‘ನಾನು ಕಸ ತಿನ್ನಬೇಕು’; ಕಸಕ್ಕಾಗಿ ಅಳುವ, ಮಾತನಾಡುವ ‘ಡಸ್ಟ್‌ಬಿನ್’ ವಿಡಿಯೋ ವೈರಲ್

Date:

‘ನಾನು ಕಸ ತಿನ್ನಬೇಕು. ನಿಮ್ಮ ಬಳಿ ಕಸ ಇಲ್ಲವೇ? ಕಸ ಕೊಡಿ’ ಎಂದು ಬೇಡಿಕೊಳ್ಳುವ ಡಸ್ಟ್‌ಬಿನ್‌ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಂಗ್‌ಕಾಂಗ್‌ನ ಡಿಸ್ನಿಲ್ಯಾಂಡ್‌ನಲ್ಲಿ ಕಸದ ಬಗ್ಗೆ ಮಾತನಾಡುವ ಮತ್ತು ಪ್ರತಿಕ್ರಿಯಿಸುವ ಡಸ್ಟ್‌ಬಿನ್‌ಅನ್ನು ಸಾರ್ವಜನಿಕ ಉದ್ಯಾನವನದಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಜನರು ಕಸ ಎಸೆಯದಂತೆ, ಕಸವನ್ನು ಕಸದ ಬುಟ್ಟಿಗೆ ಹಾಕುವಂತೆ ಭಾರತವೂ ಸೇರಿದಂತೆ ಹಲವು ದೇಶಗಳ ಸರ್ಕಾರಗಳು ಮನವಿ ಮಾಡುತ್ತಿವೆ. ಜಾಗೃತಿ ಮೂಡಿಸುತ್ತಿವೆ. ಇದೀಗ, ಜನರು ಕಸವನ್ನು ಕಸದ ಬುಟ್ಟಿಗೇ ಹಾಕುವಂತೆ ಪ್ರೇರೇಪಿಸಲು ಹಾಂಗ್‌ಕಾಂಗ್‌ ಸರ್ಕಾರ ನೂತನ ಪ್ರಯೋಗ ನಡೆಸಿದೆ. ಸಾರ್ವಜನಿಕ ಸ್ಥಳದಲ್ಲಿ ಮಾತನಾಡುವ ಕಸದ ಬುಟ್ಟಿಯನ್ನು ಇರಿಸಿದೆ. ಇದು, ಜನರನ್ನು ಆಕರ್ಷಿಸುತ್ತದೆ. ಜನರು ಕಸವನ್ನು ಕಸದ ಬುಟ್ಟಿಗೇ ಹಾಕುವಂತೆ ಉತ್ತೇಜಿಸುತ್ತದೆ ಎಂದು ಹೇಳಲಾಗಿದೆ.

ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು ಕಸಕ್ಕಾಗಿ ಕಸದ ಬುಟ್ಟಿಯೊಂದು ಬೇಡಿಕೊಳ್ಳುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆ ಡಸ್ಟ್‌ಬಿನ್‌ಅನ್ನು ಅನಿಮೇಷನ್‌ ಮೂಲಕ ತಯಾರಿಸಲಾಗಿದೆ ಎಂದು ವರದಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಿಡಿಯೋದಲ್ಲಿ ಕಸದ ಬುಟ್ಟಿಯು ಸ್ವಯಂ ಚಾಲಿತವಾಗಿ ಸುತ್ತಲೂ ತಿರುತ್ತದೆ. ‘ನಾನು ಕಸವನ್ನು ತಿನ್ನಬೇಕು! ನಿಜವಾಗಿಯೂ ಯಾವುದೇ ಕಸ ಇಲ್ಲವೇ? ಆಹ್! ಕಸ ಮುಗಿದು ಹೋಗಿದೆ!’ ಎಂದು ಹಾಸ್ಯಮಯವಾಗಿ ಬೇಡಿಕೊಳ್ಳುತ್ತದೆ. ಯಾರಾದರು ಕಸವನ್ನು ಬುಟ್ಟಿಯೊಳಗೆ ಹಾಕಿದಾಗ ಅದು ಉತ್ಸಾಹದಿಂದ ಪ್ರತಿಕ್ರಿಯಿಸುತ್ತದೆ. “ಅಹ್‌, ಕಸ ಸಿಕ್ಕಿತು. ಯಂ ಯಂ ಯಂ!” ಎಂದು ಹೇಳುತ್ತದೆ.

“ಇದು ತುಂಬಾ ಉತ್ಸಾಹಭರಿತವಾಗಿದೆ! ನಾನು ಅದರೊಂದಿಗೆ ಇಡೀ ದಿನ ಮಾತನಾಡಬಹುದು” ಎಂದು ವಿಡಿಯೋ ಹಂಚಿಕೊಂಡಿರುವವರು ಹೇಳಿಕೊಂಡಿದ್ದಾರೆ.

ಈ ‘ಮಾತನಾಡುವ’ ಡಸ್ಟ್‌ಬಿನ್, ಶುಚಿತ್ವವನ್ನು ಉತ್ತೇಜಿಸಲು ಬಳಸಲಾದ ಸೃಜನಶೀಲತೆಯ ಸಂಕೇತವಾಗಿದೆ. ತ್ಯಾಜ್ಯ ವಿಲೇವಾರಿಯ ಸಮಸ್ಯೆಯನ್ನು ಪರಿಹರಿಸಲು ತಂತ್ರಜ್ಞಾನ ಮತ್ತು ಹಾಸ್ಯ ಸಂಯೋಜಿತ ಪ್ರಯೋಗಕ್ಕಾಗಿ ಡಿಸ್ನಿಲ್ಯಾಂಡ್‌ನ ಸ್ಥಳೀಯ ಆಡಳಿತವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...