ಇಸ್ರೇಲಿ ನರಮೇಧಕ್ಕೆ ಪ್ರತೀಕಾರವಾಗಿ ಮಿಸೈಲ್ ದಾಳಿ ಮಾಡಿದ ಇರಾನ್

Date:

ಕಳೆದ ಒಂದು ವರ್ಷದಿಂದ ನಿರಂತರ ಕ್ರೌರ್ಯ ಮೆರೆಯುತ್ತಿದ್ದ ಇಸ್ರೇಲ್ ಮೇಲೆ ಮಂಗಳವಾರ ರಾತ್ರಿ ಇರಾನ್ ತನ್ನ ಬ್ಯಾಲಿಸ್ಟಿಕ್ ಮಿಸೈಲ್ ದಾಳಿ ಮಾಡಿದೆ. ಇಸ್ರೇಲ್ ಆದ್ಯಂತ ನರಗಗಳಲ್ಲಿ ದೊಡ್ಡ ಪ್ರಮಾಣದ ಎಚ್ಚರಿಕೆಯ ಸೈರನ್ ಬಡಿಯಲಾರಂಭಿಸಿದೆ. ಮನೆಗಳನ್ನು ತೊರೆದು ಬಾಂಬ್ ಶೆಲ್ಟರ್‌ಗಳಲ್ಲಿ ಇರುವಂತೆ ಜನರಿಗೆ ಸೂಚಿಸಲಾಗಿದೆ. ಇಸ್ರೇಲ್-ಲೆಬನಾನ್ ಸಂಘರ್ಷ ಸಂಬಂಧ ಇರಾನ್ ಮೌನವಾಗಿತ್ತು. ಆದರೆ, ಲೆಬನಾನ್‌ನಲ್ಲಿ ಹೆಜ್ಬೊಲ್ಲ ನಾಯಕ ಸೆಯ್ಯದ್ ಹಸನ್ ನಸ್ರಲ್ಲಾಹ್ ಮತ್ತು ಇರಾನಿ ಮಿಲಿಟರಿ ಅಧಿಕಾರಿಗಳನ್ನು ಇಸ್ರೇಲ್‌ ಹತ್ಯೆಗೈದ ಬಳಿಕ, ಪ್ರತಿಕಾರವಾಗಿ ಇರಾನ್‌ ಈ ದಾಳಿ ನೆಡೆಸಿದೆ. ಇರಾನ್‌ನ ಮಿಸೈಲ್‌ಗಳು 15 ನಿಮಿಷಗಳಲ್ಲಿ ಇಸ್ರೇಲ್ ರಾಜಧಾನಿ ಟೆಲ್ ಅವಿವ್ ತಲುಪಿದೆ ಎಂದು ಹೇಳಲಾಗುತ್ತಿದೆ.

ಇಸ್ರೇಲ್ ಈಗಾಗಲೇ ಗಾಝ, ಲೆಬನಾನ್, ಸಿರಿಯಾ ಮತ್ತು ಯೆಮೆನ್ ದೇಶಗಳ ಮೇಲೆ ದಾಳಿ ಮಾಡಿದೆ. ಸಾವಿರಾರು ಜನರನ್ನು ಕೊಂದಿದೆ. ಇಸ್ರೇಲ್‌ ವಿರುದ್ಧ ಈ ಎಲ್ಲ ರಾಷ್ಟ್ರಗಳು ಹೋರಾಡುತ್ತಿವೆ. ಈಗ, ಇದೆ ಮೊದಲ ಬಾರಿಗೆ ಇಸ್ರೇಲ್‌ ವಿರುದ್ಧ ಇರಾನ್‌ ಪ್ರತಿದಾಳಿ ಮಾಡಿದೆ.

ದಾಳಿಯ ಬಗ್ಗೆ ಮಾತನಾಡಿರುವ ಇರಾನ್ ಸೇನೆಯ ಮುಖ್ಯಸ್ಥ, “ಇಸ್ಮಾಯಿಲ್ ಹನಿಯೆ ಹುತಾತ್ಮತೆ, ಸೆಯ್ಯದ್ ಹಸನ್ ನಸ್ರಲ್ಲಾಹ್ ಮತ್ತು ಹುತಾತ್ಮ ನೀಲ್ಫೊರೊಶನ್‌ ಅವರ ಹತ್ಯೆಯ ಪ್ರತಿಕಾರವಾಗಿ ಇಸ್ರೇಲ್‌ನ ಪ್ರದೇಶಗಳ ಮೇಲೆ ದಾಳಿ ಮಾಡಿದ್ದೇವೆ. ಝೊಯೋನಿಸ್ಟ್‌ ಆಡಳಿತವು ನಮ್ಮ ದಾಳಿಗೆ ಪ್ರತಿಕ್ರಿಯಿಸಿದರೆ, ನಮ್ಮ ಮುಂದಿನ ದಾಳಿಗಳು ಇನ್ನಷ್ಟು ವಿನಾಶಕಾರಿಯಾಗಿರುತ್ತವೆ” ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಸ್ರೇಲ್ ಕಳೆದ ಒಂದು ವರ್ಷದಿಂದ ಗಾಝದಲ್ಲಿ 42ಸಾವಿರ ಜನರನ್ನು ಕೊಂದಿದೆ. ಜೊತೆಗೆ, ಲೆಬನಾನ್, ಸಿರಿಯಾ, ಪ್ಯಾಲೇಸ್ತೀನ್ ಮತ್ತು ಯೆಮೆನ್ ಸೇರಿ ತನ್ನ ನಿರಂತರ ದಾಳಿಯನ್ನು ಮುಂದುವರೆಸಿದೆ. ಇದಕ್ಕೆ ಅಮೇರಿಕ ಕುಮ್ಮಕ್ಕು ನೀಡುತ್ತಿದೆ. ಅಮೇರಿಕ ತನ್ನ ಮೂರು ಯುದ್ಧ ನೌಕೆಗಳನ್ನು ಇಸ್ರೇಲ್ ರಕ್ಷಣೆಗಾಗಿ ಮೆಡಿಟರೇನಿಯನ್ ಸಮುದ್ರಕ್ಕೆ ಕಳಿಸುತ್ತಿದೆ. ಮಧ್ಯ ಪ್ರಾಚ್ಯ ಏಷ್ಯಾ ಮೇಲೆ ಭಯಾನಕ ಯುದ್ಧದ ಕಾರ್ಮೋಡಗಳು ಕವಿಯುತ್ತಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಲ್ಫ್‌ ಸಂಘರ್ಷ : ಗೊಬ್ಬರದಿಂದ ವಜ್ರದವರೆಗೂ ತಟ್ಟಿದ ಬಿಸಿ!

ಗಲ್ಫ್ ಸಂಘರ್ಷದಿಂದ ತೈಲ ಹಾಗೂ ಅನಿಲ ಆಮದುವಿನಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಮಾತ್ರವೇ...

ಮಧ್ಯಪ್ರಾಚ್ಯ ಬಿಕ್ಕಟ್ಟು: ಇರಾನ್ ತೈಲ ಖರೀದಿಗೆ ಮುಂದಾದ ಭಾರತ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ಭೌಗೋಳಿಕ ರಾಜಕೀಯ...

‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ

ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ...