5 ರೂ. ಪಾರ್ಲೆ ಜಿ ಬಿಸ್ಕತ್ತು ಗಾಜಾದಲ್ಲಿ 2400 ರೂ.ಗಳಿಗೆ ಮಾರಾಟ

Date:

ಭಾರತೀಯರಿಗೆ ಹಲವು ದಶಕಗಳಿಂದಲೂ ಪಾರ್ಲೆ ಜಿ ಹೆಸರು ಚಿರಪರಿಚಿತವಾದ ಹೆಸರು. ಕಡಿಮೆ ವೆಚ್ಚದ, ಪೌಷ್ಟಿಕಾಂಶವುಳ್ಳ ಹಾಗೂ ಟೀ ಜೊತೆಗೆ, ಹಸಿವಾದಾಗ ಮತ್ತಿತ್ತರ ಸಂದರ್ಭಗಳಲ್ಲಿ ಪಾರ್ಲೆ ಜಿ ಬಿಸ್ಕತ್ತನ್ನು ಬಳಸುತ್ತಾರೆ. ಆದರೆ ಇದೇ ಬಿಸ್ಕತ್ತು ಪ್ಯಾಲಿಸ್ತೇನ್‌ನ ಗಾಜಾದ ಜನರಿಗೆ ದುಬಾರಿ ವಸ್ತುವಾಗಿ ಪರಿಣಮಿಸಿದೆ. ಇಲ್ಲಿ ಪಾರ್ಲೆ ಜಿ ಬಿಸ್ಕತ್ತನ್ನು ಮೂಲ ಬೆಲೆಯ 500 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಮುಂಬೈನಲ್ಲಿ ಮುಖ್ಯ ತಯಾರಿಕಾ ಘಟಕವಿರುವ ಪಾರ್ಲೆ ಜಿ ಬಿಸ್ಕತ್ತಿನ ಬಗ್ಗೆ ಇತ್ತೀಚಿಗೆ ಗಾಜಾದಲ್ಲಿ ಒಂದು ವಿಡಿಯೋ ವೈರಲ್‌ ಆಗಿದ್ದು, ಅಲ್ಲಿ ಈ ಬಿಸ್ಕತ್ತನ್ನು 24 ಯೂರೋಗಳಿಗೆ ಮಾರಾಟ ಮಾಡಲಾಗುತ್ತಿದೆ. 24 ಯೂರೋ ಅಂದರೆ ಭಾರತದ ರೂಪಾಯಿಗಳಲ್ಲಿ 2,342 ರೂಪಾಯಿಗಳು.

“ದೀರ್ಘ ಕಾಲದ ನಂತರ ನಾನು ಇಂದು ನನ್ನ ನೆಚ್ಚಿನ ತಿನಿಸನ್ನು ಖರೀದಿಸಿದೆ. ಇದರ ಬೆಲೆ 1.5 ಯೂರೋ ಹೆಚ್ಚಾಗುವುದರೊಂದಿಗೆ 24 ಯೂರೂಗಳಿಗೆ ಏರಿಕೆಯಾಗಿದೆ. ನನ್ನ ಮಗಳಿಗಾಗಿ ಇದನ್ನು ಖರೀದಿಸದೆ ನಿರಾಕರಿಸಲು ಸಾಧ್ಯವಾಗಲಿಲ್ಲ” ಎಂದು ಹೇಳಿರುವ ವಿಡಿಯೋ ಎಲ್ಲಡೆ ವೈರಲ್‌ ಆಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಭಿಮಾನಿಗಳ ಅತಿರೇಕ ಮತ್ತು ಸರ್ಕಾರದ ಅವಿವೇಕ

ಪಾರ್ಲೆ ಜಿ ಬಿಸ್ಕತ್ತು ಮುಂಬೈನಿಂದ ಸುಮಾರು 4,300 ಕಿ.ಮೀ ದೂರದಿಂದ ಗಾಜಾಗೆ ರಫ್ತು ಮಾಡಲಾಗುತ್ತದೆ. ಈ ದುಬಾರಿ ಬೆಲೆ ಪಾರ್ಲೆ ಜಿಗೆ ಮಾತ್ರ ಸೀಮಿತವಾಗಿಲ್ಲ. ಹಲವು ಉತ್ಪನ್ನಗಳು ಹೆಚ್ಚಿನ ಬೆಲೆ ಹೊಂದಿದೆ. 1 ಕೆಜಿ ಸಕ್ಕರೆ: 4,914 ರೂ., 1 ಲೀಟರ್ ಅಡುಗೆ ಎಣ್ಣೆ: 4,177 ರೂ., 1 ಕೆಜಿ ಆಲೂಗಡ್ಡೆ: 1,965 ರೂ., 1 ಕೆಜಿ ಈರುಳ್ಳಿ: 4,423 ರೂ., 1 ಕಾಫಿ ಕಪ್: 1,800 ರೂ. ಭಾರತೀಯ ಬೆಲೆಯನ್ನು ಹೊಂದಿದೆ.

