ಗಾಜಾ ಶಾಂತಿ ಮಂಡಳಿ | ಭಕ್ಷಕನೇ ರಕ್ಷಕನ ರೂಪದಲ್ಲಿರುವುದು ಎಷ್ಟು ಸರಿ?

Date:

ಇಸ್ರೇಲ್ – ಪ್ಯಾಲೆಸ್ತೀನ್ ಸಂಘರ್ಷ ಆರಂಭವಾಗಿ ಮೂರು ವರ್ಷ ಕಳೆದಿದೆ. ಸಾವು ನೋವುಗಳ ಚೀತ್ಕಾರದಿಂದ ಗಾಜಾ ಪಟ್ಟಿ ಅಕ್ಷರಶಃ ನಲುಗಿ ಹೋಗಿದೆ. 2023ರ ಅಕ್ಟೋಬರ್ 7ರಂದು ಆರಂಭವಾದ ಸಂಘರ್ಷ ಸಂಪೂರ್ಣ ಶಾಂತಿ ನೆಲೆಸಲು ಹತ್ತಿರವಾಗುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆಪ್ಟೆಂಬರ್ 29, 2025ರಂದು ‘ಶಾಂತಿ ಮಾತುಕತೆ’ಯನ್ನು ನಡೆಸಿದ್ದರು. ಜನವರಿ 15, 2026ರಂದು ‘ಗಾಜಾ ಶಾಂತಿ ಮಂಡಳಿ’ಯನ್ನು ಸ್ಥಾಪಿಸಿ ಯುದ್ಧಾನಂತರದ ಗಾಜಾದ ಆಡಳಿತ ಮತ್ತು ಪುನರ್ ನಿರ್ಮಾಣವನ್ನು ಮೇಲ್ವಿಚಾರಣೆ ನಡೆಸುವ ಉದ್ದೇಶ ಹೊಂದಿದ್ದಾರೆ.

‘ಶಾಂತಿ ಮಂಡಳಿ’ಯ ಭಾಗವಾಗಲು ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಪಂಚದ ವಿವಿಧ ದೇಶಗಳ ಪ್ರಮುಖರಿಗೆ ಪತ್ರ ಬರೆದು ಸಂಪರ್ಕಿಸಿದ್ದಾರೆ.

ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರವನ್ನು ಹಂಚಿಕೊಂಡಿದ್ದಾರೆ. ಪತ್ರದಲ್ಲಿ “ಮಧ್ಯಪ್ರಾಚ್ಯದಲ್ಲಿ ಶಾಂತಿಯನ್ನು ಗಟ್ಟಿಗೊಳಿಸುವ ನಿರ್ಣಾಯಕ ಐತಿಹಾಸಿಕ ಪ್ರಯತ್ನದಲ್ಲಿ ತಮ್ಮೊಂದಿಗೆ ಸೇರಲು ಮತ್ತು ಜಾಗತಿಕ ಸಂಘರ್ಷವನ್ನು ಪರಿಹರಿಸುವ ನಿಟ್ಟಿನಲ್ಲಿ ಹೊಸ ವಿಧಾನವನ್ನು ಪ್ರಾರಂಭಿಸಲು ಪ್ರಧಾನಿಯನ್ನು ಆಹ್ವಾನಿಸುವುದು ನಮಗೆ ಸಿಕ್ಕ ದೊಡ್ಡ ಗೌರವ” ಎಂದು ಉಲ್ಲೇಖಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿ : ಈ ದಿನ ಸಂಪಾದಕೀಯ | ಟ್ರಂಪ್ ವಿರುದ್ಧ ಇನ್ನಾದರೂ ಎದೆ ಸೆಟೆಸುವರೇ ಮೋದಿ?

