ಉಕ್ರೇನ್ ಕುರಿತ ನಿರ್ಣಯಗಳ ಮತದಾನದಿಂದ ದೂರ ಉಳಿದ ಭಾರತ: ಅಮೆರಿಕಕ್ಕೆ ಹಿನ್ನಡೆ

Date:

ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸೋಮವಾರ ಹಲವು ನಾಟಕೀಯ ತಿರುವುಗಳಿಗೆ ಸಾಕ್ಷಿಯಾಗಿದ್ದು, ರಷ್ಯಾ-ಉಕ್ರೇನ್ ಯುದ್ಧದ ಮೂರನೇ ವರ್ಷಾಚರಣೆ ಸಂದರ್ಭದಲ್ಲಿ ಉಕ್ರೇನ್ ಹಾಗೂ ಅಮೆರಿಕ ಮಂಡಿಸಿದ್ದ ನಿರ್ಣಯಗಳ ಮತದಾನದಿಂದ ಭಾರತ ದೂರ ಉಳಿದಿದೆ.

ಎರಡೂ ನಿರ್ಣಯಗಳ ಪರ 93 ಮತಗಳು ಬಿದ್ದವು. 193 ಸದಸ್ಯ ಬಲದ ಸಭೆಯಲ್ಲಿ ಯೂರೋಪಿಯನ್ ಒಕ್ಕೂಟ ಅಮೆರಿಕದ ಬೆಂಬಲ ಪಡೆಯುವಲ್ಲಿ ಸಫಲವಾಗಿದ್ದು, ಉಕ್ರೇನ್‌ನ ಸಾರ್ವಭೌಮತ್ವ ಮತ್ತು ಭೌಗೋಳಿಕ ಸಮಗ್ರತೆಯನ್ನು ಕಾಪಾಡುವ ಹಾಗೂ ಸಮಗ್ರ ಶಾಂತಿ ಸ್ಥಾಪನೆಗೆ ನಿರ್ಣಯ ಕರೆ ನೀಡಿದೆ.

ರಷ್ಯಾ- ಉಕ್ರೇನ್ ಸಂಘರ್ಷಕ್ಕೆ ತ್ವರಿತ ಅಂತ್ಯ ಕಾಣಿಸುವ ಸಂಬಂಧ ಅಮೆರಿಕದ ಪ್ರಯತ್ನಗಳ ಸಂಬಂಧದ ಮತದಾನ ಹಲವು ನಾಟಕೀಯ ತಿರುವುಗಳಿಗೆ ಸಾಕ್ಷಿಯಾಗಿದ್ದು, ತಾನೇ ಮಂಡಿಸಿದ ನಿರ್ಣಯದ ಮೇಲಿನ ಮತದಾನದಿಂದ ಅಮೆರಿಕ ದೂರ ಉಳಿಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಏತನ್ಮಧ್ಯೆ ಉಕ್ರೇನ್ ಹಾಗೂ ಯೂರೋಪಿಯನ್ ಒಕ್ಕೂಟ ಮಂಡಿಸಿದ ನಿರ್ಣಯದಲ್ಲಿ ರಷ್ಯಾ ತನ್ನ ಪಡೆಗಳನ್ನು ತಕ್ಷಣ ವಾಪಸ್‌ ಕರೆಸಿಕೊಳ್ಳುವಂತೆ ಆಗ್ರಹಿಸಲಾಗಿದೆ. ಯೂರೋಪಿಯನ್ ದೇಶಗಳು ನಿರ್ಣಯದ ಬರಹಕ್ಕೆ ತಿದ್ದುಪಡಿಗಳನ್ನು ತರುವಲ್ಲಿ ಯಶಸ್ವಿಯಾದವು. ತನ್ನ ತಟಸ್ಥ ನೀತಿಯನ್ನು ಆರಂಭದಿಂದಲೂ ಪ್ರದರ್ಶಿಸುತ್ತಾ ಬಂದ ಭಾರತ ಶಾಂತಿಯ ಪರವಾಗಿದ್ದು, ಈ ನಿರ್ಣಯದ ಪರ ಮತ ಚಲಾಯಿಸುವ ನಿರೀಕ್ಷೆ ಇತ್ತು. ಆದರೆ ತಿದ್ದುಪಡಿಗಳ ಕಾರಣದಿಂದ ಭಾರತವು ಸಹ ಮತದಾನದಿಂದ ದೂರ ಉಳಿಯಲು ನಿರ್ಧರಿಸಿತು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಣಿಪುರ ರಾಜ್ಯಪಾಲರ ಆದೇಶ ನಾಗರಿಕರು ಪಾಲಿಸಲಿ

