ಭಾರತ, ಪಾಕಿಸ್ತಾನ ನಾಯಕರು ಈಗ ಜೊತೆಯಾಗಿ ಭೋಜನಕ್ಕೆ ಹೋಗಬಹುದು: ಡೊನಾಲ್ಡ್ ಟ್ರಂಪ್

Date:

ಸದ್ಯ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಒಪ್ಪಂದ ನಡೆಯಲು ತನ್ನ ಮಧ್ಯಸ್ಥಿಕೆಯ ಕಾರಣ ಎಂದು ಹೇಳಿಕೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಜೊತೆಯಾಗಿ ಉತ್ತಮ ಭೋಜನಕೂಟ ಆಯೋಜಿಸುವಂತೆ ಉಭಯ ದೇಶಗಳಿಗೆ ಸಲಹೆ ನೀಡಿದ್ದಾರೆ.

ಸುಮಾರು 26 ಭಾರತೀಯರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಹೆಸರಲ್ಲಿ ಭಾರತೀಯ ಸೇನೆ ಮೇ 7ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.

ಇದನ್ನು ಓದಿದ್ದೀರಾ? ಟ್ರಂಪ್ ಒತ್ತಡಕ್ಕೆ ಬಗ್ಗಿ ‘ಸ್ಟಾರ್‌ಲಿಂಕ್’ ಪರವಾನಗಿ ನೀಡಿದರೆ ಮೋದಿ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದಾದ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ತನ್ನ ಮಧ್ಯಸ್ಥಿಕೆಯಲ್ಲಿ ಕದನ ವಿರಾಮಕ್ಕೆ ಭಾರತ ಮತ್ತು ಪಾಕಿಸ್ತಾನ ಒಪ್ಪಿಕೊಂಡಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು. ಉಭಯ ದೇಶಗಳೂ ಇದನ್ನು ದೃಢಪಡಿಸಿದೆ.

ಅದಾದ ಬಳಿಕ ನಿರಂತರವಾಗಿ ಈ ಕದನ ವಿರಾಮದ ‘ಕ್ರೆಡಿಟ್’ ಅನ್ನು ಪಡೆಯುವುದರಲ್ಲೇ ಟ್ರಂಪ್ ಮಗ್ನರಾಗಿದ್ದಾರೆ. ರಿಯಾದ್‌ನಲ್ಲಿ ನಡೆದ ಹೂಡಿಕೆ ವೇದಿಕೆಯಲ್ಲಿ ಮಾತನಾಡುತ್ತಾ “ಭಾರತ ಮತ್ತು ಪಾಕಿಸ್ತಾನದ ನಾಯಕರು ಈಗ ಜೊತೆಯಾಗಿ ಒಳ್ಳೆಯ ಭೋಜನಕ್ಕೆ ಹೋಗಬಹುದು” ಎಂದು ವ್ಯಂಗ್ಯವಾಡಿದ್ದಾರೆ. ಅಂದರೆ ತನ್ನ ಮಧ್ಯಸ್ಥಿಕೆಯಲ್ಲಿ ಉಭಯ ದೇಶಗಳ ಸಂಬಂಧ ಜೊತೆಯಾಗಿ ಊಟ ಮಾಡುವಷ್ಟು ಬದಲಾಗಿದೆ ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.

“ಕೆಲವೇ ದಿನಗಳ ಹಿಂದೆ, ನನ್ನ ಆಡಳಿತವು ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಹಿಂಸಾಚಾರವನ್ನು ನಿಲ್ಲಿಸಲು ಐತಿಹಾಸಿಕ ಕದನ ವಿರಾಮವನ್ನು ಯಶಸ್ವಿಯಾಗಿ ಮಧ್ಯಸ್ಥಿಕೆ ವಹಿಸಿತು. ಕದನ ವಿರಾಮ ಒಪ್ಪಂದ ಮಾಡಿಸಲು ನಾನು ವ್ಯಾಪಾರವನ್ನು ಅಸ್ತ್ರವಾಗಿ ಬಳಸಿಕೊಂಡೆ. ‘ಬನ್ನಿ, ಪ್ಪಂದ ಮಾಡಿಕೊಳ್ಳೋಣ. ಸ್ವಲ್ಪ ವ್ಯಾಪಾರ ಮಾಡೋಣ’ ಎಂದು ಹೇಳಿದೆ” ಎಂದು ಹೇಳಿಕೊಂಡಿದ್ದಾರೆ.

ಇದನ್ನು ಓದಿದ್ದೀರಾ? BREAKING NEWS | ‘ತಕ್ಷಣ ಕದನ ವಿರಾಮಕ್ಕೆ ಭಾರತ-ಪಾಕಿಸ್ತಾನ ಒಪ್ಪಿಕೊಂಡಿವೆ’ ಎಂದ ಅಮೆರಿಕ ಅಧ್ಯಕ್ಷ ಟ್ರಂಪ್

ಕದನ ವಿರಾಮಕ್ಕೆ ಒಪ್ಪದಿದ್ದರೆ ಅಮೆರಿಕದೊಂದಿಗಿನ ವ್ಯಾಪಾರ ಸಂಬಂಧ ಕಳೆದುಕೊಳ್ಳಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ ಬಳಿಕ ಉಭಯ ದೇಶಗಳು ಒಪ್ಪಂದಕ್ಕೆ ಒಪ್ಪಿದೆ ಎಂದು ಇತ್ತೀಚೆಗೆ ಟ್ರಂಪ್ ಹೇಳಿದ್ದಾರೆ. ಆದರೆ ಈ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ. ಆದರೆ ಟ್ರಂಪ್ ಮಾತ್ರ ಒಪ್ಪಂದಕ್ಕೆ ಕಾರಣ ಅಮೆರಿಕ ಎಂದು ಹೇಳುತ್ತಿದ್ದಾರೆ.

