತ್ತು ಇತರ ಉನ್ನತ ಅಮೆರಿಕದ ಅಧಿಕಾರಿಗಳು ಇರಾನ್ ಮೇಲಿನ ಅಮೆರಿಕ ಮತ್ತು ಇಸ್ರೇಲಿ ವೈಮಾನಿಕ ದಾಳಿಗಳಿಗೆ ವಿವಿಧ ಕಾರಣಗಳನ್ನು ಉಲ್ಲೇಖಿಸಿದ್ದಾರೆ.

ಸೋಮವಾರ, ಯುದ್ಧದ ಬಗ್ಗೆ ಮಾತನಾಡಿದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, ‘ಪ್ರಸ್ತುತ ಸಂಘರ್ಷವು ಆಡಳಿತ ಬದಲಾವಣೆಗಾಗಿ ನಡೆಯುತ್ತಿರುವ ಯುದ್ಧವಲ್ಲ’ ಎಂದಿದ್ದಾರೆ.

ಆದರೆ, ಅಮೆರಿಕದ ಇತಿಹಾಸವನ್ನು ಗಮನಿಸಿದರೆ, ಟ್ರಂಪ್ ಅವರ ಮೂಲ ತರ್ಕವು ಈ ಮಿಲಿಟರಿ ಹಸ್ತಕ್ಷೇಪದ ಹಿಂದಿನ ಪ್ರೇರಕ ಅಂಶಗಳಲ್ಲಿ ಒಂದಾಗಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಏಕೆಂದರೆ, ಬೇರೆಲ್ಲ ದೇಶಗಳಿಗಿಂತಲೂ ಅಮೆರಿಕವು ಈ ‘ಆಡಳಿತ ಬದಲಾವಣೆ’ ಕಾರ್ಯಾಚರಣೆ ಕೃತ್ಯಗಳಲ್ಲಿ ನಿರಂತರವಾಗಿ ತೊಡಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

2019ರ ಅಧ್ಯಯನವೊಂದರ ಪ್ರಕಾರ, ಶೀತಲ ಸಮರದ ಅವಧಿಯಲ್ಲಿ (1947-1989), ಅಮೆರಿಕವು ವಿದೇಶಗಳಲ್ಲಿನ ಅಧಿಕಾರದ ಸಮತೋಲನವನ್ನು ತನ್ನ ಪರವಾಗಿ ಬದಲಾಯಿಸಲು 72 ಪ್ರಯತ್ನಗಳನ್ನು ಮಾಡಿತ್ತು. ಇವುಗಳಲ್ಲಿ 64 ಪ್ರಕರಣಗಳು ಗುಪ್ತಚರ ಸಂಸ್ಥೆಗಳ ರಹಸ್ಯ ಕಾರ್ಯಾಚರಣೆಗಳಾಗಿದ್ದವು ಮತ್ತು ಇವುಗಳ ಯಶಸ್ಸಿನ ಪ್ರಮಾಣ ಸುಮಾರು 40% ರಷ್ಟಿತ್ತು.

ಉದಾಹರಣೆಗೆ 1953ರಲ್ಲಿ, ಅಮೆರಿಕದ ವಿದೇಶಿ ಗುಪ್ತಚರ ಸಂಸ್ಥೆ ಸಿಐಎ, ಬ್ರಿಟಿಷ್ MI6 ಜೊತೆಗೂಡಿ ಆಗಿನ ಇರಾನ್ ಪ್ರಧಾನಿ ಮೊಹಮ್ಮದ್ ಮೊಸದ್ದೆಕ್ ಅವರ ಸರ್ಕಾರವನ್ನು ಉರುಳಿಸುವಲ್ಲಿ ಯಶಸ್ವಿಯಾಗಿತ್ತು. ಇದರ ಪರಿಣಾಮವಾಗಿ, ಇರಾನ್‌ನ ಹೊಸ ಆಡಳಿತಗಾರ ಶಾ ಮೊಹಮ್ಮದ್ ರೆಜಾ ಪಹ್ಲವಿ ಅವರನ್ನು ಜನರು ಹೆಚ್ಚಾಗಿ ‘ಅಮೆರಿಕದ ಕೈಗೊಂಬೆ’ಯೆಂದೇ ನೋಡಲಾರಂಭಿಸಿದರು. ಅಂತಿಮವಾಗಿ, ಪಹ್ಲವಿ ಅವರನ್ನು 1979ರ ಇಸ್ಲಾಮಿಕ್ ಕ್ರಾಂತಿಯು ಪದಚ್ಯುತಿಗೊಳಿಸಿತು. ಆ ಸಮಯದಲ್ಲಿ, ಅಯತೊಲ್ಲಾ ರುಹೊಲ್ಲಾ ಖಮೇನಿ ನೇತೃತ್ವದ ಧರ್ಮಾಧಾರಿತ ಆಡಳಿತ ಸ್ಥಾಪನೆಯಾಯಿತು.

