ಭಾರತವು ಇರಾನ್‌ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ: ಟ್ರಂಪ್‌

Date:

ಭಾರತವು ಇನ್ನು ಮುಂದೆ ಇರಾನ್‌ನಿಂದ ತೈಲ ಖರೀದಿಸುವುಲ್ಲ. ಬದಲಾಗಿ, ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಶನಿವಾರ (ಜ.31) ವಾಷಿಂಗ್ಟನ್ ಡಿ.ಸಿ.ಯಿಂದ ಫ್ಲೋರಿಡಾಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಟ್ರಂಪ್‌, ʼವೆನೆಜುವೆಲಾದ ತೈಲವನ್ನು ಖರೀದಿಸಲು ಚೀನಾವು ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳುವುದನ್ನು ಸ್ವಾಗತಿಸುತ್ತೇವೆʼ ಎಂದು ಹೇಳಿದರು.

ʼತೈಲ ಖರೀದಿಗಾಗಿ ಚೀನಾವನ್ನು ಸ್ವಾಗತಿಸುತ್ತೇವೆ. ಚೀನಾ ಅಮೆರಿಕದ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡರೆ, ತೈಲದ ವಿಷಯದಲ್ಲಿ ಹೆಚ್ಚು ಲಾಭಗಳಿಸುತ್ತದೆ. ನಾವು ಈಗಾಗಲೇ ಭಾರತದ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ಭಾರತವು ಇನ್ನು ಮುಂದೆ ಇರಾನ್‌ನಿಂದ ತೈಲ ಖರೀದಿಸುವ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ” ಎಂದು ಟ್ರಂಪ್‌ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿ : ಕೆನಡಾಕ್ಕೆ ಶೇ100 ಸುಂಕ ಎಚ್ಚರಿಕೆ: ಮುಂದುವರೆದ ಟ್ರಂಪ್‌ ಸರ್ವಾಧಿಕಾರಿ ನಡೆ

ಕಳೆದ ವರ್ಷ ಮಾರ್ಚ್‌ನಲ್ಲಿ ಭಾರತ ಸೇರಿದಂತೆ ವೆನೆಜುವೆಲಾದ ತೈಲ ಖರೀದಿಸುವ ದೇಶಗಳ ಮೇಲೆ ಟ್ರಂಪ್ ಶೇ 25 ರಷ್ಟು ಸುಂಕ ವಿಧಿಸಿದ್ದರು. ಆದರೆ ಈಗ ಅವರೇ, ಭಾರತಕ್ಕೆ ತೈಲ ಖರೀದಿಯ ಆಹ್ವಾನವನ್ನು ಕೊಟ್ಟಿದ್ದಾರೆ. ಟ್ರಂಪ್‌ ಈ ರೀತಿಯ ದ್ವಂದ್ವ ನೀತಿಗಳನ್ನು, ದ್ವಂದ್ವ ನಿಲುವುಗಳನ್ನು ಹಲವು ಸಂದರ್ಭದಲ್ಲಿ ತೆಗೆದುಕೊಂಡಿದ್ದಾರೆ.

ಟ್ರಂಪ್‌ ಅವರ ಈ ಹೇಳಿಕೆಗೆ ಭಾರತವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಟ್ರಂಪ್‌ ಅವರ ಹೇಳಿಕೆಯ ಹಿಂದಿನ ದಿನ ಜ.30 ರಂದು ಪ್ರಧಾನಿ ನರೇಂದ್ರ ಮೋದಿ ಅವರು ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್‌ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಇಬ್ಬರೂ ನಾಯಕರು ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಜೊತೆಗೆ ವ್ಯಾಪಾರ ಮತ್ತು ಹೂಡಿಕೆ, ಇಂಧನ, ಡಿಜಿಟಲ್ ತಂತ್ರಜ್ಞಾನ, ಆರೋಗ್ಯ, ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಭಾರತ-ವೆನೆಜುವೆಲಾ ಪಾಲುದಾರಿಕೆಯನ್ನು ಮತ್ತಷ್ಟು ವಿಸ್ತರಿಸಲು ಇಬ್ಬರು ನಾಯಕರು ಮಾತುಕತೆ ನಡೆಸಿದ್ದಾರೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಕಳೆದ ವರ್ಷ ವಾಷಿಂಗ್ಟನ್ ಭಾರತದ ಮೇಲೆ ವೆನೆಜುವೆಲಾದ ತೈಲ ಖರೀದಿಯ ಮೇಲೆ ಸುಂಕಗಳನ್ನು ವಿಧಿಸಿತು, ಆದರೆ ರಷ್ಯಾದ ರಫ್ತು ಆದಾಯವನ್ನು ನಿಗ್ರಹಿಸಲು ಮತ್ತು ಇಂಧನ ಹರಿವನ್ನು ಮರುರೂಪಿಸಲು ಪ್ರಯತ್ನಿಸುತ್ತಿರುವುದರಿಂದ ತನ್ನ ನಿಲುವನ್ನು ಅಮೆರಿಕ ಬದಲಾಯಿಸಿದೆ.