ಭಾರತದ ಜೊತೆಗೆ ಪಾಕಿಸ್ತಾನ, ಹಂಗೇರಿ, ವಿಯೆಟ್ನಾಂ ಸೇರಿದಂತೆ 60 ದೇಶಗಳಿಗೆ ಆಹ್ವಾನ ಹೋಗಿದೆ. ಗಾಜಾದಲ್ಲಿ ಶಾಶ್ವತ ಶಾಂತಿ ನೆಲೆಸಲು ಮತ್ತು ಗಾಜಾ ಪುನರ್ ನಿರ್ಮಿಸಲು ಈ ಕಾರ್ಯಕೈಗೊಳ್ಳಲಾಗಿದೆ. ಗಾಜಾ ಪಟ್ಟಿಯಲ್ಲಿ ಹೊಸ ಆಡಳಿತ ರಚನೆಯ ಉದ್ದೇಶವನ್ನು ‘ಶಾಂತಿ ಮಂಡಳಿ’ ಒಳಗೊಂಡಿದೆ ಎಂದು ಹೇಳಲಾಗಿದೆ.

ಶಾಂತಿ ಮಂಡಳಿಯ ಅಧ್ಯಕ್ಷ ಟ್ರಂಪ್

2025 ಸೆಪ್ಟೆಂಬರ್ 29ರಂದು ಅಮೆರಿಕದ ಶ್ವೇತ ಭವನದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಜೊತೆಗಿನ ‘ಇಸ್ರೇಲ್-ಪ್ಯಾಲೆಸ್ತೀನ್ ಕದನ ವಿರಾಮ’ದ ಮಾತುಕತೆಯ ನಂತರ ಟ್ರಂಪ್ ‘ಶಾಂತಿ ಮಂಡಳಿ’ಯ ಪ್ರಸ್ತಾಪವನ್ನು ಮುಂದಿಟ್ಟಿದ್ದರು.

ಅದರಂತೆ ‘ಗಾಜಾ ಶಾಂತಿ ಮಂಡಳಿ’ಯ ಸ್ಥಾಪನೆಯನ್ನು 15 ಜನವರಿ 2026ರಂದು ಟ್ರಂಪ್ ಘೋಷಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 2803 ನಿರ್ಣಯದ ಪ್ರಕಾರ, ಗಾಜಾದಲ್ಲಿ ಶಾಶ್ವತ ಶಾಂತಿ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ.

ಗಾಜಾ ಶಾಂತಿ ಮಂಡಳಿ ಎಂದರೇನು? 

ಗಾಜಾ ಶಾಂತಿ ಮಂಡಳಿ (Board of Peace for Gaza ಅಥವಾ Board of Peace) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಥಾಪಿಸಿದ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ. ಇಸ್ರೇಲ್ ಮತ್ತು ಹಮಾಸ್ ಯುದ್ಧದಿಂದ ನಲುಗಿ ಹೋಗಿರುವ ಗಾಜಾ ಪ್ರದೇಶದಲ್ಲಿ ಶಾಂತಿ ಸ್ಥಾಪನೆ, ಹಮಾಸ್‌ ನಿಶಸ್ತ್ರೀಕರಣ, ಗಾಜಾ ಪುನರ್‌ ನಿರ್ಮಾಣ, ಆರ್ಥಿಕ ಅಭಿವೃದ್ಧಿ ಮತ್ತು ತಾತ್ಕಾಲಿಕವಾಗಿ ಅಮೆರಿಕ ಆಡಳಿತ ನಡೆಸುವ ಉದ್ದೇಶವನ್ನು ಹೊಂದಿದೆ. ಇದು ಟ್ರಂಪ್ ಅವರ “20 ಅಂಶಗಳ ಸಮಗ್ರ ಯೋಜನೆ”ಯನ್ನು ಹೊಂದಿದೆ.

ಡೊನಾಲ್ಡ್ ಟ್ರಂಪ್ ಶಾಂತಿ ಮಂಡಳಿಯ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಈ ಮಂಡಳಿಯ ಕಾರ್ಯಕಾರಿ ಸಮಿತಿಯಲ್ಲಿ ಟ್ರಂಪ್ ಅವರ ಅಳಿಯ ಜಾರೆಡ್ ಕುಷ್ನರ್, ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್, ಟರ್ಕಿ ವಿದೇಶಾಂಗ ಸಚಿವ ಹಕನ್ ಫಿಡಾನ್, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೊ, ಟ್ರಂಪ್ ಅವರ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಇದ್ದಾರೆ.