“ಪರಮಾಣು ಕ್ಷಿಪಣಿಗಳ ವ್ಯಾಪಾರ ಬೇಡ. ನೀವು ಮಾಡುವ ವಸ್ತುಗಳನ್ನು ಸುಂದರವಾಗಿ ವ್ಯಾಪಾರ ಮಾಡೋಣ ಎಂದು ಹೇಳಿದೆ. ಉಭಯ ದೇಶಗಳು ಬಹಳ ಶಕ್ತಿಶಾಲಿ, ಬಲಿಷ್ಠ, ಉತ್ತಮ, ಬುದ್ಧಿವಂತ ನಾಯಕರನ್ನು ಹೊಂದಿವೆ. ನಮ್ಮ ಮಧ್ಯಸ್ಥಿಕೆ ಮಾತಿನಿಂದ ಎಲ್ಲಾ ಕದನವೂ ನಿಂತುಹೋಯಿತು. ಈ ಸ್ಥಿತಿ ಹಾಗೆಯೇ ಉಳಿಯುತ್ತದೆ ಎಂಬ ಆಶಾಭಾವನೆಯಿದೆ” ಎಂದು ಮಂಗಳವಾರ ರಿಯಾದ್‌ನಲ್ಲಿ ಟ್ರಂಪ್ ಹೇಳಿದ್ದಾರೆ.

ವಿದೇಶಾಂಗ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಮಾರ್ಕೊ ರುಬಿಯೊ ಮತ್ತು ಭಾರತ, ಪಾಕಿಸ್ತಾನ ‘ಕದನ ವಿರಾಮ’ಕ್ಕೆ ಒಪ್ಪುವಂತೆ ಮಾಡಲು ಶ್ರಮಿಸಿದ ಎಲ್ಲ ಜನರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಎಂದೂ ಹೇಳಿದ್ದಾರೆ. “ಮಾರ್ಕೊ, ಎದ್ದು ನಿಲ್ಲಿ. ಈ ಕದನ ವಿರಾಮಕ್ಕಾಗಿ ನೀವು ಉತ್ತಮ ಕೆಲಸ ಮಾಡಿದ್ದೀರಿ. ಧನ್ಯವಾದಗಳು. ಇಡೀ ತಂಡ ನಿಮ್ಮೊಂದಿಗೆ ಕೆಲಸ ಮಾಡಿದೆ. ಇದು ಉತ್ತಮ ಕೆಲಸ” ಎಂದು ತನ್ನ ತಂಡವನ್ನು ಹಾಡಿಹೊಗಳಿದರು.

ಹಾಗೆಯೇ ಈ ವೇಳೆ ವ್ಯಂಗ್ಯವಾಡಿದ ಟ್ರಂಪ್, “ಬಹುಶಃ ನಾವು ಅವರನ್ನು (ಭಾರತ ಪಾಕಿಸ್ತಾನ) ಸ್ವಲ್ಪ ಜೊತೆ ಸೇರಿಸಬಹುದು. ಉಭಯ ದೇಶದ ನಾಯಕರು ಹೊರಗೆ ಹೋಗಿ ಒಟ್ಟಿಗೆ ಉತ್ತಮ ಭೋಜನ ಮಾಡುತ್ತಾರೆ. ಅದು ಚೆನ್ನಾಗಿರುವುದಿಲ್ಲವೇ ಮಾರ್ಕೊ” ಎಂದು ಪ್ರಶ್ನಿಸಿದರು.

“ಆದರೆ ನಾವು, ನಾವು ಬಹಳ ದೂರ ಬಂದಿದ್ದೇವೆ. ಅದು ನಿಮಗೆ ತಿಳಿದಿದೆ. ಲಕ್ಷಾಂತರ ಜನರು ಆ ಸಂಘರ್ಷದಿಂದ ಸಾಯಬಹುದಿತ್ತು. ಸಣ್ಣದಾಗಿ ಪ್ರಾರಂಭವಾದ ಸಂಘರ್ಷ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿತ್ತು” ಎಂದಿದ್ದಾರೆ

ಅಮೆರಿಕದ ಅಧ್ಯಕ್ಷ ಟ್ರಂಪ್ ಶನಿವಾರ, ಭಾನುವಾರ ಮತ್ತು ಸೋಮವಾರದಂದು ತಮ್ಮ ಆಡಳಿತವು ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯವರ್ತಿಯ ಪಾತ್ರವನ್ನು ವಹಿಸುತ್ತಿದೆ ಎಂಬ ತಮ್ಮ ಹೇಳಿಕೆಗಳನ್ನು ಪುನರಾವರ್ತಿಸಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...