ಇತ್ತೀಚಿನ ವರ್ಷಗಳಲ್ಲಿ, ಭಾರತವು ರಿಯಾಯಿತಿ ದರದಲ್ಲಿ ರಷ್ಯಾದ ಕಚ್ಚಾ ತೈಲ ಖರೀದಿಯನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಇದರ ಮೂಲಕ ರಷ್ಯಾದ ಅತಿದೊಡ್ಡ ತೈಲ ಖರೀದಿದಾರಲ್ಲಿ ಭಾರತ ಪ್ರಮುಖವಾಗಿದೆ. ಆದರೆ ರಷ್ಯಾದ ಆರ್ಥಿಕತೆಯನ್ನು ನಿರ್ಬಂಧಿಸುವ ಸಲುವಾಗಿ, ರಷ್ಯಾದಿಂದ  ತೈಲ ಖರೀದಿಸಿದರೆ, ಅಮೆರಿಕಕ್ಕೆ ಬರುವ ಭಾರತ ವಸ್ತುಗಳ ಮೇಲೆ ಶೇ.50 ರಷ್ಟು ಸುಂಕ ವಿಧಿಸುವ ತೀರ್ಮಾನವನ್ನು ಟ್ರಂಪ್‌ ತೆಗೆದುಕೊಂಡಿದ್ದರು. ಇದರಿಂದ ರಷ್ಯಾದ ಪ್ರಮುಖ ತೈಲ ಖರೀದಿದಾರ ಭಾರತ ಕಡಿಮೆ ಮಾಡುತ್ತಾ ಬಂದಿತು. ಟ್ರಂಪ್‌ ಅವರ ಸುಂಕ ನೀತಿ ಈಗಲೂ ಮುಂದುವರೆಯುತ್ತಿದೆ.

ಅದೇ ರೀತಿಯಲ್ಲಿ, 2019ರ ವರೆಗೆ ಭಾರತವು ಇರಾನಿನ ತೈಲ ಖರೀದಿಯ ಪ್ರಮುಖ ರಾಷ್ಟ್ರವಾಗಿತ್ತು. ಆನಂತರ ಟೆಹ್ರಾನ್‌ ಮೇಲೆ ಅಮೆರಿಕವು ನಿರ್ಬಂಧಗಳನ್ನು ಹೇರಿದ ನಂತರ ಭಾರತಕ್ಕೆ ಬರುವ ಆಮದುಗಳು ಗಮನಾರ್ಹವಾಗಿ ಕಡಿಮೆಯಾಗುತ್ತಾ ಬಂದಿತು.

ಭಾರತವು ಇರಾನ್‌ನಿಂದ ಬಹಳಷ್ಟು ತೈಲವನ್ನು ಆಮದು ಮಾಡಿಕೊಂಡಿದೆ. 2006–07 ಮತ್ತು 2018–19ರ ನಡುವೆ, ಇರಾನ್ ಭಾರತದ ಪ್ರಮುಖ ಪೂರೈಕೆದಾರರಲ್ಲಿ ಒಂದಾಗಿತ್ತು. 2007–08ರಲ್ಲಿ ಭಾರತವು ತೈಲ ಖರೀದಿಯ ಉತ್ತುಂಗದಲ್ಲಿದ್ದಾಗ, ಇರಾನ್ ಭಾರತಕ್ಕೆ 13ಪ್ರತಿಶತ ಹೆಚ್ಚಿನ ವಕಚ್ಚಾ ತೈಲವನ್ನು ಒದಗಿಸಿತು. 2018–19ರಲ್ಲಿ, ಭಾರತವು $12.3 ಶತಕೋಟಿ ಮೌಲ್ಯದ ಇರಾನಿನ ತೈಲವನ್ನು ಆಮದು ಮಾಡಿಕೊಂಡಿದೆ. ಇರಾನಿನ ಒಟ್ಟು ತೈಲ ಆಮದಿನಲ್ಲಿ ಭಾರತವು ಸುಮಾರು 9 ಪ್ರತಿಶತವಾಗಿದೆ.