ಶಾಂತಿ ಮಂಡಳಿಯಲ್ಲಿ ರಾಷ್ಟ್ರಗಳ ಮೂಲ ಸದಸ್ಯತ್ವಕ್ಕೆ 3 ವರ್ಷಗಳ ಅವಧಿಗೆ ಯಾವುದೇ ಶುಲ್ಕವಿರುವುದಿಲ್ಲ. ಆ ನಂತರ ಪ್ರತಿ ರಾಷ್ಟ್ರಗಳು 1 ಬಿಲಿಯನ್ ಡಾಲರ್ (ಸುಮಾರು ₹8,300 ಕೋಟಿ) ಹಣವನ್ನು ಕೊಡುಗೆ ರೂಪದಲ್ಲಿ ನೀಡಿದರೆ ಮಾತ್ರ ಶಾಶ್ವತ ಸದಸ್ಯತ್ವ ಸಿಗುತ್ತದೆ. ಈ ಹಣವು ಗಾಜಾ ಪುನರ್ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತದೆ ಹಾಗೂ ಟ್ರಂಪ್ ಅವರೇ ಅಧ್ಯಕ್ಷರಾಗಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.

ಟ್ರಂಪ್ ಆಹ್ವಾನ

ಗಾಜಾ ಶಾಂತಿ ಮಂಡಳಿಗಾಗಿ ಭಾರತ, ಪಾಕಿಸ್ತಾನ, ಹಂಗೇರಿ, ವಿಯೆಟ್ನಾಂ, ಅರ್ಜೆಂಟೀನಾ, ಕೆನಡಾ, ಟರ್ಕಿ, ಈಜಿಪ್ಟ್, ಜೋರ್ಡಾನ್, ಸೈಪ್ರಸ್, ಪ್ಯಾರಾಗ್ವೇ ಮತ್ತು ಅಲ್ಬೇನಿಯಾ ದೇಶಗಳು ಸೇರಿದಂತೆ 60ಕ್ಕೂ ಹೆಚ್ಚು ದೇಶಗಳಿಗೆ ಆಹ್ವಾನವನ್ನು ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಅನೇಕ ದೇಶಗಳು ಅಹ್ವಾನವನ್ನು ಕಾಯ್ದಿರಿಸಿವೆ. ಇನ್ನು ಕೆಲ ದೇಶಗಳು ಒಪ್ಪಿಗೆಯನ್ನೂ ಸೂಚಿಸಿವೆ.

ಫ್ರಾನ್ಸ್, ಜರ್ಮನಿ, ಆಸ್ಟ್ರೇಲಿಯಾ ಮತ್ತು ಕೆನಡಾ ನಾಯಕರನ್ನು ಸಹ ಮಂಡಳಿಯ ಸದಸ್ಯರಾಗಲು ಆಹ್ವಾನಿಸಲಾಗಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ. ಆದರೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.

ಭಾರತವು ಶಾಂತಿ ಮಂಡಳಿಯ ಭಾಗವಾಗುವುದೇ?

ಆಕ್ಟೋಬರ್ 9, 2025ರಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ ಖಾತೆಯಲ್ಲಿ ಇಸ್ರೇಲ್-ಗಾಜಾ ಕದನ ವಿರಾಮಕ್ಕೆ ಸ್ವಾಗತಿಸಿ, “ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಶಾಂತಿ ಯೋಜನೆಯ ಮೊದಲ ಹಂತದ ಒಪ್ಪಂದವನ್ನು ನಾವು ಸ್ವಾಗತಿಸುತ್ತೇವೆ. ಇದು ಪ್ರಧಾನಿ ನೆತನ್ಯಾಹು ಅವರ ಬಲವಾದ ನಾಯಕತ್ವದ ಪ್ರತಿಬಿಂಬವೂ ಆಗಿದೆ. ಒತ್ತೆಯಾಳುಗಳ ಬಿಡುಗಡೆ ಮತ್ತು ಗಾಜಾದ ಜನರಿಗೆ ಅಗತ್ಯ ಮಾನವೀಯ ನೆರವು ಮತ್ತು ಶಾಶ್ವತ ಶಾಂತಿಗೆ ದಾರಿ ಮಾಡಿಕೊಡುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಹೇಳಿದ್ದರು.