ಯೂರೋಪ್ ಬೆಂಬಲಿತ ನಿರ್ಣಯದ ಮೇಲಿನ ಮತದಾನದಿಂದ 65 ದೇಶಗಳು ದೂರ ಉಳಿದವು. ನ್ಯಾಯಸಮ್ಮತ ಹಾಗೂ ಸುಧೀರ್ಘ ಶಾಂತಿಗೆ ಆಗ್ರಹಿಸಿರುವ ನಿರ್ಣಯದಲ್ಲಿ ರಷ್ಯನ್ ಪಡೆಗಳು ತಕ್ಷಣವೇ ಉಕ್ರೇನ್‌ನಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಲಾಗಿದೆ. ರಷ್ಯಾದ ನಿಲುವನ್ನು ಖಂಡಿಸುವ ಹಿಂದಿನ ನಿರ್ಣಯಕ್ಕೆ ಪೂರಕವಾಗಿ ಈ ನಿರ್ಣಯ ಮಂಡಿಸಲಾಗಿತ್ತು.
ಸಂಘರ್ಷ ನಿವಾರಣೆಗಾಗಿ ಉಭಯ ದೇಶಗಳು ಪರಸ್ಪರ ಮಾತುಕತೆ ಮತ್ತು ರಾಜತಾಂತ್ರಿಕ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂಬ ನಿಲುವಿಗೆ ಭಾರತ ಬದ್ಧವಾಗಿದ್ದು, ಅಧಿಕೃತವಾಗಿ ಮತದಾನದಿಂದ ದೂರ ಉಳಿಯಿತು.

ಯೂರೋಪಿಯನ್ ಒಕ್ಕೂಟ ಮತ್ತು ಉಕ್ರೇನ್ ದೇಶಗಳನ್ನು ಹೊರಗಿಟ್ಟು ನೇರವಾಗಿ ರಷ್ಯಾ ಜತೆ ಮಾತುಕತೆಯಲ್ಲಿ ಅಮೆರಿಕ ತೊಡಗಿದೆ. ಸಾಮಾನ್ಯ ಸಭೆಯಲ್ಲಿನ ಅಮೆರಿಕದ ಸೋಲು ಆ ದೇಶಕ್ಕೆ ದೊಡ್ಡ ಹಿನ್ನಡೆ ಎನಿಸಿದೆ. ಆದರೆ ಭದ್ರತಾ ಮಂಡಳಿಯಲ್ಲಿ ಪ್ರಯತ್ನ ಮುಂದುವರಿಸಲಿದ್ದು, ಫ್ರಾನ್ಸ್ ಹಾಗೂ ಬ್ರಿಟನ್ ಅದಕ್ಕೆ ವಿಟೊ ಚಲಾಯಿಸದಂತೆ ಮಾಡುವ ವಿಶ್ವಾಸದಲ್ಲಿದೆ. ಈ ಎರಡೂ ದೇಶಗಳು ಹಲವು ದಶಕಗಳಿಂದ ತಮ್ಮ ವಿಟೊ ಅಧಿಕಾರವನ್ನು ಚಲಾಯಿಸಿಲ್ಲ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

ಅಸ್ಸಾಂ ಚುನಾವಣೆ: ಕಾಂಗ್ರೆಸ್ ಸೇರಿದ ಮಾಜಿ ಸಚಿವೆ ನಂದಿತಾ ಗೋರ್ಲೋಸಾ ಯಾರು?

ಅಸ್ಸಾಂ ವಿಧಾನಸಭಾ ಚುನಾವಣೆಗೆ (ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ)...