ಈ ಧರ್ಮಾಧಾರಿತ ಆಡಳಿತವನ್ನು ಕೊನೆಗಾಣಿಸಬೇಕು, ಇರಾನ್‌ಅನ್ನು ಮರಳಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಅಮೆರಿಕ ನಿರಂತರ ಪ್ರಯತ್ನ ಮಾಡುತ್ತಲೇ ಇದೆ. ಇದೀಗ, ಟ್ರಂಪ್ ಆಡಳಿತವು ಯುದ್ಧ ಘೋಷಿಸಿದೆ. ಇರಾನ್‌ ಪರಮೋಚ್ಛ ನಾಯಕರಾಗಿದ್ದ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆಗೈದಿದೆ. ಅಮೆರಿಕವು ಇರಾನ್‌ ಮಾತ್ರವಲ್ಲದೆ, ಹಲವಾರು ರಾಷ್ಟ್ರಗಳ ಆಡಳಿತದ ಮೇಲೆ ಪ್ರಭಾವ ಬೀರಿದೆ. ಆಡಳಿತ ಬದಲಾವಣೆಗೆ ಯತ್ನಿಸಿದೆ. ಅಮೆರಿಕದ ರಹಸ್ಯ ಮತ್ತು ಬಹಿರಂಗ ‘ಆಡಳಿತ ಬದಲಾವಣೆ’ ಕಾರ್ಯಾಚರಣೆಗಳ ಅವಲೋಕನ ಇಲ್ಲಿದೆ.

ಇರಾಕ್

ಇರಾಕ್‌ನಲ್ಲಿ 2003ರಲ್ಲಿ ಸರ್ವಾಧಿಕಾರಿ ಸದ್ದಾಂ ಹುಸೇನ್ ಅವರ ಆಡಳಿತವನ್ನು ಅಮೆರಿಕವು ಪತನಗೊಳಿಸಿತು. ಅದಾದ, ಕೆಲವು ವಾರಗಳ ನಂತರ, 2003ರ ಮೇ 1ರಂದು ಯುದ್ಧದ ಅಂತ್ಯವನ್ನು ಅಧಿಕೃವಾಗಿ ಘೋಷಿಸಿದರು.

“ಸರ್ವಾಧಿಕಾರದಿಂದ ಪ್ರಜಾಪ್ರಭುತ್ವಕ್ಕೆ ಬದಲಾಗಲು ಸಮಯ ಬೇಕಾಗುತ್ತದೆ. ನಮ್ಮ ಕೆಲಸ ಮುಗಿಯುವವರೆಗೆ ನಮ್ಮ ಒಕ್ಕೂಟವು ಅಲ್ಲಿಯೇ ಇರುತ್ತದೆ. ನಂತರ, ಸ್ವತಂತ್ರ ಇರಾಕ್ ಅನ್ನು ಬಿಟ್ಟು ಹೋಗುತ್ತೇವೆ” ಎಂದು ಬುಷ್ ಹೇಳಿದ್ದರು.

ಆದರೆ, ಇರಾಕ್‌ ಅನ್ನು ಅಮೆರಿಕ ಆಕ್ರಮಿಸಿಕೊಂಡಿದ್ದ ಅವಧಿಯು ಇರಾನ್‌ನಲ್ಲಿ ಶಾಂತಿ ಅಥವಾ ಸ್ಥಿರತೆಯನ್ನು ತರಲಿಲ್ಲ: ರಾಜ್ಯ ಸಂಸ್ಥೆಗಳು ದುರ್ಬಲವಾಗಿಯೇ ಉಳಿದವು/ ನೆರೆಯ ಇರಾನ್ ಇರಾಕ್‌ನ ಸ್ಥಳೀಯ ಶಿಯಾ ಮಿಲಿಟೆಂಟ್‌ಗಳಿಗೆ ಬೆಂಬಲ ನೀಡಿತು. ಇದು ಸುನ್ನಿ ಪಡೆಗಳೊಂದಿಗೆ ಹಿಂಸಾತ್ಮಕ ಘರ್ಷಣೆಗಳಿಗೆ ಕಾರಣವಾಯಿತು. ಅಧಿಕಾರದ ಶೂನ್ಯತೆಯ ನಡುವೆ, ‘ಇಸ್ಲಾಮಿಕ್ ಸ್ಟೇಟ್’ (ISIS) ಭಯೋತ್ಪಾದಕ ಗುಂಪು ಪ್ರಬಲವಾಗಿ ಬೆಳೆದು ಇರಾಕ್, ಸಿರಿಯಾ ಮತ್ತು ಇಡೀ ಪ್ರದೇಶವನ್ನು ಮತ್ತಷ್ಟು ಅಸ್ಥಿರಗೊಳಿಸಿತು. ಇರಾಕ್ ಈಗ ಪ್ರಜಾಪ್ರಭುತ್ವವನ್ನು ಹೊಂದಿದೆ. ಅದೂ ಅಸ್ತವ್ಯಸ್ತವಾಗಿದೆ.