ಮೂರು ತಿಂಗಳಿಗೂ ಹೆಚ್ಚು ಕಾಲ ಗಡಿಗಳನ್ನು ಮುಚ್ಚಿರುವುದರಿಂದ 20 ಲಕ್ಷ ಜನರು ತಮ್ಮ ಅಗತ್ಯ ವಸ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.ಈ ಆಹಾರಗಳನ್ನು ಅತಿ ಹೆಚ್ಚು, ಕೈಗೆಟುಕಲಾಗದ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪಾರ್ಲೆ ಜಿ ಬಿಸ್ಕತ್ತಿನ ಕಂಪನಿ 1938 ರಲ್ಲಿ ಪ್ರಾರಂಭವಾಯಿತು. ಭಾರತದ ಸ್ವದೇಶಿ ಚಳವಳಿಯ ಸಮಯದಲ್ಲಿ ಗಣ್ಯ ಬ್ರಿಟಿಷ್ ತಿಂಡಿಗಳಿಗೆ ಸ್ಥಳೀಯ ಪರ್ಯಾಯವಾಗಿ ಹೊರಹೊಮ್ಮಿತು.

ದಶಕಗಳಿಂದ, ಪಾರ್ಲೆ ಜಿ ತನ್ನ ಕಡಿಮೆ ಬೆಲೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಏಕೆಂದರೆ ಇದು ಹಣದುಬ್ಬರ ಏರಿಕೆಯಾದಾಗ ಬೆಲೆಯನ್ನು ಕಾಯ್ದುಕೊಳ್ಳಲು ತೂಕವನ್ನು ಕಡಿಮೆ ಮಾಡುತ್ತದೆ. ಒಂದು ಕಾಲದಲ್ಲಿ 100 ಗ್ರಾಂ ಹೊಂದಿದ್ದ 5 ರೂ. ಪೊಟ್ಟಣ ಈಗ ಸುಮಾರು 55 ಗ್ರಾಂಗಳನ್ನು ಹೊಂದಿದೆ.

ಇಸ್ರೇಲ್‌ನ ಅಮಾನವೀಯ ದಾಳಿಯಿಂದಾಗಿ ಗಾಜಾದ ಜನರು ನಿತ್ಯವೂ ನರಕಯಾತನೆ ಅನುಭವಿಸುತ್ತಿದ್ದಾರೆ. ಇಸ್ರೇಲ್‌ ಸೇನೆ ಮಹಿಳೆಯರು, ಮಕ್ಕಳು ಎನ್ನದೆ ಸಾವಿರಾರು ಅಮಾಯಕರನ್ನು ಕೊಂದಿದೆ. ಇದರ ಜೊತೆಗೆ ಅಲ್ಲಿನ ನಿವಾಸಿಗಳಿಗೆ ಅಗತ್ಯ ವಸ್ತುಗಳು ಏರಿಕೆಯಾಗಿವೆ. ಸ್ಥಳೀಯರಿಗೆ ಆಹಾರ ಅಗತ್ಯಗಳು ಒಳಗೊಂಡು ಮತ್ತಿತ್ತರ ವಸ್ತುಗಳು ಸ್ವಯಂಸೇವಾ ಸಂಘಗಳಿಂದ ಮಾನವೀಯ ರೂಪದಲ್ಲಿ ನೆರವು ದೊರತೆರೆ, ಅಲ್ಲಿನ ಅಲ್ಪಸಂಖ್ಯಾತರು ದುಬಾರಿ ಬೆಲೆ ನೀಡಿ ದಿನಸಿಗಳನ್ನು ಖರೀದಿಸಬೇಕಾದ ಪರಿಸ್ಥಿತಿ ಒದಗಿಬಂದಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...