ಐದು ವರ್ಷಗಳ ನಂತರ ಭಾರತ–ಚೀನಾ ನಡುವೆ ನೇರ ವಿಮಾನಯಾನ ಸೇವೆ ಪುನರಾರಂಭ

Date:

ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ಸುಧಾರಣೆಯತ್ತ ಸಾಗುತ್ತಿರುವಂತೆ, ಎರಡೂ ದೇಶಗಳ ನಡುವೆ ನೇರ ವಿಮಾನ ಸಂಪರ್ಕ ಪುನರಾರಂಭವಾಗಿದೆ.

ಕೋಲ್ಕತ್ತಾದಿಂದ ಇಂಡಿಗೋ ವಿಮಾನ 6E 1703 ಸೋಮವಾರ 180 ಪ್ರಯಾಣಿಕರೊಂದಿಗೆ ಚೀನಾದ ಗುವಾಂಗ್‌ಝೌಗೆ ತಲುಪಿತು. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ 2020ರಲ್ಲಿ ವಿಮಾನ ಸಂಪರ್ಕ ಸ್ಥಗಿತಗೊಂಡಿತ್ತು. ಜೊತೆಗೆ, ವಿವಾದಿತ ಹಿಮಾಲಯದ ಗಡಿಯಲ್ಲಿ 2020ರಲ್ಲಿ ನಡೆದ ಘರ್ಷಣೆಯಿಂದಾಗಿ ಉದ್ವಿಗ್ನತೆ ಹೆಚ್ಚಾಗಿ, ಸಂಪರ್ಕ ಚೇತರಿಸಿಕೊಂಡಿರಲಿಲ್ಲ.

ಆದರೆ, ಇತ್ತೀಚಿನ ದಿನಗಳಲ್ಲಿ ಎರಡೂ ದೇಶಗಳು ಸಂಬಂಧವನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತಿವೆ. ಕಳೆದ ವರ್ಷ ಗಡಿಗಾವಲು ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿತ್ತು. ಆಗಸ್ಟ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಏಳು ವರ್ಷಗಳ ಬಳಿಕ ಚೀನಾಕ್ಕೆ ಭೇಟಿ ನೀಡಿದ್ದರು. ಅದೇ ತಿಂಗಳು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭಾರತಕ್ಕೆ ಆಗಮಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕೇಂದ್ರ ಸರ್ಕಾರವು, ವಿಮಾನ ಸಂಪರ್ಕ ಪುನರಾರಂಭವು ಜನರ ನಡುವಿನ ಸಂಪರ್ಕವನ್ನು ಸುಗಮಗೊಳಿಸಲಿದೆ ಎಂದು ಹೇಳಿದೆ. ಚೀನಾದ ಪ್ರವಾಸಿಗರಿಗೆ ಭಾರತವು ವೀಸಾ ನೀಡಿಕೆಯನ್ನೂ ಪುನರಾರಂಭಿಸಿದೆ.

ಚೀನಾ ಈಸ್ಟರ್ನ್ ಏರ್‌ಲೈನ್ಸ್ ನವೆಂಬರ್‌ನಲ್ಲಿ ಶಾಂಘೈ-ದೆಹಲಿ ವಿಮಾನವನ್ನು ಆರಂಭಿಸಲಿದೆ.

ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಭಾನುವಾರ ಸಂಜೆ ಇಂಡಿಗೋ ಪ್ರಯಾಣಿಕರಿಗೆ ಚೆಕ್-ಇನ್ ಸಂದರ್ಭದಲ್ಲಿ, ದೀಪಗಳನ್ನು ಬೆಳಗಿ ವಿಮಾನ ಸಂಪರ್ಕ ಪುನರಾರಂಭ ಸಮಾರಂಭವನ್ನು ಆಚರಿಸಲಾಯಿತು. ಚೀನಾದ ಒಬ್ಬ ಹಿರಿಯ ಕಾನ್ಸುಲರ್ ಅಧಿಕಾರಿ ಕ್ವಿನ್ ಯಾಂಗ್, ಇದು ಭಾರತ-ಚೀನಾ ಸಂಬಂಧಕ್ಕೆ “ಅತ್ಯಂತ ಮಹತ್ವದ ದಿನ” ಎಂದು ಹೇಳಿದರು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆಗ ತಲೆ ಮೇಲೆ ಹೊತ್ತು ಮೆರೆಸಿದವರು ಈಗ ಪಲಾಯನ ಮಾಡುವುದು ತರವೇ?

“ನಾನು ಕೋವಿಡ್‌ಗೆ ಮೊದಲು ಕೋಲ್ಕತ್ತಾ ಮತ್ತು ಚೀನಾ ನಡುವೆ ಆಗಾಗ ಪ್ರಯಾಣಿಸುತ್ತಿದ್ದೆ. ಈಗ ನೇರ ಸಂಪರ್ಕ ಮರಳಿದ್ದರಿಂದ ನಿಯಮಿತ ಪ್ರಯಾಣ ಪುನರಾರಂಭಿಸಲು ಬಯಸುತ್ತೇನೆ” ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.

ಇಂಡಿಗೋ ವಿಮಾನದ ಒಬ್ಬ ಪ್ರಯಾಣಿಕರು, “ಕಳೆದ ಐದು ವರ್ಷಗಳಿಂದ ದೆಹಲಿ ಮತ್ತು ಬ್ಯಾಂಕಾಕ್ ಮೂಲಕ ಚೀನಾಕ್ಕೆ ಪ್ರಯಾಣಿಸಬೇಕಿತ್ತು. ಇದು ದುಸ್ತರವಾಗಿದ್ದು, ದುಬಾರಿಯಾಗಿತ್ತು. ಈಗ ನೇರ ವಿಮಾನವು ಕೇವಲ ಮೂರುವರೆ ಗಂಟೆಗಳಲ್ಲಿ ತಲುಪುತ್ತದೆ ಮತ್ತು ವೆಚ್ಚವೂ ಕಡಿಮೆ” ಎಂದರು.

ನವೆಂಬರ್ 10ರಂದು ಇಂಡಿಗೋ ದೆಹಲಿ-ಗುವಾಂಗ್‌ಝೌ ಸೇವೆಯನ್ನು ಆರಂಭಿಸಲಿದೆ. ಚೀನಾ ಈಸ್ಟರ್ನ್ ಏರ್‌ಲೈನ್ಸ್ ಒಂದು ದಿನ ಮೊದಲು ಶಾಂಘೈ-ದೆಹಲಿ ಸೇವೆ ಆರಂಭಿಸಲಿದೆ. 2020ರಲ್ಲಿ ಗಡಿ ಉದ್ವಿಗ್ನತೆಯಿಂದಾಗಿ ಸ್ಥಗಿತಗೊಂಡಿದ್ದ 40ಕ್ಕೂ ಹೆಚ್ಚು ವಿಮಾನಗಳು ಈಗ ಪುನರಾರಂಭವಾಗುತ್ತಿವೆ.

ಚೀನಾದ ನಾಗರಿಕರಿಗೆ ಭಾರತವು ಪ್ರವಾಸಿ ವೀಸಾವನ್ನು ಪುನರಾರಂಭಿಸಿದ್ದು, ವಿಮಾನ ಸಂಪರ್ಕಕ್ಕೆ ದಾರಿಮಾಡಿಕೊಟ್ಟಿತು. ಈ ವರ್ಷ ಜನವರಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರ ಚೀನಾ ಭೇಟಿಯ ವೇಳೆ ಈ ಒಪ್ಪಂದವು ರೂಪುಗೊಂಡಿತ್ತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...