image 105

ಇಂದಿಗೂ ರಾಜಕೀಯ ಅಸ್ಥಿರತೆ, ಆರ್ಥಿಕ ಒತ್ತಡ, ಪರಿಸರ ಸಮಸ್ಯೆಗಳು ಮತ್ತು ಪ್ರಾದೇಶಿಕ ಪ್ರಭಾವಗಳು ಇರಾಕ್‌ಅನ್ನು ಬಾಧಿಸುತ್ತಿವೆ. ಹೆಚ್ಚಿನ ಜನರು ಬಡತನದಿಂದ ಹೊರಬರಲಾರದೆ ಹೆಣಗಾಡುತ್ತಿದ್ದಾರೆ. ನೀರು, ವಿದ್ಯುತ್ ಕೊರತೆಗಳು ಇರಾಕ್‌ ಅನ್ನು ಕಾಡುತ್ತಿವೆ.

ಅಮೆರಿಕದ ಇತಿಹಾಸಕಾರ ಜೋಸೆಫ್ ಸ್ಟೀಬ್ ಪ್ರಕಾರ, ಅಂತಹ ಪರಿಸ್ಥಿತಿಯಲ್ಲಿ ಉದಾರ ಪ್ರಜಾಪ್ರಭುತ್ವದ ಮೌಲ್ಯಗಳು ಮೇಲುಗೈ ಸಾಧಿಸುತ್ತವೆ ಎಂಬ ತಪ್ಪು ಕಲ್ಪನೆಯಲ್ಲಿ ಅಮೆರಿಕವಿತ್ತು. ಇರಾಕ್‌ನಂತಹ ಆಡಳಿತಗಳನ್ನು ಉರುಳಿಸಿದ ನಂತರ ಅವುಗಳನ್ನು ಬದಲಿಸುವುದು ತುಲನಾತ್ಮಕವಾಗಿ ಸುಲಭ ಎಂದು ಅವರು ನಂಬಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ” ಎಂದಿದ್ದಾರೆ.

ಗಮನಾರ್ಹ ಸಂಗತಿ ಎಂದರೆ, 2002ರಲ್ಲಿ ಇರಾಕ್‌ ಮೇಲೆ ಅಮೆರಿಕ ಆಕ್ರಮಣ ನಡೆಸಿದಾಗ, ಬರಾಕ್ ಒಬಾಮಾ ಅವರು ಇಲಿನಾಯ್ಸ್ ರಾಜ್ಯದ ಸೆನೆಟರ್ ಆಗಿದ್ದರು. ಆಗ ಅವರು ಅಮೆರಿಕದ ವಿದೇಶಾಂಗ ನೀತಿಯನ್ನು ಕಠುವಾಗಿ ಟೀಕಿಸಿದ್ದರು. ‘ಮೂರ್ಖತನದ ಕೆಲಸಗಳನ್ನು ಮಾಡಬೇಡಿ. ಇರಾಕ್ ಮೇಲೆ ಅಮೆರಿಕ ಆಕ್ರಮಣ ಮಾಡುವುದು ಒಂದು ಮೂರ್ಖತನದ ಮತ್ತು ಅವಿವೇಕದ ಯುದ್ಧ” ಎಂದು ಎಚ್ಚರಿಸಿದ್ದರು. ಅವರ ಈ ಎಚ್ಚರಿಕೆಯೇ ಆರು ವರ್ಷಗಳ ನಂತರ, ಅವರನ್ನು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಸ್ಥಾನಕ್ಕೇರಿಸಿತು. ಅವರು ಅಧ್ಯಕ್ಷರು ಆದರು. ಅಧ್ಯಕ್ಷರಾದ ಬಳಿಕ, ಒಬಾಮ ಧೋರಣೆಯೂ ಬದಲಾಯಿತು.