ಕಳೆದ ವರ್ಷವಷ್ಟೆ ವೆನೆಜುವೆಲಾ ತೈಲ ಖರೀದಿಗೆ ಭಾರತದ ಮೇಲೆ ಶೇ25 ಸುಂಕ ವಿಧಿಸಿದ್ದ ಅಮೆರಿದಕ ಈಗ ತನ್ನ ನಿಲುವನ್ನು ಬದಲಾಯಿಸಿದೆ. ಅಮೆರಿಕವು ಈ ರೀತಿಯ ನಿಲುವನ್ನು ಅನೇಕ ಸಂದರ್ಭದಲ್ಲಿ ಬದಲಾಯಿಸಿದೆ. ತನಗೆ ಅನುಕೂಲವಾಗಂತೆ ಬೇರೆ ದೇಶಗಳ ಮೇಲೆ ಸುಂಕ ಹೇರುವುದು, ಬೆದರಿಕೆ ಹಾಕುವುದನ್ನು ಮಾಡುತ್ತಾ ಬಂದಿದ್ದಾರೆ. ಕೆಲವೊಮ್ಮೆ ತಾನು ಇಡೀ ಜಗತ್ತಿನ ನಾಯಕ ಎನ್ನುವ ರೀತಿಯಲ್ಲಿ ಟ್ರಂಪ್‌ ವರ್ತಿಸುತ್ತಿರುತ್ತಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಅಮೆರಿಕ ಅಧ್ಯಕ್ಷ ಟ್ರಂಪ್‌ ನಡೆಯನ್ನು ಇಲ್ಲಿಯವರೆಗೂ ಖಂಡಿಸಿಲ್ಲ. ಈಗಾಗಲೇ ಟ್ರಂಪ್‌ ಅವರ ಸುಂಕ ನೀತಿಯಿಂದ ಭಾರತವು ಸೇರಿದಂತೆ ಅನೇಕ ದೇಶಗಳು ನಲುಗಿ ಹೋಗಿವೆ.

ಜಗತ್ತಿನಲ್ಲೇ ಅತಿಹೆಚ್ಚು ತೈಲ ನಿಕ್ಷೇಪವಿರುವ ವೆನೆಜುವೆಲಾ ದೇಶದ ಅಧ್ಯಕ್ಷ ನಿಕೋಲಸ್‌ ಮಡೂರೊ ಮತ್ತು ಅವರ ಪತ್ನಿ ಸಿಲಿಯ ಫ್ಲೋರ್ಸ್‌ ಅವರನ್ನು ಜ.3ರಂದು ಅಮೆರಿಕದ ಮಿಲಿಟರಿ ಕಾರ್ಯಚರಣೆಯ ಮೂಲಕ ಬಂಧಿಸಿ, ಅಮೆರಿಕಕ್ಕೆ ಕೊಂಡೊಯ್ಯಲಾಗಿತ್ತು. ಮಾದಕ ವಸ್ತುಗಳನ್ನು ಅಮೆರಿಕಕ್ಕೆ ಸಾಗಿಸುತ್ತಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಆದರೆ, ಅಧ್ಯಕ್ಷ ಮಡೂರೊ ಮೇಲಿನ ಆರೋಪವನ್ನು ಟ್ರಂಪ್‌ ಸಾಬೀತುಗೊಳಿಸಿಲ್ಲ.

ಅಮೆರಿಕವು ವೆನೆಜುವೆಲಾ ದೇಶದ ತೈಲದ ಮೇಲೆ ಕಣ್ಣಿಟ್ಟಿತ್ತು ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಅದರ ಉದ್ದೇಶದ ಭಾಗವಾಗಿಯೇ ವೆನೆಜುವೆಲಾ ತೈಲ ಖರೀದಿಗೆ, ವೆನೆಜುವೆಲಾ ಅಧ್ಯಕ್ಷರನ್ನು ಹೊರತು ಪಡಿಸಿ, ಅಮೆರಿಕದ ಅಧ್ಯಕ್ಷ ಟ್ರಂಪ್‌ ಅವರೇ ಭಾರತಕ್ಕೆ ಆಹ್ವಾನಿಸುತ್ತಿರುವುದು ತನ್ನ ಕುತಂತ್ರ ಬುದ್ದಿಯನ್ನು ತೋರಿಸುತ್ತಿದೆ.

Manoj
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...