2025ನೇ ಸಾಲಿನ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿಯನ್ನು ಹಂಗೇರಿಯ ಖ್ಯಾತ ಲೇಖಕ ‘ಲಾಸ್ಲೋ ಕ್ರಾಸ್ನಹೊರ್ಕಾಯಿ‘ ಅವರಿಗೆ ಸಂದಿದೆ. “for his compelling and visionary oeuvre that, in the midst of apocalyptic terror, reaffirms the power of art” ಕೃತಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ‘ಸ್ವೀಡಿಷ್ ಅಕಾಡೆಮಿ’ ಘೋಷಿಸಿದೆ.
ಕ್ರಾಸ್ನಹೊರ್ಕಾಯಿ ಅವರನ್ನು ಆಧುನಿಕ ಯೂರೋಪಿಯನ್ ಸಾಹಿತ್ಯದ ಅತ್ಯಂತ ಗಂಭೀರ ಮತ್ತು ದೃಶ್ಯಮಯ ಧ್ವನಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ.
ಈ ಬಾರಿ ಪ್ರಶಸ್ತಿ ಸ್ಪರ್ಧೆಯಲ್ಲಿ ಭಾರತದ ಅಮಿತಾವ್ ಘೋಷ್ ಹಾಗೂ ಸಲ್ಮಾನ್ ರುಶ್ದಿ ಕೂಡ ಇದ್ದರು. ಇಬ್ಬರೂ ದೀರ್ಘಕಾಲದಿಂದಲೇ ವಿಶ್ವ ಸಾಹಿತ್ಯ ವೇದಿಕೆಯಲ್ಲಿ ಪ್ರಭಾವ ಬೀರಿದ ಭಾರತೀಯ ಮೂಲದ ಲೇಖಕರು. ಘೋಷ್ ಅವರ The Shadow Lines, The Hungry Tide ಮುಂತಾದ ಕೃತಿಗಳು ಭಾರತೀಯ ಇತಿಹಾಸ, ವಲಸೆ, ಮತ್ತು ಪರಿಸರ ಚಿಂತನೆಗಳ ಕುರಿತ ಆಳವಾದ ಅನ್ವೇಷಣೆಗೆ ಹೆಸರುವಾಸಿಯಾಗಿವೆ. ರಶ್ದಿ ಅವರ Midnight’s Children ಮತ್ತು The Satanic Verses ಕೃತಿಗಳು ಭಾರತೀಯ ಇಂಗ್ಲಿಷ್ ಸಾಹಿತ್ಯದ ದಿಕ್ಕು ತೋರಿಸಿದ ಕೃತಿಗಳೆಂದು ಪರಿಗಣಿಸಲಾಗುತ್ತದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಂವಿಧಾನ ಬದಲಿಸುವ ಸನಾತನಿಗಳ ಹುನ್ನಾರಕ್ಕೆ ವಕೀಲರೇ ದಾಳ
ಭಾರತದಿಂದ ಇಲ್ಲಿಯವರೆಗೂ ‘ರವೀಂದ್ರನಾಥ ಟ್ಯಾಗೋರ್’ (1913) ಸಾಹಿತ್ಯದ ನೋಬೆಲ್ ಪ್ರಶಸ್ತಿ ಪಡೆದ ಏಕೈಕ ಲೇಖಕರಾಗಿದ್ದಾರೆ. ಅವರ ‘ಗೀತಾಂಜಲಿ’ ಕೃತಿಗೆ ನೊಬೆಲ್ ಪ್ರಶಸ್ತಿ ದೊರಕಿತ್ತು. ನಂತರದ ಶತಮಾನದಲ್ಲಿ ಹಲವಾರು ಭಾರತೀಯ ಲೇಖಕರು ವಿಶ್ವ ಮಟ್ಟದಲ್ಲಿ ಮೆಚ್ಚುಗೆ ಪಡೆದರೂ, ನೊಬೆಲ್ ಗೌರವಕ್ಕೆ ಪಾತ್ರವಾಗಿಲ್ಲ.
ಫ್ರೆಂಚ್ ಕವಿ ಸುಲ್ಲಿ ಪ್ರುಧೋಮ್ 1901ರಲ್ಲಿ ಮೊದಲ ನೊಬೆಲ್ ವಿಜೇತರಾಗಿದ್ದು, ಸ್ವೀಡನ್‌ನ ಸೆಲ್ಮಾ ಲಾಗರ್ಲೋಫ್ 1909ರಲ್ಲಿ ಮೊದಲ ಮಹಿಳೆಯಾಗಿದ್ದರು. ಇಲ್ಲಿಯವರೆಗೂ 18 ಮಹಿಳೆಯರು ಈ ಪ್ರಶಸ್ತಿಯನ್ನು ಪಡೆದಿದ್ದಾರೆ.
BREAKING NEWS
— The Nobel Prize (@NobelPrize) October 9, 2025
The 2025 #NobelPrize in Literature is awarded to the Hungarian author László Krasznahorkai “for his compelling and visionary oeuvre that, in the midst of apocalyptic terror, reaffirms the power of art.” pic.twitter.com/vVaW1zkWPS