ಲಿಬಿಯಾ

2011ರಲ್ಲಿ ‘ಅರಬ್ ಸ್ಪ್ರಿಂಗ್’ ದಂಗೆಗಳು ಉತ್ತರ ಆಫ್ರಿಕಾದಾದ್ಯಂತ ಬದಲಾವಣೆಯ ಭರವಸೆಯನ್ನು ಮೂಡಿಸಿದ್ದವು. ಆಗ, ಲಿಬಿಯಾದಲ್ಲಿ ದೀರ್ಘಕಾಲದ ಆಡಳಿತಗಾರ ಮೊಹಮ್ಮರ್ ಗಡಾಫಿ ವಿರುದ್ಧದ ಪ್ರತಿರೋಧವೂ ಹೆಚ್ಚಾಯಿತು. 2002ರಲ್ಲಿ ಯುದ್ಧಗಳ ವಿರುದ್ಧ ಮಾತನಾಡಿದ್ದ ಒಬಾಮ ಅವರೇ 2011ರಲ್ಲಿ ಲಿಬಿಯಾ ವಿರುದ್ಧ ಸಂಘರ್ಷಕ್ಕಿಳಿದರು. ಅವರ ನೇತೃತ್ವದಲ್ಲಿ ಅಮೆರಿಕವು ಶೀಘ್ರದಲ್ಲೇ ಗಡಾಫಿ ವಿರೋಧಿಗಳಾದ ‘ನ್ಯಾಷನಲ್ ಟ್ರಾನ್ಸಿಶನಲ್ ಕೌನ್ಸಿಲ್’ ಪರ ನಿಂತಿತು. ಅಲ್ಲದೆ, ಲಿಬಿಯಾ ನಾಗರಿಕರ ರಕ್ಷಣೆಗಾಗಿ ಬಲಪ್ರಯೋಗಕ್ಕೆ ಅನುಮತಿ ನೀಡುವ ನಿರ್ಣಯಕ್ಕೆ ಸಮ್ಮತಿ ನೀಡುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ  ಒತ್ತಡ ಹೇರಿತು.

ನಂತರ, ಯುರೋಪಿಯನ್ ಮತ್ತು ಅರಬ್ ಮಿತ್ರರಾಷ್ಟ್ರಗಳೊಂದಿಗೆ ಸೇರಿ ಆ ನಿರ್ಣಯವನ್ನು ಜಾರಿಗೊಳಿಸಲು ಅಮೆರಿಕ ಮಿಲಿಟರಿ ಕಾರ್ಯಾಚರಣೆಗಳ ನೇತೃತ್ವ ವಹಿಸಿತು. ಆದರೆ, ಮಧ್ಯಪ್ರವೇಶಿಸಿದ ದೇಶಗಳು ನಿರ್ಣಯವನ್ನು ತಮಗಿಚ್ಛಿಸಿದಂತೆ ಅರ್ಥೈಸಿಕೊಂಡವು. ನಾಗರಿಕರ ರಕ್ಷಣೆಯನ್ನು ಬದಿಗೊತ್ತಿ, ಆಡಳಿತ ಬದಲಾವಣೆಯ ಯುದ್ಧವಾಗಿ ಬದಲಾಯಿತು.

ಲಿಬಿಯಾ ಮೇಲೆ ನ್ಯಾಟೋ ಅಡಿಯಲ್ಲಿ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ವೈಮಾನಿಕ ದಾಳಿಗಳನ್ನು ನಡೆಸಿದವು. 2011ರ ಅಕ್ಟೋಬರ್‌ನಲ್ಲಿ, ಗಡಾಫಿಯ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿದವು. ಗಡಾಫಿ ಅವರನ್ನು ನ್ಯಾಷನಲ್ ಟ್ರಾನ್ಸಿಶನಲ್ ಕೌನ್ಸಿಲ್‌ನ ಹೋರಾಟಗಾರರು ಕೊಂದರು.

image 104 4

ಲಿಬಿಯಾದಲ್ಲಿ ಆಡಳಿತ ಬದಲಾವಣೆಯಾಯಿತು. ನ್ಯಾಷನಲ್ ಟ್ರಾನ್ಸಿಷನಲ್ ಕೌನ್ಸಿಲ್ ಆಡಳಿತ ರಚಿಸಿತು. ಗಡಾಫಿ ಹತ್ಯೆ ಮತ್ತು ಆಡಳಿತ ಬದಲಾವಣೆಯು ನಾಗರಿಕರ ಮೇಲಿದ್ದ ತಕ್ಷಣದ ಅಪಾಯವನ್ನು ತೆಗೆದುಹಾಕಿತಾದರೂ, ದೇಶವನ್ನು ಇಂದಿಗೂ ಬಗೆಹರಿಯದ ಅಂತರ್ಯುದ್ಧಕ್ಕೆ ತಳ್ಳಿತು ಲಿಬಿಯಾ ಅಸ್ಥಿರತೆಗೆ ಜಾರಿತು. ಲಿಬಿಯಾದಲ್ಲಿ ಹೆಚ್ಚಾದ ದಮನ ಮತ್ತು ಭ್ರಷ್ಟಾಚಾರದ ವಿರುದ್ಧ ಬೀದಿಗೆ ಬಂದು ತಮ್ಮ ಮೂಲಭೂತ ಹಕ್ಕುಗಳಿಗಾಗಿ ಹೋರಾಟ ನಡೆಸಿದರು. ಆದರೆ, ಆ ಜನರಿಗೆ ಒಬಾಮಾ ಆಡಳಿತವು ಬೆನ್ನು ಮಾಡಿ ಹೊರಟಿತು.

