ಅಮೆರಿಕಾ| ಸೋದರ ಸಂಬಂಧಿಗೆ ಒತ್ತಡ ಹೇರಿ ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡಿಸಿದ ಭಾರತೀಯ ದಂಪತಿಗೆ ಜೈಲು

Date:

ಸಹೋದರ ಸಂಬಂಧಿಯನ್ನು ಶಾಲೆಗೆ ಸೇರಿಸಲು ಸಹಾಯ ಮಾಡುವ ನೆಪದಲ್ಲಿ ಅಮೆರಿಕಾಕಕ್ಕೆ ಕರೆತಂದು ಮೂರು ವರ್ಷಗಳ ಕಾಲ ತಮ್ಮ ಪೆಟ್ರೋಲ್ ಪಂಪ್‌, ಗ್ಯಾಸ್ ಸ್ಟೇಷನ್ ಮತ್ತು ಸ್ಟೋರ್‌ನಲ್ಲಿ ಕೆಲಸ ಮಾಡಿಸಿದ ಭಾರತೀಯ-ಅಮೆರಿಕನ್ ದಂಪತಿಗೆ ಯುಎಸ್ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ.

ನ್ಯಾಯಾಲಯವು 31 ವರ್ಷದ ಹರ್ಮನ್‌ಪ್ರೀತ್ ಸಿಂಗ್‌ಗೆ 135 ತಿಂಗಳ (11.25 ವರ್ಷ) ಜೈಲು ಶಿಕ್ಷೆ ಮತ್ತು 43 ವರ್ಷದ ಕುಲಬೀರ್ ಕೌರ್‌ಗೆ 87 ತಿಂಗಳು (7.25 ವರ್ಷ) ಶಿಕ್ಷೆ ವಿಧಿಸಿದೆ. ಜೊತೆಗೆ ಈ ದಂಪತಿಯ ಸೋದರಸಂಬಂಧಿ ಸಂತ್ರಸ್ತನಿಗೆ 225,210.76 ಯುಎಸ್ ಡಾಲರ್ (1.87 ಕೋಟಿ ರೂಪಾಯಿ) ಪಾವತಿಸುವಂತೆ ತಿಳಿಸಲಾಗಿದೆ. ಇನ್ನು ದಂಪತಿಗಳು ವಿಚ್ಛೇದನ ತೆಗೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

“ಪ್ರತಿವಾದಿಗಳು ಸಂತ್ರಸ್ತನೊಂದಿಗಿನ ತಮ್ಮ ಸಂಬಂಧವನ್ನು ದುರ್ಬಳಕೆ ಮಾಡಿದ್ದಾರೆ. ದಂಪತಿಯನ್ನು ಶಾಲೆಗೆ ಸೇರಿಸಲು ಸಹಾಯ ಮಾಡುವುದಾಗಿ ಸುಳ್ಳು ಭರವಸೆ ನೀಡಿ ಯುಎಸ್‌ಗೆ ಕರೆತಂದಿದ್ದಾರೆ” ಎಂದು ನ್ಯಾಯಾಂಗ ಇಲಾಖೆಯ ನಾಗರಿಕ ಹಕ್ಕುಗಳ ವಿಭಾಗದ ಸಹಾಯಕ ಅಟಾರ್ನಿ ಜನರಲ್ ಕ್ರಿಸ್ಟನ್ ಕ್ಲಾರ್ಕ್ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?  ಭಾರತೀಯ ಸಿಬ್ಬಂದಿಗಳಿಗೆ ಶೋಷಣೆ: ಬ್ರಿಟನ್ ಉದ್ಯಮಿಗಳಾದ ಹಿಂದೂಜಾ ಸಹೋದರರಿಗೆ 4 ವರ್ಷ ಜೈಲು

“ದಂಪತಿಗಳು ಸಂತ್ರಸ್ತನ ವಲಸೆ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕನಿಷ್ಠ ವೇತನಕ್ಕಾಗಿ ದೀರ್ಘ ಗಂಟೆಗಳ ಕಾಲ ಕೆಲಸ ಮಾಡಿಸಿದ್ದಾರೆ. ಬೆದರಿಕೆ ಹಾಕಿದ್ದಾರೆ, ದೈಹಿಕ ಹಲ್ಲೆ ನಡೆಸಿದ್ದಾರೆ, ಮಾನಸಿಕ ನಿಂದನೆ ಮಾಡಿದ್ದಾರೆ” ಎಂದು ದೂರಿದ್ದಾರೆ.

ಇನ್ನು “2018ರಲ್ಲಿ ಪ್ರತಿವಾದಿಗಳು ಸಂತ್ರಸ್ತ, ಸಿಂಗ್ ಅವರ ಸೋದರಸಂಬಂಧಿ ಮತ್ತು ಅಪ್ರಾಪ್ತನನ್ನು ಶಾಲೆಗೆ ಸೇರಿಸಲು ಸಹಾಯ ಮಾಡುವ ಸುಳ್ಳು ಭರವಸೆಯೊಂದಿಗೆ ಭಾರತದಿಂದ ಯುಎಸ್‌ಗೆ ಪ್ರಯಾಣಿಸಲು ಆಮಿಷ ಒಡ್ಡಿದರು ಎಂಬುವುದು ಸಾಬೀತಾಗಿದೆ” ಎಂದು ನ್ಯಾಯಾಂಗ ಇಲಾಖೆ ಹೇಳಿದೆ.

ಸಂತ್ರಸ್ತ ಯುಎಸ್‌ಗೆ ಆಗಮಿಸಿದ ನಂತರ, ಆರೋಪಿಗಳು ಆತನ ವಲಸೆ ದಾಖಲೆಗಳನ್ನು ತೆಗೆದುಕೊಂಡು ಮಾರ್ಚ್ 2018 ಮತ್ತು ಮೇ 2021ರ ನಡುವೆ ಮೂರು ವರ್ಷಗಳ ಕಾಲ ಸಿಂಗ್ ಅವರ ಅಂಗಡಿಯಲ್ಲಿ ಕೆಲಸ ಮಾಡಿಸಿದ್ದಾರೆ. ಸಿಂಗ್ ಮತ್ತು ಕೌರ್ ಕನಿಷ್ಠ ವೇತನ ನೀಡಿ ಅಂಗಡಿಯಲ್ಲಿ ಶುಚಿಗೊಳಿಸುವುದು, ಅಡುಗೆ ಮಾಡುವುದು, ನಗದು ರಿಜಿಸ್ಟರ್ ಮತ್ತು ಅಂಗಡಿಯ ದಾಖಲೆಗಳನ್ನು ನಿರ್ವಹಿಸುವುದು ಸೇರಿದಂತೆ ದಿನಕ್ಕೆ 12ರಿಂದ 17 ಗಂಟೆಗಳ ಕಾಲ ಕೆಲಸ ಮಾಡಿಸಿದ್ದಾರೆ ಎಂದು ವರದಿಯಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...