ಆದರೆ, ಈ ಬಾರಿಯ ಆಹ್ವಾನಕ್ಕೆ ಭಾರತದ ವಿದೇಶಾಂಗ ಸಚಿವಾಲಯ ಅಥವಾ ಪ್ರಧಾನಿ ನರೇಂದ್ರ ಮೋದಿ ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ.

ಟ್ರಂಪ್ ಇಲ್ಲಿಯವರೆಗೂ ‘ಭಾರತ-ಪಾಕಿಸ್ತಾನದ ಯುದ್ಧವನ್ನು ನಿಲ್ಲಿಸಿದ್ದು ನಾನೇ’ ಎಂದು 70ಕ್ಕಿಂತ ಹೆಚ್ಚು ಭಾರಿ ಹೇಳಿಕೊಂಡಾಗಲೂ, ರಷ್ಯಾದ ಜೊತೆ ತೈಲ ಖರೀದಿಸುವುದಕ್ಕೆ ಭಾರತದ ಮೇಲೆ ಶೇ 50ರಷ್ಟು ಸುಂಕ ವಿಧಿಸಿದಾಗಲೂ ನರೇಂದ್ರ ಮೋದಿ ಮಾತನಾಡಿಲ್ಲ.

ಟ್ರಂಪ್ ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ಬಳಿಕ, ಭಾರತದ ವಿರುದ್ಧ ನಿರಂತರ ಕಿಡಿಕಾರುತ್ತಲೇ ಇದ್ದಾರೆ. ಪ್ರಧಾನಿ ಮೋದಿ ಅವರನ್ನು ಅವಮಾನಿಸುತ್ತಲೇ ಬಂದಿದ್ದಾರೆ. ಭಾರತದ ಮೇಲೆ ಎಷ್ಟೇ ತೆರಿಗೆ ವಿಧಿಸಿದರೂ ನರೇಂದ್ರ ಮೋದಿ ತುಟಿಬಿಚ್ಚಿಲ್ಲ. ಟ್ರಂಪ್ ಅವರ ಯಾವ ನಡೆಯನ್ನು ಪ್ರಶ್ನಿಸದೇ ಒಪ್ಪಿಕೊಂಡಿದ್ದಾರೆ. ಅದೇ ರೀತಿಯಲ್ಲಿ ಟ್ರಂಪ್ ಅವರು ಈ ಭಾರಿ ಕಳುಹಿಸಿರುವ ಆಹ್ವಾನವನ್ನು ಸ್ವೀಕರಿಸುತ್ತಾರೆ ಎಂದು ಊಹಿಸಲಾಗಿದೆ.  

ಭಕ್ಷಕ ಅಮೆರಿಕ ರಕ್ಷಕನ ವೇಷದಲ್ಲಿ!

ಜನವರಿ 3, 2026ರಂದು ಅಮೆರಿಕವು ವೆನೆಜುವೆಲಾ ಮೇಲೆ ಬಾಂಬ್ ದಾಳಿ ನಡೆಸಿ, ಅಲ್ಲಿನ ಅಧ್ಯಕ್ಷ ನಿಕೊಲಸ್ ಮಡೂರೊ ಹಾಗೂ ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಅಪಹರಿಸಲಾಗಿತ್ತು. ಈ ಕಾರ್ಯಚರಣೆಯನ್ನು ಟ್ರಂಪ್ ‘ಆಪರೇಷನ್ ಅಬ್ಸಲ್ಯೂಟ್ ರಿಸಾಲ್ವ್’ ಎಂದು ಹೆಸರಿಟ್ಟಿದ್ದರು. ಅಮೆರಿಕದ ಯುದ್ಧ ವಿಮಾನಗಳು, ಬಾಂಬರ್‌ಗಳು, ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳು ಸೇರಿದಂತೆ 150ಕ್ಕೂ ಹೆಚ್ಚು ಏರ್‌ಕ್ರಾಫ್ಟ್ ಗಳು ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದವು. ಇದರಲ್ಲಿ ವೆನೆಜುವೆಲಾದ ಅನೇಕ ನಾಗರಿಕರು ಸಾವನ್ನಪ್ಪಿದ್ದರು.