ಈಗ,  ಸುಮಾರು 15 ವರ್ಷಗಳ ನಂತರವೂ, ಲಿಬಿಯಾ ರಾಜಕೀಯವಾಗಿ ವಿಭಜಿತವಾಗಿದೆ. ಲಿಬಿಯಾದಲ್ಲಿ ತ್ರಿಪೊಲಿ ಆಧಾರಿತ GNU ಮತ್ತು ಪೂರ್ವದ GNS ಆಡಳಿತ ನಡೆಸುತ್ತಿವೆ. ವ್ಯವಸ್ಥೆಯು ತೀವ್ರ ಅಸ್ಥಿರತೆಯಿಂದ ಕೂಡಿದೆ. ನಾಗರಿಕರು ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ಜರ್ಜರಿತರಾಗಿದ್ದಾರೆ. ಸಂಘರ್ಷಗಳು ನಡೆಯುತ್ತಲೇ ಇವೆ. ಆರ್ಥಿಕ ಏರಿಳಿತ ಮತ್ತು ಮಾನವೀಯ ಸಂಕಷ್ಟಗಳು ಕಾಡುತ್ತಿವೆ. ತೈಲ ಉತ್ಪಾದನೆಯು ಆರ್ಥಿಕತೆಯನ್ನು ನಿಭಾಯಿಸಲು ಸಾಧ್ಯವಾಗುತ್ತಿದ್ದರು. ಜನರ ಬದುಕು ಮಾತ್ರ ದುಸ್ಥರವಾಗಿ ಉಳಿದಿದೆ.

ಅಫ್ಘಾನಿಸ್ತಾನ

ಇರಾಕ್‌ನಲ್ಲಿನ ಹೋರಾಟವು ಜಾರ್ಜ್ ಡಬ್ಲ್ಯೂ. ಬುಷ್ ಅವರ ಏಕೈಕ ‘ಆಡಳಿತ ಬದಲಾವಣೆ’ ಯುದ್ಧವಾಗಿರಲಿಲ್ಲ. ಅಫ್ಘಾನಿಸ್ತಾನದಲ್ಲಿಯೂ ಆಡಳಿತ ಬದಲಾವಣೆ ಮಾಡುವುದು ಅಮೆರಿಕದ ಇರಾದೆಯಾಗಿತ್ತು. ಅದಕ್ಕೆ ಅಸ್ತ್ರವಾಗಿ ದೊರೆತದ್ದು 2001ರ ಸೆಪ್ಟೆಂಬರ್ 11ರಲ್ಲಿ ನ್ಯೂಯಾರ್ಕ್‌ನ ‘ಡಬ್ಲ್ಯೂಟಿಸಿ’ ಮೇಲೆ ನಡೆದ ಭಯೋತ್ಪಾದಕ ದಾಳಿ. ಈ ದಾಳಿಯನ್ನು ಸೌದಿ ಅರೇಬಿಯಾ ಮೂಲಕ ಅಮೆರಿಕವೇ ನಡೆಸಿದೆ ಎಂಬ ಆರೋಪಗಳಿವೆ. ಆದರೂ, ಈ ದಾಳಿಯನ್ನು ಮುಂದಿಟ್ಟುಕೊಂಡು, 2002ರ ಜನವರಿಯಲ್ಲಿ ಅಮೆರಿಕದ ಮಿಲಿಟರಿ ಅಫ್ಘಾನಿಸ್ತಾನದಲ್ಲಿ ‘ಆಪರೇಷನ್ ಎಂಡ್ಯೂರಿಂಗ್ ಫ್ರೀಡಮ್’ ಅನ್ನು ಪ್ರಾರಂಭಿಸಿತು. ತಾಲಿಬಾನ್ ಆಡಳಿತವನ್ನು ಶೀಘ್ರದಲ್ಲೇ ಉರುಳಿಸಲಾಯಿತಾದರೂ, ಅಮೆರಿಕ ಬೆಂಬಲಿತ ಹೊಸ ಸರ್ಕಾರವು ಸೀಮಿತ ಅವಧಿಗೆ ಮಾತ್ರ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು.

ಈ ಲೇಖನ ಓದಿದ್ದೀರಾ?: ಇರಾನ್ ಇತಿಹಾಸ, ಕಚ್ಚಾತೈಲ ಮತ್ತು ಅಮೆರಿಕದ ಆಟ!

