ಹೆಚ್ಐವಿ ಸೋಂಕಿತರಿಗೆ ಶೇ.100 ರಷ್ಟು ಪರಿಣಾಮಕಾರಿ ಔಷಧಿ: ಯಶಸ್ವಿಯಾದ ಪ್ರಯೋಗ!

Date:

ಹೆಚ್‌ಐವಿ ಸೋಂಕಿನ ಸಂಪೂರ್ಣ ರಕ್ಷಣೆಗಾಗಿ ವರ್ಷಕ್ಕೆ ಎರಡು ಬಾರಿಯಂತೆ ರೋಗ ನಿರೋಧಕ ಹೆಚ್ಚಿಸುವ ಎರಡು ಚುಚ್ಚುಮದ್ದುಗಳನ್ನು ನೀಡುವುದರ ಮೂಲಕ ದಕ್ಷಿಣ ಆಫ್ರಿಕಾ ಹಾಗೂ ಉಗಾಂಡ ಯಶಸ್ವಿ ಪ್ರಯೋಗ ನಡೆಸಿದೆ. ಯುವತಿಯ ಮೇಲೆ ದೊಡ್ಡ ಮಟ್ಟದಲ್ಲಿ ವೈದ್ಯಕೀಯ ಪ್ರಯೋಗ ನಡೆಸಲಾಗಿದೆ.

ಆರು ತಿಂಗಳಿಗೆ ನೀಡಲಾಗುವ ‘ಲೆನಾಕಾಪಾವಿರ್‌’ ಚುಚ್ಚುಮದ್ದು, ಇತರ ಹೆಚ್‌ಐವಿ ಔಷಧಗಳು ಹಾಗೂ ನಿತ್ಯ ನೀಡುವ ಗುಳಿಗೆಗಳಿಗಿಂತ ಸುರಕ್ಷಿತವಾಗಿವೆ ಎಂದು ಪ್ರಯೋಗ ಪರೀಕ್ಷೆಯಲ್ಲಿ ಸಾಬೀತಾಗಿದೆ. ಇವೆಲ್ಲ ಔಷಧಗಳು ರೋಗನಿರೋಧಕ ಶಕ್ತಿಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಿ ಹೆಚ್‌ಐವಿ ರೋಗಾಣುಗಳನ್ನು ತಡೆಯುವ ಔಷಧಗಳಾಗಿವೆ.

ವೈದ್ಯ ವಿಜ್ಞಾನಿಯಾದ ಲಿಂಡಾ ಗೇಲ್‌ ಬೆಕ್ಕರ್‌ ಹಾಗೂ ಈ ಔಷಧ ಪ್ರಯೋಗದ ಪ್ರಧಾನ ಸಂಶೋಧಕರಾದ ನದೇನ್‌ ಡ್ರೇಯರ್‌ ಅವರು ನೂತನ ಔಷಧ ಪ್ರಯೋಗವು ಗಮನಾರ್ಹ ಮೈಲಿಗಲ್ಲು ತಲುಪಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಲೆನಾಕಾಪಾವಿರ್‌ ಮತ್ತು ಇತರ ಎರಡು ಔಷಧಿಯ ಮೊದಲ ಪರಿಣಾಮಕಾರಿ ಪ್ರಯೋಗವನ್ನು 5000 ಜನರ ಮೇಲೆ ಉಗಾಂಡದ ಮೂರು ಹಾಗೂ ದಕ್ಷಿಣ ಆಫ್ರಿಕಾದ 25 ಸ್ಥಳಗಳಲ್ಲಿ ಕೈಗೊಳ್ಳಲಾಗಿತ್ತು.

ಲೆನಾಕಾಪಾವಿರ್‌(ಲೆನ್‌ ಎಲ್‌ಎ) ಔಷಧ ರೋಗಾಣು ನಿಯಂತ್ರಿಸುವ ಪ್ರತಿಬಂಧಕ ಔಷಧವಾಗಿದೆ. ಇದು ಹೆಚ್‌ಐವಿ ರೋಗಾಣುವಿಗೆ ಅಡ್ಡಿಪಡಿಸುತ್ತದೆ. ಅಲ್ಲದೆ ಹೆಚ್ಐವಿಯ ಅನುವಂಶಿಕ ಹಾಗೂ ವಿವಿಧ ರೀತಿಯ ರೋಗಾಣುಗಳನ್ನು ಉತ್ಪಾದನೆಗೊಳ್ಳುವುದನ್ನು ತಡೆಯುತ್ತದೆ. ಇದನ್ನು ಆರು ತಿಂಗಳಿಗೊಮ್ಮೆ ಚರ್ಮದ ಮೂಲಕ ನೀಡಲಾಗುತ್ತದೆ.

ಈ ಸುದ್ದಿ ಓದಿದ್ದೀರಾ? ಕೇರಳ: ಮೆದುಳು ತಿನ್ನುವ ಅಮೀಬಾ ರೋಗದಿಂದ 14 ವರ್ಷದ ಬಾಲಕ ಸಾವು

ಔಷಧಿ ಉತ್ಪಾದಕರಾದ ಗಿಲಿಯಾಡ್‌ ಸೈನ್ಸಸ್‌ ಸಂಸ್ಥೆಯ ಪ್ರಯೋಜಕತ್ವದಲ್ಲಿ ಹಲವು ಕಡೆ ಪರೀಕ್ಷಾ ಪ್ರಯೋಗಾರ್ಥ ಕೈಗೊಳ್ಳಲಾಗಿತ್ತು.

ಲೆನಾಕಾಪಾವಿರ್‌ ಮೊದಲ ಚುಚ್ಚುಮದ್ದು 16 ರಿಂದ 25 ವರ್ಷದ ಮಹಿಳೆಯರಿಗೆ ಹಲವು ದಶಕಗಳಿಂದ ಉಪಯೋಗಿಸಲಾಗುತ್ತಿದ್ದ ಇತರ ಔಷಧಗಳಾದ ಟ್ರುವೆಡ ಎಫ್‌/ಟಿಡಿಎಫ್, ನಿತ್ಯ ಬಳಸುವ ಪ್ರೆಪ್‌ ಗುಳಿಗೆಗಳಿಗಿಂತ ಹೆಚ್‌ಐವಿ ಸೋಂಕಿನ ವಿರುದ್ಧದ ರಕ್ಷಣೆಗೆ ಸುರಕ್ಷಿತ ಹಾಗೂ ಹೆಚ್ಚು ರಕ್ಷಣೆ ನೀಡುತ್ತದೆ ಎಂದು ತಿಳಿಯಲಾಗಿದೆ.

ಎರಡನೇ ಚುಚ್ಚುಮದ್ದು ನಿತ್ಯ ಬಳಸುವ ದೆಸ್‌ಕೊವಿ ಎಫ್‌/ಟಿಎಎಫ್ ಗುಳಿಗೆಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದು ಪ್ರಯೋಗದ ಮೂಲಕ ಕಂಡುಕೊಳ್ಳಲಾಗಿದೆ. ದೆಸ್‌ಕೊವಿ ಎಫ್‌/ಟಿಎಎಫ್ ಗುಳಿಗೆಯನ್ನು ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಪುರುಷರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರು ಹೆಚ್ಚಾಗಿ ಬಳಸುತ್ತಾರೆ.

ನಿತ್ಯ ಬಳಸುವ ಪ್ರೆಪ್‌ ಗುಳಿಗೆಯನ್ನು ದಕ್ಷಿಣ ಆಫ್ರಿಕಾ ಹಾಗೂ ಪೂರ್ವ ರಾಷ್ಟ್ರಗಳಲ್ಲಿಆಗಷ್ಟೆ ಹೆಚ್‌ಐವಿ ಸೋಂಕಿತರಾದವರು ಬಳಸುತ್ತಾರೆ.

ಹೆಚ್‌ಐವಿ ಸೋಂಕಿತ 2134 ಮಹಿಳೆಯರಿಗೆ ಲೆನಾಕಾಪಾವಿರ್‌ ಔಷಧವನ್ನು ಪ್ರಯೋಗದ ಮೂಲಕ ನೀಡಲಾಗಿತ್ತು. ನಂತರದಲ್ಲಿ ‍ಔಷಧವು ಇವರೆಲ್ಲರಿಗೂ ಶೇ.100 ರಷ್ಟು ಪರಿಣಾಮ ಬೀರಿತ್ತು.

ವರ್ಷಕ್ಕೆ ಎರಡು ಬಾರಿ ನೀಡುವ ಲೆನಾಕಾಪಾವಿರ್‌ ಚುಚ್ಚು ಮದ್ದು ಹೆಚ್‌ಐವಿ ಸೋಂಕಿನಿಂದ ಬಳಲುವರಿಗೆ ಶೀಘ್ರ ಚೇತರಿಸಿಕೊಳ್ಳಲು ಉತ್ತಮ ಔಷಧಿಯಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಒಂದು ವರ್ಷದಲ್ಲಿ 13 ಲಕ್ಷ ಮಂದಿ ವಿಶ್ವದಲ್ಲಿ ಹೆಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ. ಆದರೆ ಕಳೆದ ಒಂದು ದಶಕಕ್ಕೆ ಹೋಲಿಸಿದರೆ ಇದು ಇಳಿಕೆಯಾಗಿದೆ.

ವಿಶ್ವದ ಇತರ ರಾಷ್ಟ್ರಗಳ ಹೆಚ್‌ಐವಿ ಸೋಂಕಿತರಿಗೆ ಲೆನಾಕಾಪಾವಿರ್‌ ಚುಚ್ಚುಮದ್ದನ್ನು  ಶಿಫಾರಸ್ಸು ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಮತ್ತಷ್ಟು ಪರೀಕ್ಷೆಗೊಳಪಡಿಸುವ ಸಾಧ್ಯತೆಯಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...