ಅಮೆರಿಕ | ಭಾರತೀಯ ಮೂಲದ ಉದ್ಯಮಿಯಿಂದ ಹೂಡಿಕೆ ಕಂಪನಿಗಳಿಗೆ 500 ಮಿಲಿಯನ್ ಡಾಲರ್‌ ವಂಚನೆ

Date:

ಅಮೆರಿಕದ ವಿಶ್ವಪ್ರಸಿದ್ಧ ಹೂಡಿಕೆ ಸಂಸ್ಥೆ “ಬ್ಲ್ಯಾಕ್‌ರಾಕ್’ ಮತ್ತು ಅದರ ಖಾಸಗಿ ಸಾಲ ಹೂಡಿಕೆ ವಿಭಾಗವು, ಸುಮಾರು 500 ಮಿಲಿಯನ್ ಡಾಲರ್‌(4150 ಕೋಟಿ ರೂ.) ಹಣಕಾಸು ವಂಚನೆಗೆ ಒಳಗಾಗಿದೆ. ಈ ವಂಚನೆಯ ಹಿಂದಿರುವ ವ್ಯಕ್ತಿ ಭಾರತೀಯ ಮೂಲದ ದೂರಸಂಪರ್ಕ ಉದ್ಯಮಿ ‘ಬಂಕಿಮ್‌ ಬ್ರಹ್ಮಭಟ್’ ಎಂದು ಮಾಧ್ಯಮಗಳು ವರದಿ ಮಾಡಿವೆ.

ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಬ್ರಹ್ಮಭಟ್ ಅವರ ಕಂಪನಿಗಳಾದ ‘ಬ್ರಾಡ್‌ಬ್ಯಾಂಡ್ ಟೆಲಿಕಾಂ’ ಮತ್ತು ‘ಬ್ರಿಡ್ಜ್‌ವಾಯ್ಸ್’ ನಕಲಿ ಬಿಲ್‌ಗಳು ಹಾಗೂ ಕೃತಕ ಲೆಕ್ಕ ಪತ್ರಗಳನ್ನು ಬಳಸಿ ನೂರಾರು ಕೋಟಿ ಡಾಲರ್‌ಗಳ ಸಾಲ ಪಡೆದುಕೊಂಡಿವೆ. ಈ ಸಾಲಗಳಿಗೆ ಭರವಸೆಯಾಗಿ ತೋರಿಸಲಾದ ಆಸ್ತಿಗಳು ಮತ್ತು ಗ್ರಾಹಕರ ಬಾಕಿ ಹಣಗಳು ನಕಲಿಯಾಗಿದ್ದವು ಎನ್ನಲಾಗಿದೆ. ವಂಚನೆಯ ನಂತರ, ಹಣದ ಒಂದು ಭಾಗವನ್ನು ಭಾರತ ಹಾಗೂ ಮೋರಿಷಸ್‌ನಲ್ಲಿರುವ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂಬ ಆರೋಪವೂ ಇದೆ.

ಈ ಕೃತ್ಯದಿಂದ ಬ್ಲ್ಯಾಕ್‌ರಾಕ್‌ನ ಹೆಚ್‌ಪಿಎಸ್‌ ಇನ್ವೆಸ್ಟ್ಮೆಂಟ್ ಪಾರ್ಟ್ನರ್ಸ್ ಮತ್ತು ಫ್ರೆಂಚ್ ಬ್ಯಾಂಕ್ ಬಿಎನ್‌ಪಿ ಪಾರಿಬಾಸ್ ಕಂಪನಿಗಳು ವಂಚನೆಗೊಳಗಾಗಿವೆ .ಬಿಎನ್‌ಪಿ ಪಾರಿಬಾಸ್ ಕಂಪನಿಯು ಈ ಸಾಲದ ಸುಮಾರು ಅರ್ಧಭಾಗವನ್ನು ಹಣಕಾಸು ನೆರವಿನ ರೂಪದಲ್ಲಿ ನೀಡಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಡಿಕೆಶಿ – ತೇಜಸ್ವಿ ಸೂರ್ಯ ಕಚ್ಚಾಟದಲ್ಲಿ ಬೆಂಗಳೂರಿಗಿಲ್ಲ ಲಾಭ!

ಜುಲೈ 2025ರಲ್ಲಿ, ಎಚ್‌ಪಿಎಸ್‌ ಸಂಸ್ಥೆಯೊಬ್ಬ ನೌಕರರೊಬ್ಬರು ಗ್ರಾಹಕರ ಇಮೇಲ್ ವಿಳಾಸಗಳಲ್ಲಿ ಸಂಶಯಾಸ್ಪದ ಅಂಶಗಳನ್ನು ಗಮನಿಸಿದರು. ಹೆಚ್ಚಿನ ತನಿಖೆಯಲ್ಲಿ, ಹಲವಾರು ಗ್ರಾಹಕರ ಇಮೇಲ್‌ಗಳು ನಕಲಿ ಡೊಮೇನ್‌ಗಳಿಂದ ಬಂದಿದ್ದು, ನಕಲಿ ಕಂಪನಿಗಳನ್ನು ಸೃಷ್ಟಿಸಿ ದಾಖಲೆಗಳನ್ನು ಕೃತಕವಾಗಿ ತಯಾರಿಸಲಾಗಿದೆ ಎಂದು ಪತ್ತೆಯಾಯಿತು.

ಪ್ರಶ್ನೆಗಳಿಗೆ ಉತ್ತರಿಸಲು ಬ್ರಹ್ಮಭಟ್ ಮೊದಲು ನಿರಾಕರಿಸಿ, ಬಳಿಕ ಸಂಪರ್ಕ ಕಳೆದುಕೊಂಡರು. ಅವರ ‘ಗಾರ್ಡನ್ ಸಿಟಿ (ನ್ಯೂಯಾರ್ಕ್) ಕಚೇರಿ ಬಾಗಿಲು ಹಾಕಲ್ಪಟ್ಟಿತ್ತು. ಅಲ್ಲಿ ಯಾವುದೇ ಸಿಬ್ಬಂದಿ ಕಾಣಿಸಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಅವರ ನಿವಾಸದ ಮುಂದೆ ಬಿಎಂಡಬ್ಲ್ಯು, ಪೋರ್ಷೆ, ಟೆಸ್ಲಾ ಮತ್ತು ಆಡಿ ಕಾರುಗಳು ನಿಲ್ಲಿಸಿದ್ದನ್ನು ವರದಿಗಾರರು ಗಮನಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...