ಜರ್ಮನಿ ಸೇರಿದಂತೆ ಅಂತರಾಷ್ಟ್ರೀಯ ಪಡೆಗಳು 2014ರಲ್ಲಿ ತಮ್ಮ ಸೈನಿಕರ ಸಂಖ್ಯೆಯನ್ನು ಕಡಿಮೆ ಮಾಡಿದ ನಂತರ, ತಾಲಿಬಾನ್ ಗುಂಪು ಕ್ರಮೇಣ ತನ್ನ ಹಿಡಿತವನ್ನು ಮರಳಿ ಪಡೆಯಿತು. ಅವರು ದಾಳಿಗಳನ್ನು ನಡೆಸಿ ಅಫ್ಘಾನ್‌ನ ಪ್ರಜಾತಾಂತ್ರಿಕ ಸರ್ಕಾರವನ್ನು ದುರ್ಬಲಗೊಳಿಸಿದರು. ಅಮೆರಿಕ ಅಧ್ಯಕ್ಷರಾಗಿ ತಮ್ಮ ಮೊದಲ ಅವಧಿಯ ಕೊನೆಯ ವರ್ಷದಲ್ಲಿ, ಡೊನಾಲ್ಡ್ ಟ್ರಂಪ್ ಅವರು ತಮ್ಮ ಸೇನೆಯನ್ನು ಅಫ್ಘಾನ್‌ನಿಂದ ಹಿಂಪಡೆಯುವ ಕುರಿತು ತಾಲಿಬಾನ್ ಜೊತೆ ಒಪ್ಪಂದ ಮಾಡಿಕೊಂಡರು. ಆದಾಗ್ಯೂ, 2021ರಲ್ಲಿ ಜೋ ಬಿಡನ್ ಅವರ ನೇತೃತ್ವದಲ್ಲಿ ಕೊನೆಯ ಅಮೆರಿಕನ್ ಸೈನಿಕರು ಅಫ್ಘಾನ್‌ನನ್ನು ತೊರೆದರು.

ಇದಾದ ಕೆಲವೇ ವಾರಗಳಲ್ಲಿ, ಅಫ್ಘಾನ್‌ನ ಸಂಪೂರ್ಣ ನಿಯಂತ್ರಣವನ್ನು ತಾಲಿಬಾನ್ ಮರಳಿ ಪಡೆಯಿತು. 2002ಕ್ಕೂ ಮೊದಲಿದ್ದ ನೀತಿ-ನಿಮಯಗಳು, ಕಟ್ಟುಪಾಡುಗಳನ್ನು ತಾಲಿಬಾನ್‌ಗಳು ಮತ್ತೆ ಹೇರಿದರು. ಮಹಿಳೆಯರನ್ನು ಮರಳಿ ಮನೆಯೊಳಗೆ ಕೂಡಿಡುವ ಧಾರ್ಮಿಕತೆಯನ್ನು ಹೇರಿದ್ದಾರೆ. ಇದೀಗ, ಅಫ್ಘಾನ್‌ ಮತ್ತೆ ತನ್ನ ಕ್ರೂರ ಇತಿಹಾಸಕ್ಕೆ ಮರಳಿದೆ. ಅಲ್ಲಿನ ಜನರು ಮತ್ತದೇ ಕ್ರೂರ ಆಡಳಿತಕ್ಕೆ ಸಿಲುಕಿದ್ದಾರೆ.

ಸಿರಿಯಾ

ಲಿಬಿಯಾ, ಅಫ್ಘಾನ್‌ ನಂತರ ಸಿರಿಯಾ ಸದರಿ ಬಂದಿತು. ಲಿಬಿಯಾದಲ್ಲಿ ತಮ್ಮ ಹಸ್ತಕ್ಷೇಪವು ಮುಕ್ತಾಯ ಹಂತಕ್ಕೆ ಬರುತ್ತಿದ್ದಂತೆ, ಸಿರಿಯಾದ ಬಶರ್ ಅಲ್-ಅಸ್ಸಾದ್ ಅವರ ಕ್ರೂರ ಆಡಳಿತವು ಅಮೆರಿಕ ಕಣ್ಣಿಗೆ ಬಿದ್ದಿತು. 2011ರಲ್ಲಿ ಲಿಬಿಯಾದಂತೆಯೇ ಅರಬ್ ದಂಗೆಯ ಭಾಗವಾಗಿ ಸಿರಿಯಾದಲ್ಲಿ ಶಾಂತಿಯುತ ಪ್ರತಿಭಟನೆಗಳು ಆರಂಭವಾದವು. ಜನರು ಬಶಾರ್ ಅಲ್-ಅಸದ್ ಅವರ ಏಕಾಧಿಪತ್ಯ ಆಡಳಿತವನ್ನು ವಿರೋಧಿಸಿ, ಪ್ರಜಾಪ್ರಭುತ್ವ ಸುಧಾರಣೆಗಳು, ಭ್ರಷ್ಟಾಚಾರ ನಿರ್ಮೂಲನೆ ಹಾಗೂ 1970ರಿಂದ ಅಧಿಕಾರದಲ್ಲಿದ್ದ ಅಸದ್ ವಂಶಾಡಳಿತದ ಅಂತ್ಯಕ್ಕೆ ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸುತ್ತಿದ್ದರು.

