ಅಮೆರಿಕ; ಖಲಿಸ್ತಾನ್ ಪ್ರತಿಭಟನಾಕಾರರಿಂದ ಭಾರತದ ಪತ್ರಕರ್ತನ ಮೇಲೆ ಹಲ್ಲೆ

Date:

  • ವಾಷಿಂಗ್ಟನ್ ಡಿಸಿಮೆರಿಲ್ಯಾಂಡ್ವರ್ಜೀನಿಯಾ ಪ್ರದೇಶದಿಂದ ಬಂದಿದ್ದ ಪ್ರತಿಭಟನಾಕಾರರು
  • ಹಿರಿಯ ಪತ್ರಕರ್ತರ ಮೇಲಿನ ದಾಳಿಯನ್ನು ಖಂಡಿಸಿದ ಭಾರತೀಯ ರಾಯಭಾರಿ ಕಚೇರಿ

ಅಮೆರಿಕದ ವಾಷಿಂಗ್ಟನ್‌ನಲ್ಲಿ ಭಾರತೀಯ ಮೂಲದ ಪತ್ರಕರ್ತ ಲಲಿತ್ ಝಾ ಅವರ ಮೇಲೆ ಖಲಿಸ್ತಾನಿ ಬೆಂಬಲಿಗರು ಹಲ್ಲೆ ನಡೆಸಿರುವ ಘಟನೆ ಭಾರತೀಯ ರಾಯಭಾರ ಕಚೇರಿ ಹೊರಗೆ ನಡೆದಿದೆ.

ಶನಿವಾರ ಮಧ್ಯಾಹ್ನ ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಬಳಿ ಖಲಿಸ್ತಾನ ಪರ ಪ್ರತಿಭಟನೆ ಬಗ್ಗೆ ವರದಿ ಮಾಡುತ್ತಿದ್ದ ಸಂದರ್ಭದಲ್ಲಿ ಲಲಿತ್ ಝಾ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ.

ಖಲಿಸ್ತಾನಿ ಬೆಂಬಲಿಗರು ಎರಡು ಕೋಲುಗಳಿಂದ ನನಗೆ ಹೊಡೆದಿದ್ದಾರೆ ಎಂದು ಪತ್ರಕರ್ತ ಲಲಿತ್ ಝಾ ಆರೋಪಿಸಿದ್ದು, ಖಲಿಸ್ತಾನಿ ಬೆಂಬಲಿಗರ ವಿಡಿಯೋವೊಂದನ್ನು ಕೂಡ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮನ್ನು ರಕ್ಷಿಸಿದ ಹಾಗೂ ತಮ್ಮ ಕೆಲಸ ಮಾಡಲು ಸಹಾಯ ಮಾಡಿದ ಅಮೆರಿಕದ ಸೀಕ್ರೆಟ್ ಸರ್ವೀಸ್‌ಗೆ ಧನ್ಯವಾದ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಾಷಿಂಗ್ಟನ್ ಡಿಸಿ – ಮೆರಿಲ್ಯಾಂಡ್ – ವರ್ಜೀನಿಯಾ ಪ್ರದೇಶದ ವಿವಿಧ ಭಾಗಗಳಿಂದ ಬಂದಿದ್ದ ಪ್ರತಿಭಟನಾಕಾರರು ಖಲಿಸ್ತಾನ ಪರ ಘೋಷಣೆಗಳನ್ನು ಕೂಗಿ, ಪಂಜಾಬ್ ಪೊಲೀಸರಿಂದ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

“ನನ್ನ ಕೆಲಸ ನಿರ್ವಹಿಸಲು, ಎರಡು ದಿನಗಳಿಂದ ನನಗೆ ರಕ್ಷಣೆ ಒದಗಿಸಿರುವ ಸೀಕ್ರೆಸ್ ಸರ್ವೀಸ್‌ಗೆ ಧನ್ಯವಾದಗಳು. ಇಲ್ಲದಿದ್ದರೆ ನಾನು ಇದನ್ನು ಆಸ್ಪತ್ರೆಯಿಂದ ಬರೆಯಬೇಕಾಗುತ್ತಿತ್ತು. ಪ್ರತಿಭಟನೆ ನಡೆಸುತ್ತಿದ್ದ ವ್ಯಕ್ತಿ ಎರಡು ಕೋಲುಗಳೊಂದಿಗೆ ನನ್ನ ಎಡ ಕಿವಿಗೆ ಹೊಡೆದಿದ್ದಾನೆ. ಇದಕ್ಕೂ ಮುನ್ನ ನಾನು ಸುರಕ್ಷತೆಗಾಗಿ 9/11ಗೆ ಕರೆ ಮಾಡಬೇಕಾಗಿತ್ತು. ಎರಡು ಪೊಲೀಸ್ ವ್ಯಾನ್‌ಗಳು ಬಂದಿದ್ದವು” ಎಂದು ಲಲಿತ್ ಝಾ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ಮೇಲೆ ದಾಳಿ ನಡೆಸಿದವರ ವಿರುದ್ಧ ಯಾವುದೇ ದೂರು ನೀಡದೆ ಇರಲು ಲಲಿತ್‌ ಝಾ ನಿರ್ಧರಿಸಿದ್ದಾರೆ. “ಪ್ರತಿಭಟನಾಕಾರರು ಖಲಿಸ್ತಾನ್‌ ನಾಯಕ ಅಮೃತಪಾಲ್ ಸಿಂಗ್ ಪರವಾಗಿ ಖಲಿಸ್ತಾನ ಬಾವುಟಗಳನ್ನು ಹಾರಿಸಿದರು. ಅವರು ರಾಯಭಾರ ಕಚೇರಿಯನ್ನು ಧ್ವಂಸ ಮಾಡುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದರು. ಜತೆಗೆ ಭಾರತೀಯ ರಾಯಭಾರಿ ತರಣ್‌ಜಿತ್ ಸಿಂಗ್ ಸಂಧು ಅವರನ್ನೂ ಬೆದರಿಸಿದ್ದಾರೆ” ಎಂದು ಝಾ ತಿಳಿಸಿದ್ದಾರೆ.

ಹಲ್ಲೆಯನ್ನು ಖಂಡಿಸಿರುವ ಭಾರತದ ರಾಯಭಾರ ಕಚೇರಿ, “ಹಿರಿಯ ಪತ್ರಕರ್ತರ ಮೇಲಿನ ಇಂತಹ ಕ್ರೂರ ಹಾಗೂ ಅನಗತ್ಯ ದಾಳಿಯನ್ನು ನಾವು ಖಂಡಿಸುತ್ತೇವೆ. ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ನಿರಂತರವಾಗಿ ಭಾಗಿಯಾಗುವ ಖಲಿಸ್ತಾನಿ ಪ್ರತಿಭಟನಾಕಾರರು ಸಮಾಜವಿರೋಧಿ ಪ್ರವೃತ್ತಿ ಹೊಂದಿರುತ್ತಾರೆ ಎಂದು ಒತ್ತಿ ಹೇಳುತ್ತೇವೆ” ಎಂದು ತಿಳಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...