ಪ್ರಜಾಪ್ರಭುತ್ವ ದೇಶದ ಅಧ್ಯಕ್ಷನನ್ನು ಅಪಹರಿಸಿದ ಟ್ರಂಪ್ ಯಾವ ರೀತಿಯಲ್ಲಿ ‘ಶಾಂತಿಯ ಧೂತ’ ಎಂಬುದು ಪ್ರಶ್ನಾರ್ಹ. ಟ್ರಂಪ್ ಯಾವಾಗಲೂ ಯುದ್ಧವನ್ನು ಬೆಂಬಲಿಸಿಕೊಂಡು ಬಂದವರು. ವೆನೆಜುವೆಲಾ ನಂತರ ಗ್ರೀನ್ ಲ್ಯಾಂಡ್ ಬೇಕು ಎಂದು ಬೆದರಿಕೆಯನ್ನು ಒಡ್ಡುತ್ತಿದ್ದಾರೆ.

ಟ್ರಂಪ್ ಜಗತ್ತಿನಲ್ಲಿ ನಾನೇ ಸಾರ್ವಭೌಮ ಎಂದು ನಂಬಿಕೊಂಡಿರವು ವ್ಯಕ್ತಿ. ವಿದೇಶಾಂಗ ನೀತಿಯ ವಿಚಾರದಲ್ಲಿ ಅನೇಕ ದೇಶಗಳಿಗೆ ಅಕ್ಷರಶಃ ಬೆದರಿಸಿ ತಾವು ಹೇಳಿದಂತೆ ಉಳಿದೆಲ್ಲ ದೇಶಗಳು ಕೇಳಬೇಕು ಎನ್ನುವುದು ಟ್ರಂಪ್ ಅವರ ಧೋರಣೆಯಾಗಿದೆ. ಜಗತ್ತಿನ ಪ್ರಮುಖ ಯುದ್ಧ ಸಶಸ್ತ್ರಗಳನ್ನು ತಯಾರಿಸುವ ದೇಶಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಜೊತೆಗೆ ಅಮೆರಿಕದಲ್ಲಿಯೇ 7ಕ್ಕೂ ಹೆಚ್ಚು ಪ್ರಮುಖ ಸಶಸ್ತ್ರ ತಯಾರಕ ಕಂಪನಿಗಳಿವೆ. ಇವೆಲ್ಲವೂ ಟ್ರಂಪ್ ಅವರ ಅನುಮತಿಯೊಂದಿಗೆ ಕಾರ್ಯನಿರ್ವಹಿಸುತ್ತಿವೆ.

ಭಾರತ-ಪಾಕಿಸ್ತಾನ ಸೇರಿದಂತೆ ಬಹುತೇಕ ದೇಶಗಳ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಹೇಳಿಕೊಳ್ಳುವ ಟ್ರಂಪ್, ಎಲ್ಲಾ ದೇಶಗಳಿಗೆ ಯುದ್ಧ ಸಾಮಾಗ್ರಿಗಳನ್ನು ಪೂರೈಸುತ್ತಿದ್ದಾರೆ. ಗಾಜಾದಲ್ಲಿ ಈಗಾಗಲೇ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ. ಪ್ಯಾಲಿಸ್ತೀನ್ ಮತ್ತು ಗಾಜಾದ ಮೇಲೆ ಅಮಾನವೀಯವಾಗಿ ಇಸ್ರೇಲ್ ಯುದ್ಧ ಮಾಡುತ್ತಿರುವಾಗ, ಇಸ್ರೇಲ್ ನ್ನು ಪೋಷಿಸಿದವರೇ ಇದೇ ಟ್ರಂಪ್. ಭಕ್ಷಕ ಟ್ರಂಪ್ ರಕ್ಷಕನ ವೇಷ ಧರಿಸಿರುವುದು ಎಷ್ಟು ಸರಿ?

Manoj
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...