ಅಸದ್ ಸರ್ಕಾರವು ಈ ಪ್ರತಿಭಟನೆಗಳನ್ನು ಗುಂಡಿನ ದಾಳಿ, ಬಂಧನಗಳು, ಚಿತ್ರಹಿಂಸೆಯಂತಹ ಕಠಿಣ ದಮನದಿಂದ ಎದುರಿಸಿತು. ಇದರಿಂದ ಪ್ರತಿಭಟನೆಗಳು ಶಸ್ತ್ರಾಸ್ತ್ರಗಳೊಂದಿಗೆ ದಂಗೆಯಾಗಿ ಪರಿವರ್ತನೆಯಾದವು. ‘ಫ್ರೀ ಸಿರಿಯನ್ ಆರ್ಮಿ’ (FSA) ಮತ್ತು ಇತರ ವಿರೋಧಿ ಗುಂಪುಗಳು ಹುಟ್ಟುಕೊಂಡವು. 2012ರಿಂದ ಇದು ಪೂರ್ಣ ಅಂತರ್ಯುದ್ಧವಾಗಿ ಬದಲಾಯಿತು.

ಇದೇ ಸಮಯದಲ್ಲಿ, ಅಮೆರಿಕವು ಸಿರಿಯಾವನ್ನು ಪ್ರವೇಸಿಸಿತು. “ಅಸ್ಸಾದ್ ಅಧಿಕಾರದಿಂದ ಕೆಳಗಿಳಿಯುವ ಸಮಯ ಬಂದಿದೆ” ಎಂದು 2011ರ ಆಗಸ್ಟ್‌ನಲ್ಲಿ ಅಮೆರಿಕ ಅಧ್ಯಕ್ಷ ಒಬಾಮ ಘೋಷಿಸಿದರು. ಅಸ್ಸಾದ್ ಅವರನ್ನು ಅಧಿಕಾರದಿಂದ ಕಳೆಗಿಳಿಸುವ ಉದ್ದೇಶದಿಂದ, ಸಿರಿಯಾ ಮೇಲೆ ನಿರ್ಬಂಧ, ಸೌದಿ ಅರೇಬಿಯಾ, ಯುಕೆ, ಜೋರ್ಡನ್‌ಗಳೊಂದಿಗೆ ಸಹಯೋಗದಲ್ಲಿ ವಿರೋಧಿ ಗುಂಪುಗಳಿಗೆ ಶಸ್ತ್ರಾಸ್ತ್ರ, ತರಬೇತಿ ಮತ್ತು ಹಣದ ನೆರವು ಹಾಗೂ ವಾಯುದಾಳಿಗಳೊದಿಗೆ ಹಸ್ತಕ್ಷೇಪ ಮಾಡಿತು.

image 104

ಆದರೆ, ಅಸ್ಸಾದ್ ನೆರವಿಗೆ ರಷ್ಯಾ ಬಂದಿದ್ದರಿಂದ ಬಂಡುಕೋರರ ಪ್ರಯತ್ನಗಳು ವಿಫಲವಾದವು. ಈ ಯುದ್ಧ-ಅಂತರ್ಯುದ್ಧಗಳ ಪರಿಣಾಮ, 5 ಲಕ್ಷಕ್ಕೂ ಹೆಚ್ಚು ಸಾವು, 1.3 ಕೋಟಿ ಜನರು ಸ್ಥಳಾಂತರದೊಂದಿಗೆ ದೇಶದ ಅರ್ಧಭಾಗಕ್ಕೂ ಹೆಚ್ಚು ನಾಶವಾಯಿತು. 2017ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಟ್ರಂಪ್, ಯುದ್ಧದ ಅಂತ್ಯವನ್ನು ಘೋಷಿಸಿದರು. ಆದರೂ, 2017–2018ರಲ್ಲಿ ಅಸದ್ ಸರ್ಕಾರದ ವಿರುದ್ಧ ಅಮೆರಿಕವು ಆಗ್ಗಾಗ್ಗೆ ಮಿಸೈಲ್ ದಾಳಿಗಳನ್ನು ನಡೆಸಿತು.

ಇದೆಲ್ಲದರ ನಡುವೆ, 2024ರ ನವೆಂಬರ್-ಡಿಸೆಂಬರ್‌ನಲ್ಲಿ ‘ಹಯಾತ್ ತಹ್ರೀರ್ ಅಲ್-ಶಾಮ್’ (ಎಚ್‌ಟಿಎಸ್‌) ನೇತೃತ್ವದ ಗುಂಪುಗಳು ಸಿರಿಯಾದ ಅಲೆಪ್ಪೊ, ಹಮಾ, ಹೋಮ್ಸ್, ದಮಾಸ್ಕಸ್ ಸೇರಿ ಪ್ರಮುಖ ನಗರಗಳನ್ನು ವಶಪಡಿಸಿಕೊಂಡವು. ಪರಿಣಾಮ, ಅಸದ್ ಅವರು ರಷ್ಯಾಕ್ಕೆ ಪಲಾಯನ ಮಾಡಿದರು. ಅಸದ್ ಕುಟುಂಬದ ಆಳ್ವಿಕೆ ಅಂತ್ಯ ಕಂಡಿತು. ಎಚ್‌ಟಿಎಸ್‌ ನಾಯಕ ಅಹ್ಮದ್ ಅಲ್-ಶರಾ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿದೆ.

ಆದರೆ, ಜನಚಳುವಳಿಯಿದ್ದ ಸಿರಿಯಾದಲ್ಲಿ ಎಲ್ಲವನ್ನೂ ತ್ವರಿತವಾಗಿ ಬದಲಿಸುತ್ತೇವೆಂದು ಬಂದ ಅಮೆರಿಕವು ಸಿರಿಯಾವನ್ನು 10 ವರ್ಷಗಳ ಕಾಲ ಅಸ್ಥಿರತೆಯಲ್ಲಿರುವಂತೆ ಮಾಡಿತು. ಈಗಲೂ ಸಿರಿಯಾದಲ್ಲಿ ಸೆಕ್ಟೇರಿಯನ್ ಹಿಂಸೆ, ISIS ಪುನರುತ್ಥಾನದ ಭಯ, ಇಸ್ರೇಲ್ ದಾಳಿಗಳು, ಕುರ್ದಿಶ್-ತುರ್ಕಿ ಸಂಘರ್ಷ ಮುಂದುವರಿದಿವೆ. ಆರ್ಥಿಕ ಬೆಳವಣಿಗೆಯು ಆಮೆಗತಿಯಲ್ಲಿದೆ. ಸಿರಿಯಾದ ಅಸ್ಥಿರತೆಯುಇನ್ನೂ ಹತ್ತಾರು ವರ್ಷಗಳ ಕಾಲ ಮುಂದುವರೆಯುವ ಸಾಧ್ಯತೆಗಳಿವೆ.

ಇರಾಕ್, ಲಿಬಿಯಾ, ಸಿರಿಯಾ, ಅಫ್ಘಾನಿಸ್ತಾನ ಮಾತ್ರವಲ್ಲದೆ, ಪನಾಮ, ಗ್ರೆನಡಾ, ಡೊಮಿನಿಕನ್ ರಿಪಬ್ಲಿಕ್ ಸೇರಿದಂತೆ ಹಲವು ರಾಷ್ಟ್ರಗಳು ಅಮೆರಿಕದ ಹಸ್ತಕ್ಷೇಪದಿಂದ ಅಸ್ಥಿರಗೊಂಡಿವೆ. ವೆನೆಜುವೆಲಾದಲ್ಲಿಯೂ ಅಮೆರಿಕ ‘ಆಡಳಿತ ಬದಲಾವಣೆ’ಯ ಕಾರ್ಯಾಚರಣೆ ನಡೆಸಿದೆ. ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು 2026ರ ಜನವರಿಯಲ್ಲಿ ಟ್ರಂಪ್ ಆಡಳಿತ ಅಪಹರಿಸಿ, ನ್ಯೂಯಾರ್ಕ್‌ನಲ್ಲಿ ಬಂಧಿಸಿಟ್ಟಿದೆ. ವೆನೆಜುವೆಲಾದ ತೈಲ ಉದ್ದಿಮೆಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.

ಅಮೆರಿಕಗೆ ಬೇಕಿರುವುದು ಯಾವುದೇ ದೇಶದ ಅಭಿವೃದ್ಧಿ ಅಥವಾ ಅಲ್ಲಿನ ನಾಗರಿಕರ ಸುಭದ್ರತೆಯ ಬದುಕಲ್ಲ. ಅಮೆರಿಕ ಬಯಸುವುದು, ಇಡೀ ಜಗತ್ತು ತನ್ನ ಹಿಡಿತದಲ್ಲಿ ಇರಬೇಕೆಂದು ಮಾತ್ರ ಎಂಬುದನ್ನು ಇತಿಹಾಸವು ಸ್ಪಷ್ಟವಾಗಿ ತೋರುತ್ತಿದೆ. ಅದಕ್ಕಾಗಿ, ದುರ್ಬಲ ರಾಷ್ಟ್ರಗಳು ಮತ್ತು ತೈಲ ಮಾರುಕಟ್ಟೆಯಲ್ಲಿ ಪ್ರಾಬಲ್ಯತೆ ಹೊಂದಿರುವ ರಾಷ್ಟ್ರಗಳ ಮೇಲೆ ತನ್ನ ಹಸ್ತಕ್ಷೇಪ ನಡೆಸುತ್ತದೆ. ಅಂತಹ ರಾಷ್ಟ್ರಗಳಲ್ಲಿನ ಪ್ರಬಲ ಆಡಳಿತವನ್ನು ಕೆಡವಿ, ತನ್ನ ಕೈಗೊಂಬೆಯಾಗಿ ವರ್ತಿಸುವ ಸರ್ಕಾರವನ್ನು ಅಧಿಕಾರಕ್ಕೆ ತರುತ್ತದೆ. ಈಗ, ತೈಲ ಸಂಪತ್ಭರಿತ ಇರಾನ್‌ನಲ್ಲಿಯೂ ಅಂತಹದ್ದೇ ಕೃತ್ಯಕ್ಕೆ ಕೈಹಾಕಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...